Horoscope: ಈ ರಾಶಿಯವರ ದಾಂಪತ್ಯದ ಮೇಲೆ‌ ದುಷ್ಟರ ದೃಷ್ಟಿಯು ಬೀಳಬಹುದು-ಎಚ್ಚರ

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 03 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ಈ ರಾಶಿಯವರ ದಾಂಪತ್ಯದ ಮೇಲೆ‌ ದುಷ್ಟರ ದೃಷ್ಟಿಯು ಬೀಳಬಹುದು-ಎಚ್ಚರ
ಪ್ರಾತಿನಿಧಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jan 03, 2024 | 12:45 AM

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 03) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶೋಭನ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:37 ರಿಂದ 02:01ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:24 ರಿಂದ 09:48ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:13 ರಿಂದ ಮಧ್ಯಾಹ್ನ 12:37ರ ವರೆಗೆ.

ಧನು ರಾಶಿ : ಹಸ್ತಕ್ಷೇಪ ಮಾಡುವವರ ಬಗ್ಗೆ ನಿಮಗೆ ಅಸಮಾಧಾನ ಇರಲಿದೆ. ಶೀಘ್ರಕೋಪಿಗಳಂತೆ ತೋರುವಿರಿ. ಕಷ್ಟಗಳ ಎಲ್ಲ ಹಂತವನ್ನೂ ದಾಟಿದ ನಿಮಗೆ ಬರುವ ಕಷ್ಟಗಳು ನೋವನ್ನು ಕೊಡದು. ಪರಿಸ್ಥಿತಿಯನ್ನು ಎದುರಿಸುವ ಚಾಣಾಕ್ಷತನವನ್ನು ನೀವು ಸಂಪಾದಿಸಿರುವಿರಿ. ಸಂಪನ್ಮೂಲಗಳ ಕೊರತೆಯಿಂದಾಗಿ ನೀವು ಈ ಸಮಯದಲ್ಲಿ ಕೆಲವು ವ್ಯಾಪಾರ ಯೋಜನೆಗಳನ್ನು ನಿಲ್ಲಿಸಬೇಕಾಗಬಹುದು. ಮಕ್ಕಳನ್ನು ಚತುರೋಪಾಯದಿಂದ ಹಿಡಿತಕ್ಕೆ ತರಬೇಕಾಗುವುದು. ದಾಂಪತ್ಯದ ಮೇಲೆ‌ ದುಷ್ಟರ ದೃಷ್ಟಿಯು ಬೀಳಬಹುದು. ನಿಮ್ಮ ನಡೆ-ನುಡಿಗಳು ಆದಷ್ಟು ಸರಳವಾಗಿ ಇರಲಿ. ಮಿತಿಮೀರಿದ ಆಹಾರಸೇವನೆಯಿಂದ ನಿಮಗೆ ಕಷ್ಟವಾದೀತು. ಮಕ್ಕಳ ಬಗೆಗೆ ನಂಬಿಕೆ ಕಡಿಮೆಯಾಗಬಹುದು. ಇಷ್ಟಮಿತ್ರರನ್ನು ಮನೆಗೆ ಆಹ್ವಾನಿಸುವಿರಿ. ಯಾರದೋ ಮಾತಿನಿಂದ ನಿಮಗೆ ಸಂಕಟವಾಗುವುದು. ಆಪ್ತರನ್ನು ಸತ್ಕಾರಕ್ಕಾಗಿ ಮನೆಗೆ ಆಹ್ವಾನಿಸುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಯಲ್ಲಿ‌ ಮಗ್ನರಾಗುವಿರಿ. ತುರ್ತು ಕಾರ್ಯಕ್ಕಾಗಿ ಅವಸರವಸರವಾಗಿ ಪ್ರಯಾಣ ಮಾಡಬೇಕಾಗಬಹುದು.

ಮಕರ ರಾಶಿ : ನಿಮ್ಮ ಸಂವಹನ ಕೌಶಲದಿಂದ ಜನರನ್ನು ಆಕರ್ಷಿಸುವಿರಿ. ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವುದು ನಿಮಗೆ ಕಷ್ಟವಾಗದು. ನಿಮ್ಮ ಜೀವನ‌ಶೈಲಿಯು ಅನುಸರಣೀಯವಾಗಿರುವುದು. ವೃತ್ತಿಯಲ್ಲಿ ಹಿತಶತ್ರುಗಳ ಕಾಟದಿಂದ ಸಿಗಬೇಕಾದ ಸ್ಥಾನಕ್ಕೆ ತೊಂದರೆಯಾಗಬಹುದು. ನಿಜವನ್ನು ನೀವು ಮರೆಮಾಚಲು ಹೋದರೂ ಅದು ಆದು ಹೇಗೋ ಗೊತ್ತಾಗುವುದು. ಸರಳವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಒದ್ದಾಡುವಿರಿ. ಒಟ್ಟಿಗೇ ಬರುವ ಕೆಲಸದಿಂದ ನೀವು ಉದ್ವೇಗಕ್ಕೆ ಬೀಳುವಿರಿ. ಸಾಲದಿಂದ ಬಿಡುಗಡೆ ಸಿಕ್ಕಿ ಮನಸ್ಸು ನಿರಾಳವಾಗಲಿದೆ. ಹಿರಿಯರ ಶುಶ್ರೂಷೆಗೆ ಅವಕಾಶ ಸಿಗುವುದು. ಸಂಪೂರ್ಣ ಮಾಹಿತಿಯನ್ನು ಪಡೆದು ಮುಂದಡಿ ಇಡುವುದು ಸೂಕ್ತ. ಹೊಸ ಉದ್ಯೋಗವನ್ನು ಆರಂಭಿಸುವತ್ತ ನಿಮ್ಮ ಆಲೋಚನೆಯು ಗಾಢವಾಗಿ ಇರುವುದು. ಮಕ್ಕಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಯಾರ ಗುಟ್ಟನ್ನೂ ಬಿಟ್ಟಕೊಡಲು ತಯಾರಿಲ್ಲ.

ಕುಂಭ ರಾಶಿ : ಏನನ್ನಾದರೂ ಮಾತನಾಡಿ ಕುಟುಂಬದಲ್ಲಿ ಗೌರವವನ್ನು ಕಳೆದುಕೊಳ್ಳುವಿರಿ. ಕೆಲವು ಸಂದರ್ಭಗಳಲ್ಲಿ ಸರಿ ಕಾಣದಿದ್ದರೂ ಅದನ್ನು ಒಪ್ಪಿಕೊಂಡಂತೆ ನಡೆಯುವುದು ಸೂಕ್ತ. ಪ್ರೇಮ ವ್ಯವಹಾರಗಳಿಗೆ ಇಂದು ಸಮಯವು ಮಂಗಳಕರವಾಗಿದೆ. ಅಧಿಕಾರಿಗಳ ಜೊತೆ ವೇತನದ ಹೆಚ್ಚಳಕ್ಕೆ ಕುಳಿತು ಮಾತನಾಡುವಿರಿ. ಹಿರಿಯರ ಮಾತನ್ನು ಅಗೌರವದಿಂದ ಕಾಣುವುದು ಬೇಡ. ವಿದ್ಯಾರ್ಥಿಗಳು ಸತತ ಶ್ರಮದಿಂದ ಇಂದು ಹಂತವನ್ನು ತಲುಪುವರು. ಸಂಸಾರದ ಏರಿಳಿತಗಳನ್ನು ಸಮಾಜದ ಮುಂದೆ ತೆರದಿಡುವುದು ಸರಿ ಕಾಣದು. ನಿಮ್ಮ ನೋವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಶತ್ರುಗಳ ಚಲನವಲನಗಳ‌ ಮೇಲೆ‌ ಕಣ್ಣಿಡುವಿರಿ. ಅಕಾಸ್ಮಾತ್ತಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ.‌ ದೇವರನ್ನು ನಂಬಿಕೆ ನಿಮ್ಮ ಯೋಜನೆಗಳನ್ನು ಮುನ್ನಡೆಸಿ. ಕುಟುಂಬದಲ್ಲಿ ನಿಮ್ಮಿಂದ ಸಂತೋಷವನ್ನು ಇರುವುದು. ಬಂಧುಗಳ ಪ್ರೀತಿಯೂ ಸಿಗುವುದು.

ಮೀನ ರಾಶಿ : ನಿಮ್ಮ ದಕ್ಷತೆಯು ಇತರರನ್ನೂ ಮೆಚ್ಚಿಸುತ್ತದೆ. ನಿತ್ಯದ ಕೆಲಸದ ಹೊರತಾಗಿ ಏನನ್ನಾದರೂ ಮಾಡಲು ನೀವು ಪ್ರಯತ್ನಿಸಿ, ಜಯಗಳಿಸುವುದು ಸುಲಭವಾಗಲಿಕ್ಕಿಲ್ಲ. ವ್ಯಾಪಾರಸ್ಥರಿಗೆ ನಿರಾಸೆಯ ದಿನವಿದು. ಉದ್ಯೋಗಸ್ಥರಿಗೆ ಓಡಾಟವು ಅಧಿಕವಿರುವುದು. ಇಂದಿನ ನಿಮ್ಮ ವ್ಯವಹಾರವು ಹತ್ತಾರು ಗೊಂದಲಗಳಿಂದ ಇರಲಿದ್ದು ಮುಂದುವರಿದರೆ ನಷ್ಟವಾಗುವ ಭಯವೂ ಇರಲಿದೆ. ಕುಟುಂಬ ವ್ಯವಸ್ಥೆಯನ್ನು ಸರಿದೂಗಿಸುವುದು ಹೊರೆಯಾಗಬಹುದು. ಇಂದು ನಿಮ್ಮ ಸಮಯವನ್ನು ಸ್ನೇಹಿತರ ಕಾರ್ಯಕ್ಕೆ ಕೊಡಬೇಕಾಗಿಬರಬಹುದು. ಅದ್ದರಿಂದ ನಿಮ್ಮ ಕೆಲಸವು ವಿಳಂಬವಾಗಬಹುದು. ಆಸೆಗಳನ್ನು ನೀವು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ನಡವಳಿಕೆಯನ್ನು ಊಹಿಸಲಾಗದು. ಯಾರಿಂದಲೂ ಗೌರವ ಸಿಗಲಿಲ್ಲ ಎಂಬ ನೋವು ಕಾಣಿಸಿಕೊಳ್ಳುವುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಳ್ಳಲು ತಂತ್ರಗಳನ್ನು ಹೂಡಬಹುದು. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ