
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ವಾರ: ಗುರು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ – 06 : 11 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:15 – 15:51, ಯಮಘಂಡ ಕಾಲ 06:11 – 07:48, ಗುಳಿಕ ಕಾಲ 09:25 – 11:01
ಮೇಷ ರಾಶಿ: ದಟ್ಟವಾದ ಜನಜಂಗುಳಿ ಪ್ರದೇಶದಲ್ಲಿ ಓಡಾಟ ಮಾಡುವಿರಿ. ಏಕಕಾಲಕ್ಕೆ ಒತ್ತಡವಾದಂತೆ ಅನ್ನಿಸುವುದು. ಇಂದು ನಿಮ್ಮಲ್ಲಿ ಹೋರಾಟದ ಸ್ವಭಾವವು ಎದ್ದು ತೋರುವುದು. ಎಲ್ಲದಕ್ಕೂ ವಿರೋಧ ಮಾಡುವಿರಿ. ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು. ನಿಮ್ಮ ಆಡಳಿತ ವೈಖರಿ ಬೇರೆ ರೂಪವನ್ನು ಪಡೆಯಲಿದೆ. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಎಷ್ಟೋ ಕಾಲದ ಅನಂತರ ನಿಮ್ಮ ನಡುವೆ ಆಪ್ತತೆ ಇರಲಿದೆ. ಖರ್ಚಿನ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅವಶ್ಯಕ. ಲಾಭವಿಲ್ಲದೇ ಇಂದು ನೀವು ಯಾವ ಕೆಲಸವನ್ನೂ ಮಾಡಲಾರಿರಿ. ನಿಮಗೆ ಪ್ರಶಂಸೆಯು ಸಿಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡುವರು. ನೀವೇ ಸಂಪಾದಿಸಿದ ಸಂಪತ್ತು ನಿನ್ನ ಬಳಕೆಗೆ ಸಿಗದು. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲವು ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರವು ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಂಡು ಲಾಭ ಪಡಯುವಿರಿ.
ವೃಷಭ ರಾಶಿ: ದಾಂಪತ್ಯದ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಒಬ್ಬರಾದರೂ ಮೌನವಾಗಿರಬೇಕು. ನೀವು ಅದೃಷ್ಟವನ್ನು ನಿರೀಕ್ಷಿತ್ತ ಸಮಯವನ್ನು ಕಳೆಯುವಿರಿ. ಯಾರನ್ನಾದರೂ ಮೆಚ್ಚಿಸಲು ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸುವಿರಿ. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ನಿರುದ್ಯೋಗದಿಂದ ನಿಮಗೆ ಬಹಳ ಬೇಸರವಾದೀತು. ಎಲ್ಲರೂ ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಇಷ್ಟವಿಲ್ಲದ ಕಡೆ ಹೋಗಬೇಕಾಗುವುದು. ಹಣದ ಹರಿವೂ ಸದ್ಯಕ್ಕೆ ಅಷ್ಟಕ್ಕೆಷ್ಟೇ ಇರಲಿದೆ. ಸಣ್ಣ ವಾಗ್ವಾದವು ಅನ್ಯರ ಜೊತೆ ನಡೆಯಲಿದೆ. ಮಾತಿನ ಮೇಲೆ ಹಿಡಿತವಿರಲಿ. ಯಾರನ್ನೋ ಮಾತನಾಡಿಸುವ ಬದಲು ನಿಮ್ಮನ್ನು ಮಾತನಾಡಿಸಬಹುದು. ಹಣದ ಹರಿವಿನಲ್ಲಿ ವ್ಯತ್ಯಾಸವಾಗಲಿದೆ. ನಿಮ್ಮ ಜವಾಬ್ದಾರಿಯ ಕೆಲಸವನ್ನು ಬೇಗ ಮುಗಿಸಿ ಇನ್ನೊಬ್ಬರಿಗೆ ಸಹಾಯ ಮಾಡಲಿರುವಿರಿ. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ಉಪಕಾರದ ಸ್ಮರಣೆಯಿಂದ ಸಹಕಾರ ನೀಡುವಿರಿ.
ಮಿಥುನ ರಾಶಿ: ಕಲ್ಲಿಗೆ ಸಂಬಂಧಿಸಿದ ಕೆಲಸಕ್ಕೆ ಹೆಚ್ಚಿನ ಆದ್ಯತೆ ಹಾಗೂ ಆದಾಯ ಸಿಗಲಿದೆ. ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರ ಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ಪ್ರಭಾವಿಗಳ ಭೇಟಿ ಅನಿರೀಕ್ಷಿತವಾಗಿ ಆಗುವುದು. ಯಂತ್ರೋಪಕರಣಗಳ ಮೇಲೆ ಅಧಿಕ ಮೋಹವಿರಲಿದೆ. ಎಲ್ಲವನ್ನೂ ನೀವೊಬ್ಬರೇ ಅನಿಭವಿಸಬೇಕು ಎಂಬ ಯೋಚನೆ ಇರಲಿದೆ. ಇಲ್ಲವಾದರೆ ಇತರರ ತೀರ್ಮಾನಕ್ಕೆ ಶರಣಾಗಬೇಕಾದೀತು. ವಾಹನಸಂಚಾರದಲ್ಲಿ ಕಿರಿಕಿರಿ ಇರುವುದು. ಕುಟುಂಬದ ಕೆಲಸದಲ್ಲಿ ಭಾಗವಹಿಸುವಿರಿ. ಕೆಲಸ ನಿಮ್ಮದಾದರೂ ಅದರ ಯಶಸ್ಸು ಪರರಿಗೆ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಮಾಡಬಹುದು ಎಂದು ತೋರಿಸುವಿರಿ. ಯೋಗ್ಯರ ಸಹವಾಸವನ್ನು ಮಾಡಿ. ಭೂಮಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ತಾಳ್ಮೆಯ ಅಗತ್ಯತೆಯ ಮನವರಿಕೆ ಅಗತ್ಯ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬಹಳ ಸಂಕಟವಾಗಲಿದೆ. ನಿಮಗೆ ಹೂಡಿಕೆ ಮಾಡಲು ಯಾರಿಂದಲಾದರೂ ಒತ್ತಡವು ಬರಬಹುದು.
ಕರ್ಕಾಟಕ ರಾಶಿ: ಮಾನವ ಸಂಬಂಧಕ್ಕಿಂತ ಪ್ರಾಣಿ ಪಕ್ಷಿಗಳ ಜೊತೆ ಬಾಂಧವ್ಯ ಬೆಳೆಯುವುದು. ಇಂದು ವಿದ್ಯಾಭ್ಯಾದಲ್ಲಿ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಣೆ ಕಾಣಲಿದೆ. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹವಣಿಸುವಿರಿ. ಸಂಗಾತಿಯ ನಡವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದರ ಪ್ರಭಾವವು ಕಛೇರಿಯ ಕೆಲಸದಲ್ಲಿಯೂ ಕಾಣಬಹುದು. ದುರಭ್ಯಾಸವನ್ನು ಬಿಡುವ ಹಂಬಲ ಇರುವುದು. ಪಾಲುದಾರರ ಬಗ್ಗೆ ಒಳ್ಳೆಯ ಅಭಿಪ್ರಾಯ ನಿಮಗಿರದು. ಅನ್ಯರ ಸಂಬಂಧವು ನಿಮಗೆ ಅಪರಕೀರ್ತಿಯನ್ನು ತರಬಹುದು. ನಕಾರಾತ್ಮಕ ಆಲೋಚನೆಯ ನಿಮ್ಮನ್ನು ಹಿಮ್ಮುಖ ಮಾಡಬಹುದು. ಹಿರಿಯರ ವಿಚಾರದಲ್ಲಿ ಅನಾದರ ತೋರಿದಂತೆ ಕಾಣಿಸುವುದು. ಕುಟುಂಬವು ನಿಮ್ಮ ಜೊತೆಗಿದೆ ಎಂಬ ಧೈರ್ಯವಿರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ.
ಸಿಂಹ ರಾಶಿ: ಅರೆಕಾಲಿಕ ಸಣ್ಣ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಇಂದು ನೀವು ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಮಧ್ಯವರ್ತಿಗಳ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಮುಂದಿನ ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ. ಬಣ್ಣದ ಮಾತುಗಳಿಗೆ ಬಲಿಯಾಗುವುದು ಬೇಡ. ರಾಜಕಾರಣದಿಂದ ಒಳ್ಳೆಯ ಭವಿಷ್ಯದ ಕನಸು ಕಾಣುವಿರಿ. ಯಾರ ಮೇಲಾದರೂ ಅನುಮಾನವಿದ್ದರೆ ಅದನ್ನು ಕೂಡಲೇ ಹೇಳುವುದು ಬೇಡ. ಹೊಸ ಮನೆಯನ್ನು ಕಟ್ಟುವ ಯೋಚನೆಯು ಶುರುವಾಗಲಿದೆ. ಏಕಾಂತವನ್ನು ಬಯಸಿ ದೂರ ಎಲ್ಲಿಯಾದರೂ ಹೋಗುವಿರಿ. ನಿಮ್ಮ ಯೋಚನೆಗಳು ಆದಷ್ಟು ಸರಿಯಾದ ಮಾರ್ಗದಲ್ಲಿ ಇರಲಿ. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು.
ಕನ್ಯಾ ರಾಶಿ: ಅದೃಷ್ಟವು ಫಲ ನೀಡುವ ಸೂಚನೆ ಇರಲಿದೆ. ಇಂದು ನಿಮ್ಮ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯದಿಂದ ದ್ವೇಷವು ಉಂಟಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟೂ ಬೇಸರವನ್ನೂ ಉಂಟುಮಾಡಬಹುದು. ಕೈಬಿಟ್ಟ ವಿಚಾರವು ಪುನಃ ಮುಖ್ಯಸ್ಥಾನಕ್ಕೆ ಬರಲಿದೆ. ಸತ್ಯವನ್ನು ಹೇಳುವ ಮನಸ್ಸಿದ್ದರೂ ನಿಮಗೆ ಕೆಲವು ತೊಂದರೆ ಎದುರಾಗುವುದರಿಂದ ಅದನ್ನು ಗೌಪ್ಯವಾಗಿ ಇಡುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲು ಹೆಚ್ಚು ಆಸಕ್ತಿ ತೋರಿಸುವಿರಿ. ಇತರರ ಸ್ವಭಾವವನ್ನು ನೀವು ಆಡಿಕೊಳ್ಳುವುದು ಬೇಡ. ಬಂಧುಗಳ ಸಹವಾಸದಿಂದ ಬದಲಾಗುವ ಸಾಧ್ಯತೆ ಇದೆ. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಬೇಡದ ವಿಚಾರಗಳ ಜೊತೆಗಾರರು ಹೆಚ್ಚು ಗಮನ ಕೊಡುವಂತೆ ಮಾಡುವರು.