AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 07 July: ಇಂದು ಈ ರಾಶಿಯವರಿಗೆ ಜೀವನ ಹೊಸ ಅಧ್ಯಾಯ ಆರಂಭ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಸೋಮವಾರ ಸ್ಪರ್ಧೆಗೆ ಸಿದ್ಧತೆ, ಕೊನೆಯ ಕ್ಷಣದಲ್ಲಿ ಸರಿ ನಿರ್ಧಾರ, ವಿಳಂಬ ಯೋಜನೆ, ನಿವೃತ್ತಿಯಿಂದ ಬೇಸರ ಇವೆಲ್ಲ ಇಂದಿನ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 07 July: ಇಂದು ಈ ರಾಶಿಯವರಿಗೆ ಜೀವನ ಹೊಸ ಅಧ್ಯಾಯ ಆರಂಭ
ನಿತ್ಯ ಭವಿಷ್ಯImage Credit source: Pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 07, 2025 | 1:04 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಸೌರ ಮಾಸ : ಮಿಥುನ, ವಾರ: ಸೋಮ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಅನುರಾಧಾ ಯೋಗ : ಪರಿಘ, ಕರಣ : ಬವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:47 – 09:24, ಯಮಘಂಡ ಕಾಲ 11:01 – 12:38, ಗುಳಿಕ ಕಾಲ14:14 – 15:51

ಮೇಷ ರಾಶಿ: ಮೇಲ್ನೋಟಕ್ಕೆ ನಂಬಿದರೂ ನಿಮ್ಮೊಳಗಿನ ಅನ್ವೇಷಕ ಸುಮ್ಮನಿರಲಾರನು. ಇಂದು ನಿಮಗೆ ಬೇರೆ ಬೇರೆ ಕಾರಣಗಳಿಂದ ಜೀವನ ಬಹಳ ಸುಂದರ ಎನಿಸುವುದು. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ನಡೆಯುವಾಗ ಉಳುಕಿದ ಕಾಲು, ದೊಡ್ಡ ತೊಂದರೆಯನ್ನು ಮಾಡುವುದು. ವಾಹನ ಖರೀದಿಗೆ ಓಡಾಟ ಮಾಡಬೇಕಾದೀತು. ನಿಮಗೆ ಅನೇಕ ಗೊಂದಲಗಳು ಹುಟ್ಟಿಕೊಳ್ಳಬಹುದು. ಪ್ರಯಾಣದ ಪರಿಚಯ ಪ್ರೀತಿಯಾಗುವುದು. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ಮಕ್ಕಳ ಸಂತೋಷಕ್ಕಾಗಿ ಹಣವನ್ನು ಖಾಲಿ ಮಾಡುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಮಾಡುವಿರಿ. ಯಾವ ಸಂತೋಷವೂ ಸುಮ್ಮನೇ ಸಿಕ್ಕದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ಚುರುಕುತನದ ಅಗತ್ಯತೆ ಬಹಳ ಇದೆ.

ವೃಷಭ ರಾಶಿ: ಗೊತ್ತಲ್ಲದೇ ಮಾಡಿದ ಕೊನೆಯ ಕ್ಷಣದ ನಿರ್ಧಾರವು ನಿಮ್ಮನ್ನು ರಕ್ಷಿಸುವುದು. ನಿಮ್ಮ ದೃಢ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗುವುದು. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ‌. ನಿಮ್ಮ‌ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಕೆಟ್ಟ ವಾತಾವರಣದಿಂದ ಮುಕ್ತಿ ದೊರೆತಂತಹ ಅನುಭವ ನಿಮಗಿಂದು. ಮಾನಸಿಕವಾಗಿ ನಿಮಗೆ ನೆರೆಹೊರೆಯವರು ನೀರಿನ ವಿಚಾರಕ್ಕೆ ತೊಂದರೆ ಕೊಡಬಹುದು. ಪ್ರಭಾವಿಗಳ ಸಂಪರ್ಕವು ಅನಾಯಾಸವಾಗಿ ಲಭ್ಯವಾಗುವುದು. ಕುಟುಂಬ ಆಸ್ತಿಯನ್ನು ನಯವಾಗಿ ಪಡೆಯಲು ಯತ್ನಿಸುವಿರಿ. ಬರಬೇಕಾದ ಹಣವು ಬಾರದೇ ಸಾಲವನ್ನು ಮಾಡಬೇಕಾಗಬಹುದು. ಯಾರ ಒತ್ತಾಯಕ್ಕೂ ಮಣಿಯದೇ ನಿಮ್ಮದೇ ದಾರಿಯಲ್ಲಿ ಇರುವಿರಿ. ಕುಟುಂಬ ನಿರ್ವಹಣೆಯ ವಿಚಾರದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರಬಹುದು. ಕಛೇರಿಗೆ ಒಲ್ಲದ ಮನಸ್ಸಿನಿಂದ ಹೋಗುವಿರಿ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು.

ಮಿಥುನ ರಾಶಿ: ನಿಮ್ಮ ನೆಲವನ್ನು ಗಟ್ಟಿ ಮಾಡಿಕೊಂಡು ಪರರನ್ನು ರಕ್ಷಿಸುವುದು ಯೋಗ್ಯ. ಇಂದು ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿ‌ಮಾಡಿಸಬಹುದು. ದಾಂಪತ್ಯ ಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಕಛೇರಿಯಲ್ಲಿ ಇಂದು ನಿಮ್ಮ ಅವಶ್ಯಕತೆ ಬಹಳವಾಗಿ ಕಾಣಿಸುವುದು. ಸಾಹಸ ಪ್ರವೃತ್ತಿಯಿಂದ ನಿನಗೆ ಯಶಸ್ಸು ಸಿಗಬಹುದು. ಸಂಗಾತಿಯ ಬಗ್ಗೆ ನೀವೇ ಇಲ್ಲದ ಮಾತನಾಡುವಿರಿ. ಪೂರ್ವ ಆಲೋಚನೆಗಳು ದಿಕ್ಕು ತಪ್ಪಬಹುದು. ದ್ವೇಷವನ್ನು ಮುಂದುವರಿಸದೇ ಮುಕ್ತಾಯ ಮಾಡಿಕೊಳ್ಳಿ. ಬಂಧುಗಳ ಆಗಮನವು ನಿಮಗೆ ಕಿರಿಕಿರಿಯನ್ನು ತಂದೀತು. ಭೂಮಿಯ ಖರೀದಿಗೆ ಹಿರಿಯರ ಮಾರ್ಗದರ್ಶನವೂ ಇರಲಿ. ಮೋಜಿನ‌ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು. ಅರಾಮಾಗಿ ಇರೋಣವೆಂದರೂ ಒತ್ತಡ.

ಕರ್ಕಾಟಕ ರಾಶಿ: ದೂರವಿರುವ ಮಕ್ಕಳ ಬಗ್ಗೆ ಆತಂಕ ಕಾಡುವುದು. ಇಂದು ಅನವಶ್ಯಕ ಖರ್ಚಿನ ಕಡೆ ಗಮನವಿರದು. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ‌. ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ಸಿಗದುದನ್ನು ಎಷ್ಟು ನೆನೆದರೂ ಪ್ರಯೋಜನವಾಗದು. ಸಮಯ ಬಂದಾಗ ತಾನಾಗಿಯೇ ನಿಮ್ಮದಾಗುವುದು. ಪರಿಚಯವಿಲ್ಲದವರ ಜೊತೆ ವೈಯಕ್ತಿಕ‌ ವಿಚಾರಗಳನ್ನು ಹಂಚಿಕೊಳ್ಳುವುದು ಬೇಡ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಗುರಿಯನ್ನು ತಪ್ಪಿಸಲು ಬೇಕಾದ ಪಿತೂರಿಯು ನಡೆಯಬಹುದು. ಬಾಂಧವ್ಯವನ್ನು ಗಟ್ಟಿಯಾಗಿಸಲು ಇಷ್ಟಪಡುವಿರಿ. ನಿಮ್ಮ ಮಾತಿನ ವೇಗವನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಕಛೇರಿಯಲ್ಲಿ ಸ್ತ್ರೀಯರಿಂದ ಸಹಕಾರವನ್ನು ಪಡೆಯುವಿರಿ. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಆತಂಕವಿರಲಿದೆ.

ಸಿಂಹ ರಾಶಿ: ವರ್ಗಾವಣೆಯ ಬಗ್ಗೆ ಅಸಮಾಧಾನವಿದ್ದು ಸೂಕ್ತ ಜನರನ್ನು ಸಂಪರ್ಕಿಸಿ. ಪರಿಹಾರ ಕೂಡಲೇ ಸಿಗದು. ಇಂದು ನಿಮ್ಮ ಹಿತಶತ್ರುಗಳಿಂದ ತೊಂದರೆ‌ ಕೊಡಬಹುದು. ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ನಾನಾ ಮೂಲಗಳಿಂದ ವಿವಿಧ ಸಂಪತ್ತುಗಳು ಬರಲಿದೆ. ದಾಂಪತ್ಯದಲ್ಲಿ ವಿರಸವು ನಷ್ಟವಾಗುವುದು. ಅಧಿಕ ಆದಾಯಕ್ಕೆ ನಿಮ್ಮ ಉದ್ಯಮವನ್ನು ವಿಸ್ತರಿಸುವಿರಿ. ನಿಮ್ಮ ಕರ್ಮವೇ ನಿಮ್ಮನ್ನು ಸುತ್ತಿಕೊಳ್ಳುವುದು. ಮನಸ್ಸಿಗೆ ಶಾಂತಿಯು ಇರಲಿದ್ದು ಉದ್ವೇಗದ ಸಂದರ್ಭವನ್ನು ಆರಾಮಾಗಿ ದಾಟುವಿರಿ. ಕೆಲವರ ವರ್ತನೆಯು ಬೇಸರ ತರಿಸಬಹುದು. ಇಂದು ನಿಮ್ಮ‌ ಪೂರ್ವಜರ ಜ್ಞಾನವು ಸಿಗಲಿದೆ. ಸತ್ಸಂಗ ಮೂಲಕ ಸಮಯವನ್ನು ಕಳೆಯುವಿರಿ. ತಣ್ಣೀರಾದರೂ ತಣಿಸಿ ಕುಡಿಯುವುದೇ ಒಳ್ಳೆಯದು. ನಿಮ್ಮ ಸಮಜಾಯಿಷಿಯ ಅಗತ್ಯವಿಲ್ಲ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.

ಕನ್ಯಾ ರಾಶಿ: ಸ್ಪರ್ಧೆಗಳಲ್ಲಿ ನಿಮ್ಮ ಸಿದ್ಧತೆಗೆ ಯೋಗ್ಯವಾದ ಫಲಿತಾಂಶ ಸಿಗಲಿದೆ. ನಿರ್ಲಕ್ಷ್ಯಕ್ಕೆ ಅವಕಾಶ ಕೊಡಬೇಡಿ. ಸ್ನೇಹಿತರಿಂದ ಇಂದು ಮನೆ ತುಂಬಲಿದೆ. ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ತಂದೆ ತಾಯಿಗಳನ್ನು ಬಹಳ ಸಂತೋಷದಿಂದ‌ ನೋಡಿಕೊಳ್ಳುವಿರಿ. ರಾಜಕೀಯದ ಮನೋಭಾವ ನಿಮ್ಮಲ್ಲಿ ಜಾಗ್ರತಿ ಹೊಂದುವುದು. ಅವರು ಅಪೇಕ್ಷಿಸಿದ ಸ್ಥಳಕ್ಕೆ ಅವರನ್ನು ಕರೆದೊಯ್ಯುವಿರಿ. ನಿಮ್ಮ ಕೈಲಾದವರಿಗೆ ಸಹಾಯವನ್ನು ಮಾಡುವುದು ಒಳ್ಳೆಯದು. ವಿರೋಧಿಗಳಿಗೆ ನಿಮ್ಮ ಬಲ ಪ್ರದರ್ಶನವಾಗಲಿದೆ. ಒಂದೇ ಕಡೆಯಲ್ಲಿ ಉದ್ಯೋಗವನ್ನು ಮಾಡಲು ನೀವು ಇಚ್ಛಿಸುವುದಿಲ್ಲ. ಹೊಸ ಜನರ ಭೇಟಿಯು ನಿಮಗೆ ಹೊಸ ದಾರಿಯನ್ನು ಮಾಡಿಕೊಟ್ಟೀತು. ನಿಮ್ಮ ಮಾತು ಇತರಿಗೆ ಹಗುರವಾಗಿ‌ ಅನ್ನಿಸುವುದು. ನಿಮ್ಮ ಗಾಯವನ್ನು ನಿಷ್ಕಾಳಜಿ ಮಾಡಿದ್ದರ ಫಲವು ಇಂದು ಗೊತ್ತಾಗುವುದು. ಖಾಸಗಿತನದ ಸಂಸ್ಥೆಯ ಮಾಲಿಕರಾಗುವ ಆಹ್ವಾನ ಬರಲಿದೆ.

ತುಲಾ ರಾಶಿ: ನೀವು ಸೋತರೂ ನಿಮ್ಮ ಮಾನವೀಯತೆ ಗೆಲ್ಲುವುದು. ಇಂದು ನಿಮ್ಮೊಳಗೆ ಅತಿಯಾದ ಗೊಂದಲ ಇರುವುದು ಇತರರಿಗೂ ಗೊತ್ತಾಗುವುದು. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ನಿಮ್ಮ ಸಮಸ್ಯೆಗಳನ್ನು ಆಪ್ತರ ಜೊತೆ ಹಂಚಿಕೊಳ್ಳುವುದು ಉತ್ತಮ. ಇಂದು ಕುಟುಂಬದ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ಇಷ್ಟವಿಲ್ಲದಿದ್ದರೂ ಸಂಗಾತಿಯ ಮಾತನ್ನು ಅನುಸರಿಸಿ. ಪ್ರೀತಿಯಾಗಲಿ ಅವರಿಗೂ. ಮಕ್ಕಳನ್ನು ವಿದ್ಯಾಭಾಸಕ್ಕೆ ನೀವು ಪ್ರೇರೇಪಿಸುವಿರಿ. ಹಳೆಯ ವಸ್ತುಗಳನ್ನು ಕೊಟ್ಟು ಖಾಲಿ ಮಾಡುವಿರಿ. ನಿಮ್ಮ ಲಾಭಾಂಶವನ್ನು ದಾನ ಮಾಡುವಿರಿ. ನಿಮ್ಮ ಒಳಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ಹಗುರಾಗಿ ಕಾಣಬಹುದು. ನಿಮ್ಮ ಸಣ್ಣ ವಿಷಯಗಳೂ ಬೇಕಾದಷ್ಟು ಪ್ರಯೋಜನಕಾರಿ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ತಪ್ಪಿದ ಯೋಚನೆಯಿಂದ ನೀವು ಸರಿಯಾಗಬೆರಕಾಗುವುದು. ನಿಮಗಿರುವ ಚಾಂಚಲ್ಯದಿಂದ ನಕಾರಾತ್ಮಕ ಯೋಚನೇಗಳೇ ಬರುವುದು.

ವೃಶ್ಚಿಕ ರಾಶಿ: ಭವಿಷ್ಯಕ್ಕಿರಲಿ ಎಂದುಕೊಂಡಿದ್ದ ಹಣವನ್ನು ಬೇಗ ತೆಗೆದು ಬೇಸರವಾಗವುದು. ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆದು ನೋವನ್ನು ಹಂಚಿಕೊಳ್ಳುವರು. ಅಲ್ಪ ಆದಾಯದ ಉದ್ಯೋಗವು ನಿಮಗೆ ಬಲ ನೀಡುವುದು. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ಸಾರ್ವಜನಿಕವಾಗಿ ನೀವು ಹೆಚ್ಚು ಪ್ರಭಾವ ಉಳ್ಳವರಾಗಿದ್ದು ನಿಮಗೆ ಗೌರವವೂ ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲೆ ಒತ್ತಡ ಕೊಡುವ ಪ್ರಯತ್ನ ಮಾಡಬಹುದು. ಹೊಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ. ತೊಂದರೆಗೆ ಸಿಕ್ಕಿಕೊಳ್ಳಲು ನೀವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು.

ಧನು ರಾಶಿ: ನಿಮ್ಮ ಕನಸನ್ನು ಮಕ್ಕಳಿಗೆ ದಾಟಿಸುವಿರಿ. ತುಂಬ ವಿಳಂಬವಾದ ಕಾರಣ ಯೋಜನೆ ಸಫಲವಾಗದು. ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ಇದನ್ನು ತಡೆಯುವವರ ಮೇಲೆ ಸಿಟ್ಟಾಗುವಿರಿ. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ಇಂದು ಪರರ ವಿಚಾರದಲ್ಲಿ ಹೆಚ್ಚು ಮನಸ್ಸು ಇರಲಿದೆ. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸಮಯಾಭಾವದಿಂದ ನೀವು ಒದ್ದಾಡುವ ಸಾಧ್ಯತೆ ಇದೆ. ನಿಮಗೆ ಸಮೀಪವಾಗುವವರ ಹಿನ್ನಲೆಯನ್ನು ಗೌಪ್ಯವಾಗಿ ತಿಳಿಯುವಿರಿ. ಯಾವುದನ್ನೂ ಇಂದು ನಿಮ್ಮಿಂದ ಮುಚ್ಚಿಡಲಾಗದು. ಸಂಗಾತಿಯ ಮುನಿಸನ್ನು ನೀವು ಸಮಾಧಾನ ಮಾಡುವಿರಿ. ಮಾತಿನ‌ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸುವ ಸಂಭವವೂ ಇದೆ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನದಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು.

ಮಕರ ರಾಶಿ: ಸಣ್ಣ ಲಾಭವೂ ನಿಮಗೆ ದೀರ್ಘಕಾಲದ ಭರವಸೆಯನ್ನು ನೀಡುವುದು. ಇಂದು ನೀವು ಮಾಡುವ ಪ್ರಯಾಣದಿಂದ ಸುಖವಿರದು. ಹತಾಶೆಯಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು.‌ ಅಲಂಕಾರಕಕ್ಕೆ ಹೆಚ್ಚು ಸಮಯ ಬೇಕಾಗುವುದು. ಆಕರ್ಷಣೆಯಿಂದ ಕೆಲವು ಲಾಭ ಜೀವನಕ್ಕೆ ಆಗುವುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ತಾಯಿಯ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಿಗೆ ಪ್ರಶಂಸೆಯು ಸಿಗಬಹುದು. ನಿಮಗೆ ಮಾರ್ಗದರ್ಶನದ ಅಗತ್ಯವು ಹೆಚ್ಚಿದೆ. ಸರಳವಾಗಿ ಜೀವನವನ್ನು ನಡೆಸಲು ಇಂದು ಇಷ್ಟಪಡುವಿರಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.

ಕುಂಭ ರಾಶಿ: ನಿವೃತ್ತಿಯನ್ನು ಪಡೆದವರಿಗೆ ದಿನವು ದೀರ್ಘವಾಗಬಹುದು. ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ಕಾರ್ಯದಲ್ಲಿ ವಿಳಂಬಗತಿ ಇರುವುದು. ಧಾರ್ಮಿಕ ನಂಬಿಕೆಯನ್ನು ಬದಲಿಸುವರು. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಸಂಬಂಧಗಳಲ್ಲಿ ಹದವು ತಪ್ಪಬಹುದು. ಸಂಗಾತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಬಯಸುವಿರಿ. ಆಪ್ತವಲಯನ್ನು ಕಟ್ಟಿಕೊಳ್ಳುವುದು ಸುಲಭದ್ದಲ್ಲ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು.

ಮೀನ ರಾಶಿ: ಮನೋರಂಜನೆಯ ಕ್ಷೇತ್ರದಲ್ಲಿ ಕಾರ್ಯ ಮಾಡುವ ಅವಕಾಶ ಸಿಗಲಿದೆ. ನಿಮ್ಮ ಜೀವನಕ್ಕೆ ಇಂದು ಯಾರಾದರೂ ಆಸರೆ ಬೇಕೆನಿಸಬಹುದು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ವಿವಾದವಾಗುವುದು. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಆದರ್ಶವನ್ನು ಹೇಳಿ ಪ್ರಯೋಜನವಾಗದು, ಮಾಡಿದರೆ ಹೆಚ್ಚು ಪರಿಣಾಮ ಬೀರುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ಮಾತು ಇತರರಿಗೆ ಇಷ್ಟವಾಗದೇ ಇದ್ದೀತು. ಒಳ್ಳೆಯದರ ನಿರೀಕ್ಷೆಯಲ್ಲಿ ನೀವು ಇದ್ದು, ದಿನಾಂತ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಇಷ್ಟಪಡುವಿರಿ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ