Horoscope: ರಾಶಿಭವಿಷ್ಯ, ಈ ರಾಶಿಯವರು ಸಂಗಾತಿಯ ಜೊತೆ ಕಲಹವಾಗಿ ಪಶ್ಚಾತ್ತಾಪ ಪಡಬೇಕಾದೀತು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 03)) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಸಂಗಾತಿಯ ಜೊತೆ ಕಲಹವಾಗಿ ಪಶ್ಚಾತ್ತಾಪ ಪಡಬೇಕಾದೀತು
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಆಯೇಷಾ ಬಾನು

Updated on: Oct 03, 2023 | 6:05 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ವಜ್ರ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06-22ಕ್ಕೆ, ಸೂರ್ಯಾಸ್ತ ಸಂಜೆ 06 – 19ಕ್ಕೆ, ರಾಹು ಕಾಲ ಮಧ್ಯಾಹ್ನ 03:21 – 4:50ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:23 – 10:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:22 – 13:51ರ ವರೆಗೆ.

ಸಿಂಹ ರಾಶಿ: ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ದೇವತಾಕಾರ್ಯದಿಂದ ನಿಮಗೆ ಇಂದಿನ ಎಲ್ಲ ಕಾರ್ಯಗಳೂ ಸುಗಮವಾಗುವುದು. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗುವುದು. ಯಾರಾದರೂ ಸಂಬಂಧದ ನಡುವೆ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಮಾತಿನ ನಿಯಂತ್ರಣವು ತಪ್ಪಬಹುದು. ವಿಳಂಬದ ಕಾರ್ಯದಿಂದ ನೀವು ವ್ಯಥೆ ಪಡುವಿರಿ. ನಿಮಗೆ ಧೈರ್ಯವನ್ನು ತುಂಬಲು ಸಂಗಾತಿಯ ಸಹಾಯವು ಸಿಗುವುದು. ನಿದ್ರಾಹೀನತೆಯಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ಅನಪೇಕ್ಷಿತ ಖರ್ಚನ್ನು ಮಾಡುವುದು ಬೇಡ.

ಕನ್ಯಾ ರಾಶಿ: ನಿಮ್ಮನ್ನು ಇಂದು ಸ್ನೇಹಿತರು ವಿಡಂಬನೆ ಮಾಡುವರು. ಮನಸ್ಸನ್ನು ನಿಯಂತ್ರಿಸಲು ದುಶ್ಚಟಕ್ಕೆ ಬೀಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.‌ ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಮಕ್ಕಳಿಗಾಗಿ ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅನಾದರ ಬೇಡ. ನಿಮ್ಮ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಸಮಸ್ಯೆಯು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ. ಆರೋಗ್ಯವು ನಿಮಗೆ ವರವಾಗಿದ್ದರೂ ಕೆಲವು ಸಮಯ ತೊಂದರೆ ಕೊಡುವುದು. ನಿಮ್ಮವರನ್ನು ನೀವು ಸಂಪೂರ್ಣವಾಗಿ ಮರೆಯುವಿರಿ. ಧನ್ವಂತರಿಯ ಉಪಾಸನೆ ಅಗತ್ಯ.

ತುಲಾ ರಾಶಿ: ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು. ಭೂಮಿಯ ಖರೀದಿಯನ್ನು ಮುಂದೂಡಿ. ವಿನಾಕಾರಣ ಸಾಲದಲ್ಲಿ ಸಿಕ್ಕಿಕೊಳ್ಳುವುದು ಬೇಡ. ಅಪರಿಚಿತರ ಜೊತೆ ಸ್ವಲ್ಪ ಹದವಾಗಿ ವರ್ತಿಸಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ಸ್ನೇಹಿತರು ಪ್ರೀತಿಯಿಂದ ನಿಮಗೆ ಉಡುಗೊರೆ ಕೊಡುವರು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ನಿಮ್ಮ ಮನಸ್ತಾಪವನ್ನು ಕೋಪದ‌ ಮೂಲಕ ಹೊರಹಾಕುವಿರಿ. ನಿಮ್ಮ ನಡವಳಿಕೆಯ ಬಗ್ಗೆ ಹಿರಿಯರು ಮಾತನಾಡಿಕೊಳ್ಳುವರು. ಸಂಗಾತಿಯ ಜೊತೆ ಕಲಹವಾಡಿ ಪಶ್ಚಾತ್ತಾಪಪಡಬೇಕಾದೀತು. ನಿಮ್ಮ ಯೋಜನೆಯನ್ನು ಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗದು. ನಿಮ್ಮನ್ನು ಸಮ್ಮಾನಿಸಬಹುದು. ಸಣ್ಣ ವಿಚಾರದಲ್ಲಿ ಇನ್ನೊಬ್ಬರ ಜೊತೆ ಕಲಹ ಬೇಡ. ಮರೆತು ಮುನ್ನಡೆಯುವುದು ಉತ್ತಮ. ಒಳ್ಳೆಯ ಸಮಯವನ್ನು ನೀವು ನಿರೀಕ್ಷಿಸುವಿರಿ.

ವೃಶ್ಚಿಕ ರಾಶಿ: ಮಕ್ಕಳ ವಿಚಾರದಲ್ಲಿ ನಿಮಗೆ ಸಂತೋಷ ಕಾದಿದೆ. ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ ಆಗುವ ಸಾಧ್ಯತೆ ಇದೆ.‌ ನಿಮಗೆ ಯಾರಿಂದಲಾದರೂ ಸಹಾಯ ಕೇಳಲು ಸಂಕೋಚವಾದೀತು. ವ್ಯಾಪಾರದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ಇಂದು ನೀವು ಒತ್ತಡವನ್ನು ತಂದುಕೊಳ್ಳಬಾರದು ಎಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಸೃಷ್ಟಿಯಾಗಬಹುದು. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ನೀವು ಪ್ರಯತ್ನಿಸಬೇಕು.‌ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಮಾಡುವ ಸಾಧ್ಯತೆ ಇದೆ. ನಿಮ್ಮ ಕಾರ್ಮಿಕರು ನಿಮ್ಮ ಕಾರ್ಯವನ್ನು ಸರಿಯಾಗಿ ಮಾಡದೇ ಇರಬಹುದು. ಸುಬ್ರಹ್ಮಣ್ಯನ ಆರಾಧನೆಯನ್ನು ನೀವು ಇಂದು ಮಾಡಿ.

-ಲೋಹಿತಶರ್ಮಾ – 8762924271 (what’s app only)

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ