Weekly Horoscope ವಾರ ಭವಿಷ್ಯ: ಈ ರಾಶಿಯ ರಾಜಕಾರಣಿಗಳಿಗೆ ಅವರ ಮಾತೇ ಮುಜುಗರ ತರುತ್ತದೆ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಈ ರಾಶಿಯ ರಾಜಕಾರಣಿಗಳಿಗೆ ಅವರ ಮಾತೇ ಮುಜುಗರ ತರುತ್ತದೆ
ಭವಿಷ್ಯ
Follow us
TV9 Web
| Updated By: Skanda

Updated on: Jul 18, 2021 | 7:05 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ವಾರ ಭವಿಷ್ಯ ತಾ.19-7-221 ರಿಂದ ತಾ.25-7-2021 ವರೆಗೆ.

ಮೇಷ ರಾಶಿ:- ಆದಾಯ ಸ್ವಲ್ಪ ಕಡಿಮೆಯಾಗಿ ಖರ್ಚುಗಳಿಗೆ ಕಡಿವಾಣ ಹಾಕಬೇಕಾದ ಸಂದರ್ಭವಿದೆ. ಹೊಸ ಆದಾಯದ ಮೂಲಗಳತ್ತ ಗಮನ ಹರಿಸುವಿರಿ. ನೀರಾವರಿ ಭೂಮಿಯನ್ನು ಹೊಂದುವ ಯೋಗವಿದೆ. ಹೊಸದಾಗಿ ಚಿನ್ನಾಭರಣ ವ್ಯಾಪಾರವನ್ನು ಆರಂಭಿಸುವವರು ಈಗ ಆರಂಭಿಸಬಹುದು. ಸರ್ಕಾರದ ಕಡೆಯಿಂದ ಬರಬೇಕಾದ ಧನಸಹಾಯ ಅನಾಯಾಸವಾಗಿ ಬರುತ್ತದೆ. ಲೆಕ್ಕಪತ್ರ ಪರೀಕ್ಷಕರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು. ಅದೃಷ್ಟ ಬಣ್ಣ: ಕೇಸರಿ ಬಣ್ಣ ಅದೃಷ್ಟ ಸಂಖ್ಯೆ: 6

ವೃಷಭ ರಾಶಿ:- ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಸಂಗ್ರಹಿಸಲ್ಪಟ್ಟ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭ ಇರುತ್ತದೆ. ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಯೋಗವಿದೆ. ಶ್ರೀಮಂತ ಜೀವನದ ಶೈಲಿಗಾಗಿ ಹೆಚ್ಚು ಹಣ ಮಾಡುವಿರಿ. ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರವನ್ನು ಕಂಡುಕೊಳ್ಳುವಿರಿ. ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಮಾಡಿ ಸಮಾಲೋಚನೆ ನಡೆಸುವಿರಿ. ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿಯಲ್ಲಿ ಏಳಿಗೆ ಇರುತ್ತದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿಗೆ ಇರುತ್ತದೆ. ಅದೃಷ್ಟ ಬಣ್ಣ: ಬಳಿ ಬಣ್ಣ ಅದೃಷ್ಟ ಸಂಖ್ಯೆ: 3

ಮಿಥುನ ರಾಶಿ:- ನಿರೀಕ್ಷಿತ ಮೂಲಗಳಿಂದ ಧನಾಗಮನ ಆಗದಿದ್ದರೂ ಅನಿರೀಕ್ಷಿತ ಮೂಲದಿಂದ ಹಣ ಒದಗಿ ಸಂತಸವಾಗುವುದು. ಹೊಸ ಗೃಹಾಲಂಕಾರ ವಸ್ತುಗಳನ್ನು ಕೊಳ್ಳುವ ಯೋಗವಿದೆ. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಏರ್ಪಡುತ್ತದೆ. ನಿಮ್ಮ ಒಳ್ಳೆಯತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಬಹುದು, ಆ ಬಗ್ಗೆ ಎಚ್ಚರದಿಂದ ಇರಿ. ಕೃಷಿ ವಿಷಯದಲ್ಲಿ ನೂತನ ವಿಧಾನಗಳನ್ನು ಅಳವಡಿಸಿಕೊಂಡು ಪ್ರಯೋಗಶೀಲರಾಗುವಿರಿ. ಷೇರುಪೇಟೆಗೆ ಹೆಚ್ಚಿನ ಬಂಡವಾಳ ತೊಡಗಿಸುವುದು ಬೇಡ. ಕಣ್ಣಿನ ಸೋಂಕು ಇರುವವರು ಸರಿಯಾಗಿ ಚಿಕಿತ್ಸೆ ಪಡೆಯಿರಿ. ಅದೃಷ್ಟ ಬಣ್ಣ: ಹಸಿರು ಅದೃಷ್ಟ ಸಂಖ್ಯೆ: 5

ಕಟಕ ರಾಶಿ:- ನಿಮ್ಮ ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಕೊಡಿರಿ. ಮನೆ ಬದಲಾವಣೆಯ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಕ್ರೀಡಾಪಟುಗಳಿಗೆ ಉತ್ತೇಜನ ದೊರೆತು ಸಾಧನೆ ಮಾಡುವ ಸಂದರ್ಭವಿದೆ. ವಾಹನ ಮಾರಾಟಗಾರರಿಗೆ ವ್ಯಾಪಾರ ವೃದ್ಧಿಸುತ್ತದೆ. ನಿಮ್ಮ ಸಂಪತ್ತನ್ನು ಸರಿಯಾಗಿ ರಕ್ಷಣೆ ಮಾಡಿಕೊಳ್ಳಿರಿ, ಕಳ್ಳಕಾಕರ ಭಯವಿದೆ. ಉದ್ಯೋಗವನ್ನು ಅರಸುತ್ತಿರುವವರು ರಾಜಕೀಯ ಮುಖಂಡರುಗಳ ಮೂಲಕ ಒತ್ತಡ ಹೇರಿ ಉದ್ಯೋಗ ಪಡೆಯಬಹುದು. ತಾಯಿಯಿಂದ ಧನಸಹಾಯವನ್ನು ಪಡೆಯಬಹುದು. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು. ಅದೃಷ್ಟ ಬಣ್ಣ: ಹಳದಿ ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ:- ಸಹೋದರರಿಗೆ ಸಹಾಯ ಮಾಡುವಿರಿ. ಅವರ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡುವಿರಿ. ಕಾನೂನಾತ್ಮಕ ವ್ಯವಹಾರಗಳಲ್ಲಿ ಸೂಕ್ತ ಮಾರ್ಗದರ್ಶನ ಪಡೆದು ವ್ಯವಹರಿಸುವುದು ಒಳ್ಳೆಯದು. ಕಚೇರಿ ಕೆಲಸದ ನಿಮಿತ್ತ ದೂರಪ್ರಯಾಣ ಮಾಡಬೇಕಾಗಬಹುದು. ವಾಹನ ರಿಪೇರಿ ಮಾಡುವವರಿಗೆ ಕೈ ತುಂಬಾ ಕೆಲಸ ದೊರೆತು ಸಾಕಷ್ಟು ಸಂಪಾದನೆ ಇರುತ್ತದೆ. ಹಣದ ಒಳಹರಿವಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಅದೃಷ್ಟ ಬಣ್ಣ: ಕೆಂಪು ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ:- ಆಪ್ತ ಗೆಳೆಯರ ನಡುವೆ ಸಣ್ಣ ವಿಚಾರಕ್ಕಾಗಿ ನಿಷ್ಠುರತೆ ಬರುವ ಸಾಧ್ಯತೆಗಳಿವೆ. ವೈದ್ಯ ವೃತ್ತಿಯವರಿಗೆ ಕೆಲಸದ ಒತ್ತಡ ಹೆಚ್ಚು ಇರುತ್ತದೆ. ರಾಜಕಾರಣಿಗಳಿಗೆ ಅನುಕೂಲಕರ ರಾಜಕೀಯ ಪರಿಸ್ಥಿತಿ ಏರ್ಪಟ್ಟು ಅವರ ದಾಳವನ್ನು ಉರುಳಿಸಲು ಸುಸಂದರ್ಭ     ಸಿಗುತ್ತದೆ. ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಕ್ರೀಡಾಪಟುಗಳಿಗೆ ಸೌಲಭ್ಯ ಸಿಗಲು ವಿಳಂಬವಾದೀತು. ಸ್ವಲ್ಪ ಒತ್ತಡಗಳನ್ನು ಹೇರಿದಲ್ಲಿ ಸೌಲಭ್ಯಗಳು ದೊರೆಯುತ್ತವೆ. ವಾಹನ ಚಾಲನೆ ವೇಳೆ ಎಚ್ಚರ ಇರಲಿ, ದೂರ ಪ್ರಯಾಣ ಬೇಡ. ಸರ್ಕಾರಿ ಮಟ್ಟದ ಸಹಾಯಧನಗಳು ಹರಿದುಬರುತ್ತವೆ. ಅದೃಷ್ಟ ಬಣ್ಣ: ತಿಳಿಹಳದಿ ಅದೃಷ್ಟ ಸಂಖ್ಯೆ: 5

ತುಲಾ ರಾಶಿ:- ರಾಜಕಾರಣಿಗಳಿಗೆ ತಮ್ಮ ಹೇಳಿಕೆಯಿಂದ ಮುಜುಗರವುಂಟಾಗುವ ಸಂದರ್ಭವಿದೆ. ಸಾಮಾಜಿಕ ಕಾರ್ಯಕರ್ತರುಗಳಿಗೆ ಅನಿರೀಕ್ಷಿತ ಗೌರವ ದೊರೆಯುವ ಸಂದರ್ಭವಿದೆ. ನಿಮ್ಮ ಸಂಪನ್ಮೂಲಕ್ಕೆ ಅನುಗುಣವಾಗಿ ಕಾರ್ಯಗಳನ್ನು ಜಾರಿಗೊಳಿಸುವುದು ಉತ್ತಮ. ವ್ಯಾಪಾರಿಗಳಿಗೆ ವ್ಯಾಪಾರದ ಬಗ್ಗೆ ಪ್ರೋತ್ಸಾಹ ದೊರೆಯುತ್ತದೆ. ಕೆಲವು ವ್ಯಾಪಾರಿಗಳಿಗೆ ಪ್ರೋತ್ಸಾಹ ಧನ ಸಿಗಬಹುದು. ಮಕ್ಕಳ ನಡುವೆ ಕಾವೇರಿದ ಮಾತಾಗಬಹುದು. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು. ವೃತ್ತಿಯಲ್ಲಿ ಪದೋನ್ನತಿಯ ಸಂದರ್ಭದಲ್ಲಿ ನಿಮ್ಮ ಚೇಷ್ಟೆ ಮಾತು ಅದನ್ನು ಹಾಳುಗೆಡವಬಹುದು. ಕೃತಕ ಬುದ್ಧಿಮತ್ತೆಯ ಜೊತೆ ಕೆಲಸ ಮಾಡುವವರು ಬಹಳ ಎಚ್ಚರವಾಗಿರಿ. ಅದೃಷ್ಟ ಬಣ್ಣ: ಕಂದು ಅದೃಷ್ಟ ಸಂಖ್ಯೆ: 7

ವೃಶ್ಚಿಕ ರಾಶಿ: ಕಠಿಣ ಪರಿಶ್ರಮದಿಂದ ಕಾರ್ಯದಲ್ಲಿ ಯಶಸ್ಸನ್ನು ಪಡೆಯುವಿರಿ, ಎದುರಾಳಿಗಳ ತೊಂದರೆ ಇದ್ದರೂ ಸಹ ಅದನ್ನು ಎದುರಿಸಿ  ಮುನ್ನಡೆಯುವಿರಿ. ವ್ಯವಹಾರದಲ್ಲಿ ನಿಮ್ಮ ವಿರೋಧಿ ಬಣದ ತಂತ್ರಗಳು ನಿಮಗೆ ತಿಳಿದು ಅವರನ್ನು ಸುಮ್ಮನಾಗಿಸುವಿರಿ. ಅಗತ್ಯಕ್ಕೆ ತಕ್ಕಷ್ಟು ಧನಾಗಮನವಿರುತ್ತದೆ. ನಿವೃತ್ತರಿಗೆ ಹೊಸ ರೀತಿಯ ಕೆಲಸಗಳು ದೊರೆಯಬಹುದು. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದೀತು. ಕಣ್ಣಿನ ತೊಂದರೆ ಇದ್ದವರು ಎಚ್ಚರ ವಹಿಸಿರಿ. ಕೆಲವರು ತಮ್ಮ ಕಾರ್ಯಸಾಧನೆಗಾಗಿ ನಿಮ್ಮನ್ನು  ಹೊಗಳುವರು ಇಂಥವರ ಬಗ್ಗೆ ಎಚ್ಚರವಹಿಸಿರಿ. ಅವಿವಾಹಿತರಿಗೆ ವಿವಾಹ ಸಂಬಂಧಗಳನ್ನು ನೋಡಬಹುದು. ಖರ್ಚಿಗೆ  ಕಡಿವಾಣ ಹಾಕುವುದು ಉತ್ತಮ. ಅದೃಷ್ಟ ಬಣ್ಣ: ಬೂದು ಅದೃಷ್ಟ ಸಂಖ್ಯೆ: 4

ಧನಸ್ಸು ರಾಶಿ:- ದೂರ ಪ್ರಯಾಣದಿಂದ ಉಂಟಾದ ಆಯಾಸದಿಂದ ಚೇತರಿಸಿಕೊಳ್ಳುವಿರಿ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೆಲವು ಕಠಿಣ ಪರಿಸ್ಥಿತಿಗಳು ಎದುರಾಗಬಹುದು. ತಾಂತ್ರಿಕ ತರಬೇತಿಯನ್ನು ಪಡೆಯುತ್ತಿರುವವರು ಹೆಚ್ಚಿನ ಶ್ರಮ ವಹಿಸಬೇಕು, ಆಗ ಮುಂದಿನ ದಾರಿಗಳು ಅವರಿಗೆ ಸುಲಭವಾಗುತ್ತದೆ. ಕಛೇರಿ ಕೆಲಸಗಳಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆಯಲು ತರಬೇತಿಗೆ ಹೋಗುವ ಅವಕಾಶ ದೊರೆಯುತ್ತದೆ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸಾಲಗಳನ್ನು ಈಗ ವಸೂಲಿ ಮಾಡಲು ಆರಂಭಿಸಬಹುದು. ಹರಳುಗಳನ್ನು ತೆಗೆದು ಶುದ್ಧೀಕರಿಸಿ ಮಾರುವವರಿಗೆ ಉತ್ತಮ ವ್ಯಾಪಾರವಿರುತ್ತದೆ. ಅದೃಷ್ಟ ಬಣ್ಣ: ಗುಲಾಬಿ ಅದೃಷ್ಟ ಸಂಖ್ಯೆ: 3

ಮಕರ ರಾಶಿ:- ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಶೃಂಗಾರ ಸಾಮಗ್ರಿಗಳನ್ನು ತಯಾರು ಮಾಡುವವರಿಗೆ ವ್ಯವಹಾರ ವಿಸ್ತರಣೆಯಾಗುತ್ತದೆ. ಸರಕು ಸಾಗಣೆ ಮಾಡುವವರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಮನ್ನಣೆ ದೊರೆತು ಉತ್ತಮ  ಕೆಲಸ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರುತ್ತದೆ. ತಾಯಿಯಿಂದ ಹೆಚ್ಚಿನ ಧನಸಹಾಯ ಸಿಗುವ ಸಾಧ್ಯತೆಯಿದೆ. ಸಹೋದರರ ಕಷ್ಟಗಳಿಗೆ ಸಹಾಯ ಮಾಡುವಿರಿ. ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳುವಿರಿ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇದೆ. ಅದೃಷ್ಟ ಬಣ್ಣ: ಕಪ್ಪುರಾಶಿ ಅದೃಷ್ಟ ಸಂಖ್ಯೆ: 4

ಕುಂಭ ರಾಶಿ:- ವೃತ್ತಿಯಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಮಾನ್ಯತೆ ದೊರೆತು ಹೆಚ್ಚಿನ ಜವಾಬ್ದಾರಿಯು ದೊರೆಯುತ್ತದೆ. ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ರಾಜಕಾರಣಿಗಳಿಗೆ ಅನಿರೀಕ್ಷಿತ ಒತ್ತಡಗಳು ಬರುತ್ತವೆ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಸನ್ಮಾನ ಮತ್ತು ಗೌರವ ಪ್ರಾಪ್ತಿಯಾಗುತ್ತದೆ. ಕುರುಕುಲು ತಿಂಡಿಯನ್ನು ಮಾಡಿ ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ಮೆಟ್ಟಿಲೇರುವ ಅವಕಾಶವಿರುತ್ತದೆ. ಕೃಷಿಕರಿಗೆ ಉತ್ತಮ ಲಾಭ ಇರುತ್ತದೆ. ಉಪಾಧ್ಯಾಯರಿಗೆ ಗೌರವ ಸಿಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ಬರುತ್ತದೆ ಮತ್ತು ಅವರು ತಯಾರಿಸುವ ಕ್ಷೀರೋತ್ಪನ್ನಗಳಿಗೆ ಉತ್ತಮ ಬೇಡಿಕೆ ಬರುತ್ತದೆ. ಅದೃಷ್ಟ ಬಣ್ಣ: ನೀಲಿ ಅದೃಷ್ಟ ಸಂಖ್ಯೆ: 9

ಮೀನ ರಾಶಿ:- ಹೊಸ ಜವಾಬ್ದಾರಿಯೊಂದು ಹೆಗಲೇರುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿನ ನೀತಿ-ನಿಯಮಗಳನ್ನು ಬದಲಿಸದೆ ಇರುವುದು ನಿಮಗೆ ಒಳಿತು. ಚಿಲ್ಲರೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ ಬಂದು ಮನಸ್ಸಿಗೆ ನೆಮ್ಮದಿ ಇರುತ್ತದೆ. ವ್ಯವಹಾರದಲ್ಲಿ ನಷ್ಟವನ್ನು  ತಪ್ಪಿಸಲು ಅತ್ಯಂತ ಜಾಗರೂಕರಾಗಿ ಇರುವುದು ಒಳ್ಳೆಯದು. ಕುಟುಂಬ ಕಲಹಗಳಿಂದ ಮುಕ್ತಿ ದೊರೆಯುತ್ತದೆ. ಸ್ಥಿರಾಸ್ತಿಗೆ ಸಂಬಂಧಪಟ್ಟ ಗೊಂದಲಗಳು ಸರಿಯಾಗುತ್ತವೆ. ಉದ್ಯೋಗಿಗಳಿಗೆ ಹೊಸ ರೀತಿಯ ಸಾಲ ಸೌಲಭ್ಯಗಳು ದೊರೆಯುತ್ತವೆ. ಮಹಿಳಾ ಉದ್ಯೋಗಿಗಳಿಗೆ ಪದೋನ್ನತಿಯ ಅವಕಾಶ ಇರುತ್ತದೆ. ಅದೃಷ್ಟ ಬಣ್ಣ: ಆರೆಂಜ್ ಅದೃಷ್ಟ ಸಂಖ್ಯೆ: 6

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್