Horoscope Today – ದಿನ ಭವಿಷ್ಯ; ಈ ರಾಶಿಯವರಿಗೆ ವ್ಯವಹಾರದಲ್ಲಿ ಹಾನಿ ಕಂಡುಬರುವುದು

| Updated By: Skanda

Updated on: Jul 28, 2021 | 6:30 AM

Horoscope ಜುಲೈ 28, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today - ದಿನ ಭವಿಷ್ಯ; ಈ ರಾಶಿಯವರಿಗೆ ವ್ಯವಹಾರದಲ್ಲಿ ಹಾನಿ ಕಂಡುಬರುವುದು
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ಪಂಚಮಿ ತಿಥಿ, ಬುಧವಾರ, ಜುಲೈ 28, 2021. ಪೂರ್ವಾಭಾದ್ರೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 12.22 ರಿಂದ ಇಂದು ಮಧ್ಯಾಹ್ನ 1.59 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.54. ಸೂರ್ಯಾಸ್ತ: ಸಂಜೆ 6.51

ತಾ.28-07-2021 ರ ಬುಧವಾರದ ರಾಶಿಭವಿಷ್ಯ

ಮೇಷ: ಮಾತಿನಂತೆಯೇ ಎಲ್ಲವೂ ನಡೆಯುವುದಿಲ್ಲ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ದೊರೆಯುವುದು. ಲಾಭದಾಯಕ ಹುದ್ದೆ ದೊರೆಯುವುದು. ಶುಭ ಸಂಖ್ಯೆ: 7

ವೃಷಭ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 3

ಮಿಥುನ: ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಅನಿವಾರ್ಯ ಕೆಲಸಗಳಗೆ ಅಲೆದಾಟ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 9

ಕಟಕ: ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 4

ಸಿಂಹ: ಆಸ್ತಿ ಖರೀದಿ ಅಥವಾ ಹೊಸ ವ್ಯವಹಾರ ಆರಂಭಕ್ಕೂ ಮೊದಲು ಆತ್ಮೀಯರೊಂದಿಗೆ ಸಮಾಲೋಚನೆ ಮಾಡಿ ಮುಂದುವರಿಯಿರಿ. ಅಡೆತಡೆಗಳ ಮಧ್ಯದಲ್ಲಿಯೂ ನಿರೀಕ್ಷಿತ ಕಾರ್ಯಗಳು ಪೂರ್ಣವಾಗುವವು. ಶುಭ ಸಂಖ್ಯೆ: 1

ಕನ್ಯಾ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವುದು. ಶುಭ ಸಂಖ್ಯೆ: 6

ತುಲಾ: ವೃತ್ತಿಪರತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ: 7

ವೃಶ್ಚಿಕ: ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಶುಭ ಸಂಖ್ಯೆ: 3

ಧನು: ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಆತ್ಮೀಯರೊಂದಿಗೆ ವಾದವಿವಾದ ಮಾಡಬೇಡಿ. ಮದುವೆಯ ಮಾತುಕತೆ ಕೈಗೂಡುವ ಸಾಧ್ಯತೆ ಇದೆ. ವ್ಯವಹಾರಿಕ ಜಾಣತನದಿಂದ ಲಾಭವಾಗಲಿದೆ. ಮನೆಯಲ್ಲಿ ಸಂತಸ ಕಂಡುಬರುವುದು. ಶುಭ ಸಂಖ್ಯೆ: 2

ಮಕರ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡಯುವುದು ಉತ್ತಮ. ಶುಭ ಸಂಖ್ಯೆ: 8

ಕುಂಭ: ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವುದು. ಉತ್ಸಾಹ ಮೂಡುವುದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 4

ಮೀನ: ಅಲ್ಪ ತೃಪ್ತಿ, ವ್ಯಾಪಾರದಲ್ಲಿ ನಿರಾಸಕ್ತಿ, ಅಪೇಕ್ಷಿತ ಕೆಲಸಗಳು ನೆರವೇರುವವು, ಧನಲಾಭ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿರಿಯರಿಗೆ ಕೀರ್ತಿದಾಯಕ. ಆಲಸ್ಯದಿಂದ ತೊಂದರೆ ಇರುವುದು ಗುರುಸ್ತೋತ್ರ ಪಾರಾಯಣ ಮಾಡಿರಿ. ಶುಭ ಸಂಖ್ಯೆ: 7

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937