Horoscope Today – ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು, ಯಾರಿಗೆ ಕೆಡುಕು?

| Updated By: Skanda

Updated on: Aug 29, 2021 | 6:35 AM

ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಭಾನುವಾರ, ಆಗಸ್ಟ್ 29, 2021 ಭವಿಷ್ಯ.

Horoscope Today - ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು, ಯಾರಿಗೆ ಕೆಡುಕು?
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಭಾನುವಾರ, ಆಗಸ್ಟ್ 29, 2021. ಕೃತ್ತಿಕೆ ನಕ್ಷತ್ರ, ರಾಹುಕಾಲ: ಇಂದು ಸಂಜೆ 4:58 ರಿಂದ ಇಂದು ರಾತ್ರಿ 6:31 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.01. ಸೂರ್ಯಾಸ್ತ: ಸಂಜೆ 6.32.

ತಾ.29-08-2021 ರ ಭಾನುವಾರದ ರಾಶಿಭವಿಷ್ಯ.
ಮೇಷ: ವ್ಯಾಪಾರದಲ್ಲಿ ಪ್ರಗತಿ ಇರುವದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭ ಸಂಖ್ಯೆ: 8

ವೃಷಭ: ಉದರಬೇನೆ ಬರುವ ಸಾಧ್ಯತೆ ಇದೆ ಆರೋಗ್ಯದ ಕಾಳಜಿವಹಿಸಿ. ಬಂಧುಮಿತ್ರರ ಭೇಟಿ, ಮನೆಯಲ್ಲಿ ಮಂಗಲಕಾರ್ಯ ಜರುಗುವ ಯೋಗವಿದೆ. ಕೋರ್ಟನಲ್ಲಿರುವ ವ್ಯಾಜ್ಯಗಳು ಕೊನೆಗೊಳ್ಳುವವು.ಶುಭ ಸಂಖ್ಯೆ: 1

ಮಿಥುನ: ದೂರಾಲೋಚನೆಯಿಂದ ಕಾರ್ಯದಲ್ಲಿ ಯಶಸ್ಸು. ಆಸ್ತಿ ಖರೀದಿ ಸಾಧ್ಯ.ವೈವಾಹಿಕ ಚಿಂತೆ ಇರುವದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಯೋಗವಿದೆ.ಶುಭ ಸಂಖ್ಯೆ: 9

ಕರ್ಕ: ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದೇ ಮಾನಸಿಕ ಅಶಾಂತಿ ಕಂಡುಬರುವದು. ವ್ಯವಹಾರಗಳಲ್ಲಿ ಹಾನಿಯಾಗುವ ಭಯ ಇರುವದು. ಪರಿಣಿತರ ಅಥವಾ ಹಿರಿಯರ ಸಲಹೆಯಂತೆ ಮುಂದುವರೆಯಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಶುಭ ಸಂಖ್ಯೆ:  2

ಸಿಂಹ: ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ.ಶುಭ ಸಂಖ್ಯೆ:  7

ಕನ್ಯಾ: ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ.ವ್ಯಾಪಾರವೃದ್ಧಿಯಾಗುವದು. ಆರ್ಥಿಕ ಸಂಕಷ್ಟ ದೂರಾಗುವದು. ಶುಭ ಸಂಖ್ಯೆ: 3

ತುಲಾ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 6

ವೃಶ್ಚಿಕ: ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ. ಶುಭ ಸಂಖ್ಯೆ: 4

ಧನು: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವದು. ಶುಭ ಸಂಖ್ಯೆ: 9

ಮಕರ: ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ವಿವಿಧ ಮೂಲಗಳಿಂದ ಸಹಾಯ ದೊರೆಯುವದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ:  3

ಕುಂಭ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ:  6

ಮೀನ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ,ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು.ಸಭಾಸಮಾಜ ಕೀರ್ತಿ ಲಭಿಸುವುದು. ಶುಭ ಸಂಖ್ಯೆ: 2

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937