Horoscope Today-ದಿನ ಭವಿಷ್ಯ; ಮೇಷದಿಂದ ಮೀನವರೆಗಿನ ಮಂಗಳವಾರದ ಭವಿಷ್ಯ
Today Horoscope ಮೇ 04, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ಅಷ್ಟಮಿ ತಿಥಿ, ಮಂಗಳವಾರ, ಮೇ 04, 2021. ಶ್ರವಣ ನಕ್ಷತ್ರ, ರಾಹುಕಾಲ :ಇಂದು ಸಂಜೆ 3.24 ರಿಂದ ಇಂದು ಸಂಜೆ 5.00ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.48. ಸೂರ್ಯಾಸ್ತ: ಸಂಜೆ 6.37.
ತಾ.04-05-2021 ರ ಮಂಗಳವಾರದ ರಾಶಿಭವಿಷ್ಯ
ಮೇಷ: ಯಾವದೇ ಅಡೆತಡೆ ಇಲ್ಲದ ನಿರಾತಂಕ ಜೀವನ ಇರುವುದು. ಸಾಮಾಜಿಕ ಕಾರ್ಯಗಳಿಂದ ಗೌರವಾದರಗಳು ದೊರೆಯುವವು. ಆಶೆಗೆ ತಕ್ಕಂತೆ ಫಲಗಳು ಕೈಗೂಡುವವು. ಬಂಧುಗಳಲ್ಲಿ ಮನಸ್ತಾಪ ಕಂಡುಬರುವುದು. ಶುಭ ಸಂಖ್ಯೆ: 9
ವೃಷಭ: ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 3
ಮಿಥುನ: ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವವು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು.ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 5
ಕಟಕ: ಮಹಿಳೆಯರ ಇಷ್ಟಾರ್ಥ ಸಿದ್ಧಿಸುವುದು. ಕೂಡಿಟ್ಟ ಹಣ ಉಪಯೋಗವಾಗುವ ಸಂಭವವಿದೆ. ಸರಕಾರಿ ಕೆಲಸಗಳು ನಿರ್ವಿಘ್ನವಾಗಿ ಆಗುವವು. ನ್ಯಾಯಾಲಯದಲ್ಲಿ ಜಯ ದೊರೆಯುವುದು. ವಿದ್ಯೆಯಲ್ಲಿ ಸಾಧನೆ ಇರುವುದು. ಶುಭ ಸಂಖ್ಯೆ: 7
ಸಿಂಹ: ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಅನವಶ್ಯಕ ಭಯ ಅಗತ್ಯವಿಲ್ಲ, ನಿಮ್ಮ ಸೇವೆ ಫಲ ನೀಡುವುದು. ಸಂಕಷ್ಟದ ಮಧ್ಯೆಯೂ ಸಂತೋಷದ ದಿನಗಳಿವೆ. ಆಗಂತುಕರೊಂದಿಗೆ ಜಾಗೃತೆ ಅಗತ್ಯ. ಶುಭ ಸಂಖ್ಯೆ: 6
ಕನ್ಯಾ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಕೋರ್ಟ್ನಲ್ಲಿ ಇರುವ ನ್ಯಾಯ ಬಗೆಹರಿಯುವುದು. ಆರ್ಥಿಕ ಸುಧಾರಣೆ ಕಂಡುಬರುವದು. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವದು. ಶುಭ ಸಂಖ್ಯೆ: 1
ತುಲಾ: ಧನ ಅಪವ್ಯಯವಾಗುವ ಲಕ್ಷಣಗಳಿವೆ ಆದರೆ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವದು. ಶ್ರಮಿಕವರ್ಗಕ್ಕೆ ಉನ್ನತಿ ಇರುವದು. ಕೌಟುಂಬಿಕ ಸಂಬಂಧಗಳು ಫಲಿಸುವವು. ಋಣಪರಿಹಾರವಾಗುವದು. ಶುಭ ಸಂಖ್ಯೆ: 4
ವೃಶ್ಚಿಕ: ವ್ಯವಹಾರಿಕ ಅಭಿವೃದ್ಧಿ ಇರುವದು. ನಿಂತ ಕೆಲಸಗಳು ಮುಂದುವರೆಯುವವು. ಕಠಿಣ ಪರಿಶ್ರಮದಿಂದ ಕೆಲಸ ಕೈಗೂಡುವದು. ಹಾನಿಯ ಪ್ರಮಾಣ ಕಡಿಮೆ ಯಾಗುವದು. ಶುಭ ಸಂಖ್ಯೆ: 8
ಧನು: ಯೋಜನಾಬದ್ಧ ಕೆಲಸಗಳೂ ಕೂಡ ಮುಂದೂಡುವ ಪ್ರಸಂಗವಿದೆ. ಆಪ್ತವಲಯದಲ್ಲಿ ಸಮಾಲೋಚಿಸಿರಿ. ಅನಿವಾರ್ಯ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ಆರ್ಥಕ ಸಂಕಷ್ಟಗಳು ಎದುರಾಗುವವು. ಶುಭ ಸಂಖ್ಯೆ: 5
ಮಕರ: ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಟೆಗೆ ಧನವ್ಯಯ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 2
ಕುಂಭ: ದೂರ ಪ್ರಯಾಣದ ಅವಶ್ಯಕತೆ ಕಂಡುಬರುವದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು.ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ. ಶುಭ ಸಂಖ್ಯೆ: 3
ಮೀನ: ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ಮೊದಲು ಕಷ್ಟ ನಂತರದಲ್ಲಿ ಉತ್ತಮವಾದ ಫಲ ದೊರೆಯುವದು. ಗುರುಬಲ ವೃದ್ಧಿಸುವದು. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವದು. ಶುಭ ಸಂಖ್ಯೆ: 6