
ದಾಂಪತ್ಯದಲ್ಲಿ ಆತ್ಮೀಯತೆ ಉಂಟಾಗಲು ಅವಕಾಶವಾಗಲಿದೆ. ವ್ಯವಹಾರದಲ್ಲಿ ಲಾಭ. ಸಂಬಂಧಗಳಲ್ಲಿ ಚೈತನ್ಯ. ಆಧ್ಯಾತ್ಮದ ಆಸಕ್ತಿ. ಅತಿವಿಶ್ವಾಸ ಅತಿಯಾಗುವುದು ಬೇಡ. ಸ್ಥಾನದ ಮಹತ್ತ್ವವನ್ನು ಅರಿತು ಮಾತನಾಡಬೇಕು. ಅವಸರವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ವ್ಯಾಯಾಮ ಮುಂತಾದ ದೈಹಿಕ ಕಸರತ್ತನ್ನು ಮಾಡಲು ಯೋಚಿಸುವಿರಿ. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರದಲ್ಲಿ ಇಂದು ಜಾಗರೂಕತೆ ಬೇಕು. ನಿಮ್ಮ ಕಾರಣಕ್ಕೆ ಆರ್ಥಿಕ ಸುಧಾರಣೆಯಾದ ಕಾರಣ ಉದ್ಯೋಗದಲ್ಲಿ ಪ್ರಶಂಸೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾನಸಿಕವಾಗಿ ಸ್ಥಿರವಾಗಬೇಕಿದೆ. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು. ಹಳೆಯ ವಸ್ತುಗಳನ್ನು ಮಾರಾಡ ಮಾಡುವಿರಿ.
ಪುಣ್ಯ ಸ್ಥಳಕ್ಕೆ ಪ್ರಯಾಣದ ಅವಕಾಶ ಸಿಗಲಿದೆ. ಹೂಡಿಕೆಯ ವ್ಯವಹಾರದಲ್ಲಿ ಸ್ನೇಹಿತರ ಬೆಂಬಲ. ಶ್ರೇಷ್ಠ ವ್ಯಕ್ತಿಗಳ ಜೊತೆ ಆಧ್ಯಾತ್ಮಿಕ ಚಿಂತನೆ. ಕೋಪವನ್ನು ನಿಯಂತ್ರಿಸಲಾಗದು. ಒಂದರ ಮುಕ್ತಾಯವು ಇನ್ನೊಂದರ ಆರಂಭ ಎಂಬ ಸತ್ಯವನ್ನು ಸ್ಮರಿಸಿಕೊಂಡು ಮುನ್ನಡೆಯಿರಿ. ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ವಿನಮ್ರತೆಯು ನಿಮ್ಮನ್ನು ಕಾಪಾಡಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡು ಮಾತನಾಡಿ. ಬಾಕಿ ಸಾಲದ ಮೊತ್ತವನ್ನು ತುಂಬಲು ಸ್ನೇಹಿಯರ ಸಹಾಯವನ್ನು ಕೇಳುವಿರಿ. ಸಹೋದರರ ಅಸಹಕಾರವು ಸಿಟ್ಟು ಬರುವಂತೆ ಮಾಡುವುದು. ಸಕಾರಾತ್ಮಕ ಆಲೋಚನೆಯು ನಿಮಗೆ ನೆಮ್ಮದಿ ಕೊಡುವುದು. ಉದ್ಯೋಗದಲ್ಲಿ ಹೊಸ ಕೆಲಸ. ಹಣಕಾಸಿನಲ್ಲಿ ಮಿಶ್ರ ಫಲ. ಕುಟುಂಬದಲ್ಲಿ ಮಕ್ಕಳಿಂದ ಸಂತೋಷ. ದಾಂಪತ್ಯದಲ್ಲಿ ಸ್ಪಷ್ಟ ಸಂಭಾಷಣೆ ಅಗತ್ಯ. ಹಾರಿಕೆ ಮಾತುಗಳು ಬೇಡ. ತಾಯಿಯಿಂದ ಬೈಗುಳ ಸಿಕ್ಕೀತು.
ವಾಣಿಜ್ಯ ವ್ಯವಹಾರದಲ್ಲಿ ಅಡ್ಡಿ. ಆಧ್ಯಾತ್ಮಿಕ ಪಾಠದಿಂದ ಮನಸ್ಸಿಗೆ ಶಾಂತಿ. ಸಂಬಂಧಗಳಲ್ಲಿ ಅಸಮಾಧಾನ. ಮಾತಿನಲ್ಲಿ ನೀತಿ ಪಾಲಿಸಿ. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಕುಟುಂಬದ ಮನಸ್ತಾಪವನ್ನು ಶಾಂತ ರೀತಿಯಿಂದ ಬಗೆಹರಿಸುವಿರಿ. ಯಂತ್ರೋಪಕರಣಗಳ ಮಾರಾಟದಿಂದ ಲಾಭವಿರಲಿದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಗುವುದು. ಇಂದು, ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಮಾತಿಗೆ ಮಾತು ಬೆಳೆಯಬಹುದು. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕತೆ ಇರಲಿ. ಕುಟುಂಬದವರ ಜೊತೆ ಉದ್ವೇಗದ ಮಾತುಕತೆ. ದಾಂಪತ್ಯದಲ್ಲಿ ಒತ್ತಡ. ಆರೋಗ್ಯದ ದೌರ್ಬಲ್ಯದಿಂದ ಮಾನಸಿಕ ಕಿರಿಕಿರಿ. ದೂರ ಪ್ರಯಾಣವನ್ನು ತಪ್ಪಿಸಿ. ನಿಮ್ಮ ಸಾಮರ್ಥ್ಯವನ್ನು ಕಛೇರಿಯ ಜನರು ತಿಳಿದುಕೊಳ್ಳುವರು. ಹಿರಿಯರಿಂದ ಆಶೀರ್ವಾದವು ಸಿಗಲಿದೆ.
ಕಾರ್ಯಸಾಧನೆಗಾಗಿ ಉದ್ಯೋಗದಲ್ಲಿ ಉತ್ತೇಜನ ಮಾಡುವರು. ಹಣಕಾಸಿನ ವಿಚಾರದಲ್ಲಿ ತಪ್ಪು ಗ್ರಹಿಕೆ ಇರಲಿದೆ. ವ್ಯಾವಹಾರಿಕ ನಿರ್ಬಂಧಗಳನ್ನು ಮೀರಿ ವ್ಯವಹರಿಸುವ ಅವಶ್ಯಕತೆ ಇರದು. ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ಸಾಮಾಜಿಕ ವಲಯದಲ್ಲಿ ನಿಮ್ಮ ಹೆಸರು ಕೇಳಿ ಬರಬಹುದು. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವಿರಿ ಉದ್ಯಮವನ್ನು ಬೆಳೆಸುವ ಚಿಮಯನೆ ಮಾಡುವಿರಿ. ಕುಟುಂಬದಲ್ಲಿ ಹಬ್ಬದ ವಾತಾವರಣ. ವ್ಯವಹಾರದಲ್ಲಿ ಬೃಹತ್ ಅವಕಾಶ. ಆಧ್ಯಾತ್ಮಿಕ ಚಿಂತನೆ. ಸಂಬಂಧಗಳಲ್ಲಿ ಸಮಾಧಾನ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂದೆ ಹೆಜ್ಜೆ ಹಾಕುವಿರಿ. ಬಂಧುಗಳ ವಿಯೋಗವು ಅಚ್ಚರಿ ಎನಿಸೀತು. ನಿಮ್ಮ ಜೀವನದ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ.
ಖರ್ಚಾಗುವ ಹಣವನ್ನು ನಿಲ್ಲಿಸಲಾಗದು. ಉದ್ಯೋಗದಲ್ಲಿ ಒತ್ತಡ. ಕುಟುಂಬದಲ್ಲಿ ಹಳೆಯ ವಿಷಯ ಚರ್ಚೆ. ದಾಂಪತ್ಯದಲ್ಲಿ ಶೀತಲ ಸಮರ ನಡೆಯಲಿದೆ. ಮನೆಯ ಬೇಡದ ವಸ್ತುಗಳನ್ನು ಎಲ್ಲವನ್ನೂ ಖಾಲಿ ಮಾಡುವಿರಿ. ಹತ್ತಾರು ಸಮಸ್ಯೆಯನ್ನು ನಿಭಾಯಿಸುವುದು ಕಷ್ಟವಾದೀತು. ಇಂದು ನೀವು ಹಠದ ಸ್ವಭಾವವನ್ನು ಬಿಡುವುದು ಉತ್ತಮ. ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಯಾರ ಜೊತೆಯೂ ಆದಷ್ಟು ವಾದಕ್ಕೆ ಇಳಿಯಬೇಡಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ಆರ್ಥಿಕತೆಯ ದೃಷ್ಟಿಯಿಂದ ಈ ದಿನವು ಶುಭವಲ್ಲ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲಾರರು. ಅವರಿಂದ ಏನಾದರೂ ತೊಂದರೆ ಆದೀತು. ಆರೋಗ್ಯದಲ್ಲಿ ತಲೆನೋವು. ಪ್ರಯಾಣ ವಿಳಂಬ. ವ್ಯವಹಾರದಲ್ಲಿ ಜಾಗ್ರತೆ. ಸ್ನೇಹಿತರೊಂದಿಗೆ ಜೀವನದ ಗೊಂದಲದ ಬಗ್ಗೆ ಚರ್ಚೆ. ಕೆಲಸವನ್ನು ಮಾಡಿಸಿಕೊಳ್ಳಲು ನೀವು ಹೆಚ್ಚು ಸಮಯವನ್ನು ನೀಡುವಿರಿ.
ಆರೋಗ್ಯವು ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗದು. ವ್ಯವಹಾರದಲ್ಲಿ ಒಪ್ಪಂದ ಸಾಧ್ಯತೆ. ಜಾಗ್ರತೆ ಇರಿಸಿದರೆ ದಿನ ಉತ್ತಮ. ದಾಂಪತ್ಯದಲ್ಲಿ ಪರಸ್ಪರ ಸ್ಪಷ್ಟ ನಿರ್ಧಾರಕ್ಕೆ ಬರುವುದು ಕಷ್ಟ. ನೀವು ಭಾವನಾತ್ಮಕ ವಿಚಾರಕ್ಕೆ ಸೋಲುವ ಸಾಧ್ಯತೆ ಇದೆ. ಮಹಿಳಾ ಕಲಾವಿದರಿಗೆ ಪ್ರಶಂಸೆ ಇರಲಿದೆ. ಸಂಶೋಧನೆಗೆ ಮಾರ್ಗದರ್ಶನ ಸಿಗಲಿದೆ. ಪ್ರೀತಿಯಲ್ಲಿ ತೊಡಗಿರುವವವರು ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವಿರಿ. ಉದ್ಯೋಗಾಕಾಂಕ್ಷಿಗಳು ಹೆಚ್ಚುವರಿ ಪ್ರಯತ್ನದಿಂದ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ್ದ ಮಕ್ಕಳ ಪ್ರಗತಿಯು ಇಂದು ಸಫಲತೆಯನ್ನು ಕಾಣುವುದು. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ನಿಮ್ಮ ವ್ಯಾವಹಾರಿಕ ಓಡಾಟವು ವ್ಯರ್ಥವಾದೀತು. ಸಾಲ ಮಾಡಲು ಇಷ್ಟವಿಲ್ಲದಿದ್ದರೂ ಅದನ್ನು ಮಾಡಬೇಕಾದೀತು. ಅದೃಷ್ಟವನ್ನು ಮಾತ್ರ ನಂಬಿ ನಿಮ್ಮ ಪ್ರಯತ್ನವನ್ನು ಮೊಟಕುಗೊಳಿಸುವಿರಿ. ದಾಂಪತ್ಯದ ನಡುವಿನ ಅಂತರವು ಕಡಿಮೆ ಆಗಬಹುದು.
ಸ್ನೇಹಿತರಿಂದ ಆಪತ್ಕಾಲಕ್ಕೆ ಸಹಾಯ. ಆಧ್ಯಾತ್ಮಿಕ ಚಿಂತನೆ ಮಾಡಿದರೆ ನೆಮ್ಮದಿ. ಉದ್ಯಮದಲ್ಲಿ ನಿಧಾನ ಪ್ರಗತಿ. ನಿಮ್ಮನ್ನು ಯಾವುದಾದರೂ ಕಾರಣಕ್ಕೆ ಹೊಗಳುವವರು ಇರುವರು. ಏನಾದರೂ ಮಾಡಬೇಕು ಎಂಬ ಇಚ್ಛೆಯು ಅಧಿಕವಾಗುವುದು. ಧೈರ್ಯದಿಂದ ಏನನ್ನೂ ಎದುರಿಸುವ ಮನೋಬಲವು ಕಡಿಮೆ ಆದೀತು. ಎಲ್ಲ ಕಾರ್ಯಗಳಿಗೂ ಉತ್ಸಾಹ ಭಂಗವಾಗುವುದು. ಚೆನ್ನಾಗಿ ಯೋಚಿಸಿದ ಮಾಡಿದ ಕಾರ್ಯವು ದೀರ್ಘಕಾಲದವರೆಗೆ ಪರಿಣಾಮಕಾರಿಯಾಗುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಅಸಾಧ್ಯ ಎಂದು ಅನ್ನಿಸಬಹುದು. ಆಸ್ತಿ ವ್ಯವಹಾರಗಳಿಂದ ನಿಮಗೆ ಲಾಭವು ಇರುವುದು. ಕೋಪ ನಿಯಂತ್ರಿಸಿದರೆ, ಕೆಲಸದಲ್ಲಿ ಒತ್ತಡವೂ ಕಡಿತವಾಗಲಿದೆ. ಹಣಕಾಸಿನಲ್ಲಿ ಅಲ್ಪ ನಷ್ಟ. ಕುಟುಂಬದಲ್ಲಿ ಮಾತಿನ ಗೊಂದಲ. ದಾಂಪತ್ಯದಲ್ಲಿ ಶಾಂತಿಯನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಾಗುವುದು. ಕಛೇರಿಯ ಕೆಲಸಗಳು ಸಾಕೆನಿಸಬಹುದು. ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಸಹಕಾರವನ್ನು ಕೊಡುವಿರಿ.
ಸಂಬಂಧಗಳಲ್ಲಿ ಗೊಂದಲ ದೂರವಾಗುವುದು. ಉದ್ಯಮದಲ್ಲಿ ಅಲ್ಪ ಲಾಭ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವುದು ಉತ್ತಮ. ಇನ್ನೊಬ್ಬರ ತಪ್ಪನ್ನು ಕ್ಷಮಿಸಿ ಮುನ್ನಡೆಯುವುದೂ ನಾಕತ್ವದ ಗುಣವಾಗಲಿದೆ. ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ನೇರ ಮಾತಿನಿಂದ ನಿಮ್ಮವರು ದೂರಾಗಬಹುದು. ನಂಬಿಕೆಗಳು ಅನ್ಯರಿಂದ ಹಾಳಾಗುವುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಪ್ರೇಮಿಗಳಿಗೆ ಇಂದು ಶುಭವಾಗಿಲ್ಲ. ನಿಮ್ಮನ್ನು ಹುದ್ದೆಯಿಂದ ಕೆಳಗೆ ಹಾಕಲು ನೋಡಬಹದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ. ಹಣವು ಬೇಡದ ಕಾರ್ಯದಿಂದ ವ್ಯಯವಾಗುವುದು. ಕುಟುಂಬದಲ್ಲಿ ಸೌಹಾರ್ದ. ದಾಂಪತ್ಯದಲ್ಲಿ ನವೀನತೆ. ಆರೋಗ್ಯದಲ್ಲಿ ಸಂಧಿವಾತ ಲಕ್ಷಣ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳು ಕಿರಿಕಿರಿ ಮಾಡುವರು.
ಸ್ನೇಹಿತರ ಮಾತಿಗೆ ಎಚ್ಚರವಹಿಸಿ. ಉದ್ಯಮದಲ್ಲಿ ಲಾಭ. ಆಧ್ಯಾತ್ಮಿಕ ಚಿಂತನೆ ಮನಃಶಾಂತಿ. ವಿವಾಹ ವಿಚಾರದಲ್ಲಿ ವಿಳಂಬ. ಪ್ರಯಾಣ ಯೋಗ್ಯ ರೀತಿಯಲ್ಲಿ ಆಗದು. ಮನೆಯ ಕೆಲಸಗಳಲ್ಲಿ ವ್ಯಸ್ತವಾಗಲಿದೆ. ಇನ್ನೊಬ್ಬರ ವಸ್ತುಗಳನ್ನು ಬಳಸಿಕೊಳ್ಳುವಿರಿ. ಕಲಾವಿದರು ಹೆಚ್ಚಿನ ಶ್ರಮದಿಂದ ಆದಾಯವನ್ನು ಗಳಿಸುವರು. ಸಾಮಾಜಿಕ ಕಾರ್ಯಗಳಿಂದ ಅಭಿಮಾನ ಹೆಚ್ಚಾಗುವುದು. ವಾಹನ ಸಂಚಾರದಲ್ಲಿ ಮಂದಗತಿ ಇರಲಿ. ನಿಮ್ಮ ಮಾತು ಬಾಲಿಶದಂತೆ ತೋರುವುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಪರಿಚಿತರ ಸಖ್ಯವು ಬೇಡ. ಕಣ್ಣಿನ ತೊಂದರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ಕುಟುಂಬದಲ್ಲಿ ಸಂತೋಷ. ಹಣದ ಹಿರುವು ಉತ್ತಮ. ಉದ್ಯೋಗದಲ್ಲಿ ಒತ್ತಡದಿಂದ ಕಾರ್ಯ ಸಾಧನೆ. ದಾಂಪತ್ಯದಲ್ಲಿ ಒಡನಾಟ. ಆರೋಗ್ಯದಲ್ಲಿ ಜೀರ್ಣ ಕ್ರಿಯೆ ಸಮಸ್ಯೆ. ಕಛೇರಿಯಲ್ಲಿ ಕೆಲಸವು ಮಂದಗತಿಯಲ್ಲಿ ಇರುವುದು. ಆಪ್ತ ಬಂಧುಗಳನ್ನು ನೀವು ಕಳೆದುಕೊಳ್ಳುವಿರಿ. ಯಾವುದೇ ಕಾರಣಕ್ಕೂ ಅಹಂಕಾರಕ್ಕೆ ಆಸ್ಪದ ಕೊಡುವುದು ಬೇಡ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಗಲಿಬಿಲಿಗೊಳ್ಳುವ ಸಂದರ್ಭ.
ವಿದ್ಯಾಭ್ಯಾಸದಲ್ಲಿ ಮನಸ್ಸು ಚಂಚಲ. ಉದ್ಯಮಕ್ಕೆ ಹೊಸಬರಿಂದ ಆಸರೆ. ಸ್ನೇಹದಲ್ಲಿ ಅಂತರ. ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು. ಯೋಜನೆಗಳಲ್ಲಿ ವಿಳಂಬ. ಇಂದು ಕಡಿಮೆ ಖರ್ಚಿನಲ್ಲಿ ಉತ್ತಮ ವಸ್ತುವನ್ನು ಪಡೆಯುವಿರಿ. ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ನಿಮ್ಮಿಂದ ಧನಸಹಾಯವನ್ನು ನಿರೀಕ್ಷಿಸುವರು. ಅಧಿಕಾರಿಗಳಿಂದ ನಿಮಗೆ ಬೇಕಾದುದನ್ನು ಮಾಡಿಸಿಕೊಳ್ಳುವಿರಿ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ. ನೀವು ಪ್ರಭಾವೀ ವ್ಯಕ್ತಿಗಳಂತೆ ತೋರುವಿರಿ. ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ. ಹಣದಲ್ಲಿ ಏರಿಕೆ. ಸಂಬಂಧಗಳಲ್ಲಿ ತಪ್ಪು ತಿಳಿವಳಿಕೆ ಹೆಚ್ಚು. ಪ್ರಯಾಣ ಶುಭ. ದಾಂಪತ್ಯದಲ್ಲಿ ಸಮನ್ವಯ ಇರಬೇಕು. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದರೆ, ಪ್ರಯತ್ನ ಮುಂದುವರಿಯಲಿ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಪ್ತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದದ ರೂಪವು ಬದಲಾಗುವುದು. ಪ್ರೀತಿಯ ಸ್ಥಳದಲ್ಲಿ ನಿಮಗೆ ಪ್ರತಿಷ್ಠೆಯು ಕಾಣಿಸಿಕೊಳ್ಳುವುದು.
ಮಾನಸಿಕ ಒತ್ತಡ ತಗ್ಗುತ್ತದೆ. ಆರೋಗ್ಯ ಉತ್ತಮ. ಪ್ರಯಾಣದಲ್ಲಿ ವಿಳಂಬ. ದಾಂಪತ್ಯದಲ್ಲಿ ಹತ್ತಿರತೆ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಶಾಂತಿ. ಕೆಲಸದಲ್ಲಿ ಮೆಚ್ಚುಗೆ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂಬ ತೀರ್ಮಾನ ಬೇಡ. ನಿಮ್ಮ ಗುರಿಗೆ ಹಾದಿಯು ಸ್ಪಷ್ಟವಾಗಿ ಇರದೇ ಹೋಗಬಹುದು. ಎಲ್ಲ ಕಾರ್ಯಗಳಿಗೆ ಸಂಬಂಧಿಸಿದ ಒಟ್ಟು ಫಲಿತಾಂಶ ಸಾಧಾರಣವಾಗಿರುವುದು. ನಿಮ್ಮ ಜಾಣ್ಮೆಯಿಂದ ಎಲ್ಲವನ್ನೂ ಉತ್ತಮವಾಗಿ ಮಾಡಿ. ವಿವಾಹಿತರಿಗೆ ಸಿಹಿಸುದ್ದಿ. ವಾಣಿಜ್ಯದಲ್ಲಿ ಲಾಭ. ಸ್ನೇಹಿತರ ನೆರವು ಸಿಗುತ್ತದೆ. ಕುಟುಂಬದಲ್ಲಿ ಸಣ್ಣ ಗೊಂದಲ. ಹಣಕಾಸಿನಲ್ಲಿ ಸ್ಥಿರತೆ. ಆತ್ಮೀಯರಿಂದ ನೀವು ಕೆಲವು ಸಲಹೆಯನ್ನು ಪಡೆಯುವಿರಿ. ಅಧಿಕವಾದ ಖರ್ಚುಗಳು ನಿಮಗೆ ಲೆಕ್ಕಕ್ಕೆ ಸಿಗದೇ ಹೋದೀತು. ಸಹೋದರರು ನಿಮಗೆ ಸಹಕಾರವನ್ನು ಕೊಡುವರು. ಹಳೆಯ ರೋಗವು ಮತ್ತೆ ಕಾಣಿಸಿಕೊಂಡರೆ ಕಷ್ಟವಾಗುವುದು. ಅನಿರೀಕ್ಷಿತ ಸುದ್ದಿಯು ನಿಮ್ಮ ಮನಸ್ಸಿಗೆ ನೋವನ್ನು ಉಂಟುಮಾಡಬಹುದು. ನೇರ ಮಾತಿನಿಂದ ವ್ಯಾಪರಕ್ಕೆ ತೊಂದರೆ ಉಂಟಾಗಬಹುದು.
ಹೊಸ ಅವಕಾಶಗಳು ಉದ್ಯೋಗದಲ್ಲಿ ಮೂಡಬಹುದು. ಪ್ರಯಾಣ ಸಾಧ್ಯ. ಆರೋಗ್ಯ ಸ್ವಲ್ಪ ಕುಗ್ಗಬಹುದು. ಆಧ್ಯಾತ್ಮ ಮನಸ್ಸಿಗೆ ಶಾಂತಿ ನೀಡುತ್ತದೆ. ಮಾತು, ನಡವಳಿಕೆಯಲ್ಲಿ ಜಾಗ್ರತೆ ಇರಿಸಿದರೆ ದಿನ ಸುಲಭವಾಗುತ್ತದೆ. ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಪ್ರಾಪಂಚಿಕ ಸುಖದ ಮೇಲೆ ಆಸಕ್ತಿಯು ಕಡಿಮೆ ಆದೀತು. ಕೆಲವರಿಗೆ ಮಾತ್ರ ನಿಮ್ಮ ಬಗ್ಗೆ ಗೊತ್ತಾಗಲಿದೆ. ದ್ವೇಷಿಸುವವರನ್ನು ಇಷ್ಟಪಡುವಿರಿ. ಶತ್ರುಗಳ ಉಪಟಳವು ನಿಮ್ಮನ್ನು ಕುಂಠಿತಗೊಳಿಸೀತು. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ವೇತನದಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಸೂಕ್ಷ್ಮವಾಗಿ ನಡೆಸಬೇಕಾದೀತು. ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಿಯುಂಟುಮಾಡುವುದು. ಕೆಲಸದಲ್ಲಿ ಒತ್ತಡವಾದರೂ ಫಲ ಸಿಗುತ್ತದೆ. ಮನೆಮಂದಿಯೊಂದಿಗೆ ಅಲ್ಪ ಕಲಹ ಸಾಧ್ಯ. ಹಣಪ್ರವಾಹ ಮಧ್ಯಮ. ದಾಂಪತ್ಯದಲ್ಲಿ ಸಮನ್ವಯ ಬೇಕಾಗುತ್ತದೆ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಇಂದು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಶುಕ್ಲ, ಕರಣ : ಕೌಲವ, ಸೂರ್ಯೋದಯ – 06 – 32 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:13 – 13:38, ಯಮಗಂಡ ಕಾಲ 07:57 – 09:22, ಗುಳಿಕ ಕಾಲ 10:47 – 12:13
-ಲೋಹಿತ ಹೆಬ್ಬಾರ್-8762924271 (what’s app only)