ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 28 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ರಿಂದ 23 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:53 ರಿಂದ 03:23ರ ವರೆಗೆ,
ಯಮಘಂಡ ಕಾಲ ಬೆಳಗ್ಗೆ 06:23 ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:23 ರಿಂದ ಮಧ್ಯಾಹ್ನ 10:53ರ ವರೆಗೆ.
ಧನು ರಾಶಿ: ಮಾನಸಿಕ ಆರೋಗ್ಯವು ಕ್ಷೀಣಿಸುವುದು ನಿಮ್ಮ ಗಮನಕ್ಕೆ ಬರಲಿದೆ. ಬಲವೃದ್ಧಿಗೆ ಬೇಕಾದ ತಯಾರಿಯನ್ನು ಮಾಡಿಕೋಳ್ಳುವುದು ಉತ್ತಮ. ಮಹಿಳೆಯರು ಆದಾಯದಲ್ಲಿ ಮುನ್ನಡೆ ಸಾಧಿಸುವರು ಇಂದು. ಇನ್ನೊಬ್ಬರ ಕಡೆಯಿಂದ ಕೆಲಸವನ್ನು ಮಾಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಾರ್ಯದಲ್ಲಿ ಆಗುವ ವ್ಯತ್ಯಸದಿಂದ ಕೋಪಗೊಳ್ಳುವುದು ಬೇಡ. ಒಂದು ನಾಣ್ಯಕ್ಕೆ ಎರಡು ಮುಖಗಳು. ಎರಡೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದಿಲ್ಲ. ಆದರೇ ಇಬ್ಬರಲ್ಲಿ ಯಾರೊಬ್ಬ್ು ಇಲ್ಲದಿದ್ದರೂ ಇಬ್ಬರೂ ಇರುವುದಿಲ್ಲ. ವಿದ್ಯಾರ್ಥಿಗಳ ಓದುವ ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಸರಿಯಾದ ತಿಳಿವಳಿಕೆ ಅಗತ್ಯ. ಅತ್ಯಂತ ಬೆಲೆ ಬಾಳುವ ಮರಗಳೂ ಎಂದಿಗೂ ಅಲ್ಪಕಾಲದಲ್ಲಿ ಬೆಳೆಯುವುದಿಲ್ಲ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಿ.
ಮಕರ ರಾಶಿ: ವಿದ್ಯಾರ್ಥಿಗಳಿಗೆ ಯಶಸ್ಸನ್ನು ಪಡೆಯುವ ಹಂಬಲವು ಹೆಚ್ಚಾಗುವುದು. ಇದೇ ಓದಿಗೆ ಅವರನ್ನು ಹಚ್ಚುವುದು. ನಿಮ್ಮ ಕುಶಲ ಕಾರ್ಯದಿಂದ ಪ್ರಸಿದ್ಧಿ ದೊರೆಯುವುದು. ಉದ್ಯೋಗದಲ್ಲಿ ಹಳೆಯ ಸಮಸ್ಯೆಯು ಪುನಃ ಬಾರದಂತೆ ನೋಡಿಕೊಳ್ಳಿ. ವಾದವನ್ನು ಮಾಡುವ ಮುಂದಿರುವ ಜನರನ್ನು ನೋಡಿಕೊಳ್ಳಿ. ನಾಲಿಗೆಯನ್ನು ಹೇಗಾದರೂ ಹರಿ ಬಿಡುವುದು ಬೇಡ. ಖನಿಜದ ವ್ಯವಹಾರ ತಕ್ಕಮಟ್ಟಿಗೆ ಆದಾಯವನ್ನು ಹೆಚ್ಚಿಸುವುದು. ಶತ್ರುಗಳ ಕಾಟವನ್ನು ಕಡಿಮೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕಾರ್ಯದಲ್ಲಿ ಒತ್ತಡವು ಮೇಲಧಿಕಾರಿಗಳಿಂದ ಬರುವುದು. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿ ಇರಲಿ. ಆಗಬೇಕಾದ ವಿವಾಹವನ್ನು ತಪ್ಪಿಸುವ ಸಾಧ್ಯತೆ ಇದೆ. ಕೊಟ್ಟಿರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ದೈವಾನುಗ್ರಹದ ಕೊರತೆ ಕಾಣಿಸುವುದು.
ಕುಂಭ ರಾಶಿ: ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನಿಮ್ಮ ಯೋಚನೆಗೆ ಪುಷ್ಟಿ ಸಿಗುವುದು. ಅನವಶ್ಯಕ ಆಲೋಚನೆಗಳಿಂದ ಮನಸ್ಸು ಕ್ಷೋಭೆಗೊಳ್ಳುವುದು. ಆರೋಗ್ಯದ ವೃದ್ಧಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಯಾರೊಂದಿಗೂ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ನಿಮ್ಮ ಜವಾಬ್ದಾರಿಯ ಕಾರ್ಯಗಳು ಮುನ್ನೆಲೆಗೆ ಬರಬಹುದು. ಅಪರೂಪದ ದ್ರವ್ಯಗಳ ಸಂಗ್ರಹವನ್ನು ಮಾಡುವಿರಿ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ನಿಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ಕಷ್ಟವಾದೀತು. ನಿಮ್ಮ ವಿರುದ್ಧ ನಡೆಯುವ ತಂತ್ರವನ್ನು ನೀವು ಅರಿತುಕೊಳ್ಳುವಿರಿ. ಹಿರಿಯರಿಗೆ ಅಗೌರವವನ್ನು ತೋರುವುದು ಬೇಡ. ದೇವಾಲಯಕ್ಕೆ ಹೋಗಿ ನಿಮ್ಮ ಕೆಲವು ಸಮಯವನ್ನು ಕಳೆದುಬರುವಿರಿ.
ಮೀನ ರಾಶಿ: ನಿಮಗೆ ಇಂದು ಆಸ್ತಿಯ ವಿಚಾರದಲ್ಲಿ ಅನುಕೂಲವಾದ ಬೆಳವಣಿಗೆ ಇರಲಿದೆ. ನೀವು ನಿರೀಕ್ಷಿಸಿದ್ದ ಸಮಸ್ಯೆಯು ಬಾರದೇ ಹೋದೀತು. ಖಾಸಗಿಯ ಕೆಲಸವು ನಿಮಗೆ ಸಾಕೆನಿಸಬಹುದು. ಬಂಧುಗಳಿಂದ ಮಾನಸಿಕ ಹಿಂಸೆಯಾಗುವುದು. ಕೆಲಸದಲ್ಲಿ ಬದಲಾವಣೆಯು ನಿಮಗೆ ಬೇಕಾದೀತು. ಅಧಿಕಾರಿಗಳ ಪ್ರಶಂಸೆಯು ನಿಮ್ಮ ಕಾರ್ಯಕ್ಕೆ ಬಲವು ಬರಬಹುದು. ಸ್ನೇಹಿತರ ಸಮಸ್ಯೆಗೆ ನೀವು ಸ್ಪಂದಿಸುವಿರಿ. ನಿಮ್ಮ ಕಾರ್ಯವನ್ನು ಇಂದೇ ಮುಗಿಸುವ ಚಿಂತೆಯಲ್ಲಿ ಇರುವಿರಿ. ಇಂದಿನ ಹಣಕಾಸಿನ ಹರಿವು ನಿಮಗೆ ಸಂತೋಷವನ್ನು ಕೊಡಬಹುದು. ಧನ ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದಲ್ಲಿ ಸ್ವಲ್ಪ ಒತ್ತಡವು ಇರಲಿದೆ. ದೈವಬಲಕ್ಕೆ ಪುರುಷಪ್ರಯತ್ನವೂ ಬೇಕಾಗುವುದು.