Horoscope: ಈ ರಾಶಿಯವರು ಇಂದು ಸಂಗಾತಿಯ ಮೇಲೆ ಅನುಮಾನ ಪಡುವವರು

| Updated By: ವಿವೇಕ ಬಿರಾದಾರ

Updated on: Sep 24, 2023 | 7:06 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರು ಇಂದು ಸಂಗಾತಿಯ ಮೇಲೆ ಅನುಮಾನ ಪಡುವವರು
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 24 ರವಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ:ಪೂರ್ವಾಷಾಢ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 04:56 ರಿಂದ 6:27 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:25 ರಿಂದ 01:55 ರವರೆಗೆ, ಗುಳಿಕ ಕಾಲ ಸಂಜೆ 03:26 ರಿಂದ 04:56ರ ವರೆಗೆ.

ಧನು ರಾಶಿ: ವಾಹನ ಖರೀದಿಗೆ ಯೋಚನೆ ಇರಲಿದ್ದು ಸಾಲ ಮಾಡಬೇಕಾಗವುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಮನೆಯವರ ಸಣ್ಣ ತಪ್ಪುಗಳೂ ನಿಮಗೆ ಸಹ್ಯವಾಗದೇ ಇರುವುದು. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಏನಾದರೂ ಆಡಿಕೊಂಡಾರು. ಶ್ರಮವು ಯುಕ್ತಿಯಿಂದ ಕೂಡಿರಲಿ. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಬೇಕಾದೀತು. ನಿದ್ರೆಯು ಬಾರದೇ ಕಷ್ಟವಾದೀತು. ಮನೆತನದ ಗೌರವವನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಲಿದೆ. ಕಳೆದುಕೊಂಡ ವಸ್ತುವಿಗಾಗಿ ನೀವು ಬಹಳ ಬೇಸರಪಡುವಿರಿ.‌ ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.

ಮಕರ ರಾಶಿ: ಪ್ರೀತಿಯ ವಿಚಾರಕ್ಕೆ ಬಂದರೆ ಪೂರ್ಣ ಸಮಾಧಾನ‌ ಇರದು.‌ ಸಂಗಾತಿಯ ಮೇಲೆ ಅನುಮಾನವನ್ನು ವ್ಯಕ್ತಪಡಿಸುವಿರಿ. ಆಭಾರಣ ಖರೀದಿಯಿಂದ‌ ಸಂತೃಪ್ತಿ ಇರಲಿದೆ. ಅತಿಯಾದ ಖರ್ಚನ್ನು ಮಾಡಿಕೊಳ್ಳುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಹಣವನ್ನು ಗಳಿಸುವ ಹಂಬಲವು ಇದ್ದು ಅದಕ್ಕಾಗಿ ಮಾರ್ಗವನ್ನೂ ಪರ್ಯಾಲೋಚಿಸಿ. ಸಹೋದರಿಯ ಜೊತೆ ಭಾವನೆಯನ್ನು ತೆರೆದಿಡುವಿರಿ. ಆಗಾಗ ಮಾತನಾಡುತ್ತ ಸಂಬಂಧವನ್ನು ಗಟ್ಟಿಮಾಡಿಕೊಳ್ಳಿ. ಇಂದಿನ ಕೆಲಸವನ್ನು ಸಮಯದ ಮಿತಿಯಲ್ಲಿ ಮಾಡುವುದು ಕಷ್ಟವಾದೀತು.

ಕುಂಭ ರಾಶಿ: ಮನೆಯವರ ಜೊತೆ ವಿನಾಕಾರಣ ಏರುದನಿಯಲ್ಲಿ ಮಾತನಾಡುವಿರಿ. ಆಸ್ತಿಯು ನಷ್ಟವಾಗುದು ಎಂಬ ಹೆದರಿಕೆ ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನದ ಭೀತಿಯು ನಿಮಗೆ ಇರವುದು‌. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವು ದೂರಾಗುವುದು. ಕಲಿಕೆಯಲ್ಲಿ ಹೊಸತನವನ್ನು ಇರುವುದು. ಸಂತಾನವು ನಿಮಗೆ ಖುಷಿ ಕೊಡುವುದು. ವಿದೇಶಪ್ರಯಾಣವನ್ನು ಮಾಡುವ ಯೋಚನೆಯಲ್ಲಿಯೇ ಇರುವಿರಿ. ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದೀರಿ. ಪುಣ್ಯಸ್ಥಳಗಳ ದರ್ಶನವು ಇರಲಿದೆ. ನಿಮಗೆ ಸಿಗಾಬೇಕಾದುದ್ದು ಸಿಕ್ಕಿಯೇ ಸಿಗುತ್ತದೆ ಎಂಬ ಗಾಢವಾದ ನಂಬಿಕೆ ಇರುವುದು.

ಮೀನ ರಾಶಿ: ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ಕಾನೂನಿಗೆ ವಿರುದ್ಧದ ವ್ಯವಹಾರದಿಂದ ನಿಮಗೆ ತೊಂದರೆಯಾಗುವುದು. ಆಪ್ತರು ನಿಮ್ಮಿಂದ ದೂರವಾಗಲಿದ್ದು ಬಹಳ ವೇದನೆಯಾಗುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ಸ್ವಾವಂಬಿಯಾಗಲು ನೀವು ಇಚ್ಛಿಸುವಿರಿ. ಸಿಟ್ಟನ್ನು ಕಡಿಮೆ ಮಾಡಿಕೊಂಡು ಎಲ್ಲವನ್ನೂ ಸ್ವೀಕರಿಸಿದರೆ ಯಶಸ್ಸು ನಿಮ್ಮದೇ. ಉನ್ನತ ಅಧಿಕಾರವು ನಿಮ್ಮನ್ನು ಹುಡುಕಿಕೊಂಡು ಬಂದೀತು. ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕೆ ಅವಕಾಶ ಸಿಗುವುದು.

-ಲೋಹಿತಶರ್ಮಾ – 8762924271 (what’s app only)