Horoscope Today 23 November : ಇಂದು ಈ ರಾಶಿಯವರಿಂದ ಹಲವು ರೀತಿಯ ಪ್ರಯತ್ನ, ಪ್ರಯೋಜನ ಕಡಿಮೆ
ದಿನ ಭವಿಷ್ಯ, 23, ನವೆಂಬರ್ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ತೃತೀಯಾ ತಿಥಿ ಭಾನುವಾರ ದುರುಪಯೋಗ, ರಹಸ್ಯ ಬಯಸಲು, ಖರೀದಿ ಹೆಚ್ಚು, ಮಕ್ಕಳ ಮೇಲೆ ಪ್ರೀತಿ, ಸಾಮಾಜಿಕ ಕಾರ್ಯ, ಆರೋಗ್ಯ ಚಿಂತನೆ, ಉದ್ಯೋಗದ ಓಡಾಟ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ಯಾವುದನ್ನಾದರೂ ನಿಮ್ಮದೊಂದೇ ದೃಷ್ಟಿಯಿಂದ ನೋಡಲಾಗದು. ಪ್ರಯಾಣ ದೂರವೆನಿಸದರೂ ಮಾಡುವುದು ಅನಿವಾರ್ಯ. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ನಿಮಗೆ ಗೌರವವು ಪ್ರಾಪ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆಯಾದೀತು. ಶತ್ರುಗಳನ್ನು ಬೌದ್ಧಿಕವಾಗಿ ಸೋಲಿಸಬಹುದು. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಕನಸನ್ನು ಕಾಣುವುದು ಯಥಾರ್ಥವಾಗಿರಿಸಿಕೊಳ್ಳಿ. ರಾಜಕಾರಣಿಗಳ ಕೆಲಸಕ್ಕೆ ಪ್ರಶಂಸೆಯು ಸಿಗುವುದು. ನಿಮ್ಮ ನಡೆಯಿಂದ ವಿರೋಧಿಗಳು ಹುಟ್ಟಿಕೊಳ್ಳಬಹುದು. ಗೊತ್ತಿಲ್ಲದಂತೆ ವಿರೋಧಿ ಗುಂಪಿಗೆ ಸೇರುವಿರಿ. ನಿಮ್ಮ ಅಮೂಲ್ಯ ವಸ್ತುಗಳ ಹರಣವಾಗಬಹುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಂಪತ್ತಿನ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದು ಅಸಾಧ್ಯವಾಗುವುದು. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಇನ್ನೊಬ್ಬರಿಗೆ ಕೊಟ್ಟು ಬಿಡುವಿರಿ.
ವೃಷಭ ರಾಶಿ:
ಜನರ ನಡುವೆ ನಿಮ್ಮ ಮಾತಿಗೆ ತೂಕ ಹೆಚ್ಚಾಗುತ್ತದೆ. ಸ್ನೇಹಿತರಿಂದ ಅನಿರೀಕ್ಷಿತ ಬೆಂಬಲ. ಆಕಸ್ಮಿಕ ಸೃಜನಾತ್ಮಕ ಚಿಂತೆಗಳಿಂದ ವಿಶೇಷ ಫಲ. ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಕನ್ನಡ ಶುದ್ಧವಾಗಿದ್ದರೆ, ನೋಡುವ ವಸ್ತುವೂ ಶುದ್ಧವೇ. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಕಳೆದುಹೋಗಬಹದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು. ಅನಾರೋಗ್ಯದ ಕಾರಣ ವಿಶ್ರಾಂತಿಯಿಂದ ಅನಿವಾರ್ಯವಾಗುವುದು. ಮುಖವಾಡವನ್ನು ತೆರೆಯಲು ನಿಮ್ಮಿಂದಾಗದು. ಪರಿಚಿತರು ನಿಮ್ಮ ವಸ್ತುವನ್ನು ಕಾಣೆ ಮಾಡುವರು. ವಿವಾಹದ ಮಾತುಕತೆಯು ಗೊಂದಲದಲ್ಲಿ ಮುಕ್ತಾಯವಾಗಬಹುದು. ನಿಮ್ಮ ಅತಿಯಾದ ಉತ್ಸಾಹದಿಂದಲೇ ಇಂದಿನ ಕಾರ್ಯವು ಬೇಗ ಮುಗಿಯಬಹುದು.
ಮಿಥುನ ರಾಶಿ:
ಕೆಲಸದಲ್ಲಿ ನಿಮ್ಮ ಹೆಸರು ಏರುತ್ತದೆ. ಹಿರಿಯರಿಂದ ಶ್ಲಾಘನೆ. ಅಸಾಮಾನ್ಯ ಜವಾಬ್ದಾರಿ ಬಂದು ಅದು ನಿಮಗೆ ದೊಡ್ಡ ಅವಕಾಶವಾಗಬಹುದು. ಇಂದು ನಿಮ್ಮ ಜವಾಬ್ದಾರಿಯವ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ನಿಮ್ಮ ಬಾಲಿಶವಾದ ಮಾತುಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದು. ವಿದ್ಯಾಭ್ಯಾಸದ ವಿಚಾರಕ್ಕೆ ವಾಗ್ವಾದವಾಗಬಹುದು. ಕೆಲಸದಲ್ಲಿ ಪಯತ್ನಪೂರ್ವಕ ಹಿನ್ನಡೆ ಮಾಡಿಸುವರು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು. ನಿಮ್ಮನ್ನು ಕುಟುಂಬವು ನಿರ್ಲಕ್ಷ್ಯಿಸಿದಂತೆ ಕಾಣುವುದು. ಒಂದು ಸಣ್ಣ ಬದಲಾವಣೆ ನಿಮ್ಮ ಜೀವನಕ್ಕೆ ದೃಢತೆ ನೀಡುತ್ತದೆ. ತಾಳ್ಮೆಯಲ್ಲಿ ಶಕ್ತಿ. ನಿಮ್ಮ ಅಸಹಕಾರವೂ ಕಾರ್ಯ ಹಾನಿಗೆ ಕಾರಣವಾಗುವುದು. ಸ್ನೇಹಿತರ ಜೊತೆ ಸುತ್ತಾಟದಿಂದ ಖರ್ಚು ಬರಬಹುದು. ತಮ್ಮ ಗುರುವನ್ನು ಶಿಷ್ಯರು ಭೇಟಿ ಮಾಡಲಿದ್ದು, ಉಡುಗೊರೆಯನ್ನು ನೀಡುವರು.
ಕರ್ಕಾಟಕ ರಾಶಿ:
ಜ್ಞಾನ ಮತ್ತು ಭಾಗ್ಯ ಎರಡೂ ಬೆಂಬಲ ನೀಡುತ್ತವೆ. ನಿಮ್ಮನ್ನು ಟೀಕೆ ಮಾಡಿದವರೇ ಇಂದು ಶುಭ ಸುದ್ದಿಯನ್ನು ತರುತ್ತಾರೆ. ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮಿಂದಾಗಿ ಕುಟುಂಬದ ಕಲಹವು ನಿಲ್ಲುವುದು. ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ತೋರಿಕೆಯನ್ನು ಹೆಚ್ಚು ಕಾಲ ಇಟ್ಟುಕೊಳ್ಳಲಾಗದು. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ. ವಿದ್ಯಾರ್ಥಿಗಳು ಓದಲಿ ಸಮಯವು ಸಿಗದೇ ಕಷ್ಟವಾಗುವುದು. ಮಿತ್ರನಿಗೆ ಗೊತ್ತಿಲ್ಲದೇ ಹಣವನ್ನು ಪಡೆಯುವಿರಿ. ವಿದ್ಯಾಭ್ಯಾಸದ ಸಾಲವು ಮುಕ್ತಾಯವಾಗುವುದು. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ. ನಿಮಗೆ ಅಧ್ಯಾತ್ಮಿದ ಅನುಭವ ಸಂಭವಿಸಬಹುದು. ನಿಮ್ಮ ಮಾತುಗಳು ಮಾರ್ಗದರ್ಶನದಂತೆ ಕೇಳಿಸಿಕೊಳ್ಳುವರು. ಸಾಲದಿಂದ ಮುಕ್ತರಾಗಲು ನಿಮಗೆ ಸಾಧ್ಯವಾಗದು. ತಾಳ್ಮೆಯನ್ನೂ ನೀವು ಕಳೆದುಕೊಳ್ಳುವಿರಿ. ನೀವು ದ್ವೇಷಿಸುವವರ ಬಳಿಯೇ ಸಹಾಯ ಕೇಳುವಿರಿ.
ಸಿಂಹ ರಾಶಿ:
ಎಂದೋ ಮಾಡಿದ ಕಾರ್ಯ ಇಂದು ಪ್ರಯೋಜನಕ್ಕೆ ಬರಲಿದೆ. ಸಂಗಾತಿಯಿಂದ ಬಹಳ ದಿನಗಳ ಅನಂತರ ಪ್ರಶಂಸೆ ಸಿಗುವುದು. ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು. ಭವಿಷ್ಯಕ್ಕಾಗಿ ಹಣವನ್ನು ಯಾರಿಗೂ ಹೇಳದೇ ಗೌಪ್ಯವಾಗಿ ಇಡುವಿರಿ. ಪುಣ್ಯಸ್ಥಳದ ಸಂಚಾರಕ್ಕೆ ನೀವು ತಯಾರಿ ಮಾಡಿಕೊಳ್ಳುವಿರಿ. ಕೆಲಸದಲ್ಲಿ ಸವಾಲುಗಳಿದ್ದರೂ ನೀವು ಅವುಗಳನ್ನು ಸುಲಭವಾಗಿ ಬಗ್ಗಿಸುತ್ತದೆ. ಹಳೆಯ ರಹಸ್ಯ ಬಯಲಾಗಬಹುದು. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವುದು ಸರಿಯಾಗದು. ಉನ್ನತ ಸ್ಥಾನಮಾನವನ್ನು ಪಡೆಯಲು ಬಹಳ ಉತ್ಸಾಹವಿರಲಿದೆ.
ಕನ್ಯಾ ರಾಶಿ:
ಯಾರೊಂದಿಗೋ ಮಾತುಕತೆ ನಿಮ್ಮ ಜೀವನದ ಹೊಸ ದಿಕ್ಕು ತೋರಿಸಬಹುದು. ಕಲಾತ್ಮಕ ಪ್ರೇರಣೆ ಹೆಚ್ಚಾಗುತ್ತದೆ. ಚರಾಸ್ತಿಯ ಖರೀದಿಯ ಬಗ್ಗೆ ಆಪ್ತರಿಂದ ಒತ್ತಾಯವು ಬರಬಹುದು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ದೌರ್ಬಲ್ಯವನ್ನು ಹಿಮ್ಮೆಟ್ಟಿಸುವುದು ಕಷ್ಟವಾದೀತು. ಸರಳವಾಗಿರಲು ಇರುವುದು ನಿಮಗೆ ಆಗದು. ಇನ್ನೊಬ್ಬರ ಜೊತೆ ಮಾತನಾಡುವಾಗ ಹೆದರಿಕೆ ಇರುವುದು. ನೆಮ್ಮದಿಯನ್ನು ಏಕಾಂತದಲ್ಲಿ ಪಡೆದುಕೊಳ್ಳುವಿರಿ. ಪತ್ನಿಯ ಮಾತಿನಂತೆ ನಡೆಯುವುದು ಕಷ್ಟವಾಗಿ ಸಿಡುಕು ಮಾತುಗಳು ಬರಬಹುದು. ಕೆಲಸದಲ್ಲಿ ನಿಮ್ಮ ಸೂಚನೆಗಳಿಗೆ ವಿಶೇಷ ಪ್ರಾಮುಖ್ಯ ಸಿಗುತ್ತದೆ. ಒಬ್ಬ ಅನಿರೀಕ್ಷಿತ ವ್ಯಕ್ತಿಯಿಂದ ಶುಭ ಸುದ್ದಿ. ಮನಸ್ಸಿಗೆ ಆಳವಾದ ಶಾಂತಿ ಲಭಿಸುತ್ತದೆ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಂಡು ಯಾವುದರೊಂದು ಕಾರ್ಯದಲ್ಲಿ ತೊಡಗಿ.
ತುಲಾ ರಾಶಿ:
ಸಣ್ಣ ವಿಷಯದಲ್ಲಿಯೇ ದೊಡ್ಡ ತಂತ್ರ ಕಂಡುಕೊಳ್ಳುತ್ತೀರಿ. ಕೆಲಸದಲ್ಲಿ ಅಪ್ರತೀಕ್ಷಿತ ಮಾಹಿತಿಯು ನಿಮಗೆ ಮುನ್ನಡೆ ನೀಡುತ್ತದೆ. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ತರಬೇತುದಾರರಿಗೆ ಹೆಚ್ಚಿನ ಮನ್ನಣೆಯು ಬರಲಿದೆ. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ನೀವು ಅಪವಾದದ ಸಂಕೋಲೆಯಲ್ಲಿ ಸಿಕ್ಕಿಬೀಳಬಹುದು. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನ ತರಬಹುದು. ಉದ್ಯೋಗದಲ್ಲಿ ಅವಘಡವು ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಶಿಸ್ತು ಯಾರನ್ನೂ ನೀವು ಕರೆಯದೆ ಪ್ರಭಾವಿತರನ್ನಾಗಿ ಮಾಡುತ್ತದೆ. ಯಾರು ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಲು ನೀವು ಒಪ್ಪುವುದಿಲ್ಲ. ಇಷ್ಟಪಟ್ಟಿದ್ದು ನಿಮ್ಮದಾಗದೇ ಇರುವುದು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ಆದಾಯಕ್ಕೆ ಸರಿಯಾದ ಪ್ರಮಾಣವಿರಲಿ.
ವೃಶ್ಚಿಕ ರಾಶಿ:
ನಿಮ್ಮ ವ್ಯಕ್ತಿತ್ವದಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚು ಕೀರ್ತಿಯಿಂದ ಬೆಳಗುತ್ತದೆ. ಒಂದು ಅವಕಾಶ ನಿಮ್ಮ ನಾಯಕತ್ವ ಗುಣವನ್ನು ಹೊರತೆಗೆದೀತು. ಮನ್ನಣೆ ದೊರಕುವ ಕ್ಷಣಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು. ಯಾರೊಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ದಾಂಪತ್ಯದ ಒಳ ಜಗಳವು ಕುಟುಂಬಕ್ಕೆ ಗೊತ್ತಾಗಲಿದೆ. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ದಾನ ಮಾಡುವುದು ಒಳ್ಳೆಯದೇ. ಆದರೆ ಒಳ್ಳೆಯದನ್ನು ಮಾತ್ರ ದಾನ ಮಾಡಿ. ನಿಮ್ಮ ಶತ್ರುಗಳು ಬಲಗೊಳ್ಳುವ ಸಾಧ್ಯತೆ ಇದೆ. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ಹೊಸ ಸ್ಫುರಣೆಗಳು ಮನಸ್ಸಿಗೆ ಬಲ ನೀಡುತ್ತದೆ. ನಿಮ್ಮ ಧೈರ್ಯವೇ ದಿನದ ರಾಜ. ಸಹನೆಯನ್ನು ನೀವು ಪ್ರಯತ್ನದಿಂದ ಬೆಳೆಸಿಕೊಳ್ಳಬೇಕಾದೀತು. ದೇಹಕ್ಕೆ ಬಲವಾದ ಪೆಟ್ಟು ಬೀಳಬಹುದು.
ಧನು ರಾಶಿ:
ಭಾವನೆಗಳು ಸಾಮಾನ್ಯವಾಗಿದ್ದರೂ ನಿಮ್ಮ ಒಳ ಜ್ಞಾನ ಅಸಾಮಾನ್ಯವಾಗಿ ಗಾಢವಾಗುತ್ತದೆ. ಕುಟುಂಬ ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ. ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಕೆಲಸಕ್ಕೋಸ್ಕರ ನಿಮ್ಮನ್ನು ಹೊಗಳುವರು. ಕೆಲಸ ಕಾರ್ಯಗಳಲ್ಲಿ ಪೂರ್ಣಜಯವು ಪ್ರಾಪ್ತವಾಗದು. ಯಾವುದರ ಮೌಲ್ಯವನ್ನೂ ನೋಡಿ ಊಹಿಸಲಾಗದು. ನೀವು ಸ್ವಾರ್ಥಿಗಳಂತೆ ಕಾಣುವಿರಿ ಅಷ್ಟೇ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ಆರ್ಥಿಕತೆಯ ವೃದ್ಧಿಗಾಗಿ ತಂತ್ರವನ್ನು ಮಾಡುವಿರಿ. ಪ್ರಭಾವೀ ವ್ಯಕ್ತಿಗೆ ಮೆಚ್ಚಿಸಿ ಅಧಿಕಾರವನ್ನು ಪಡೆಯುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳುವುದು ಬೇಡ. ನಿಮ್ಮ ಮೌನವೇ ಶಕ್ತಿಯಂತೆ ಕೆಲಸ ಮಾಡುತ್ತದೆ. ಹಳೆಯ ನೋವಿನ ಬಾಗಿಲು ಮುಚ್ಚಿ ಹೊಸ ಶಾಂತಿ ಬಾಗಿಲು ತೆರೆದುಕೊಳ್ಳುತ್ತದೆ. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಬರುವಿರಿ. ನಿಮ್ಮ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮನಸ್ಸು ಬಹಳ ಚಂಚಲವಾಗಿ ಇರುವಿದು.
ಮಕರ ರಾಶಿ:
ಬುದ್ಧಿಶಕ್ತಿ ಸಾಮಾನ್ಯಕ್ಕಿಂತ ಹೆಚ್ಚು ಪ್ರಕಾಶಿಸುತ್ತದೆ. ಮಾತಿನಲ್ಲಿ ಮಾಯಾಶಕ್ತಿ ಇಟ್ಟುಕೊಂಡು ಜನರನ್ನು ಸುಲಭವಾಗಿ ಸೆಳೆಯುತ್ತೀರಿ. ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ಉದ್ಯಮವು ಯಶಸ್ಸಿನ ಒಂದೊಂದೇ ಹಂತವನ್ನು ಏರಲಿದೆ. ಸಹೋದರರ ಬಾಂಧವ್ಯವು ಸಡಿಲಾಗುವುದು. ಇಂದಿನ ಕಾರ್ಯದಲ್ಲಿ ರೋಚಕತೆ ಕಾಣಿಸುವುದು. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಆರ್ಥಿಕತೆಯನ್ನು ದೃಢವಾಗಿ ಇಟ್ಟುಕೊಳ್ಳಬೇಕು. ನಿಮ್ಮ ನಿರ್ಧಾರವನ್ನು ಬದಲು ಮಾಡಿದ್ದಕ್ಕೆ ಬೇಸರವಾದೀತು. ಹೇಳಲಾಗದ ಒಂದು ವಿಚಾರವನ್ನು ಹೇಳಲು ಭಯವು ನಿಮ್ಮನ್ನು ಕಾಡಬಹುದು. ಹೊಸ ಕಲ್ಪನೆಗಳು ತೀವ್ರವಾಗಿ ಚಲಿಸುತ್ತವೆ. ಒಂದು ಸಣ್ಣ ಸಂಭಾಷಣೆ ಜೀವನದ ದೊಡ್ಡ ತಿರುವಾಗಬಹುದು. ಆಭರಣವನ್ನು ಖರೀದಿಸಲು ಸಂಗಾತಿಯನ್ನು ಪೀಡಿಸುವಿರಿ. ಏಕಾಂತವು ಬೇಕು ಎಂದು ಅನ್ನಿಸದೇ ಇದ್ದರೂ ಹಾಗಯೇ ಇರುವಿರಿ. ಏಕಾಂತವು ಬೇಕು ಎನಿಸಬಹುದು.
ಕುಂಭ ರಾಶಿ:
ದಿನ ಶಾಂತವಾಗಿ ಆರಂಭವಾದರೂ ಮಧ್ಯಭಾಗದಲ್ಲಿ ವಿಚಿತ್ರವಾಗಿ ಭಾಗ್ಯ ಬಾಗಿಲು ತಟ್ಟಬಹುದು. ಹಣಕಾಸಿನ ಒತ್ತಡ ಸಡಿಲವಾಗಬಹುದು. ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ಖಾಸಗಿ ಉದ್ಯೋಗದಲ್ಲಿ ನಿಮಗೆ ಮನ್ನಣೆಯು ಸಿಗುವುದು. ಸಹೋದ್ಯೋಗಿಗಳ ಜೊತೆ ಆತ್ಮೀಯತೆ ಬೆಳೆಯುವುದು. ನಿಮ್ಮ ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ವಿದ್ಯಾರ್ಥಿಗಳ ಬಗ್ಗೆ ಅಸಮಾಧನವು ಇರುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ದ್ವೇಷವನ್ನು ಮರೆತು ಪ್ರೀತಿಯಿಂದ ಇರುವಿರಿ. ಆಪದ್ಧನವನ್ನು ವಿನಿಯೋಗ ಮಾಡುವ ಸ್ಥಿತಿಯು ಬರುವುದು. ದುರಾಲೋಚನೆಯು ನಿಮ್ಮ ಸಂತೋಷಕ್ಕೆ ತೊಂದರೆಯನ್ನು ಕೊಡಬಹುದು. ಮನಸ್ಸಿನಲ್ಲಿ ಅಸಾಮಾನ್ಯ ದೃಷ್ಟಿಕೋನ ಮೂಡಿ, ಹಳೆಯ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳಬಹುದು. ಸಾಧ್ಯವೆನಿಸಿದ ಕಾರ್ಯವನ್ನಷ್ಟನ್ನೇ ಮಾಡಿ. ತಂತ್ರಜ್ಞರಿಗೆ ಕೆಲವು ಅವಕಾಶಗಳು ಸಿಗಬಹುದು. ವ್ಯವಹಾರದಿಂದ ಏಕಾಂತ ಬೇಕೆನಿಸಬಹುದು.
ಮೀನ ರಾಶಿ:
ನಿಮ್ಮ ಹೆಜ್ಜೆಗಳಲ್ಲಿ ಸಾಮಾನ್ಯ ಗತಿ ಜೊತೆಗೆ ಒಂದು ಅಸಾಮಾನ್ಯ ದೃಢತೆ ಕಾಣಿಸುತ್ತದೆ. ಕೆಲಸಗಳಲ್ಲಿ ಹೊಸ ಅವಕಾಶಗಳು ಉದಯಿಸುವಂತೆ, ಅಪ್ರತೀಕ್ಷಿತ ವ್ಯಕ್ತಿ ನಿಮ್ಮ ಜೀವನಕ್ಕೆ ಪ್ರೇರಣೆ ನೀಡಬಹುದು. ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ಪೂರ್ವಾಗ್ರಹವಿಲ್ಲದೇ ಮಾತನಾಡುವುದು ಸೂಕ್ತ. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು. ಅಪಕ್ವತೆಯನ್ನು ಹೇಳಿಕೊಳ್ಳಲಾಗದು. ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಯಶಸ್ಸನ್ನು ಪಡೆಯುವ ಹಂಬಲದಿಂದ ಏನಾದರೂ ಮಾಡಿಕೊಳ್ಳುವಿರಿ. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಹೂಡಿಕೆಯತ್ತ ಗಮನಹರಿಸುವುದು ಬೇಡ. ಮನೋಬಲ ಹೆಚ್ಚಾಗಿ, ನಿರಾಕರಿಸಿದ್ದ ಯೋಜನೆಗಳು ಮತ್ತೆ ಶುಭ ಸೂಚನೆ ಕೊಡುತ್ತವೆ. ಸಂಜೆಯಲ್ಲಿ ಅತಿ ಸಣ್ಣ ಘಟನೆ ದೊಡ್ಡ ಸಂದೇಶ ನೀಡಬಹುದು. ನಕಾರಾತ್ಮಕತೆಗೆ ಅವಕಾಶ ಬೇಡ. ಪ್ರಯಾಣವು ಅನಿವಾರ್ಯವಾದರೆ ಮಾಡಿ. ಅನಗತ್ಯ ಖರ್ಚನ್ನು ನಿಲ್ಲಿಸುವಿರಿ. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ.
23 ನವೆಂಬರ್ 2025ರ ಬಾನುವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸುಕರ್ಮ, ಕರಣ : ಗರಜ, ಸೂರ್ಯೋದಯ – 06 – 23 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:23 – 17:49, ಗುಳಿಕ ಕಾಲ 14:57 – 16:23, ಯಮಗಂಡ ಕಾಲ 12:06 – 13:32
-ಲೋಹಿತ ಹೆಬ್ಬಾರ್-8762924271 (what’s app only)




