Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು

| Updated By: ಆಯೇಷಾ ಬಾನು

Updated on: Jul 19, 2021 | 6:30 AM

Horoscope ಜುಲೈ 19, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ದಶಮಿ ತಿಥಿ, ಸೋಮವಾರ, ಜುಲೈ 19, 2021. ವಿಶಾಖ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 7.28 ರಿಂದ ಇಂದು ಬೆಳಿಗ್ಗೆ 9.05 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.51. ಸೂರ್ಯಾಸ್ತ: ಸಂಜೆ 6.53

ತಾ.19-07-2021 ರ ಸೋಮವಾರದ ರಾಶಿಭವಿಷ್ಯ,

ಮೇಷ: ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು. ಶಾಂತಿ, ನೆಮ್ಮದಿಯುಕ್ತ ಜೀವನ ಇರುವುದು. ನಡೆಯುತ್ತಿರುವ ದಾರಿ ಸರಿಯಾಗಿ ಇರುವುದರಿಂದ ಗುರಿ ಮುಟ್ಟುವುದು ನಿಶ್ಚಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 2

ವೃಷಭ: ಹೊಟ್ಟೆಕಿಚ್ಚು ಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ. ಶತ್ರುಗಳು ತಾವಾಗಿಯೇ ದೂರಸರಿಯುವರು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ. ಶುಭ ಸಂಖ್ಯೆ: 8

ಮಿಥುನ: ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವವು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 3

ಕಟಕ: ಸ್ವಪ್ರತಿಷ್ಟೆ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವುದು. ಹಳೆಯ ಮಿತ್ರರ ಒಡನಾಟ ಸಂತಸ ತರುವದು. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಇರುವುದು. ಶುಭ ಸಂಖ್ಯೆ: 7

ಸಿಂಹ: ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು. ಶುಭ ಸಂಖ್ಯೆ: 4

ಕನ್ಯಾ: ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವುದು. ಆರ್ಥಿಕ ಅಭಿವೃದ್ಧಿ ಕಂಡುಬರುವುದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವುದು. ಶತೃಗಳೂ ಸೌಮ್ಯರಾಗುವ ಕಾಲ ಇರುವುದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ. ಶುಭ ಸಂಖ್ಯೆ: 6

ತುಲಾ: ಅಪೇಕ್ಷಿತ ಸ್ಥಾನಮಾನಗಳು ದೊರೆಯುವವು. ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಭಂಗವಿಲ್ಲ. ಆದಾಯಕ್ಕಿಂತ ಅಧಿಕ ಖರ್ಚು ಇರುವುದು. ಶುಭ ಸಂಖ್ಯೆ: 5

ವೃಶ್ಚಿಕ: ಹೊಟ್ಟೆಕಿಚ್ಚಿನ ಜನರಿಂದ ತೊಂದರೆ ಆಗುವ ಸಾಧ್ಯತೆ ಇದೆ. ಅತಿಯಾಗಿ ಹೇಳಿಕೊಳ್ಳುವದು ಅಮಾಮಾನಕ್ಕೆ ಕಾರಣವಾಗದಂತೆ ವರ್ತಿಸಿರಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಇರುವುದು. ಕೈಗೊಂಡ ಕಾರ್ಯ ಯಶ ಕಾಣುವುದು. ಶುಭ ಸಂಖ್ಯೆ: 1

ಧನು: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು. ಶುಭ ಸಂಖ್ಯೆ: 9

ಮಕರ: ವ್ಯಾಪಾರದಲ್ಲಿ ಪ್ರಗತಿ ಇರುವುದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 2

ಕುಂಭ: ನಿರೀಕ್ಷಿತ ಸರ್ವಕಾರ್ಯಗಳು ನೆರವೆರುತ್ತದೆ. ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರಸುಖ ಸಂಭ್ರಮಗಳಿರುತ್ತದೆ. ಶುಭ ಕಾರ್ಯ ಪ್ರಯತ್ನ ಫಲಕೊಡುತ್ತದೆ. ಶುಭ ಸಂಖ್ಯೆ: 8

ಮೀನ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 3

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937