AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today- ದಿನ ಭವಿಷ್ಯ; ಮಕರ ರಾಶಿಯ ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ

Horoscope ಡಿಸೆಂಬರ್ 31, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಮಕರ ರಾಶಿಯ ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ
ದಿನ ಭವಿಷ್ಯ
TV9 Web
| Edited By: |

Updated on: Dec 31, 2021 | 6:00 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ದ್ವಾದಶಿ ತಿಥಿ, ಶುಕ್ರವಾರ, ಡಿಸೆಂಬರ್ 31, 2021. ಅನೂರಾಧ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.54 ರಿಂದ ಇಂದು ಬೆಳಿಗ್ಗೆ 12.17ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.45. ಸೂರ್ಯಾಸ್ತ: ಸಂಜೆ 5.51

ತಾ.31-12-2021 ರ ಶುಕ್ರವಾರದ ರಾಶಿಭವಿಷ್ಯ. ಮೇಷ: ಮನೆಯಲ್ಲಿ ವಿವಾಹ ಪ್ರಸ್ತಾಪಗಳು ನಡೆಯಲಿವೆ. ಆರ್ಥಿಕವಾಗಿ ಸಾಕಷ್ಟು ಧನಾಗಮನವಿದ್ದು, ಕಾರ್ಯ ಸಾಧನೆಯಾಗಲಿದೆ. ನೂತನ ದಂಪತಿಗಳ ಮಧ್ಯೆ ವಿರಸ ಮೂಡಲಿದೆ. ವಿದೇಶ ಯಾನದ ಭಾಗ್ಯ ಒದಗಿಬರಲಿದೆ. ಶುಭ ಸಂಖ್ಯೆ: 2

ವೃಷಭ: ಯಾವುದೋ ಮಾನಸಿಕ ಚಿಂತೆ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಸಂಗಾತಿಯ ಅಸಮಾಧಾನಕ್ಕೆ ಕಾರಣರಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಶುಭ ಸಂಖ್ಯೆ: 7

ಮಿಥುನ: ವ್ಯಾಪಾರಿ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ಹಾಗಿದ್ದರೂ ಆದಾಯಕ್ಕೆ ಕೊರತೆಯಾಗದು. ಕೆಳ ಹಂತದ ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಕಿರಿ ಕಿರಿ. ಹಿರಿಯರು ತೀರ್ಥ ಯಾತ್ರೆಗೆ ತೆರಳಲಿದ್ದಾರೆ. ಶುಭ ಸಂಖ್ಯೆ: 5

ಕಟಕ: ವಿವಾಹ ಸಂಬಂಧಿ ಅಡೆತಡೆಗಳಿಗೆ ಪರಿಹಾರ ಕಾಣಲು ಕುಲದೇವರ ಪ್ರಾರ್ಥನೆ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಅಡೆತಡೆಗಳಿದ್ದರೂ ಅಂತಿಮವಾಗಿ ದೈವಾನುಕೂಲದಿಂದ ಕಾರ್ಯ ಸಾಧನೆಯಾಗಲಿದೆ. ಶುಭ ಸಂಖ್ಯೆ: 2

ಸಿಂಹ: ವ್ಯಾಪಾರಿ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ಹಾಗಿದ್ದರೂ ಆದಾಯಕ್ಕೆ ಕೊರತೆಯಾಗದು. ಕೆಳ ಹಂತದ ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಕಿರಿ ಕಿರಿ. ಹಿರಿಯರು ತೀರ್ಥ ಯಾತ್ರೆಗೆ ತೆರಳಲಿದ್ದಾರೆ. ಶುಭ ಸಂಖ್ಯೆ: 9

ಕನ್ಯಾ: ಯಾವುದೋ ಮಾನಸಿಕ ಚಿಂತೆ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಸಂಗಾತಿಯ ಅಸಮಾಧಾನಕ್ಕೆ ಕಾರಣರಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಶುಭ ಸಂಖ್ಯೆ: 3

ತುಲಾ: ಮನೆಯಲ್ಲಿ ವಿವಾಹ ಪ್ರಸ್ತಾಪಗಳು ನಡೆಯಲಿವೆ. ಆರ್ಥಿಕವಾಗಿ ಸಾಕಷ್ಟು ಧನಾಗಮನವಿದ್ದು, ಕಾರ್ಯ ಸಾಧನೆಯಾಗಲಿದೆ. ನೂತನ ದಂಪತಿಗಳ ಮಧ್ಯೆ ವಿರಸ ಮೂಡಲಿದೆ. ವಿದೇಶ ಯಾನದ ಭಾಗ್ಯ ಒದಗಿಬರಲಿದೆ. ಶುಭ ಸಂಖ್ಯೆ: 5

ವೃಶ್ಚಿಕ: ಸಹಕಾರಿ ಕ್ಷೇತ್ರದಲ್ಲಿರುವವರಿಗೆ ಲಾಭ. ಮನೆ ರಿಪೇರಿ, ಗೃಹ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಪ್ರೀತ ಪಾತ್ರರೊಂದಿಗೆ ಸುಂದರ ಸಮಯ ಕಳೆಯುವಿರಿ. ಆದರೆ ಇಲ್ಲದ ಅಪವಾದ ಕೇಳಿಬಂದೀತು. ಶುಭ ಸಂಖ್ಯೆ: 4

ಧನು: ವಾಹನ ಖರೀದಿಗೆ ಮುಂದಾಗುವ ಮೊದಲು ಪರಾಮರ್ಶಿಸುವುದು ಒಳಿತು. ಕೃಷಿಕರಿಗೆ ಮಳೆಗಾಗಿ ಪ್ರಾರ್ಥಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿ ಉಂಟಾಗುವುದು. ದಿನದಂತ್ಯಕ್ಕೆ ಶುಭ ಸುದ್ದಿ. ಶುಭ ಸಂಖ್ಯೆ: 8

ಮಕರ: ಅಂದುಕೊಂಡ ಕಾರ್ಯಗಳು ಅರ್ಧಕ್ಕೇ ನಿಂತು ಮನಸ್ಸಿಗೆ ಬೇಸರವೆನಿಸಲಿದೆ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರದಾಡಬೇಕಾದೀತು. ಶುಭ ಸಂಖ್ಯೆ: 2

ಕುಂಭ: ಪ್ರವಾಸ, ಮೋಜು ಮಸ್ತಿಗಾಗಿ ವಿಪರೀತ ಖರ್ಚು ಮಾಡುವಿರಿ. ಆದರೆ ಧನಾಗಮನದ ಬಗ್ಗೆ ಚಿಂತೆಯಾಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರು ಭೇಟಿಯಾಗಲಿದ್ದಾರೆ. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾಗಬಹುದು. ಶುಭ ಸಂಖ್ಯೆ: 3

ಮೀನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಮಾಡಿದ ತಪ್ಪಿಗೆ ನೀವು ಅವಮಾನ, ಬೈಗುಳ ಕೇಳಬೇಕಾಗಿ ಬರಬಹುದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾದೀತು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಶುಭ ಸಂಖ್ಯೆ: 8 ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ