Horoscope Today 08 December: ಇಂದು ಈ ರಾಶಿಗೆ ಮನೆಯಲ್ಲಿ ಸಂತೋಷದ ವಾತಾವರಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ ಸೋಮವಾರ ಉದ್ಯಮಿಯ ಭೇಟಿ, ಮನೆಕೆಲಸ, ಸಾಮಾಜಿಕ ಚಟುವಟಿಕೆ, ನಿರ್ಮಾಣ ಕಾರ್ಯ, ವಿಯೋಗದ ಭೀತಿ, ಸಂದೇಹಾಧಿಕ್ಯ, ಕಾರ್ಯ ಮುಂದೂಡಿಕೆ ಇವೆಲ್ಲ ಇಂದಿನ ವಿಶೇಷ. ಇಂದು ನೀವು ಎದುರಿಸಬಹುದಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ.

ಮೇಷ ರಾಶಿ:
ನಿಮಗೆ ಕೆಲಸದಲ್ಲಿ ಪ್ರಶಂಸನೀಯ ಸಂದರ್ಭ ಪ್ರಾಪ್ತಿ. ಸ್ನೇಹ ಸಂಬಂಧದಲ್ಲಿ ಮಧುರತೆ. ಧಾರ್ಮಿಕ ಚಟುವಟಿಕೆಗಳಿಂದ ಮನಃಶಾಂತಿ ಕೊಡುತ್ತದೆ. ಉದ್ವೇಗದಿಂದ ಅನರ್ಥವು ನಡೆಯುವ ಸಾಧ್ಯತೆ ಇದೆ. ಆರ್ಥಿಕ ಉಳಿತಾಯವನ್ನು ಅನ್ಯರಿಂದ ಕೇಳಿ ಪಡೆಯುವುದು ಉಚಿತ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ನಿಮ್ಮ ವಿವಾಹವು ಮುಂದೆ ಮುಂದೆ ಹೋಗುವುದಕ್ಕೆ ಕಾರಣವನ್ನು ದೈವಜ್ಞರಿಂದ ಪಡೆಯಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವರು. ಶಾಂತ ವಾತಾವರಣವನ್ನು ಓದಿಗಾಗಿ ಹುಡುಕುವಿರಿ. ನೀವು ಆಡಿದ ಮಾತೇ ನಿಮಗೆ ಬೇರೆಯವರ ಮೂಲಕ ಬರಲಿದೆ. ಹಳೆಯ ವಾಹನದ ಮಾರಾಟದಿಂದ ನಿಮಗೆ ಆರ್ಥಿಕ ಲಾಭವು ಆಗುವುದು. ಕುಟುಂಬದಲ್ಲಿ ಸೌಹಾರ್ದ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ಉತ್ತಮ ಪ್ರಗತಿ. ಬುದ್ಧಿಯು ಸೃಜನಶೀಲತೆಗೆ ಒತ್ತುಕೊಡುವುದು. ನಾಯಕರಿಗೆ ಕೆಲವು ತೊಂದರೆಗಳು ಬರಬಹುದು. ನಿಮಗೆ ಕಾರ್ಯದ ಒತ್ತಡ ನಡುವೆಯೂ ನಿಮ್ಮವರಿಗೆ ಸ್ವಲ್ಪ ಸಮಯ ಕೊಡುವಿರಿ. ಹಳೆಯ ವಸ್ತುಗಳನ್ನು ಹೊಸದಾಗಿ ಮಾಡಿಕೊಂಡು ಉಪಯೋಗಿಸುವಿರಿ.
ವೃಷಭ ರಾಶಿ:
ಕುಟುಂಬದ ಮಾತು ಕೇಳುವುದು ಒಳಿತು. ನಿಮ್ಮ ಉಡುಗೊರೆಯು ಕೊಟ್ಟವರಿಗೆ ಸಮಾಧಾನ ತರದು. ಕೆಲಸದಲ್ಲಿ ನಿಮ್ಮ ಮಾತು ಪ್ರಭಾವ ಬೀರುತ್ತದೆ. ನಿಮ್ಮದಲ್ಲದ ತಪ್ಪಿಗೂ ನೀವು ಕ್ಷಮೆಯನ್ನು ಕೇಳಬೇಕಾಗುವುದು. ಕುಟುಂಬದ ಸದಸ್ಯರ ಜೊತೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಉಳಿದ ಸಾಲವನ್ನು ತೀರಿಸುವಿರಿ. ಬೆನ್ನು ನೋವು ಅಧಿಕವಾಗಬಹುದು. ಸಹೋದರರ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯದಿಂದ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳಿಂದ ನೀವು ಸಂತೋಷವಾಗಿ ಇರುವಿರಿ. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ತಲೆ ಹಾಕಬೇಡಿ. ತಂದೆಯಿಂದ ತಪ್ಪಿನ ಕೆಲಸಕ್ಕೆ ಬೈಗುಳ ಸಿಕ್ಕೀತು. ಆಲೋಚನೆಗಳ ಸ್ಪಷ್ಟತೆ ಹೆಚ್ಚುತ್ತದೆ. ಹೊಸ ಯೋಜನೆಗೆ ಶುಭ ಸಮಯ. ಸ್ನೇಹಿತರ ಸಹಕಾರ ದೊರೆಯುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಮಂದಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು.
ಮಿಥುನ ರಾಶಿ:
ನಿಮ್ಮ ನಿಶ್ಚಯಶಕ್ತಿಯಿಂದ ಅಡೆತಡೆ ದೂರವಾಗುತ್ತದೆ. ಸಾಮಾಜಿಕ ಸಂಪರ್ಕ ಲಾಭ. ನಿಮ್ಮ ಪ್ರಧಾನಕಾರ್ಯಕ್ಕಿಂತ ಅಪ್ರಧಾನದಿಂದ ಆದಾಯವು ಅಧಿಕವಾಗಿ ಸಿಗುವುದು. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸಮತೋಲಿತ ದಿನಚರಿಯನ್ನು ಅನುಸರಿಸಿ. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರನ್ನು ವಿರೋಧಿಸುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು, ಹೀಗಾಗಿ ಅದರ ಬಗ್ಗೆ ಗಮನಕೊಡಿ. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಕೆಲಸದಲ್ಲಿ ಹೊಸ ಮಾರ್ಗದರ್ಶನ ಲಭ್ಯ. ಹಿರಿಯರ ಬೆಂಬಲ ಹೆಚ್ಚುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ. ಪ್ರಯಾಣ ಯಶಸ್ವಿಯಾಗಿ ಸಂಪನ್ನವಾಗುವುದು. ಸರ್ಕಾರಿ ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಆಗದು.
ಕರ್ಕಾಟಕ ರಾಶಿ:
ಪ್ರಯತ್ನಗಳಿಗೆ ಸರಿಯಾದ ಪ್ರತಿಫಲ ಪಡೆಯಬಹುದು. ಅಧ್ಯಾತ್ಮದ ವಿಚಾರ ಹಾಗೂ ಧ್ಯಾನದಿಂದ ಮನಸ್ಸಿಗೆ ಶಾಂತಿ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಕೆಲಸದಲ್ಲಿ ಹೊಸ ಕಲಿಕೆಗಳ ದಿನ. ಸ್ವಂತ ವಾಹನದಲ್ಲಿ ಪ್ರಯಾಣವನ್ನು ಸಂತೋಷದಿಂದ ಮಾಡುವಿರಿ. ನಿಮ್ಮ ಮಿತಿಯಲ್ಲಿ ಬಯಕೆಯು ಇರಲಿ. ವೃತ್ತಿಯಲ್ಲಿ ಮೇಲೇರಿದ ಅನುಭವ ಆಗಬಹುದು. ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಆಸ್ತಿ ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ತಮ್ಮ ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ಮನೆಯಲ್ಲಿನ ಚಿಕ್ಕ ವಿಚಾರಕ್ಕೇ ಸಹನೆ ಮುಖ್ಯ. ಸಣ್ಣ ಉಪಯುಕ್ತ ವಸ್ತುಗಳ ಖರೀದಿ ಯೋಗ. ಆರೋಗ್ಯದಲ್ಲಿ ಎಚ್ಚರ ತಪ್ಪುವುದು ಬೇಕು. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಿ.
ಸಿಂಹ ರಾಶಿ:
ನಿಮ್ಮ ಆತ್ಮವಿಶ್ವಾಸ ಹೆಚ್ಚುವ ದಿನ. ಗುಪ್ತ ಅಡೆತಡೆಗಳು ದೂರವಾಗುತ್ತವೆ. ಕೆಲಸದಲ್ಲಿ ಅನಿರೀಕ್ಷಿತ ಶುಭಫಲ ಸಿಗುವುದು. ಹಣಕಾಸಿನಲ್ಲಿ ಮುನ್ನಡೆಯ ಲಕ್ಷಣ. ಸ್ಥಾನಕ್ಕೆ ಕೊಡಬೇಕಾದ ಗೌರವವನ್ನು ನೀವು ಕೊಡಿ. ದೈನಂದಿನ ಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಅಧಿಕಲಾಭವು ಆಗುವುದು. ಆದಷ್ಟು ವಾದಗಳಿಂದ ದೂರವಿರಿ. ನಿಮ್ಮ ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ನೀವು ಜೀವನ ಸಂಗಾತಿಯ ಬೆಂಬಲದಿಂದ ಖುಷಿಪಡುವಿರಿ. ಆರ್ಥಿಕ ದೃಷ್ಟಿಯಿಂದ ಈ ದಿನವು ಉತ್ತಮವಲ್ಲ. ನಿಮಗೆ ಸ್ನೇಹಿತರಿಂದ ಧನಸಹಾಯವಾಗುವುದು. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅದಕ್ಕೆ ಏನಾದರೂ ತೊಂದರೆ ಕೊಟ್ಟಾರು. ದೂರದ ಪ್ರಯಾಣಕ್ಕೆ ಇಂದು ಅನುಕೂಲವಲ್ಲ. ಕೆಲಸಗಳನ್ನು ಮಾಡಿಕೊಡಲು ನಿಮಗೆ ಹಣವನ್ನು ನೀಡುವರು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಬೇಗ ಮುಗಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಪ್ರಯಾಣ ಯೋಗ. ಸಣ್ಣ ಗೊಂದಲಗಳನ್ನು ತಾಳ್ಮೆಯಿಂದ ನಿಭಾಯಿಸಿ.
ಕನ್ಯಾ ರಾಶಿ:
ಹಣಕಾಸಿನಲ್ಲಿ ನಿಗದಿ ಮಾಡಿ ನಡೆದುಕೊಳ್ಳಿ. ಕುಟುಂಬದಲ್ಲಿ ಸಾಮರಸ್ಯ. ಕಲಾತ್ಮಕ ಚಟುವಟಿಕೆಗಳಿಂದ ಹರ್ಷ. ನಿಮ್ಮ ಆಲೋಚನೆಗಳಿಗೆ ಜನರಿಂದ ಬೆಂಬಲ. ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ಪ್ರೇಮ ವ್ಯವಹಾರಗಳಲ್ಲಿ ತೊಡಗಿರುವ ಜನರು ತಮ್ಮ ಸಂಗಾತಿಯ ಭಾವನೆಗಳನ್ನು ಬೆಂಬಲಿಸುವರು. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕು. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯವಾಗುವುದು. ಅತಿಯಾದ ವಿಶ್ವಾಸದಿಂದ ವಂಚನೆಯಾಗಲಿದೆ. ದೈಹಿಕ ಸೌಂದರ್ಯವನ್ನು ಹೆಚ್ಚುಮಾಡಿಕೊಳ್ಳುವಿರಿ. ಸಾಲದ ವಿಚಾರವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಕೆಲಸದಲ್ಲಿ ಹೊಸ ಜವಾಬ್ದಾರಿ ಬರಬಹುದು. ಆರೋಗ್ಯದಲ್ಲಿ ಸ್ವಲ್ಪ ಒತ್ತಡ, ವಿಶ್ರಾಂತಿ ಮುಖ್ಯ. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು.
ತುಲಾ ರಾಶಿ:
ಮಾತಿನ ಮೃದುತೆ ಲಾಭ ಕೊಡುತ್ತದೆ. ಕೆಲಸದಲ್ಲಿ ನಿಮ್ಮ ಯೋಜನೆಗಳು ಒಪ್ಪಿಗೆ ಪಡೆಯುತ್ತವೆ. ಹಣಕಾಸಿನಲ್ಲಿ ಕ್ರಮವೇ ಫಲ. ನಿಮ್ಮ ಮನಸ್ಸು ಹಲವು ದ್ವಂದ್ವಗಳಿಂದ ಏಕಾಂತದಲ್ಲಿ ಇರುವ ಮನಸ್ಸಾಗುವುದು. ಅನುಭವಿಗಳ ಮುಂದೆ ಮೌನವಾಗಿರುವುದು ಲೇಸು. ಚೆನ್ನಾಗಿ ಯೋಚಿಸಿದ ನಿರ್ಧಾರಗಳು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುವುದು. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ಕುಟುಂಬದಲ್ಲಿ ಸ್ವಲ್ಪ ಗೊಂದಲ, ಆದರೆ ನಿಮ್ಮ ಶಾಂತ ಮಾತು ಸಮಸ್ಯೆ ಪರಿಹರಿಸುತ್ತದೆ. ಪ್ರಯಾಣ ಯೋಗ. ಆರೋಗ್ಯ ಸ್ವಲ್ಪ ಜಾಗ್ರತೆ. ಸಣ್ಣ ಲಾಭ ಕಾಣುತ್ತದೆ. ನಿಮಗೆ ಇಂದಿನ ಕಾರ್ಯದಿಂದ ಪಾಪಪ್ರಜ್ಞೆಯು ಕಾಡಬಹುದು.
ವೃಶ್ಚಿಕ ರಾಶಿ:
ಕುಟುಂಬದ ವಿಷಯದಲ್ಲಿ ಶಾಂತವಾಗಿ ನಿರ್ಣಯ ತೆಗೆದುಕೊಳ್ಳಿ. ಹಣಕಾಸಿನಲ್ಲಿ ಸುಧಾರಣೆ. ಆರೋಗ್ಯ ಚೇತರಿಕೆ. ಶತ್ರುಭಯ ದೂರ. ಧಾರ್ಮಿಕ ಚಿಂತನಕ್ಕೆ ಒಳ್ಳೆಯ ಸಮಯ. ಭೂಮಿಯ ಖರೀದಯಲ್ಲಿ ವಂಚನೆ ಆಗಬಹುದು. ಇಂದು ನಿಮ್ಮ ಬಗ್ಗೆ ಕಪೋಲಕಲ್ಪಿತ ಸುದ್ದಿಗಳು ಹರಡಬಹುದು. ವ್ಯವಹಾರಗಳ ವಿಷಯದಲ್ಲಿ ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ನೀವು ಜನಪ್ರಿಯತೆಯನ್ನು ಗಳಿಸುವಿರಿ. ಪ್ರೇಮಿಗಳಿಗೆ ಈ ಸಮಯವು ಶುಭವಲ್ಲ. ನಿಮ್ಮನ್ನು ಸ್ಥಾನದಿಂದ ಕೆಳಗೆ ಹಾಕಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ನಾನಾ ರೀತಿಯ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರದಿಂದ ಸಂಬಂಧಗಳು ಹಾಳಾಗುವುದು. ಸೂರ್ಯಬಲದಿಂದ ಆತ್ಮವಿಶ್ವಾಸ ಹೆಚ್ಚುವ ದಿನ. ಮುಂದೂಡಿದ ಕೆಲಸಗಳು ಯಶಸ್ಸಿಗೆ ತಲುಪುತ್ತವೆ. ಹೊಸ ಗೌರವ ಅಥವಾ ಹೊಣೆಗಾರಿಕೆ ದೊರೆಯಬಹುದು.
ಧನು ರಾಶಿ:
ಕೆಲಸದಲ್ಲಿ ನಿದಾನವಾದರೂ ಧನಾತ್ಮಕ ಪ್ರಗತಿ. ಹಿರಿಯರ ಆಶೀರ್ವಾದ ಸಿಗುವ ಯೋಗ. ಭಕ್ತಿಭಾವದಿಂದ ಕೆಲಸ ಆರಂಭಿಸಿದರೆ ಅಡೆತಡೆ ಕಡಿಮೆಯಾಗುತ್ತದೆ. ಮಾನಸಿಕ ಅಸ್ಥಿರತೆಯಿಂದ ಜೊತೆಗಾರರಿಗೆ ಕಷ್ಟವಾಗಲಿದೆ. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಯಾರ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳುವಿರಿ. ಕಣ್ಣಿನ ತೊಂದರೆ ಹೆಚ್ಚಾದೀತು. ಗೃಹಕಾರ್ಯ, ಕುಟುಂಬದ ವಿಶ್ವಾಸ ಹೆಚ್ಚುವ ದಿನ. ಮನಸ್ಸಿನಲ್ಲಿ ಭಾವನಾತ್ಮಕ ಸಮತೋಲನ ಬರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯ ಕಾಣಿಸಬಹುದು. ವಿಶ್ರಾಂತಿ ಮಾಡುವುದು ಒಳಿತು. ಬಂಧುಗಳನ್ನು ನೀವು ದೂರ ಮಾಡಿಕೊಳ್ಳುವಿರಿ. ಉದ್ಯೋಗವನ್ನೇ ನಂಬಿಕೊಂಡಿದ್ದರೆ ನಿಮಗೆ ಆತಂಕವು ಸೃಷ್ಟಿಯಾಗಬಹುದು.
ಮಕರ ರಾಶಿ:
ಹಣಕಾಸಿನಲ್ಲಿ ಉದಾರತೆ ತೋರಬೇಡಿ. ಕುಟುಂಬದೊಂದಿಗಿನ ಸಮಯ ಸುಖ ನೀಡುತ್ತದೆ. ಹೊಸ ಅವಕಾಶಗಳು ಬಾಗಿಲ ತಟ್ಟುವ ದಿನ. ದಾಂಪತ್ಯದಲ್ಲಿ ಸಂತೋಷವಿರಲು ಹೊಸತನ ಬೇಕಾದೀತು. ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಮಾಡುವಿರಿ. ನೀವು ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ಪ್ರಯತ್ನಕ್ಕೆ ಫಲ ಸಿಗದೇ ದುಃಖಿಸುವಿರಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ನಿಮಗೆ ಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ದೊರೆಯದೇ ನೋಯುವಿರಿ. ಹೊಸ ಕಲ್ಪನೆಗಳಿಗೆ ಬಲ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಮಾತು ಗೌರವ ಪಡೆಯುತ್ತದೆ. ಸಹೋದ್ಯೋಗಿಗಳ ನೆರವು ಕೆಲಸ ಸುಲಭ ಮಾಡುತ್ತದೆ. ಲಘು ಪ್ರಯಾಣ ಲಾಭಕಾರಿ.
ಕುಂಭ ರಾಶಿ:
ಹಿರಿಯರ ಸಲಹೆ ಅನುಕೂಲ. ಆಕಸ್ಮಿಕ ಪ್ರಯಾಣ ಸಾಧ್ಯ. ಧೈರ್ಯದಿಂದ ನಡೆದುಕೊಂಡರೆ ಶುಭಫಲ ಹೆಚ್ಚಿನದು. ಅನಾಯಾಸದಿಂದ ಬರುವ ಹಣವನ್ನು ದುರುಪಯೋಗ ಮಾಡುವಿರಿ. ಒತ್ತಡದಿಂದ ಕಾರ್ಯವನ್ನು ಮಾಡುವುದು ನಿಮಗೆ ಅಭ್ಯಾಸವಾಗಿದೆ. ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡುವಿರಿ. ಸಜ್ಜನರ ಸೇವೆಯಿಂದ ತೃಪ್ತಿಯಾಗುವುದು. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದು. ಕೂಡಿಟ್ಟ ಹಣದಿಂದ ನಿಮಗೆ ಇಂದು ಪ್ರಯೋಜನವಾದೀತು. ಸ್ನೇಹಿತರ ಭೇಟಿ ಮನಸ್ಸಿಗೆ ಹರ್ಷ. ಆರೋಗ್ಯ ಸಾಮಾನ್ಯ. ಧ್ಯಾನ, ಪ್ರಾರ್ಥನೆ ಒಳ ಶಕ್ತಿ ನೀಡುತ್ತದೆ. ಅನಿರೀಕ್ಷಿತ ಸುದ್ದಿಯು ನಿಮ್ಮ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ಮತ್ತೆ ಮತ್ತೆ ಒಂದೇ ಘಟನೆಗಳು ನಿಮಗೆ ಬೇಸರ ತರಿಸಬಹುದು. ಆರ್ಥಿಕಭದ್ರತೆಯ ಕಡೆ ಅಧಿಕ ಗಮನವನ್ನು ಕೊಡಿ. ನಿಮ್ಮ ಅಸಹಾಯಕತೆಯನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಕೆಲವನ್ನು ಬಿಟ್ಟರೂ ಬಿಡಲಾಗದು.
ಮೀನ ರಾಶಿ:
ನಿಮ್ಮ ಚುರುಕು ಮನೋಭಾವಕ್ಕೆ ದೈವವೂ ಬಲ ಕೊಡಲಿವೆ. ಕೆಲಸದಲ್ಲಿ ಹೊಸ ವೇಗ ಕಾಣುತ್ತದೆ. ಮಾತು ಮಧ್ಯೆ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ಸಮಾಧಾನ ಹೆಚ್ಚುತ್ತದೆ. ಹಣಕಾಸಿನಲ್ಲಿ ಒತ್ತಡ ಕಡಿಮೆಯಾಗುತ್ತದೆ. ಅಸಾಧಾರಣ ಸೋಲು ನಿಮಗೆ ಹೆಮ್ಮೆಯನ್ನು ತರುವುದು. ಇಂದು ನಿಮ್ಮ ಕುಟುಂಬವು ಸಂತೋಷವಾಗಿ ಇರುವುದನ್ನು ಕಣ್ತುಂಬಿಕೊಳ್ಳುವಿರಿ. ಕೆಲಸದಲ್ಲಿ ಸಾವಧಾನತೆ ಇರಲಿ. ನಿಮಗೆ ಸಿಗುವ ಬಡ್ತಿಯಲ್ಲಿ ಸುಧಾರಣೆ ಇರಲಿದೆ. ಸಹಬಾಳ್ವೆ ಕಷ್ಟವಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು. ಕೆಲವು ಘಟನೆಗಳು ನಿಮಗೆ ಭ್ರಾಂತಿಯನ್ನು ತರಿಸಬಹುದು. ಹಿರಿಯರ ಸಲಹೆ ಅನುಕೂಲ. ಆಕಸ್ಮಿಕ ಪ್ರಯಾಣ ಸಾಧ್ಯ. ಧೈರ್ಯದಿಂದ ನಡೆದುಕೊಂಡರೆ ಶುಭಫಲ ಹೆಚ್ಚಿನದು. ಉತ್ತಮವಾದ ಸಮಯವನ್ನು ಎದುರು ನೋಡುವಿರಿ. ಹಣದ ಒಳ ಹರಿವು ನಿಮಗೆ ನೆಮ್ಮದಿಯನ್ನು ಕೊಟ್ಟೀತು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ.
08 ಡಿಸೆಂಬರ್ 2025ರ ಸೋಮವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಭಾನು ಪಕ್ಷ : ಕೃಷ್ಣ, ತಿಥಿ : ಚತುರ್ಥೀ ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಸಾಧ್ಯ, ಕರಣ : ವಣಿಜ, ಸೂರ್ಯೋದಯ – 06 – 31 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:56 – 09:21, ಯಮಗಂಡ ಕಾಲ 10:46 – 12:12, ಗುಳಿಕ ಕಾಲ 13:37 – 15:52
-ಲೋಹಿತ ಹೆಬ್ಬಾರ್-8762924271 (what’s app only)




