Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು
Horoscope ಜೂನ್ 23, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ತ್ರಯೋದಶಿ ತಿಥಿ, ಬುಧವಾರ, ಜೂನ್ 23, 2021. ಅನೂರಾಧ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 12.17 ರಿಂದ ಇಂದು ಮಧ್ಯಾಹ್ನ 1.55 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.43. ಸೂರ್ಯಾಸ್ತ: ಸಂಜೆ 6.53
ತಾ.23-06-2021 ರ ಬುಧವಾರದ ರಾಶಿಭವಿಷ್ಯ…
ಮೇಷ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 5
ವೃಷಭ: ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಅನವಶ್ಯಕ ಭಯ ಅಗತ್ಯವಿಲ್ಲ, ನಿಮ್ಮ ಸೇವೆ ಫಲ ನೀಡುವುದು. ಸಂಕಷ್ಟದ ಮಧ್ಯೆಯೂ ಸಂತೋಷದ ದಿನಗಳಿವೆ. ಆಗಂತುಕ ರೊಂದಿಗೆ ಜಾಗೃತೆ ಅಗತ್ಯ. ಶುಭ ಸಂಖ್ಯೆ: 9
ಮಿಥುನ: ವಸ್ತು-ವಾಹನ-ಆಸ್ತಿ ಖರೀದಿ ಯೋಗವಿದೆ.ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಮನೆಯ ಹಿರಿಯರ ಆರೋಗ್ಯದ ಚಿಂತೆ ಇರುವದು. ಬುದ್ಧಿವಂತಿಕೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಶುಭ ಸಂಖ್ಯೆ: 1
ಕಟಕ: ನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಮಾನಸಿಕ ಉತ್ಸಾಹ ಕಂಡುಬರುವುದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವುದು. ಕಾರಣಾಂತರ ಅಧಿಕ ಖರ್ಚುಬರಬಹುದು. ಶುಭ ಸಂಖ್ಯೆ: 6
ಸಿಂಹ: ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆಕೇಳುವ ಪ್ರಸಂಗ ಇರುವುದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವುದು. ಶುಭ ಸಂಖ್ಯೆ: 4
ಕನ್ಯಾ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 8
ತುಲಾ: ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ. ಶುಭ ಸಂಖ್ಯೆ: 2
ವೃಶ್ಚಿಕ: ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆÉ ಇದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಶುಭ ಸಂಖ್ಯೆ: 7
ಧನು: ವ್ಯಥಾ ಚಿಂತೆ, ತಪ್ಪು ಕಲ್ಪನೆ, ನಿಷ್ಟುರ ಮಾತುಗಳನ್ನು ಕೇಳುವ ಸಂಭವ, ಜನ್ಮಸ್ಥ ಶುಕ್ರ ಇರುವದರಿಂದ ಆರ್ಥಿಕ ಸುಭದ್ರತೆ ಇರುವದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷವಿರುವದು. ಗೋಸೇವೆಯಿಂದ ಕಷ್ಟಪರಿಹಾರ. ಶುಭ ಸಂಖ್ಯೆ: 3
ಮಕರ: ಮಿತ್ರರ ಸಕಾರಾತ್ಮಕ ಧೋರಣೆಯಿಂದ ವ್ಯವಹಾರಿಕ ಅಭಿವೃದ್ಧಿ ಕಂಡು ಬರುವದು.ಕುಟುಂಬದ ಜವಾಬ್ದಾರಿ ಹೆಚ್ಚುವದು. ಮಕ್ಕಳ ವಿದ್ಯಾಬ್ಯಾಸ ಹಾಗೂ ಆರೋಗ್ಯದ ಚಿಂತೆ ಕಂಡುಬರುವದು. ನಿರ್ಲಕ್ಷತೆ, ಕೆಲಸ ಮುಂದೂಡುವ ಸ್ವಭಾವದಿಂದ ಹಾನಿ ಸಂಭವ. ಶುಭ ಸಂಖ್ಯೆ: 6
ಕುಂಭ: ನಿಮ್ಮ ಶತ್ರುಗಳು ತಮ್ಮ ಕೃತ್ಯಗಳಿಂದ ತಾವಾಗಿಯೇ ಮಣಿಯುವರು. ಶತ್ರುದೋಷ ಪರಿಹಾರವಾಗುವುದು.ಚೋರ ಭಯ, ಅಗ್ನಿ ಭಯ ಮುಂತಾದ ಭಯ ನಿವಾರಣೆಯಾಗುವುದು. ಪುತ್ರಸೌಖ್ಯ, ಮನೆಯಲ್ಲಿ ಸಂತೋಷವಿರುವದು. ಶುಭ ಸಂಖ್ಯೆ: 4
ಮೀನ: ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಶುಭ ಸಂಖ್ಯೆ: 5