Horoscope: ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು

| Updated By: ವಿವೇಕ ಬಿರಾದಾರ

Updated on: Nov 01, 2023 | 6:39 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 01) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶುಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:16 ರಿಂದ 01:43 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:56 ರಿಂದ 09:22 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:49 ರಿಂದ 12:16ರ ವರೆಗೆ.

ಧನು ರಾಶಿ : ಹಿರಿಯರ ಸಮ್ಮುಖದಲ್ಲಿ ನೂತನ ಗೃಹನಿರ್ಮಾಣವನ್ನು ಮಾಡುವಿರಿ. ಅಧಿಕಾರಿಗಳ ನಡವೆ ಕಲಹವಾಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಾಣಿಸಿಕೊಳ್ಳಬಹುದು. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸು ಬರುವುದು. ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ದಂಡವನ್ನು ತುಂಬಬೇಕಾದೀತು.

ಮಕರ ರಾಶಿ : ಮನಸ್ತಾಪವನ್ನು ಹೇಗಾದರೂ ಮಾಡಿ ಹೊರಹಾಕಬೇಕು ಎಂದುಕೊಂಡಿರುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿ‌ಗೆ ಚಟುವಟಿಕೆಗಲ್ಲಿ ಆಸಕ್ತಿ ಹೆಚ್ಚಿರುವುದು. ನಿಮಗೆ ಸಂಬಂಧಿಸಿದ ಕಾರ್ಯವನ್ನು ಮಾತ್ರ ಮಾಡಿ. ಇನ್ನೊಬ್ಬರ ಕಾರ್ಯದ ಮಧ್ಯದಲ್ಲಿ ಪ್ರವೇಶ ಮಾಡುವುದು ಬೇಡ. ಮಕ್ಕಳ ಮೇಲೆ ಕೋಪಗೊಂಡು ಸಮಾಧಾನಪಡುವಿರಿ.

ಕುಂಭ ರಾಶಿ : ನಿಮ್ಮದಾದ ಕಾರ್ಯಗಳೇ ಬಹಳ ಇರುವಾಗ ಬೇರೆಯ ಕಡೆ ನಿಮ್ಮ ಗಮನ ಹೋಗದು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನ್ನಾದರೂ ಮಾಡಿಕೊಂಡೀರ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ನಿಮ್ಮ ಕ್ಷಮಾಗುಣವು ಇಂದು ನಿಮ್ಮನ್ನು ದೊಡ್ಡವರನ್ನಾಗಿ ಮಾಡುವುದು. ಓದಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಿರಿ.

ಮೀನ ರಾಶಿ : ಆಹಾರ ಉದ್ಯಮದಲ್ಲಿ ಇರುವವರಿಗೆ ತೊಂದರೆ ಬರುವ ಸಾಧ್ಯತೆ ಇದೆ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಉಪಕಾರಕ್ಕೆ ಕೃತಜ್ಞತೆಯಾದರೂ ಇರಲಿ. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು. ತಾಯಿಯ ಜೊತೆ ಜಗಳ ಮಾಡಿಕೊಂಡು ಬೇಸರಗೊಳ್ಳುವಿರಿ. ಮನೆಗೆ ಅತಿಥಿಗಳ ಆಗಮನವಾಗುವುದರಿಂದ ಉತ್ಸಾಹದಲ್ಲಿ ನೀವು ಇರುವಿರಿ.

-ಲೋಹಿತಶರ್ಮಾ 8762924271 (what’s app only)

Published On - 12:00 am, Wed, 1 November 23