AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ; ಈ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಯಾರದೋ ತಪ್ಪು ನಿಮ್ಮ ತಲೆಯ ಮೇಲೆ ಬರಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ; ಈ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಯಾರದೋ ತಪ್ಪು ನಿಮ್ಮ ತಲೆಯ ಮೇಲೆ ಬರಬಹುದು
ಪ್ರಾತಿನಿಧಿಕ ಚಿತ್ರImage Credit source: iStock Photo
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಆಯೇಷಾ ಬಾನು|

Updated on: Oct 03, 2023 | 6:10 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ವಜ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06-22ಕ್ಕೆ, ಸೂರ್ಯಾಸ್ತ ಸಂಜೆ 06 – 19ಕ್ಕೆ, ರಾಹು ಕಾಲ ಮಧ್ಯಾಹ್ನ 03:21 – 4:50ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 – 10:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:22 – 13:51ರ ವರೆಗೆ.

ಧನು ರಾಶಿ: ಹೊಸ ಉದ್ಯೋಗಕ್ಕಾಗಿ ದೂರದ ಊರಿಗೆ ಹೋಗಬೇಕಾದೀತು. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ನಿಮ್ಮ ರಹಸ್ಯ ವಿಚಾರವನ್ನು ಆಪ್ತರಿಗೆ ಹೇಳುವಿರಿ. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಭೂವ್ಯವಹಾರವನ್ನು ಮಾಡುವವರಿಗೆ ಇಂದು ಅಧಿಕ ಲಾಭವು ಆಗುವುದು. ಕಡಿಮೆಯಾಗುತ್ತಿದ್ದ ಆರೋಗ್ಯದಿಂದ ಸಮಾಧಾನ‌ಸಿಗಲಿದೆ. ನಿಮ್ಮನ್ನು ತಿಳಿದವರೇ ನಿಮಗೆ ವಂಚನೆ ಮಾಡುವರು. ಮನೆಯ ಕೆಲಸದಲ್ಲಿ ಇಂದು ಆಸಕ್ತಿ ಕಡಿಮೆ ಆಗುವುದು. ನಿಮ್ಮ ಬಗ್ಗೆಯೇ ನಿಮಗೆ ಕೀಳು ಅರಿಮೆ ಬೇಡ.‌ ಇಂದಿನ ರಾತ್ರಿಯ ಕನಸು ನಿಮ್ಮ ನೆಮ್ಮದಿಯನ್ನು ಕೆಡಿಸೀತು.

ಮಕರ ರಾಶಿ: ಯಂತ್ರಗಳ ಮಾರಾಟದಿಂದ ಲಾಭವನ್ನು ಗಳಿಸಿಕೊಳ್ಳುವಿರಿ. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡುವಿರಿ. ಪಾಲುದಾರಿಕೆಯಲ್ಲಿ ಅನ್ಯೋನ್ಯತೆ ಕಂಡುಬರುವುದು. ನೀವು ಮಾಡಬೇಕಂದುಕೊಂಡ ಕಾರ್ಯದಲ್ಲಿ ಜಯವಿರುವುದು. ಸ್ತ್ರೀರಿಂದ ಕಛೇರಿಯಲ್ಲಿ ಸಹಕಾರವು ಸಿಗಲಿದೆ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ. ತಂದೆಯ ಆರೋಗ್ಯವನ್ನು ಸರಿಪಡಿಸಲು ಹೆಚ್ಚು ಜವಾಬ್ದಾರಿಯನ್ನು ಹೊರಬೇಕಾದೀತು. ಮನಸ್ಸಿಗೆ ನೆಮ್ಮದಿ ಸಿಗುವ ಜಾಗಕ್ಕೆ ಹೋಗುವಿರಿ. ನಿಮ್ಮ‌ ಮಾತುಗಳು ಅಹಂಕಾರದಂತೆ ತೋರಬಹುದು. ನಿಮಗೆ ಇಂದು ವೇತನವು ಸಿಗುವುದು.

ಕುಂಭ ರಾಶಿ: ನಿಮಗೆ ಬರಬೇಕಾದ ಹಣವನ್ನು ನೀವು ಬಿಟ್ಟುಕೊಡುವಿರಿ. ನಿಮ್ಮ ಮಕ್ಕಳು ಮಾತನ್ನು ಕೇಳರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಅಕಾಲದ ಆಹಾರ ಸೇವನೆಯಿಂದ ಆರೋಗ್ಯವು ಕೆಡುವುದು. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯು ಬರಬಹುದು. ಸರ್ಕಾರದ ಕೆಲಸಕ್ಕೆ ನೀವು ಹಣವನ್ನು ಖರ್ಚುಮಾಡುವಿರಿ. ಇಂದು ನೀವು ಬಹಳ ಒತ್ತಡದಲ್ಲಿ ಇರುವಂತೆ ತೋರುವಿರಿ. ಅರಿವಿಲ್ಲದೇ ನೀವು ತಪ್ಪು ದಾರಿಗೆ ಹೋಗುವಿರಿ.‌ ನಿಮ್ಮ ಬಳಿ ಹಣವಿದ್ದರೂ ಸರಿಯಾದ ಸಮಯಕ್ಕೆ ಸಿಗದು.

ಮೀನ ರಾಶಿ: ದೇಹಾಯಾಸವು ಇಂದು ಇರುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತ ಸಮಾಲೋಚನೆ ಮಾಡುವಿರಿ. ಪಾಲುದಾರಿಕೆಯಲ್ಲಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಿ. ದೂರಪ್ರಯಾಣದಿಂದ ಆಯಾಸವಾಗಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಯಾರದೋ ತಪ್ಪು ನಿಮ್ಮ ತಲೆಯ ಮೇಲೆ ಬರಬಹುದು. ಶಿವಕವಚವನ್ನು ಪಠಿಸಿರಿ.

-ಲೋಹಿತಶರ್ಮಾ – 8762924271 (what’s app only)