Horoscope Today 17 January 2025: ದೊಡ್ಡ ಕನಸಿಗೆ ದೊಡ್ಡ ಶ್ರಮವೇ ಅಗತ್ಯ
ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸೌಭಾಗ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:18 ರಿಂದ ಮಧ್ಯಾಹ್ನ 12:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:33 ರಿಂದ ಸಂಜೆ 04:58 ರವರೆಗೆ, ಗುಳಿಕ ಬೆಳಿಗ್ಗೆ 08:28 ರಿಂದ 09:53 ರವರೆಗೆ.
ಮೇಷ ರಾಶಿ: ಸಹನೆ ಅಭಿವೃದ್ಧಿಯ ಲಕ್ಷಣ. ಅಡೆತಡೆಯ ಪ್ರಯಾಣವನ್ನೂ ಲೆಕ್ಕಿಸದೇ ಮುನ್ನಡೆಯುವಿರಿ. ಉದ್ಯಮಿಗಳು ಇಂದು ದೊಡ್ಡ ಲಾಭವನ್ನು ಗಳಿಸುವ ಯೋಜನೆಯು ಸಿಗುವುದು. ನಿಮ್ಮ ಭಾವವು ಮತ್ತೆಲ್ಲಿಯೋ ಬಿಂಬಿತವಾಗಬಹುದು. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನೀವು ನೀಡುವ ಅಗೌರವವು ಪಶ್ಚಾತ್ತಾಪಕ್ಕೆ ಕಾರಣವಾಗಲಿದೆ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚು ಆಗುವುದು. ಕಛೇರಿಯಲ್ಲಿ ಉಂಟಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೀವು ಯತ್ನಿಸುವಿರಿ. ನಿಮಗೆ ಅವಶ್ಯಕತೆ ಇರುವಷ್ಟು ಬಳಸಿಕೊಂಡು, ಇನ್ನೊಬ್ಬರ ವಸ್ತುವನ್ನು ಹಿಂದಿರುಗಿಸುವಿರಿ. ದೊಡ್ಡ ಕನಸಿಗೆ ದೊಡ್ಡ ಶ್ರಮವೇ ಅಗತ್ಯ.
ವೃಷಭ ರಾಶಿ: ವೇಗದ ಕಾರ್ಯದಿಂದ ನಿಮ್ಮ ನೈಪುಣ್ಯತೆಗೆ ಭಂಗವಾಗಲಿದೆ. ಸಹೋದ್ಯೋಗಿಗಳ ನಡುವೆ ಸಖ್ಯವುಂಟಾಗುವುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ತುಂಬಾ ಆಯಾಸವನ್ನು ಪಡುವಿರಿ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ನೀವು ಇಂದು ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ಕೆಲಸದಲ್ಲಿ ನೈಪುಣ್ಯತೆಯನ್ನು ಬೆಳೆಸಿಕೊಂಡಿರುವಿರಿ. ನಿಮಗೆ ಕೆಲವು ಪರೋಕ್ಷ ಮಾತುಗಳು ಅಭಿಮಾನಕ್ಕೆ ಭಂಗ ತರಬಹುದು. ಗುರುವಿನ ದರ್ಶನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ವ್ಯಾಪಾರವನ್ನು ವಿನಯದಿಂದ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ನಿಮಗೆ ಇಷ್ಟವಾದ ಕೊಡುಗೆಯು ಸಿಗಬಹುದು. ಇಂದಿನ ಆದಾಯವನ್ನು ಪ್ರಕಟಮಾಡುವುದು ಬೇಡ.
ಮಿಥುನ ರಾಶಿ: ಸರ್ಜನಾತ್ಮಕವಾಗಿ ಇದ್ದರೆ ದೊಡ್ಡ ಕಡೆಗಳಲ್ಲಿ ನಿಮಗೆ ಉದ್ಯೋಗ ಸಿಗಲಿದೆ. ಕಛೇರಿಯಲ್ಲಿ ನಿಮ್ಮ ಎಲ್ಲ ಕೆಲಸಗಳನ್ನು ನೀವು ತ್ವರಿತವಾಗಿ ಪೂರ್ಣಗೊಳಿಸಬೇಕಾಗುವುದು. ನಿಮ್ಮ ಇಂದಿನ ವರ್ತನೆಯು ಊಹಾತೀತವಾಗಿರುವುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ನಿಮ್ಮ ಮನೆಯ ವಾತಾವರಣವು ಅನೇಕ ದಿನಗಳ ಅನಂತರ ಪ್ರಶಾಂತವಾಗಿರುವುದು. ನಿಮ್ಮ ಕಾರ್ಯದ ಪರಿಶೀಲನೆಗೆ ಅಧಿಕಾರಿಗಳು ಬರಬಹುದು. ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡಲಡುವರು. ಯಾವುದಾದರೂ ಒಂದು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವು ಬರಬಹುದು. ಎಲ್ಲ ಕಡೆಗಳಲ್ಲಿ ತಾರತಮ್ಯ ತೋರುವುದು ಬೇಡ. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇಟ್ಟಕೊಳ್ಳಿ. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸುವಿರಿ. ಪ್ರೀತಿಯಿಂದ ಹೊರಬರಲು ಆಗದು.
ಕರ್ಕಾಟಕ ರಾಶಿ: ಸ್ನೇಹವನ್ನು ವೃತ್ತಿಯ ಕಡೆಗೆ ತಿರುಗಿಸಿಕೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ಇನ್ನೊಬ್ಬರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಇಂದು ಉತ್ತಮ ಲಾಭವನ್ನು ಪಡೆಯುವರು. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಪ್ರಭಾವೀ ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ನಂಬಿಕೆ ಬಾರದ ಕಡೆ ವ್ಯವಹಾರವನ್ನು ಮುಂದುವರಿಸುವುದು ಬೇಡ. ಧನವ್ಯಯವಾದರೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನವಿದ್ದರೂ ಸ್ವಲ್ಪ ಫಲವು ಇರಲಿದೆ. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು. ನಿಮ್ಮ ಕಲ್ಪನೆಯಂತೆ ಎಲ್ಲವೂ ಆಗದು ಎಂಬ ಸತ್ಯವು ತಿಳಿಯಲಿದೆ. ಯೋಜನೆಯನ್ನು ಮಾಡುವಾಗ ಸರಿಯಾಗಿ ಇರಲಿ.
ಸಿಂಹ ರಾಶಿ: ನಿಮಗೆ ಸಿಕ್ಕ ಸಂಪತ್ತು ನಿಮ್ಮನ್ನು ಬದಲಿಸಬಹುದು. ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಸಂತೋಷದಿಂದ ಇರುವಿರಿ. ಯಾರನ್ನೂ ಕೊಂಡುಕೊಳ್ಳಲಾಗದು, ಇನ್ನೊಬ್ಬರಿಗೆ ಕೊಟ್ಟುಕೊಂಡರೆ ಕೆಲಸ ಸಲೀಸು. ಆರ್ಥಿಕತೆಯಿಂದ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ಪ್ರಯತ್ನವು ಫಲಿಸುವ ತನಕ ಸಹನೆ ಅತ್ಯವಶ್ಯಕ. ನಡೆದಾಡುವಾಗ ಜಾಗರೂಕತೆ ಬೇಕು. ಇಂದು ನಿಮಗೆ ವ್ಯಕ್ತಿಗಿಂತ ಕೆಲಸವೇ ಮುಖ್ಯವಾಗುವುದು. ದುಡಿಯುವವು ತಮ್ಮ ಶ್ರಮಕ್ಕೆ ಉಚಿತ ಫಲಿತಾಂಶವನ್ನು ನಿರೀಕ್ಷಿಸುವರು. ನಿಮ್ಮ ಆಸೆಯನ್ನು ಇನ್ನೊಬ್ಬರ ಎದುರು ಪ್ರಕಟಪಡಿಸಲು ಮುಜುಗರ ಆಗಬಹುದು. ಬರುವ ಆದಾಯವನ್ನು ಜಾಣ್ಮೆಯಿಂದ ಬಳಸಿಕೊಳ್ಳುವಿರಿ. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ದ್ವೇಷದಿಂದ ನಿಮ್ಮ ಜೀವನವು ಮಾರ್ಗಭ್ರಷ್ಟವಾಗಬಹುದು. ಧನಾತ್ಮಕ ಚಿಂತನೆಯಿಂದ ಕಳೆದುಕೊಂಡ ಉತ್ಸಾಹವು ಮತ್ತೆ ಬರುವುದು.
ಕನ್ಯಾ ರಾಶಿ: ಬಾಂಧವ್ಯವು ನೀವು ಮಾಡುವ ಆದರದ ಮೇಲೆ ನಿಂತಿದೆ. ಹೂಡಿಕೆಯು ಆರ್ಥಿಕ ಚಿಂತನೆಯನ್ನು ದೂರ ಮಾಡುವುದು. ಇಂದಿನ ನಿರಾಸೆಯು ಮನಸ್ಸಿಗೆ ನೋವನ್ನು ಕೊಡುವುದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ನಿತ್ಯ ಬಳಕೆಯ ವಸ್ತುವಿನ ವ್ಯಾಪಾರದಿಂದ ಲಾಭ ಗಳಿಸುವಿರಿ. ಯಾರಿಗೂ ನೋವಾಗಂದಂತೆ ಇರುವುದು ಸುಲಭವಲ್ಲ. ಸಂಗಾತಿಯ ಬಯಕೆಯನ್ನು ಪೂರ್ಣವಾಗಿಸುವಿರಿ. ವ್ಯಾಪಾರಸ್ಥರಾದ ನೀವು ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಿರಿ. ಮಗುವಿನ ಆರೋಗ್ಯದ ಚಿಂತೆ ಇಂದು ಕಾಡಬಹುದು. ದಾಯಾದಿ ಕಲಹವು ತಾರಕಕ್ಕೆ ಹೋಗಬಹುದು. ಇತರರ ಬೆಂಬಲವು ನಿಮಗೆ ಕಡಿಮೆ ಆಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು.
ತುಲಾ ರಾಶಿ; ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮ್ಮದಾದ ತಂಡದ ರಚನೆಯನ್ನು ಮಾಡಿಕೊಳ್ಳುವಿರಿ. ದೂರದ ಊರಿನಲ್ಲಿ ಉದ್ಯೋಗಕ್ಕೆ ಹೋಗಬೇಕಾಗಬಹುದು. ಇಂದಿನ ನಿಮ್ಮ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಮನೆಯಲ್ಲಿ ಸಂತೋಷದ ವಾತಾವರಣವನ್ನು ನೀವೇ ಸೃಷ್ಟಿಸುವಿರಿ. ಸಂತೋಷವನ್ನು ಇನ್ನೊಂದರಲ್ಲಿ ಹುಡುಕುವುದಕ್ಕಿಂತ ನಿಮ್ಮೊಳಗೆ ಇದೆಯೇ ಎಂದು ಭಾವಿಸಿ. ಬಂಧುಗಳು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ವಿಳಂಬವಾದರೂ ಮಾರ್ಗ ಸರಿಯಾಗಿರಲಿದೆ. ನಿಮ್ಮ ಮಾತಿನ ಮೇಲೆ ನಂಬಿಕೆ ಕಡಿಮೆ ಆಗುವುದು. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವರು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡಬೇಕಾದೀತು. ಇಂದಿನ ಕಾರ್ಯವು ಪೂರ್ಣವಾಗುವ ತನಕ ನಿಮಗೆ ಮಾನಸಿಕ ವಿಶ್ರಾಂತಿಯು ಇರದು. ನಿಮ್ಮ ಮಾತು ವಿವಾದವನ್ನು ಹುಟ್ಟುಹಾಕಬಹುದು.
ವೃಶ್ಚಿಕ ರಾಶಿ: ನಿಮ್ಮಿಂದ ಸಹಾಯವನ್ನು ನಿರೀಕ್ಷಿಸುವುದು ಸರಿಯಲ್ಲವೆಂದು ಅನ್ನಿಸಬಹುದು. ವಿದ್ಯಾಭ್ಯಾಸದ ಖರ್ಚನ್ನು ನೀವು ಸರಿದೂಗಿಸಿಕೊಳ್ಳುವಿರಿ. ನಡವಳಿಕೆಯು ಹದ ಮೀರದಿರಲಿ. ಪ್ರೇಮಿಗಳು ಇಂದು ಸ್ವತಂತ್ರವಾಗಿ ಇರಲು ಆಸೆಪಡುವರು. ವಿವಾಹಿತರ ಜೀವನವು ಆನಂದದಿಂದ ಇರುವುದು. ನಿಮ್ಮ ವರ್ಚಸ್ಸು ಅಧಿಕವಾದಷ್ಟೂ ಅಪಾಯವೇ ನಿಮಗೆ. ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿದ್ದು ಹತಾಶ ಭಾವವಿರುವುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರುವುದು. ವ್ಯಾಪಾರಸ್ಥರಿಗೆ ಸಾಮಾನ್ಯವಾಗಿ ಇರುವುದು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಯುಕ್ತಿಯಿಂದ ಕೆಲಸವನ್ನು ಸಾಧಿಸಿದ ಎಲ್ಲವೂ ಕ್ಷೇಮ.
ಧನು ರಾಶಿ: ನಿಮ್ಮ ಕೆಲಸವು ಪ್ರಾಮಾಮಾಣಿಕದ್ದೇ ಎಂದು ಕೇಳಿಕೊಳ್ಳುವಿರಿ. ನ್ಯಾಯಾಲಯದಲ್ಲಿ ಜಯವನ್ನು ಸಾಧಿಸುವಿರಿ. ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡುವಿರಿ. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವ ಅಗತ್ಯವಿದೆ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ಆಕಸ್ಮಿಕವಾಗಿ ಉದ್ಯೋಗವು ನಿಮ್ಮ ಪಾಲಿಗೆ ಬರುವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು. ಇಂದಿನ ನಿಮ್ಮ ಉತ್ಸಾಹವು ಸಮಾರಂಭಗಳಲ್ಲಿ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ.
ಮಕರ ರಾಶಿ: ಮಾತುಗಾರಿಕೆಯಿಂದ ಹಣವನ್ನು ಗಳಿಸುವಿರಿ. ವಿದ್ಯುತ್ ಉಪಕರಣಗಳು ದುರಸ್ತಿಗೆ ಬರಬಹುದು. ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ಯಾರನ್ನೂ ಕುರುಡಾಗಿ ನಂಬವುದು ಬೇಡ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಅತಿಯಾದ ನಿರೀಕ್ಷೆಯನ್ನು ಇಟ್ಟು ಕಾರ್ಯ ಮಾಡುವುದು ಬೇಡ. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ಆರೋಗ್ಯವೂ ಅತಿಯಾದ ಒತ್ತಡದಿಂದ ಹಾಳಾಗುವುದು. ಸಲ್ಲದ ಮಾತುಗಳ ಮೇಲೆ ನಿಯಂತ್ರಣದ ಅವಶ್ಯಕತೆ ಇರಲಿದೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ.
ಕುಂಭ ರಾಶಿ: ಪೂರ್ವಾಗ್ರಹದಿಂದ ಸರಿಯಾದ ನಿರ್ಧಾರವನ್ನು ತೆಗದುಕೊಳ್ಳಲಾಗದು. ವ್ಯವಹಾರದಲ್ಲಿ ಚಾತುರ್ಯ ಸಾಲದು. ಒತ್ತಡವನ್ನು ನೀವು ಸಹಜಸ್ವಭಾವವಾಗಿ ಸ್ವೀಕರಿಸುವಿರಿ. ನೀವು ಬಹಳ ಕಾಲದಿಂದ ಪ್ರಮುಖ ಕೆಲಸದಲ್ಲಿ ತೊಂದರೆಯಾಗುತ್ತಿದ್ದು, ಅದು ಕೊನೆಗೊಳ್ಳಬಹುದು. ಅಂತಸ್ತಿನ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಹಣದ ಪರಿಸ್ಥಿತಿ ಉತ್ತಮವಾಗಿದ್ದರೂ, ಯಥಾಯೋಗ್ಯವಾದ ಖರ್ಚೂ ಇರಲಿದೆ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಕಂಡುಬರುವುದು. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ಹೆಚ್ಚಿಸುವುದು. ಆಪ್ತರಿಂದ ನಡೆವಳಿಕೆಗೆ ಟೀಕೆಗಳು ಬರಬಹುದು.
ಮೀನ ರಾಶಿ: ನಿಮ್ಮ ಗುರಿಯೇ ದೊಡ್ಡದಾಗಿದ್ದರೆ ಸಣ್ಣ ವಿಘ್ನಗಳೂ ನಗಣ್ಯವಾಗುವುವು. ಪಾಲುದಾರಿಕೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವುದು ಹಾಗೆಯೇ ಉಳಿದುಕೊಳ್ಳುವುದು. ಗೃಹಬಳಕೆಯ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಉದ್ಯಮದಲ್ಲಿ ಬರುವ ದಾಖಲೆಗಳ ಸಮಸ್ಯೆಯೂ ದೂರಾಗುವುದು. ನಿಮ್ಮ ಆರ್ಥಿಕ ಸ್ಥಿತಿಯು ಮಧ್ಯಮಕ್ಕಿಂತ ಉತ್ತಮವಾಗಿರುವುದು. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಆರೋಗ್ಯವು ಸುಸ್ಥಿರವಾಗಿದ್ದು ಇಂದು ಅನುಕೂಲವೇ. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಬೇಸರಿಸದೇ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದದಿಂದ ಬೇಸರ ಇರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವು ಸಂತೋಷಗೊಳ್ಳುವರು. ಅಪರಿಚಿತರನ್ನು ನಂಬಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ.
ಲೋಹಿತ ಶರ್ಮಾ -8762924271 (what’s app only)