AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೆ ಹೊಸ ಸುವರ್ಣ ಅವಕಾಶಗಳು ಸಿಗುತ್ತವೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ ಮಂಗಳವಾರ ಪ್ರೇಮ ಪ್ರಕಟ, ಸಂಗಾತಿಯ ಜೊತೆ ಕಾಲ ಹರಣ, ಅನೇಕ ವಿಚಾರಗಳ ವಿಸ್ಮರಣೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿಮಗೆ ಹೊಸ ಸುವರ್ಣ ಅವಕಾಶಗಳು ಸಿಗುತ್ತವೆ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jun 17, 2025 | 1:44 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ – 06 : 05 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:48 – 17:25, ಯಮಘಂಡ ಕಾಲ 09:19 – 10:57, ಗುಳಿಕ ಕಾಲ 12:34 – 14:11

ಮೇಷ ರಾಶಿ: ಋಣ ಸಂದಾಯಕ್ಕೆ ಇಂದು ಸರಿಯಾದ ಸಮಯ. ಇಂದು ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಅದನ್ನು ಕೊಡಿ. ಸಂತೋಷದಿಂದ ಇರುತ್ತಾರೆ. ಬೆಚ್ಚಗಿನ ವಾತಾವರಣವು ನಿಮಗೆ ಇಂದು ಹಿತವಾಗಲಿದೆ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರೇಮ ಜೀವನವು ಉತ್ತಮವಾಗಿರುತ್ತದೆ. ಅತಿಯಾದ ನೋವು ಕೊಡುವುದನ್ನು ಇಟ್ಟಕೊಳ್ಳಲಾರಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಸರಿಯಾದ ಕೆಲಸವನ್ನು ಸರಿ ಇಲ್ಲ‌ ಎಂದು ಹೇಳಿ ನಿಮ್ಮನ್ನು ಕುಗ್ಗಿಸಬಹುದು. ಇದಾವುದಕ್ಕೂ ಬಗ್ಗುವ ಅವಶ್ಯಕತೆ ಇಲ್ಲ. ಅಳಿಸಲಾಗದ ಪ್ರೇಮವನ್ನು ಯಾವುದಾದರೂ ರೀತಿಯಲ್ಲಿ ಹೊರಹಾಕುವಿರಿ. ನಿಮ್ಮ ಮಾರ್ಗದಲ್ಲಿ ನೀವಿರಿ. ಬರಹಗಾರರಿಗೆ ತಮ್ಮ ಬರಹವನ್ನು ವಿರೋಧಿಸುವವರ ಮಧ್ಯದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಸಂದರ್ಭವಿದೆ. ನ್ಯಾಯಲಯದ ವ್ಯವಹಾರಗಳಲ್ಲಿ ನಿಮಗೆ ಶುಭಸಮಾಚಾರ ಇರುತ್ತದೆ. ನಿಮ್ಮೆದುರು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ.

ವೃಷಭ ರಾಶಿ: ಅತಿಯಾದ ವಿವೇಕವೂ ನಿಮ್ಮ ಹಾದಿ ತಪ್ಪಿಸಬಹುದು. ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆ ಹೇರುವುದು ಬೇಡ. ಬಂಧುಗಳು‌ ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಪ್ರೇಮ ಜೀವನದಲ್ಲಿ ಹೊಸ ರೋಮಾಂಚಕಾರಿ ತಿರುವುಗಳು ಬರುತ್ತವೆ. ಕಳೆಯದೇ ಇಂದು ಪಡೆದುಕೊಳ್ಳುವ ಆಸೆ ಬೇಡ. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಬಲವಾಗಿರುತ್ತದೆ. ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ತಿಳಿವಳಿಕೆ ಇಲ್ಲದವರಂತೆ ವರ್ತಿಸುವುದು ಬೇಡ. ನೂತನ ವಸ್ತ್ರವನ್ನು ಖರೀದಿ ಮಾಡಲಿದ್ದೀರಿ. ಕೌಟುಂಬಿಕವಾದ ಕೆಲವು ಜವಾಬ್ದಾರಿಗಳನ್ನು ಮಕ್ಕಳಿಗೆ ಕೊಟ್ಟು ಆರಾಮಾಗಿ ಇರುವಿರಿ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ಆಗುವ ಸಾಧ್ಯತೆಗಳಿವೆ. ಧನದ ಆದಾಯವು ನಿರೀಕ್ಷೆಯನ್ನು ಪೂರ್ಣವಾಗಿ ತಲುಪದು. ಪಾಪ ಪುಣ್ಯದ ಲೆಕ್ಕಾಚಾರವನ್ನು ಮಾಡುವಿರಿ. ಸಿದ್ಧ ಉಡುಪು ತಯಾರಕರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಮಿಥುನ ರಾಶಿ: ಕಲಿಕೆಯ ಹಿಂಜರಿಕೆಯನ್ನು ಪಾಲಕರು ಸಹಿಸಲಾರರು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾತುವಿಹಾರಕ್ಕೆಂದು ಹೋಗುವಿರಿ. ಮನೆಗೆ ಅತಿಥಿಗಳ ಆಗಮನವು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ವೃತ್ತಿಪರ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ನಿಮಗೆ ಇಂದು ಯಾವುದೇ ವಿಚಾರ ಅತಿ ಎಂದು ಕಂಡರೆ ಅದನ್ನು ಬಿಡಿ.‌ ಪರಸ್ಥಳದ ವಾಸದಿಂದ ನೆಮ್ಮದಿ. ಬದಲಾಯಿಸಿ ಮತ್ತೊಂದರ ಕಡೆ ಗಮನಹರಿಸಿ. ಕ್ರೀಡಾಪಟುಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಪ್ರೀತಿ ಪ್ರೇಮದ ಸೆಳೆತಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿ ವ್ಯತ್ಯಾಸವಿಲ್ಲ. ಪ್ರಯಾಣವು ಅನಿವಾರ್ಯವಾದರೂ ಅದರಿಂದ ಶುಭ ಸುದ್ದಿಯು ನಿಮಗೆ ಇರುವುದು.

ಕರ್ಕಾಟಕ ರಾಶಿ: ಹೋಗುವವರನ್ನು ತಡೆದು ನಿಲ್ಲಿಸಬೇಡಿ. ನೀವು ವಿದ್ಯಾಭ್ಯಾಸಕ್ಕಾಗಿ ಉತ್ತಮ‌ವಾದ ವಿದ್ಯಾಕೇಂದ್ರವನ್ನು ಹುಡುಕುವಿರಿ. ಸಾಮಾಜಿಕ ಕಾರ್ಯದ ಬಗ್ಗೆ ಆಸಕ್ತಿ ಬರುವುದು. ಕಹಿ ಅನುಭವ, ಕಹಿ‌ ಮಾತು ಇವುಗಳನ್ನು ಸಹಿಸಲಾಗದು. ವಿದ್ಯುತ್ ಉಪಕರಣಗಳಿಂದ ಹಣವು ಖರ್ಚಾಗಬಹುದು. ಉದ್ಯಮಿಗಳು ಹೊಸ ಸ್ಥಳದಲ್ಲಿ ವ್ಯವಹಾರ ಪ್ರಾರಂಭಿಸಲು ಹಣವನ್ನು ಪಡೆಯಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವುದು ಸಾಧ್ಯ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಶ್ರಮಕ್ಕೆ ಯೋಗ್ಯ ಫಲಿತಾಂಶ ಸಿಗದೇ ಇರಬಹುದು. ನಿಮ್ಮ ಚಾಣಾಕ್ಷದ ನಿರ್ಧಾರಗಳು ನಿಮ್ಮನ್ನು ಗುಂಪಿನಲ್ಲಿ ತೂಕದ ವ್ಯಕ್ತಿಯನ್ನಾಗಿಸುತ್ತದೆ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು.

ಸಿಂಹ ರಾಶಿ: ಕೂಡುವುದು ದುಃಖವನ್ನು ಕಳೆಯಲೆಂದು. ದುಃಖವನ್ನು ತಂದುಕೊಳ್ಳುವುದು ಬೇಡ.‌ ನೀವು ಅಧಿಕಾರವನ್ನು ಅನ್ಯ ಕಾರಣಕ್ಕೆ ಬಳಸಿಕೊಂಡು ಸಿಕ್ಕಿಬೀಳುವಿರಿ. ಪ್ರಭಾವಿಗಳ ಸಹಾಯವನ್ನು ಉದ್ಯೋಗಕ್ಕೆ ಬಳಸಿಕೊಳ್ಳುವಿರಿ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗಲಿದೆ. ಗುರಿಗಳನ್ನು ಸಾಧಿಸಲು ನೀವು ಪ್ರೇರೇಪಿಸಲ್ಪಡುತ್ತೀರಿ. ಆಸ್ತಿಯನ್ನು ಖರೀದಿಸಲು ಇಂದು ಉತ್ತಮ ದಿನವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕೃಷಿ ಭೂಮಿ ವಿಸ್ತರಣೆಯನ್ನು ಮಾಡುವ ಕಾರ್ಯಕ್ಕೆ ಈಗ ಮುಂದಾಗುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿದೆ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.

ಕನ್ಯಾ ರಾಶಿ: ಪಕ್ವತೆಯಿಂದ ವ್ಯವಹರಿಸಿ. ಮಿತಿ ಮೀರಿದ ಕಾರ್ಯಗಳಿಂದ ದೇಹ ಮನಸ್ಸಿಗೆ ಹೆಚ್ಚು ಆಯಾಸ. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ‌. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ಕಾಲಕ್ಷೇಪಕ್ಕೆ ಯಾವುದಾದರೂ ಉತ್ತಮವರ ಸಂಗ ಸಿಗಲಿದೆ. ನಿಮಗೆ ಹೊಸ ಸುವರ್ಣ ಅವಕಾಶಗಳು ಸಿಗುತ್ತವೆ. ನಿಮ್ಮ ಕುಟುಂಬದಲ್ಲಿ ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ಉಳಿಯುತ್ತೀರಿ. ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ. ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಉದ್ವೇಗಕ್ಕೆ ಸಿಲುಕುವಿರಿ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಬೇಸರಿಸದೇ ನೀವೇ ಮಾತನಾಡಿಸಿ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್