Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಅಭದ್ರತೆ, ಸ್ಥಾನಚ್ಯುತಿ, ಸಹೋದರರಲ್ಲಿ ಕಲಹವಾಗುವ ಸಂಭವವಿದೆ.. ಎಚ್ಚರ
Horoscope ಜೂನ್ 19, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ನವಮಿ ತಿಥಿ, ಶನಿವಾರ, ಜೂನ್ 19, 2021. ಹಸ್ತ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 8.59 ರಿಂದ ಇಂದು ಬೆಳಿಗ್ಗೆ 10.37 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.42. ಸೂರ್ಯಾಸ್ತ: ಸಂಜೆ 6.52
ತಾ.19-06-2021 ರ ಶನಿವಾರದ ರಾಶಿಭವಿಷ್ಯ.
ಮೇಷ: ಅಭದ್ರತೆ ಕಾಡುವ ಸಂಭವವಿದೆ. ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ. ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು. ಶುಭ ಸಂಖ್ಯೆ: 5
ವೃಷಭ: ಹಣಕಾಸಿನ ವ್ಯವಹಾರದಲ್ಲಿ ಧ್ಯರ್ಯದಿಂದ ಕಾರ್ಯ ಸಾಧನೆ. ಅಪೇಕ್ಷಸದ ಲಾಭ ಸಂಭವ. ಗಡಿಬಿಡಿಯ ವಾತಾವತರಣ, ಬಿಡುವಿಲ್ಲದ ಕಾರ್ಯ, ಮಿತ್ರರೊಂದಿಗೆ ಜಟಾಪಟಿ ಸಂಭವ, ದೀಪದಾನ ಮಾಡಿರಿ. ಶುಭ ಸಂಖ್ಯೆ: 9
ಮಿಥುನ: ನಿರೀಕ್ಷಿತ ಸರ್ವಕಾರ್ಯಗಳು ನೆರವೆರುತ್ತದೆ. ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರದಲ್ಲಿ ಸುಖ ಸಂಭ್ರಮಗಳಿರುತ್ತದೆ. ಶುಭ ಕಾರ್ಯ ಪ್ರಯತ್ನ ಫಲಕೊಡುತ್ತದೆ. ಶುಭ ಸಂಖ್ಯೆ: 4
ಕಟಕ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 3
ಸಿಂಹ: ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಅಲ್ಪ ಧನ ಲಾಭವಾದರೂ ಹಳೆಯ ಸಾಲ ತೀರುವುದು. ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ವಿವಾಹ ಅಪೇಕ್ಷಿತರಿಗೆ ಕಂಕಣಬಲ ಕೂಡಿಬರುವುದು. ಶುಭ ಸಂಖ್ಯೆ: 8
ಕನ್ಯಾ: ಹಲವು ರೀತಿಯಿಂದ ಧನಾಗಮನವಿದ್ದು ಐಶ್ವರ್ಯವೃದ್ಧಿ, ಸಂಸಾರ ಸುಖ. ಅಪೇಕ್ಷಿತ ವಸ್ತು, ಪ್ರಾಪ್ತಿ, ಮಿತ್ರಾಗಮನ, ವಿಶೇಷ ಸಂತೋಷ ಪ್ರಸಂಗಗಳು ಒದಗಿ ಬಂದು ಸಂಭ್ರಮವೆನಿಸುತ್ತದೆ. ಶುಭ ಸಂಖ್ಯೆ: 6
ತುಲಾ: ಉದ್ಯೋಗ ಬದಲಿ ಮಾಡುವುದು ಸದ್ಯ ಬೇಡ. ಹಣದ ಕೊರತೆ ಇರಲಾರದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಪಿತ್ರಾರ್ಜಿತ ಆಸ್ತಿ ದೊರೆಯುವ ಯೋಗವಿದೆ. ತಂದೆತಾಯಿಯ ವಿಷಯದಲ್ಲಿ ಚಿಂತೆ ಇರುವುದು. ಶುಭ ಸಂಖ್ಯೆ: 7
ವೃಶ್ಚಿಕ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವುದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವುದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 8
ಧನು: ಕೃಷಿಮೂಲದ ಲಾಭ ದೊರೆಯುವುದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ. ಶುಭ ಸಂಖ್ಯೆ: 2
ಮಕರ: ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವದು. ಮನೆಯಲ್ಲಿ ನೆಮ್ಮದಿ ಇರುವದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ಶುಭ ಸಂಖ್ಯೆ: 1
ಕುಂಭ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 5
ಮೀನ: ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವುದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ. ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ. ಶುಭ ಸಂಖ್ಯೆ: 4
Published On - 6:41 am, Sat, 19 June 21