AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ; ಈ ರಾಶಿಯವರಿಗೆ ಗುರಿಯ ಕಡೆ ಗಮನವಿರಲಿ, ಯಾರಾದರೂ ಗುರಿ ತಪ್ಪಿಸಬಹುದು

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 07) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ದಿನಭವಿಷ್ಯ; ಈ ರಾಶಿಯವರಿಗೆ ಗುರಿಯ ಕಡೆ ಗಮನವಿರಲಿ, ಯಾರಾದರೂ ಗುರಿ ತಪ್ಪಿಸಬಹುದು
ಇಂದಿನ ರಾಶಿಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Jan 07, 2024 | 12:30 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 07) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:52 ರಿಂದ 06:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:28 ರಿಂದ 04:52ರ ವರೆಗೆ.

ಸಿಂಹ ರಾಶಿ : ಹಿತಶತ್ರುಗಳ ಬಗ್ಗೆ ಪೂರ್ಣ ನಂಬಿಕೆಯನ್ನು ಇಟ್ಟು ಅವರ ಬಳಿಯಲ್ಲಿಯೇ ಆಪ್ತ ಕಾರ್ಯಗಳನ್ನು ಮಾಡಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಸಹಜ ಕುತೂಹಲವಿರುವುದು. ನಿಮ್ಮನ್ನು ಮೆಚ್ಚಿಸಿ ಕೆಲಸಗಳನ್ನು ಇಂದು ಮಾಡಿಸಿಕೊಳ್ಳುವರು. ನಿಮಗೆ ಗುರಿಯ ಕಡೆಗೆ ಮಾತ್ರ ನಿಮ್ಮ ಗಮನವಿರಲಿ. ಗುರಿಯನ್ನು ಯಾರಾದರೂ ತಪ್ಪಿಸಬಹುದು. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು. ನಿಮ್ಮ ಹಿಂದಿನ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ಹಣವು ಸಿಗದೇ ನಿಮಗೆ ನಿರಾಸೆಯಾಗುವುದು. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗುವಿರಿ. ಯಾರ ಮಾತನ್ನು ನಂಬುವುದು ಎಂಬ ಗೊಂದಲದಲ್ಲಿ ನೀವು ಇರುವಿರಿ.

ಕನ್ಯಾ ರಾಶಿ : ಸಹೋದರನಿಂದ ನಿಮಗೆ ಉತ್ತಮ ಪಾರಿತೋಷಕವು ಅನಿರೀಕ್ಷಿತವಾಗಿ ಸಿಗಬಹುದು. ಹೂಡಿಕೆಯಿಂದ ಅಧಿಕ ಲಾಭವನ್ನು ನೀವು ನಿರೀಕ್ಷಿಸಬಹುದು. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವುದು ಸರಿಯಾಗದು. ನೂತನ ಗೃಹ ನಿರ್ಮಾಣದ ಬಗ್ಗೆ ನುರಿತವರ ಜೊತೆ ಚರ್ಚೆಯನ್ನು ನಡೆಸುವು ಯೋಚನೆ ಇರುವುದು. ವಾಹನ ಓಡಾಡವು ಸುಖಕರವಲ್ಲ. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೇ ಹೋದೀತು. ಇಂದು ವಾಸದ ಮನೆಯನ್ನು ಬದಲಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ಕೂಡಿಟ್ಟ ಹಣವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಿದ್ದೀರಿ.

ತುಲಾ ರಾಶಿ : ವ್ಯಾಪಾರದಲ್ಲಿ ತೊಡಕು ಬರಬಹುದು. ಆದರೆ ಇದನ್ನು ನಿವಾರಿಸಿಕೊಳ್ಳುವ ತಂತ್ರವು ನಿಮಗೆ ಅನುಭವದಿಂದ‌ ಸಿದ್ಧವಾಗಿರುವುದು. ಕ್ರೀಡಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ವೃತ್ತಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆಯುವಿರಿ. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮ್ಮ‌ ಮೇಲೆ ಅಪೂರ್ಣವಾದ ವಿವರದ ಕಾರಣ ತಪ್ಪು ಕಲ್ಪನೆಯನ್ನು ಇಟ್ಟುಕೊಳ್ಳುವರು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಸಂಗಾತಿಯ ಜೊತೆ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು. ಚರಾಸ್ತಿಯ ದಾಖಲೆಯನ್ನು ಪರಿಶೀಲಿಸುವಿರಿ.

ವೃಶ್ಚಿಕ ರಾಶಿ : ನಟನೆಯಲ್ಲಿ ಆಸಕ್ತಿ ಇರುವವರಿಗೆ ಅಂದುಕೊಂಡಷ್ಟು ಅವಕಾಶಗಳು ಸಿಗದೇ ಇರುವುದು ಬೇಸರವಾಗುವುದು. ಎಲ್ಲರಿಂದ ದೂರವಿದ್ದು ನಿಮ್ಮ ಹಳೆಯ ಎಲ್ಲ ಘಟನೆಗಳನ್ನು ಪುನಃ ಅವಲೋಕ ಮಾಡುವಿರಿ. ನಿಮ್ಮವರ ಆರೋಗ್ಯದ ವ್ಯತ್ಯಾಸದಿಂದ ಹಣವನ್ನು ಖರ್ಚುಮಾಡಬೇಕಾಗುವುದು. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು.‌ ಮಕ್ಕಳ ವಿಚಾರದಲ್ಲಿ ನಿಷ್ಪಕ್ಷಪಾತಿಯಾಗುವುದು ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ