Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಮಕ್ಕಳಿಂದ ಶುಭ, ಆರ್ಥಿಕ ಸ್ಥಿತಿ ಸುಧಾರಿಸುವುದು

| Updated By: Vinay Bhat

Updated on: Nov 20, 2021 | 6:43 AM

Horoscope ನವೆಂಬರ್ 20, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಮಕ್ಕಳಿಂದ ಶುಭ, ಆರ್ಥಿಕ ಸ್ಥಿತಿ ಸುಧಾರಿಸುವುದು
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ, ಪಾಡ್ಯ ತಿಥಿ, ಶನಿವಾರ, ನವೆಂಬರ್ 20, 2021. ರೋಹಿಣಿ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9.12 ರಿಂದ ಇಂದು ಬೆಳಿಗ್ಗೆ 10.36 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.23. ಸೂರ್ಯಾಸ್ತ: ಸಂಜೆ 5.39

ತಾ.20-11-2021 ರ ಭಾನುವಾರದ ರಾಶಿಭವಿಷ್ಯ:

ಮೇಷ: ಗುರು ಬಲ ಪ್ರಾರಂಭ. ಆಸ್ತಿ ವಿವಾದ, ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ, ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು. ಸಭಾಸಮಾಜ ಕೀರ್ತಿ ಲಭಿಸುವುದು. ಶುಭ ಸಂಖ್ಯೆ: 6

ವೃಷಭ: ಪ್ರಯತ್ನಕ್ಕೆ ತಕ್ಕ ಫಲ ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವುದು. ಶುಭ ಸಂಖ್ಯೆ: 9

ಮಿಥುನ: ಗುರು ಬಲವಿದೆ. ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 1

ಕಟಕ: ಆತಂಕ, ಹಿತ ಶತೃಗಳು. ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ. ಶುಭ ಸಂಖ್ಯೆ: 7

ಸಿಂಹ: ಗುರು ಬಲವಿದೆ. ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ. ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲಸ ನಿರ್ವಹಿಲು ಆಗದಂತಹ ಸ್ಥಿತಿ ಬರಬಹುದು. ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 4

ಕನ್ಯಾ: ಹಣ ವ್ಯಯ. ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಟೆಗೆ ಧನವ್ಯಯ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 8

ತುಲಾ: ಮಕ್ಕಳಿಂದ ಶುಭ. ಆರ್ಥಿಕ ಸ್ಥಿತಿ ಸುಧಾರಿಸುವದು. ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವದು. ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ಇದೆ. ಶುಭ ಸಂಖ್ಯೆ: 5

ವೃಶ್ಚಿಕ: ಹೊಸ ಉದ್ಯೋಗ ಚಿಂತೆ. ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗವಿದೆ. ಒಳ್ಳೆಯ ಸ್ವಭಾವ ಇರುವದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ.ಆಸಕ್ತಿಗೆ ತಕ್ಕಂತೆ ಅವಕಾಶಗಳು ದೊರಕುವವು. ಶುಭ ಸಂಖ್ಯೆ: 3

ಧನು: ಕೋಪ ತಾಪ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವದು. ವೈವಾಹಿಕ ಚಿಂತೆ ಇರುವದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ.ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ. ಶುಭ ಸಂಖ್ಯೆ: 9

ಮಕರ: ಮುಜುಗರದ ಸ್ಥಿತಿ ಸ್ವಪ್ರತಿಷ್ಟೆ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವದು. ಹಳೆಯ ಮಿತ್ರರ ಒಡನಾಟ ಸಂತಸ ತರುವುದು. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಇರುವುದು. ಶುಭ ಸಂಖ್ಯೆ: 4

ಕುಂಭ: ಶುಭ ಸುದ್ದಿ. ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ: 7

ಮೀನ: ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು. ಶುಭ ಸಂಖ್ಯೆ: 2

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937