AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಈ ರಾಶಿಯವರು ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 17, 2023 | 12:30 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧ್ರುವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:49 ರಿಂದ 09:26 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:02 ರಿಂದ 12:38ರವರೆಗೆ, ಗುಳಿಕ ಕಾಲ ಸಂಜೆ 14:15 ರಿಂದ 03:51ರ ವರೆಗೆ.

ಧನು ರಾಶಿ : ಇಂದು ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡುವಿರಿ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು.‌ ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು. ಇಂದಿನ ನಿಮ್ಮ ಉತ್ಸಾಹವು ಸಮಾರಂಭಗಳಲ್ಲಿ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಮನೆಯ ಬಗ್ಗೆ ಪ್ರೀತಿ ಹೆಚ್ಚಾಗಬಹುದು.

ಮಕರ ರಾಶಿ : ಇಂದು ಕಚೇರಿಯಲ್ಲಿ ಕೆಲಸದ ಕಡೆ ಹೆಚ್ಚಿನ ಗಮನ ಕೊಡುವುದು ಮುಖ್ಯ. ಇಂದು ನಿಮ್ಮ ಮೇಲೆ ಕೆಲಸದ ಹೊರೆ ಅಧಿಕವಾಗಿರುವುದು. ಹೊಸ ಒಪ್ಪಂದವನ್ನು ಮಾಡುವಾಗ ಹೆಚ್ಚು ಜಾಗರೂಕತೆ ಇರಲಿ. ಯಾರನ್ನೂ ಕುರುಡಾಗಿ ನಂಬವುದು ಬೇಡ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ. ಯಾವ ವಸ್ತುವನ್ನು ಖರೀದಿಸುವ ಯೋಚನೆಯನ್ನು ಮಾಡಬೇಡಿ.

ಕುಂಭ ರಾಶಿ : ನೀವು ಬಹಳ ಕಾಲದಿಂದ ಪ್ರಮುಖ ಕೆಲಸದಲ್ಲಿ ತೊಂದರೆ ಪಡುತ್ತಿದ್ದು ಇಂದು ನಿಮ್ಮ ಸಮಸ್ಯೆ ಕೊನೆಗೊಳ್ಳಬಹುದು. ನೀವು ವ್ಯಾಪಾರಸ್ಥರಾಗಿದ್ದರೆ, ನೀವು ಕೆಲಸದ ನಿಮಿತ್ತ ಪ್ರಯಾಣಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಹಣದ ಪರಿಸ್ಥಿತಿ ಉತ್ತಮವಾಗಿರೂ, ಖರ್ಚೂ ಇರಲಿದೆ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ಹೆಚ್ಚಿಸುವುದು. ಆಪ್ತರಿಂದ ನಡೆವಳಿಕೆಗೆ ಟೀಕೆಗಳು ಬರಬಹುದು. ಇದರಿಂದ ನಿಮ್ಮ ನಡುವಿನ ಸಂಬಂಧವು ಕೆಡಬಹುದು. ಯಾರನ್ನೂ ಅವಲಂಬಿಸದೇ ಸ್ವಂತ ಶ್ರಮದಿಂದ ನೀವು ಆಗುವಷ್ಟು ಕೆಲಸವನ್ನು ಮಾಡಿ.

ಮೀನ ರಾಶಿ : ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿದೆ. ಉದ್ಯಮದಲ್ಲಿ ಬರುವ ಎಂತಹ ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲವೇ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಮಕ್ಕಳಿಂದ ಇಂದಿನ ಕೆಲಸಕ್ಕೆ ಅಡ್ಡಿಯಾಗಬಹುದು. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದದಿಂದ ಬೇಸರ ಇರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವು ಸಂತೋಷಗೊಳ್ಳುವರು. ಅಪರಿಚಿತರನ್ನು ನಂಬಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಆಪ್ತರ ನೋವಿಗೆ ಸ್ಪಂದಿಸುವಿರಿ.

-ಲೋಹಿತಶರ್ಮಾ -8762924271 (what’s app only)

ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್