AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 07 December: ಈ ರಾಶಿಯವರ ದಾಂಪತ್ಯದಲ್ಲಿ ಭಿನ್ನಮತ ಆರಂಭ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ ಭಾನುವಾರ ಅತಿಥಿ ಸತ್ಕಾರ, ಬಂಧುಗಳ ಜೊತೆ ಮನಸ್ತಾಪ, ವಿವಾಹಕ್ಕೆ ಅಡ್ಡಿ, ಖರೀದಿಯ ಗೊಂದಲ, ಕಾರ್ಯದ ಒತ್ತಡ, ಪಶ್ಚಾತ್ತಾಪ, ಪ್ರಭಾವಿತರ ಹಸ್ತಕ್ಷೇಪ ಈ ಎಲ್ಲವೂ ಇಂದಿ ವಿಶೇಷ.

Horoscope Today 07 December: ಈ ರಾಶಿಯವರ ದಾಂಪತ್ಯದಲ್ಲಿ ಭಿನ್ನಮತ ಆರಂಭ
Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 07, 2025 | 12:02 AM

Share

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಭಾನು ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸಿದ್ಧ, ಕರಣ : ತೈತಿಲ, ಸೂರ್ಯೋದಯ – 06 – 30 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:27 – 17:52, ಯಮಗಂಡ ಕಾಲ 12:11 – 13:36, ಗುಳಿಕ ಕಾಲ 15:51 – 16:27.

ಮೇಷ ರಾಶಿ: ಶಿಕ್ಷಣ ಅಧ್ಯಾತ್ಮಕ್ಕೆ ಉತ್ತಮ ದಿನ. ಆರೋಗ್ಯದಲ್ಲಿ ಜಾಗರೂಕತೆ ಮುಖ್ಯ. ಮಾತಿನಲ್ಲಿ ಮೃದುತ್ವ ಇರಲಿ. ಎಂತಹ ಎತ್ತರವನ್ನೇ ಏರಿದರೂ ನಿಮ್ಮ ಮೂಲ ಸ್ಥಾನದ ಬಗ್ಗೆ ಪ್ರೀತಿ ಇರಲಿ. ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ನಿಮ್ಮ ಸ್ಥಿರಾಸ್ತಿಯ ಮಾರಾಟಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಮನಸ್ಸಿನ ನೋವಿಗೆ ಮದ್ದರೆಯಲಾಗದು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾಗಬಹುದು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಿರುವುದು.‌ ಕಲಾತ್ಮಕ ಕೆಲಸಗಳಲ್ಲಿ ಯಶಸ್ಸು. ದೈವಾನುಗ್ರಹದಿಂದ ಕಷ್ಟ ನಿವಾರಣೆ. ಬಂಧುಗಳ ಸಲಹೆಯು ನಿಮ್ಮನ್ನು ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರವನ್ನು ಮೊದಲೇ ಸರಿಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಹೆಚ್ಚು ಶ್ರಮವಹಿಸಬೇಕು.

ವೃಷಭ ರಾಶಿ: ನೂತನ ಪರಿಚಯದಿಂದ ಉಪಯೋಗ. ಸಹೋದ್ಯೋಗಿಗಳಿಂದ ವಿಳಂಬ ಕೆಲಸ ಪೂರ್ಣ. ವಿದೇಶೀ ವ್ಯವಹಾರದಲ್ಲಿ ತೊಡಗುವ ಅವಕಾಶ ಸಿಗವುದು. ನಿಮ್ಮ ಸಂಧಾನದ ಮಾತುಗಳು ನಿಷ್ಫಲವಾಗಬಹುದು. ಬಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ಆರ್ಥಿಕ ವಿಚಾರವಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ವಿದೇಶ ಪ್ರಯಾಣಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ನಿಮಗೆ ಆಗದ ಕಾರ್ಯಕ್ಕೆ ಬದಲಿ ವ್ಯವಸ್ಥೆ ಮಾಡುವಿರಿ. ಇನ್ನೊಬ್ಬರ ಕ್ಷೇಮವನ್ನು ವಿಚಾರಿಸಿ ಅವರ ಜೊತೆ ಭಾಗಿಯಾಗುವಿರಿ. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ ಮುಗಸಿಕೊಳ್ಳುವಿರಿ. ಕೆಲಸಗಳಲ್ಲಿ ವೇಗವನ್ನು ಒತ್ತಡವೇ ತಂದುಕೊಡುವುದು. ಕುಟುಂಬದಲ್ಲಿ ಸೌಹಾರ್ದತೆ ಮುಂದುವರಿಯುವುದು. ಸಾಹಸದ‌ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕ. ಆಪ್ತರಿಂದ ನಿಮ್ಮ ಸಂಪತ್ತನ್ನು ಪಡೆದುಕೊಳ್ಳುವಿರಿ.

ಮಿಥುನ ರಾಶಿ: ಹಣಕಾಸು ವ್ಯವಹಾರಗಳಲ್ಲಿ ಜಾಣ್ಮೆ. ಕುಟುಂಬದಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿದ್ದು ಶಾಂತಿ ನೆಲೆಸುವುದು. ಅನಿರೀಕ್ಷಿತ ಕೊಡುಗೆಗಳಿಂದ ನಿಮಗೆ ಸಂತೋಷವಾಗಲಿದೆ. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಪಾಲುದಾರಿಕೆಯಲ್ಲಿ ಕಲಹವು ಶುರುವಾಗಬಹುದು. ಯಂತ್ರಗಳ ಮಾರಾಟದಿಂದ ಹೆಚ್ಚಿನ ಲಾಭಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ನೆರೆಹೊರೆಯರ ಜೊತೆ ವಾಗ್ವಾದ‌ ಮಾಡುವಿರಿ. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗುವುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ.‌ ಕಾರ್ಯಕ್ಷೇತ್ರದಲ್ಲಿ ಒತ್ತಡ ಇದ್ದರೂ ಫಲ ಸಿಗುತ್ತದೆ. ಹೊಸ ಯೋಜನೆಗಳಿಗೆ ಅವಕಾಶ. ಸ್ಥಿರಾಸ್ತಿಯ ಹಳೆಯ ತಕರಾರು ಪರಿಹಾರ. ಆರೋಗ್ಯದಲ್ಲಿ ಸ್ವಲ್ಪ ಕಾಂತಿ. ಪ್ರಾಮಾಣಿಕತೆ ಮೆಚ್ಚುಗೆ ಇರುತ್ತದೆ. ಆದಾಯವು ನಿಮ್ಮ ಯೋಜನೆಯಷ್ಟು ಇದ್ದರೂ ಅದು ಹೆಚ್ಚಿನ ಖರ್ಚಿಗೆ ಕಾರಣವಾಗುವುದು.

ಕರ್ಕಾಟಕ ರಾಶಿ: ಹಣಕಾಸಿನ ಸ್ಥಿತಿ ಸ್ಥಿರವಾಗುವಂತೆ ಪ್ರಯತ್ನ. ಮಿತ್ರರಿಂದ ಲಾಭ. ಮನೆಯ ವಿಚಾರಗಳಲ್ಲಿ ಸುಧಾರಣೆ. ಆತ್ಮವಿಶ್ವಾಸ ದೃಢ. ನಿಮ್ಮ ಕಾರ್ಯದ ಕೌಶಲ್ಯತೆಯು ಸಹೋದ್ಯೋಗಿಗಳಿಗೆ ಇಷ್ಟವಾಗುವುದು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಒತ್ತಡದ ಕಾರಣಕ್ಕೆ ಸಿಟ್ಟಾಗುವಿರಿ. ವ್ಯರ್ಥ ಓಡಾಟದಿಂದ ಬೇಸರವಾಗುವುದು. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಲಾಭ ಬರುವ ಕಾರ್ಯದಲ್ಲಿ ಮಾತ್ರ ಇಚ್ಛೆಯು ಇರುವುದು. ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ. ಬಂಧುಗಳು ನಿಮಗೆ ಆರ್ಥಿಕ ಸಹಾಯವನ್ನು ಮಾಡಲು ಬಂದರೂ ಸ್ವಾಭಿಮಾನದಿಂದ ನಿರಾಕರಿಸುವಿರಿ. ಗುರುದೃಷ್ಟಿಯಿಂದಾಗಿ ಶಿಕ್ಷಣ, ಪ್ರವಾಸ, ಧರ್ಮಕರ್ಮಗಳಲ್ಲಿ ಯಶಸ್ಸು. ನಿಮ್ಮವರ ಏಳ್ಗೆಯನ್ನು ಸಹಿಸುವುದು ನಿಮಗೆ ಕಷ್ಟವಾದೀತು.

ಸಿಂಹ ರಾಶಿ: ನಿಮ್ಮ ರಹಸ್ಯ ಕಾರ್ಯಗಳ ಪರಿಶೀಲನೆ ನಡೆಯುವುದು. ಆಸ್ತಿ ಅಥವಾ ವಾಹನ ಸಂಚಾರ ಯೋಗ. ಇಂದು ಅಪರಿಚಿತರ ಜೊತೆ ವಿವಾದವನ್ನು ಮಾಡಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಅಧಿಕಾರವು ಸಿಗಬಹುದು. ಪರಿಚಿತರ ವಿವಾಹಕ್ಕೆ ಓಡಾಟ ಮಾಡಿ ಸಫಲರಾಗುವಿರಿ. ನಿಮ್ಮ ಸಂಪತ್ತಿನ ರಹಸ್ಯವನ್ನು ಮೈಮರೆತು ಹೇಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ. ಇಂದು ಸಂಗಾತಿಯ ಪ್ರೀತಿಯನ್ನು ನೀವು ಹೆಚ್ಚು ಅನುಭವಿಸುವಿರಿ. ಸ್ನೇಹಿತರೊಂದಿಗೆ ಸಂಭಾಷಣೆ ಹೆಚ್ಚು. ಕೆಲಸಗಳಲ್ಲಿ ತಂತ್ರಪ್ರಯೋಗ ಯಶಸ್ಸು ತರಲಿದೆ, ಕೋಪ ನಿಯಂತ್ರದಲ್ಲಿ ಇರಲಿ. ಎಲ್ಲ ಸಂದರ್ಭದಲ್ಲಿಯೂ ವಾತಾವರಣವು ನಿಮ್ಮ ಪರವಾಗಿಯೇ ಇರುತ್ತದೆ ಎಂದುಕೊಳ್ಳಬೇಡಿ.

ಕನ್ಯಾ ರಾಶಿ: ನವದಾಂಪತ್ಯದಲ್ಲಿ ಮಧುರತೆ. ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ. ಕಾನೂನು, ಬ್ಯಾಂಕ್, ವಿಮೆ ವಿಷಯಗಳಲ್ಲಿ ಲಾಭ. ವಿದ್ಯಾರ್ಥಿಗಳು ಕಲಿತದ್ದನ್ನೇ ಕಲಿಯಬೇಕಾದ ಅನಿವಾರ್ಯತೆ ಬಂದೀತು. ಅಧಿಕಾರ ತಪ್ಪುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು. ಅವುಗಳಿಗೆ ಕಿವಿಗೊಡದೇ ಕಾನೂನು ಪ್ರಕ್ರಿಯೆಯನ್ನು ಮಾಡಿ. ಮಕ್ಕಳಿಗಾಗಿ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದು.‌ ಕಷ್ಟ ಎನ್ನುವ ಯೋಚನೆಯನ್ನು ತಕೆಯಿಂದ ತೆಗೆಯಬೇಕು. ಅತಿಯಾದ ಸ್ನೇಹ ತಪ್ಪಿಸಿರಿ. ಧಾರ್ಮಿಕ ಚಿಂತನೆ ಮನಶಾಂತಿ ತರುವುದು. ನಂಬಿಕೆಯನ್ನು ನೀವು ಎಲ್ಲರೆದುರು ಸಮರ್ಥಿಸಿಕೊಳ್ಳುವಿರಿ. ಅಪರಿಚಿತರು ನಿಮ್ಮ ವಿವರಗಳನ್ನು ಪಡೆಯುವರು.

ತುಲಾ ರಾಶಿ: ನಿಮ್ಮ ಪ್ರಾಮಾಣಿಕ ಶ್ರಮ ಫಲಿಸುತ್ತವೆ. ಕಚೇರಿ ಕಾರ್ಯಗಳಲ್ಲಿ ತಾನಾಗಿಯೇ ಬರುವ ಸಹಕಾರದಿಂದ ಪ್ರಗತಿ. ಹಣದ ಹರಿವು ಸುಧಾರಿತವಾಗಲಿದೆ. ಕುಟುಂಬದ ಯೋಗಕ್ಷೇಮದ‌ ಮೇಲೆ ನಿಮಗೆ ನಿಗಾ. ನೀವು ಯಾವ ಮಾತನ್ನು ಒಮ್ಮೆಲೆ ನಂಬುವುದಿಲ್ಲ. ರಾಜಕೀಯವಾಗಿ ಇರುವವರು ಹಿನ್ನಡೆಯನ್ನು ಅನುಭವಿಸಬೇಕಾದೀತು. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡುವಿರಿ. ಸಾಲ ಕೊಟ್ಟವರ ಎದುರು ತಲೆ ಮೆರೆಸಿಕೊಂಡು ಓಡಾಡುವಿರಿ. ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುವರು. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳಬೇಕಾದೀತು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ. ಹಳೆಯ ನೋವುಗಳು ನಿಮ್ಮನ್ನು ಕಾಡುವುಸು. ಯಾವುದನ್ನೂ ಅತಿರೇಕ ಮಾಡಿಕೊಳ್ಳುವುದು ಬೇಡ. ಮನಃಸ್ಥಿತಿಯು ಸರಿ ಇಲ್ಲದ ಕಾರಣ ಯಾವ ಕೆಲಸವನ್ನೂ ಖುಷಿಯಿಂದ ಮಾಡುವುದಿಲ್ಲ. ದಾಂಪತ್ಯದಲ್ಲಿ ಸಣ್ಣ ವಿರಸವು ಬರಬಹುದು. ಹಳೆಯ ನಷ್ಟಕ್ಕೆ ಪರಿಹಾರ. ಮಾತಿನಲ್ಲಿ ಅತಿ ವಾಸ್ತವಿಕತೆಯನ್ನು ತಪ್ಪಿಸಿರಿ.

ವೃಶ್ಚಿಕ ರಾಶಿ: ಇಂದು ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ಸು. ಹಣಕಾಸಿನಲ್ಲಿ ಉತ್ತಮ ಉದಯ. ಸ್ನೇಹಿತರಿಂದ ಬೆಂಬಲ. ಆರೋಗ್ಯದಲ್ಲಿ ಚುರುಕು. ನೀವು ಉದ್ಯೋಗವನ್ನು ಇಂದು ಗಂಭೀರವಾಗಿ ಸ್ವೀಕರಿಸುವಿರಿ‌. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು.‌ ವೃತ್ತಿಯಲ್ಲಿ ನಿಮಗೆ ಆಕಸ್ಮಿಕ ಪ್ರಶಂಸೆಯಿಂದ ಅಚ್ಚರಿಗೊಳ್ಳುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಮಾತನ್ನು ನೀವು ಸಹಿಸಲಾರಿರಿ. ವಾಮಮಾರ್ಗದಿಂದ ಹಣವನ್ನು ಸಂಪಾದಿಸುವ ಮನಸ್ಸು ಇರಲಿದೆ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ಬಾಲ್ಯದ ನೆನಪುಗಳು ನಿಮ್ಮನ್ನು ಕಾಡುವುದು. ಬೇಗ ಸಿಟ್ಟು ಮಾಡಿಕೊಂಡರೂ ಕ್ಷಣ ಕಾಲದಲ್ಲಿ ಸರಿಯಾಗುವುದು. ಗೌರವ, ಪ್ರತಿಷ್ಠೆ ಹೆಚ್ಚು ಮಾಡಿಕೊಳ್ಳುವ ದಿನ. ಕಲೆಯನ್ನು ಕಲಿಯುವ ಮನಸ್ಸಿನ ಆಲೋಚನೆ ಕಾರ್ಯರೂಪಕ್ಕೆ ಬರುವುದು. ಹಠ ತಪ್ಪಿಸಿರಿ. ಆತ್ಮವಿಶ್ವಾಸದ‌ ಕೊರತೆಯನ್ನು ಸ್ನೇಹಿತರು ತುಂಬುವರು. ವೃತ್ತಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವಿರಿ.

ಧನು ರಾಶಿ: ಮಾನಸಿಕ ಶಕ್ತಿಯ ನಿಮ್ಮ ತರಬೇತಿಯಿಂದ ಹೆಚ್ಚಾಗುವುದು. ಕುಟುಂಬದ ವಿಚಾರಗಳಲ್ಲಿ ನಿರ್ಧಾರಾತ್ಮಕತೆ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ಲಾಭ. ಆರೋಗ್ಯದಲ್ಲಿ ಸುಧಾರಣೆ. ಚಾಣಾಕ್ಷತನದಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು. ‌ಅಪರಿಚರ ಜೊತೆ ವ್ಯವಹಾರವು ಸರಿಯಾಗಿ ಇರಲಿ. ತಂದೆಯ ಮೇಲೆ‌ ನಿಮಗೆ ಬೇಸರ ಬರಬಹುದು. ನಿಮ್ಮ ಎಚ್ಚರಿಸುತ್ತ ಇರಬೇಕು. ಸಂಗಾತಿಯ ಮಾತುಗಳು ನಿಮಗೆ ನೋವನ್ನು ತರಬಹುದು. ಆಸ್ತಿಯ ವಿಚಾರದಲ್ಲಿ ನಿಮ್ಮರಿಗೆ ಸುಳ್ಳು ಹೇಳಿದ್ದು ಗೊತ್ತಾಗುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಯಶಸ್ಸು. ಧಾರ್ಮಿಕ ಕಾರ್ಯಕ್ಕೆ ತೊಡಕು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಬೇರೆ ದಾರಿಯನ್ನು ಹುಡುಕಿಕೊಳ್ಳುವಿರಿ. ಮನೆಯ ವಾತಾವರಣವು ನಿಮಗೆ ಹಿತಕರ ಎನಿಸದು.

ಮಕರ ರಾಶಿ: ಇಂದಿನ ನಿಮ್ಮ ಚುರುಕು, ಸಂವಹನಕ್ಕೆ ಸೂಕ್ತ. ಮಾತಿನಲ್ಲಿ ಜಾಣ್ಮೆ ಅಗತ್ಯ. ಉದ್ಯೋಗದಲ್ಲಿ ಹೊಸ ಅವಕಾಶ. ಹಣಕಾಸು ಮಧ್ಯಮ ಪ್ರಗತಿ. ಸ್ನೇಹಿತರ ಮೂಲಕ ಲಾಭ. ಇಂದು ಸ್ವಂತಿಕೆಯನ್ನು ನೀವು ಯಾವ ಸನ್ನಿವೇಶದಲ್ಲಿಯೂ ಬಿಟ್ಟುಕೊಡಲಾರಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ. ಅದೃಷ್ಟದ ಪರೀಕ್ಷೆಯು ಆಗಬಹುದು. ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶವು ಸಿಗುವುದು. ಅದೃಷ್ಟದ ಕಾರಣ ವಂಚನೆಯಿಂದ ಜಾರಿಕೊಳ್ಳುವಿರಿ. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಅಧಿಕ ಆಲೋಚನೆಯಿಂದ ಮನಸ್ಸು ದುರ್ಬಲವಾಗುವುದು. ವಿಳಂಬಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಮನಸ್ಸಿನಲ್ಲಿ ಚಿಂತೆ ಇದ್ದರೂ ತಾನಾಗಿಯೇ ಗೊತ್ತಾಗದಂತೆ ದೂರಾಗಲಿದೆ. ಪ್ರಯಾಣದಲ್ಲಿ ಎಚ್ಚರಿಕೆ. ನಿಮ್ಮ ದಿನಚರ್ಯೆಯನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗುವುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಆಗದು.

ಕುಂಭ ರಾಶಿ: ಸ್ಥಿರತೆ, ಶಾಂತಿ ನೀಡುವ ದಿನ. ಕುಟುಂಬದ ಸಹಕಾರ ಹೆಚ್ಚುವುದು. ಹಣಕಾಸಿನಲ್ಲಿ ಪ್ರಗತಿ. ಕೃಷಿ, ವ್ಯವಹಾರಗಳಲ್ಲಿ ಉತ್ತಮ ಲಾಭ. ನಿಮ್ಮ ಸಂಘಡನೆ ಚೆನ್ನಾಗಿದ್ದು ಯಾರೂ ಏನೂ ಮಾಡಲಾರರು. ಇಂದು ನಿಮಗೆ ಆತ್ಮೀಯರ‌ ಒಡನಾಡ ಅಧಿಕವಾಗಲಿದೆ. ಸಾಹಿತ್ಯಾಸಕ್ತರಿಗೆ ಹೆಚ್ಚು ಅನುಕೂಲಕರ ವಾತಾವರಣವು ಇರುವುದು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಪರರ ದುಃಖಕ್ಕೆ ಆಸರೆಯಾಗುವಿರಿ. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು.‌ ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ.‌ ನಿಮ್ಮ ವಿವಾಹದ ಮಾತುಕತೆ ವಿಳಂಬವಾಗಿ‌ದೆ ಎಂದು ಬೇಸರ ಆಗಬಹುದು. ಹಳೆಯ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದೆ. ಆರೋಗ್ಯದಲ್ಲಿ ಚೇತರಿಕೆ. ದೈವಭಕ್ತಿಯಿಂದ ಮನಃಶಾಂತಿ. ಹೊಸ ಪರಿಚಯಗಳು ಯಶಸ್ಸು ತರಲಿವೆ. ನಿಮಗೆ ಸರಿಯಾದ ಸಮಯದಲ್ಲಿ ಹಣವು ಸಿಕ್ಕಿರುವುದು‌ ಖುಷಿ‌ ಕೊಡುವುದು.

ಮೀನ ರಾಶಿ: ಕಾರ್ಯಗಳಲ್ಲಿ ತ್ವರಿತ ಫಲ. ಮನೆಯವರೊಡನೆ ಸೌಹಾರ್ದ ಹೆಚ್ಚಳವಾಗುವ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಬೇಕು. ಹೊಸ ಕಾರ್ಯಾರಂಭಕ್ಕೆ ಶುಭ. ಮನೆಯಲ್ಲಿ ನಿಮಗೆ ನಿರಾಶೆಯ ಅನುಭವ ಆಗಬಹುದು. ಇಂದು ನಿಮ್ಮ ಸ್ವಭಾವವು ಕಾರಣಾಂತರದಿಂದ ಉಗ್ರವಾಗಿರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ‌ ಇಂದು ಸಂತೋಷವು ಇರಲಿದೆ. ‌ಆರೋಗ್ಯದಲ್ಲಿ ಸಣ್ಣ ತೊಂದರೆ ಇದ್ದರೂ ನಿಯಂತ್ರಣ ಸಾಧ್ಯ. ಮಾತಿನಲ್ಲಿ ಮೃದುವಾಗಿರಿ. ಕಳೆದ ದಿನಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಹಂಚಿಕೊಳ್ಳುವಿರಿ. ಬರಬೇಕಾದ ಹಣವು ವಿಳಂಬವಾಗುವುದು.

ಲೋಹಿತ ಹೆಬ್ಬಾರ್-8762924271 (what’s app only)

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ