AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 29 November: ಇಂದು ಈ ರಾಶಿಯವರು ಸ್ತ್ರೀಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅವಶ್ಯಕ

ದಿನ ಭವಿಷ್ಯ, 29, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ನವಮೀ ತಿಥಿ ಶನಿವಾರ ನಾಜೂಕುತನ, ಅಮೂಲ್ಯ ವಸ್ತು ಕಣ್ಮರೆ, ವಿಶ್ವಾಸಘಾತ, ಹೊಣೆಗಾರಿಕೆ, ಒಂಟಿತನ, ಉದ್ಯೋಗದಲ್ಲಿ ಚಿಂತೆ, ಅಧಿಕ ಆದಾಯಕ್ಕಾಗಿ ಶ್ರಮ ಇವೆಲ್ಲ ಇಂದಿನ ವಿಶೇಷವಾಗಿರಲಿದೆ.

Horoscope Today 29 November: ಇಂದು ಈ ರಾಶಿಯವರು ಸ್ತ್ರೀಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಅವಶ್ಯಕ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ|

Updated on: Nov 29, 2025 | 12:27 AM

Share

ಮೇಷ ರಾಶಿ:

ಮನೆಯವರಿಂದ ನಿಮಗೆ ಒಲವು ಸಿಗಲಿದೆ. ಹಣಕಾಸಿನಲ್ಲಿ ಮಿತವಾದ ಲಾಭ. ನಿಮ್ಮ ದೇಹ ವಿಶ್ರಾಂತಿಯನ್ನು ಬಯಸುವುದು. ನಿಮ್ಮ ವರ್ತನೆಯನ್ನು ಬೇರೆಯವರ ಮೂಲಕದಿಂದ ತಿದ್ದಿಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಗುಂಪಿನಿಂದ ತಪ್ಪಾಗದಂತೆ ಪರೀಕ್ಷಿಸಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಇಂದು ನಿಮ್ಮ ರಪ್ತು ಅಡೆತಡೆಗಳಿಲ್ಲದೇ ನಡೆಸುವಿರಿ. ದಾಖಲೆಗಳು ಸರಿಯಿದ್ದಾಗ ಅನ್ಯ ಯೋಜನೆ ಬೇಡ. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು. ನಿಮ್ಮ ಮಗನ ಮೇಲೆ ಸಂಪತ್ತಿನ‌ ದೂರುವಿರಿ. ಆಧ್ಯಾತ್ಮಿಕ ಚಿಂತನೆಯಿಂದ ಒಳಗಣ್ಣಿಗೆ ಬಲ. ಕೆಲಸದಲ್ಲಿ ನಿಧಾನವಾದರೂ ಫಲ ಸಂತೋಷಕರ. ಹೇಳಿದ ಕೆಲಸಗಳು ಸಮಯಕ್ಕೆ ಆಗಿಲ್ಲ ಎಂದು ನೌಕರರ ಮೇಲೆ ಕೋಪಗೊಳ್ಳುವಿರಿ. ಹೋರಾಟದಿಂದ ಪಡೆಯುವ ಮನಸ್ಥಿತಿ ನಿಮ್ಮದಾಗಬಹುದು. ನಿಮ್ಮ ಪ್ರಭಾವವನ್ನು ಯಾರಾದರೂ ಬಳಸಿಕೊಳ್ಳಬಹುದು.

ವೃಷಭ ರಾಶಿ:

ಆರ್ಥಿಕ ವಿಚಾರದಲ್ಲಿ ಸಾಕಷ್ಟು ನೆಮ್ಮದಿ ಸಿಗಲಿದೆ. ಸಂಬಂಧಗಳಲ್ಲಿ ಸ್ಪಷ್ಟತೆ ತಂದುಕೊಳ್ಳುವುದು ಉತ್ತಮ. ಮನಸ್ಸು ಹಗುರಾಗಿ ಉತ್ಸಾಹದಿಂದ ಇರುವಿರಿ. ನೀವು ಆರಿಸಿಕೊಂಡ ಮಾರ್ಗವು ಹಲವು ದಿನಗಳ ಅನಂತರ ಬೇಡವೆನಿಸಬಹುದು. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ನಿಮ್ಮ ಕುಟುಂಬದ ಜೊತೆ ಇಂದು ಸಮಯವನ್ನು ಕಳೆಯಲು ಸಾಧ್ಯವಾಗುವುದು. ನಿಮ್ಮ ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಇಂದು ನೀವು ಅಚಾತುರ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂಟಿತನವು ನಿಮ್ಮನ್ನು ಆವರಿಸಬಹುದು. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ಬೆಲೆಯನ್ನು ಕೊಡುವುದಿಲ್ಲ. ಇಂದು ನಿಮಗಾದ ವಿಶ್ವಾಸದ್ರೋಹದಿಂದ ಎಲ್ಲರ ಮೇಲೆ ಅಸಮಾಧಾನ ತೋರುವಿರಿ. ಸೃಜನಶೀಲತೆಯಿಂದ ನಿಮ್ಮವರಿಗೆ ಅಚ್ಚರಿಯಗುವ ದಿನ. ಹೊಸ ಕಲ್ಪನೆಗಳು ಯಶಸ್ಸಿಗೆ ದಾರಿ. ಸ್ನೇಹಿತರ ಸಹಕಾರ ಲಭಿಸುತ್ತದೆ. ಎಲ್ಲದಕ್ಕೂ ದೈವವನ್ನು ದೂರುತ್ತ ಆಲಸ್ಯದಿಂದ ಇರುವುದು ಬೇಡ.‌ ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು.

ಮಿಥುನ ರಾಶಿ:

ಆರ್ಥಿಕವಾಗಿ ಮಿತವ್ಯಯ ಮುಖ್ಯ. ಮನೆಯ ಕಾರ್ಯ ನಡುವೆ ಸಮತೋಲನ ಅಗತ್ಯ. ಕಾರ್ಯದ ಒತ್ತಡದಿಂದ ಆರೋಗ್ಯವು ಹದ ತಪ್ಪಬಹುದು. ಸರ್ಕಾರದ ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಸರ್ಕಾರದ ಕೆಲಸಕ್ಕೆ ತೊಂದರೆಯಾಗುವುದು. ಯಾರಾದರೂ ನಿಮಗೆ ಹೊಸ ದಿಕ್ಕನ್ನು ಪರಿಚಯಿಸಬಹುದು. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾದೀತು. ಪತ್ನಿಯು ನಿಮ್ಮನ್ನು ದೂಷಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಫಲವು ಲಭಿಸಿ, ಸಂತಸವಾಗುವುದು. ಕಾರ್ಯಭಾರ ಹೆಚ್ಚಾಗುತ್ತದೆ, ಆದರೆ ಅದರ ಫಲ ಉತ್ತಮವೇ. ಹಿರಿಯರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಭಾವನೆಗಳಲ್ಲಿ ಸ್ಥಿರತೆ ಕಾಪಾಡಿ. ಇಂದು ನಿಮಗೆ ಒತ್ತಡದ ಕೆಲಸವು ಬಂದು ಮನೆಯ ಕೆಲಸವು ಮರೆತುಹೋದೀತು. ಯಾರಿಂದಲಾದರೂ ದೈನ್ಯತೆಯನ್ನು ಪಡೆದುಕೊಳ್ಳುವುದು ಬೇಡ. ಅವಕಾಶವನ್ನು ಬಿಟ್ಟು ದೊಡ್ಡವರಾಗುವುದು ಬೇಡ.

ಕರ್ಕಾಟಕ ರಾಶಿ:

ಕಾರ್ಯಕ್ಷೇತ್ರದಲ್ಲಿ ಉಂಟಾದ ಕ್ಲೇಶದಲ್ಲಿ ಸುಧಾರಣೆ. ಹಣಕಾಸಿನಲ್ಲಿ ಸ್ಥಿರತೆ. ಸಂಬಂಧಗಳಲ್ಲಿ ಅರ್ಥಮಾಡಿಕೊಳ್ಳುವ ಮನೋಭಾವ ಮುಖ್ಯ. ಇಂದು ನಿಮ್ಮ ಜಾಣತನವೇ ಮುಳುವಾಗಬಹುದು. ಸಂಕೀರ್ಣವಾದ ಜೀವನವನ್ನು ಆಶಾವಾದದಿಂದ ಸರಳವಾಗಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಕಛೇರಿಯಲ್ಲಿ ಎಲ್ಲ ಕೆಲಸಕ್ಕೂ ನಿಮ್ಮನ್ನೇ ದೂಡಬಹುದು. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಕಛೇರಿಯಲ್ಲಿ ನಿಮ್ಮ ದಾಖಲೆಗಳು ಕಾಣಿಸದೇ ಹೋಗಬಹುದು. ನಿಮಗೆ ಬೇಡದ ವಸ್ತುವಾದರೂ ಇಂದು ಯಾರಿಗೂ ಕೊಡುವುದು ಬೇಡ. ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಮಕ್ಕಳ ಶುಭವಾರ್ತೆಯು ಇರಲಿದೆ. ಅಧ್ಯಯನ ಹಾಗೂ ಅನ್ವೇಷಣೆಗೆ ಶುಭ ದಿನ. ಪ್ರಯತ್ನವನ್ನು ಮುಂದೂಡುವುದಕ್ಕಿಂತ ಇಂದೇ ಮಾಡಿ. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಾಗಬಹುದು. ಸ್ನೇಹದಲ್ಲಿ‌ ಕಠೋರ ಮಾತುಗಳು ಕೇಳಿಸುವುದು.

ಸಿಂಹ ರಾಶಿ:

ರಹಸ್ಯ ಪ್ರಯತ್ನಗಳು ಫಲ ನೀಡುತ್ತವೆ. ಹಣಕಾಸಿನಲ್ಲಿ ಲಾಭ. ಭಾವನೆಗಳಲ್ಲಿ ಉತ್ಕಟತೆಯೂ ಸಹನೆಯೂ ಅಗತ್ಯ. ಆರೋಗ್ಯದಲ್ಲಿ ಚಿಕ್ಕ ತೊಂದರೆ. ನಿಮಗೆ ಅತ್ಮ ಸ್ಥೈರ್ಯದ ಕೊರತೆ ಬಹುವಾಗಿ ಕಾಡುವುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಸಂಗಾತಿಯ ಜೊತೆ ನಿಮ್ಮ ಸಂಬಂಧವು ಹಿಂದಿಗಿಂತ ಗಟ್ಟಿಯಾಗುವುದು. ನೀವು ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ಸಾಲ ಕೊಟ್ಟ ಹಣವು ನಿಮಗೆ ಮರಳಿಬರುವುದು. ನಿಮಗೆ ಸಂಸ್ಥೆಯನ್ನು ಮುನ್ನಡೆಸುವ ಹೊಣೆಗಾರಿಕೆ ಸಿಗಲಿದೆ. ನಿಮ್ಮ ಮೇಲಿನ ಆರೋಪಗಳನ್ನು ಕಾರ್ಯದ ಮೂಲಕ ತಳ್ಳಿಹಾಕುವಿರಿ. ನಿಮ್ಮ ಕೆಲಸಕ್ಕೆ ಕುಟುಂಬ ಬೆಂಬಲವು ಪೂರ್ಣವಾಗಿ ಸಿಗದು. ಆತ್ಮವಿಶ್ವಾಸ ಹಿರಿಯ ಮಾತಿನಿಂದ ವರ್ಧಿಸುವುದು. ನಿನ್ನೆ ಯೋಚಿಸಿದ ವಿಷಯಕ್ಕೆ ಇಂದು ದಾರಿ ಕಾಣಬಹುದು. ಇಂದು ಎಲ್ಲರ ಜೊತೆ ಬೆರೆಯಬೇಕಾದೀತು. ನೀವು ಅಧಿಕಾರವನ್ನು ದುರುಪಯೋಗದ ಮಾಡಿಕೊಳ್ಳುವಿರಿ. ಮಾತುನ್ನು‌ ಕೇಳಿಸಿಕೊಳ್ಳುವ ಸಮಾಧಾನ ಇರಲಿ. ಕೆಲವು ಸಾಲಬಾಧೆಯಿಂದ ಮುಕ್ತಿ ಸಿಗುವುದು.

ಕನ್ಯಾ ರಾಶಿ:

ಮನೆಯ ಜವಾಬ್ದಾರಿಯಲ್ಲಿ ಸುಧಾರಣೆ. ಹಣಕಾಸಿನಲ್ಲಿ ಖರ್ಚು ಹೆಚ್ಚುವ ಸಾಧ್ಯತೆ. ದೇಹ-ಮನಸ್ಸಿಗೆ ಆರಾಮ ನೀಡುವ ಕೆಲಸ ಮಾಡುವುದು ಉತ್ತಮ. ಕುಳಿತು ಮಾತನಾಡಿದರೆ ಉತ್ತಮ. ನೀವು ಕಛೇರಿಯ ಕೆಲಸದಲ್ಲಿ ಅವಸರದ ನಿರ್ಧಾರವನ್ನು ತೆಗದುಕೊಳ್ಳುವುದು ಬೇಡ. ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವ ದಿನ. ಪರೀಕ್ಷೆಯ ಫಲಿತಾಂಶವು ನಿಮಗೆ ಸಂತೋಷವನ್ನು ಕೊಡುವುದು. ನೀವು ಉದ್ಯೋಗವನ್ನು ಬದಲಾಯಿಸಲು ಕಷ್ಟವಾದೀತು. ಮಕ್ಕಳಿಂದ ನಿಮಗೆ ತೊಂದರೆ ಆಗಬಹುದು. ಮನಸ್ಸಿನ ನಿಯಂತ್ರಣದಲ್ಲಿ ನಿಮಗೆ ಕಷ್ಟವಾದೀತು. ಕುಟುಂಬದ ತೊಡಕುಗಳನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಿ. ಯಾರ ಸ್ನೇಹಕ್ಕೂ ಮನಸ್ಸು ಒಲ್ಲದು. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಆಸೆಯು ಇದ್ದರೂ, ನಿಮಗೆ ಅಂತಹ ಘಟನೆ ಸಿಗದೆಹೋಗುವುದು. ಮಾನಸಿಕ ಸಮತೋಲನ ಮುಖ್ಯ. ಗೆಳೆಯರ ಜೊತೆಗಿನ ಸಂಭಾಷಣೆಗಳಿಂದ ಹೊಸ ಆಲೋಚನೆ. ಇಂದಿನ ವ್ಯವಹಾರವನ್ನು ಸಂಗಾತಿಗೆ ಬಿಟ್ಟುಕೊಡುವಿರಿ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು.

ತುಲಾ ರಾಶಿ:

ನಿಖರತೆ ಮತ್ತು ಪರಿಶ್ರಮದಿಂದ ಯಶಸ್ಸು. ಬಾಕಿ ಕೆಲಸಗಳು ಪೂರ್ಣಗೊಳ್ಳುವ ದಿನ. ಹೊಸ ಕಲಿಕೆಯಿಂದ ಲಾಭಕ್ಕೆ ಪ್ರಯತ್ನ. ಇಂದು ನೀವು ಎಲ್ಲ ಒತ್ತಡಗಳನ್ನು ಬದಿಸರಿಸಿ ನಿರಾಳವಾಗಿ ಕಾಲ ಕಳೆಯುತ್ತೀರಿ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದೀತು. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು‌‌. ನಿಮ್ಮ ವಿರೋಧಿಗಳು ಹೆಚ್ಚಾಗಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಓಡಾಡಬೇಕಾದೀತು. ಕಷ್ಟದಲ್ಲಿ ಇರುವವರಿಗೆ ಕರುಣೆ ಇರಲಿದೆ. ಹಣಕಾಸಿನಲ್ಲಿ ಚಿಕ್ಕ ಮಟ್ಟದ ಲಾಭ. ಮಾನಸಿಕ ಶಾಂತಿ ಲಭ್ಯ. ಆರೋಗ್ಯ ಸಾಮಾನ್ಯವಾಗಿರುವುದು. ಧಾರ್ಮಿಕ ಆಚರಣೆಗೆ‌ ಮನಸ್ಸಿದ್ದರೂ ಸಮಯದ ಅಭಾವದಿಂದ ಸಾಧ್ಯಬಾಗದು. ದುರಭ್ಯಾಸದ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ನಕಾರಾತ್ಮಕ ಭಾವನೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಮನಸ್ಸು ಭಾರವನ್ನು ಕಳೆದುಕೊಳ್ಳುವುದು. ಭೂಮಿಯ ವಿಚಾರದಲ್ಲಿ ನಷ್ಟವಾಗಿ ತೊಂದರೆ ಪಡುವಿರಿ.

ವೃಶ್ಚಿಕ ರಾಶಿ:

ಹೊಸ ಅವಕಾಶಗಳು ಬಾಗಿಲು ತಟ್ಟುವ ಸಾಧ್ಯತೆ. ಮನೆಯಲ್ಲೂ ಗೌರವ. ಹಣಕಾಸಿನಲ್ಲಿ ಉತ್ತರೋತ್ತರ ಲಾಭ. ಅಹಂಕಾರಕ್ಕೆ ನೀವೇ ದೂರದಲ್ಲಿರಿ. ಯಾರಿಗೋ ಕೊಡಬೇಕಾದ ಹಣವು ಅನಿರೀಕ್ಷಿತವಾಗಿ ನಿಮ್ಮ ಕೈ ಸೇರುವುದು. ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನ‌ಸಂಚಾರದಿಂದ ಆಯಾಸವಾಗುವುದು.‌ ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಾನಸಿಕ ಒತ್ತಡದಿಂದ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮನಸ್ಸು ಅನ್ಯ ಆಲೋಚನೆಯಲ್ಲಿ ಮಗ್ನವಾಗಿರುವುದು. ಆಪ್ತರ ಸಲಹೆಯು ನಿಮ್ಮ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ನಿಮ್ಮ ನಾಯಕತ್ವ ಗುಣ ಮಿಂಚುತ್ತದೆ. ಕಾರ್ಯಕ್ಷೇತ್ರದಲ್ಲಿ ಪ್ರಭಾವ ಹೆಚ್ಚುತ್ತದೆ. ಮಾತಿನ ಪರಿಣಾಮವು ಇಂದು ಗೊತ್ತಾಗಲಿದೆ. ಮಕ್ಕಳ ಸುಖವನ್ನು ಅನುಭವಿಸುವಿರಿ. ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳುವಿರಿ. ವಿದ್ಯಾಭ್ಯಾಸದ ಕಾರಣಕ್ಕೆ ಮನೆಯನ್ನು ಬಿಡುವುದು ನಿಮಗೆ ಕಷ್ಟ.

ಧನು ರಾಶಿ:

ಆತ್ಮೀಯರ ಸಲಹೆ ಫಲಕಾರಿ. ಹಣಕಾಸಿನಲ್ಲಿ ಜಾಗರೂಕತೆ ಅಗತ್ಯ. ಆರೋಗ್ಯದಲ್ಲಿ ನೀರಿನ ಕೊರತೆ ಅಥವಾ ದೇಹದ ತಾಪ ಹೆಚ್ಚಾಗುವ ಸಾಧ್ಯತೆ. ಯಾವುದರಲ್ಲಿಯೂ ಸುಖ ಕಾಣುವ ಮನಸ್ಸು ಆಗದು. ಶುಭಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯು ಇರಲಿದೆ. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ. ಇತರರಿಗೆ ನೋವಾಗದಂತೆ ಮಾತುಗಳನ್ನಾಡಿ. ನಿಮ್ಮ ಗೌರವಕ್ಕೆ ಸರಿಯಾದ ಕಾರ್ಯವನ್ನು ಮಾಡಿ. ಭಾವನಾತ್ಮಕವಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳಿ. ಮನೆಯ ಕೆಲಸಗಳು ಹೆಚ್ಚಾಗುವ ಸೂಚನೆ. ನಿಮ್ಮ ಯಶಸ್ಸನ್ನು ನೀವೇ ಕಾಡಿಕೊಳ್ಳಬೇಕು. ಸಂಗಾತಿಯ ಮಾತನ್ನು ವಿರೋಧಿಸುವಿರಿ. ಸುಲಭವಾಗಿ ಸಿಕ್ಕಿದ್ದನ್ನು ಬಿಟ್ಟುಕೊಡುವಿರಿ. ಇನ್ನೊಬ್ಬರನ್ನು ಚುಚ್ಚಿ ಮಾತನಾಡಿಸುವುದು ಬೇಡ.

ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಮಕರ ರಾಶಿ:

ನಾಜೂಕಾದ ಕೆಲಸದಲ್ಲಿ ಮೆಚ್ಚುಗೆ. ಹಣ ವ್ಯಯ ಹೆಚ್ಚಾದರೂ ಅದರ ಅಗತ್ಯತೆಯಿದೆ. ಮನಸ್ಸಿನಲ್ಲಿ ಚೈತನ್ಯ ತುಂಬುವುದು. ಇಂದು ಕೆಲವು ಘಟನೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬ ಇರುಸುಮುರುಸು. ನಿಮ್ಮ ಕಾರ್ಯಗಳು ಅಂದುಕೊಂಡಂತೆ ಪೂರ್ಣವಾಗುವುದು. ಹಳೆಯ ವಿಚಾರವನ್ನು ಇಂದು ವಿರೋಧಿಗಳು‌ ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುವುದು. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಗೊತ್ತಿಲ್ಲದೇ ಯಾರ ಬಗ್ಗೆಯೂ ಮಾತನಾಡುವುದು ಬೇಡ‌. ನಿರಂತರ ಕ್ರಿಯಾಶೀಲತೆಯು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವುರು‌. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಆತಂಕವಿರಲಿದೆ. ಸಂವಹನದಿಂದ ಲಾಭ. ಹೊಸ ವ್ಯಕ್ತಿಗಳ ಸಂಪರ್ಕದಿಂದ ಭವಿಷ್ಯದಲ್ಲಿ ಉಪಕಾರಿಯಾಗಬಹುದು ಎಂಬ ಆಸೆ. ಹೊಸ ಭೂಮಿಯ ಖರೀದಿಗೆ ಆಪ್ತರನ್ನು ಜೊತೆಗೆ ಇಟ್ಟುಕೊಳ್ಳಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಕುಂಭ ರಾಶಿ:

ಕುಟುಂಬದಲ್ಲಿ ಸೌಹಾರ್ದತೆ ಹೆಚ್ಚುತ್ತದೆ. ಹಣಕಾಸಿನಲ್ಲಿ ಚಿಕ್ಕ ಲಾಭ. ಆರೋಗ್ಯದಲ್ಲಿ ಶ್ರಮದಿಂದಾಗಿ ಸ್ವಲ್ಪ ದೌರ್ಬಲ್ಯ. ನಿಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದು. ನಿಮ್ಮ ಪ್ರೀತಿಪಾತ್ರರ ಜೊತೆ ಆಪ್ತವಾದ ಸಮಯವನ್ನು ಕಳೆಯುವಿರಿ.‌ ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ಅಲ್ಪ ತಾಳ್ಮೆಯೂ ದೊಡ್ಡ ಅನಾಹುತವನ್ನು ತಪ್ಪಿಸಬಹುದು. ನಿಮ್ಮ‌ ಕೆಲಸವು ಕೇವಲ ಸುತ್ತಾಟದಲ್ಲಿಯೇ ಮುಕ್ತಾಯವಾಗುವುದು. ಸಹನೆ ನಿಮ್ಮ ಬಲ. ನಾಳೆ ಅಪೇಕ್ಷಿತ ಕೆಲಸ ನಿಧಾನವಾಗಿ ಯಶಸ್ವಿಯಾಗುತ್ತದೆ. ಹಳೆಯ ಸಮಸ್ಯೆಗೆ ಪರಿಹಾರ ದೊರೆಯುವ ಸೂಚನೆ. ಬಂಧುಗಳು ನಿಮ್ಮ ಬಗ್ಗೆ ಹಗುರವಾದ ಭಾವವನ್ನು ಇಟ್ಟುಕೊಳ್ಳುವರು. ಸಂಗಾತಿಯ ಜೊತೆ ಪ್ರೀತಿಯನ್ನು ಹಂಚಿ. ಅಪರಿಚಿತರ ಸಹವಾಸವು ಇಂದು ಬೇಡ. ನಿಮ್ಮ ಸಂಪತ್ತು ನಷ್ಟವಾಗಬಹುದು. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು.

ಮೀನ ರಾಶಿ:

ಭಾವನೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ, ಆದರೂ ಅಂತಿಮ ಫಲ ಅನುಕೂಲ. ಆರ್ಥಿಕವಾಗಿ ಮಧ್ಯಮ ಲಾಭ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ದಾಂಪತ್ಯದಲ್ಲಿ ಪರಸ್ಪರ ಅಭಿಪ್ರಾಯ ಭೇದವು ಕಾಣಿಸಿಕೊಂಡೀತು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ತಂದೆಯಿಂದ ಬೆಂಬಲ ಸಿಗಲಿದೆ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಪ್ತರನ್ನು ನೀವು ದೂರ ಮಾಡಿಕೊಳ್ಳುವುದು ಕಷ್ಟವಾಗಬಹುದು. ಕುಟುಂಬದವರನ್ನು ನೀವು ಕಳೆದುಕೊಳ್ಳಬೇಕಾದೀತು. ಪರೀಕ್ಷೆಯ ಸಿದ್ಧತೆಯಲ್ಲಿ ನಿಮ್ಮ ಸಮಯವನ್ನು ಕಳೆಯುವಿರಿ. ಇಂದು ನಿಮ್ಮ ಚಾತುರ್ಯ ಮತ್ತು ವೇಗ ಗಮನಾರ್ಹವಾಗುತ್ತದೆ. ಹೊಸ ಯೋಜನೆ ಆರಂಭಿಸಲು ಶುಭ. ಮನೆಯವರ ಮಾತುಗಳಲ್ಲಿ ಸಹಾನುಭೂತಿ ಅಗತ್ಯ. ಇಂದಿನ ಎಲ್ಲ ಸಂದರ್ಭದಲ್ಲಿಯೂ ಸಕಾರಾತ್ಮಕ ಆಲೋಚನೆ ಇರಲಿ. ನಿಮ್ಮ ನೇರ ನುಡಿಗಳೇ ಇಂದು ನಿಮಗೆ ತೊಂದರೆ ತರುವುದು.

29 ನವೆಂಬರ್​ 2025ರ ಶನಿವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಶನಿ ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವ್ಯಾಘಾತ, ಕರಣ : ಕೌಲವ, ಸೂರ್ಯೋದಯ – 06 – 26 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:17 – 10:43, ಯಮಗಂಡ ಕಾಲ 13:33 – 14:59, ಗುಳಿಕ ಕಾಲ 06:26 – 07:52,

-ಲೋಹಿತ ಹೆಬ್ಬಾರ್-8762924271 (what’s app only)