Horoscope: ರಾಶಿಭವಿಷ್ಯ, ಆತ್ಮವಿಶ್ವಾಸವೇ ಈ ರಾಶಿಯವರ ಎಲ್ಲ ಕೆಲಸಗಳನ್ನು ನಿಶ್ಚಿಂತೆಯಿಂದ ಮಾಡಲು ಅನುವುಮಾಡುಕೊಡುವುದು

| Updated By: Rakesh Nayak Manchi

Updated on: Jan 07, 2024 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 07 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ರಾಶಿಭವಿಷ್ಯ, ಆತ್ಮವಿಶ್ವಾಸವೇ ಈ ರಾಶಿಯವರ ಎಲ್ಲ ಕೆಲಸಗಳನ್ನು ನಿಶ್ಚಿಂತೆಯಿಂದ ಮಾಡಲು ಅನುವುಮಾಡುಕೊಡುವುದು
ದಿನಭವಿಷ್ಯ
Image Credit source: iStock Photo
Follow us on

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 07) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:52 ರಿಂದ 06:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:28 ರಿಂದ 04:52ರ ವರೆಗೆ.

ಧನು ರಾಶಿ : ಸ್ನೇಹಿತರ ಜೊತೆ ಸಮಾರಂಭದಲ್ಲಿ ಭಾಗಿಯಾಗುವಿರಿ. ನೆಚ್ಚಿನ ವ್ಯಕ್ತಿಗಳ ಭೇಟಿಯೂ ಆಗಲಿದ್ದು, ಸಂತೋಷದಿಂದ ಕಳೆಯುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶವು ಅನಿರೀಕ್ಷಿತವಾಗಿ ಸಿಗಲಿದ್ದು, ಅದನ್ನು ಕಡೆಗಣಿಸುವುದು ಬೇಡ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ಸುಲಭಕ್ಕೆ ಸಿಗದ ವಸ್ತುಗಳನ್ನು ಬಲದಿಂದ ಪಡೆಯುವತ್ತ ಚಿಂತಿಸುವಿರಿ.

ಮಕರ ರಾಶಿ : ಆತ್ಮವಿಶ್ವಾಸವೇ ನಿಮ್ಮ ಎಲ್ಲ ಕೆಲಸಗಳನ್ನು ನಿಶ್ಚಿಂತೆಯಿಂದ ಮಾಡಲು ಅನುವುಮಾಡುಕೊಡುವುದು. ನಿಮ್ಮ ಯೋಜನೆಯು ಪೂರ್ಣ ವ್ಯತ್ಯಾಸವಾದ ಕಾರಣ ಮನೆಯಲ್ಲಿ ಕಲಹವಾಡುವಿರಿ. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಸೂಕ್ತ ಪರಿಹಾರದ ಕಡೆ ಗಮನವಿರಲಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ‌ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ವಿನೋದಕ್ಕೆಂದು ಆಡಿದ ಮಾತು ಗಂಭೀರಸ್ವರೂಪವನ್ನು ಪಡೆದೀತು. ನಿಮ್ಮವರೇ ನಿಮ್ಮ‌ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ.

ಕುಂಭ ರಾಶಿ : ಸಾಧಕರ ಸಹವಾಸವು ನಿಮಗೆ ಸಿಗಲಿದೆ. ಅವರಿಂದ ಪ್ರೇರಣೆಯನ್ನು ಪಡೆದು ಹೊಸತನ್ನು ಏನನ್ನಾದರೂ ಆರಂಭಿಸುವಿರಿ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದ್ದು ಉತ್ಸಾಹದಿಂದ ಇರುವಿರಿ. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ನಿಮ್ಮನ್ನು ಯಾರಿಗಾದರೂ ಹೋಲಿಸುವುದು ನಿಮಗೆ ಇಷ್ಟವಾಗದು. ನೌಕರರಿಲ್ಲದೇ ಉದ್ಯಮಕ್ಕೆ ಅಡ್ಡಿಯಾದೀತು. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು.

ಮೀನ ರಾಶಿ : ಹೊಸತನಕ್ಕೆ ನೀವು ತೆರೆದುಕೊಳ್ಳುವಿರಾದರೂ ಗೊಂದಲಗಳು ನಿವಾರಣೆಯಾಗದೇ ಇರಬಹುದು. ಹಳೆಯ ಮಾತುಗಳನ್ನು ಮರೆತುಬಿಡುವಿರಿ.‌ ಕೊಟ್ಟ ಮಾತನ್ನು ಯಾರಾದರೂ ನೆನಪಿಸಬೇಕಾದೀತು. ದಾಂಪತ್ಯದ ವಾಗ್ವಾದವು ಅತಿರೇಕಕ್ಕೆ ಹೋಗಬಹುದು. ‌ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು.‌ ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿ. ದೇಹವನ್ನು ಬೆಳೆಸುವ ಬಗ್ಗೆ ಕಾಳಜಿ ಬರುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ