AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today – ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು?

ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲಪಕ್ಷ, ತ್ರಯೋದಶಿ ತಿಥಿ, ಭಾನುವಾರ, ಸೆಪ್ಟೆಂಬರ್​ 19, 2021ರ ಭವಿಷ್ಯ.

Horoscope Today - ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು?
ದಿನ ಭವಿಷ್ಯ; ಭಾನುವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು?
TV9 Web
| Edited By: |

Updated on: Sep 19, 2021 | 6:48 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಶುಕ್ಲಪಕ್ಷ, ತ್ರಯೋದಶಿ ತಿಥಿ, ಭಾನುವಾರ, ಸೆಪ್ಟೆಂಬರ್​ 19, 2021. ಶತಭಿಷೆ ನಕ್ಷತ್ರ, ರಾಹುಕಾಲ: ಇಂದು ಸಂಜೆ: ಇಂದು ಸಂಜೆ 4: 43 ಇಂದ ಸಂಜೆ 6:14 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.04. ಸೂರ್ಯಾಸ್ತ: ಸಂಜೆ 6.15.

ತಾ.19-09-2021 ರ ಭಾನುವಾರದ, ರಾಶಿಭವಿಷ್ಯ.

ಮೇಷ: ಸಮಾಧಾನಕರ ದಿನವಾಗಲಿದೆ. ಹಿತವಾದ ಮಾತುಗಳು ಗೌರವವನ್ನು ವೃದ್ಧಿಸುವವು. ಆರ್ಥಿಕ ಸಂಕಷ್ಟಗಳು ಎದುರಾಗುವವು. ಸಮಾಧಾನ ಚಿತ್ತದಿಂದ ಕಾರ್ಯ ನಿರ್ವಹಿಸಿರಿ.ಹಿತೈಷಿಗಳಂತೆ ವರ್ತಿಸುವವರಿಂದ ದೂರವಿರಿ. ಶುಭ ಸಂಖ್ಯೆ:  5

ವೃಷಭ: ಗಂಭೀರ ಆರೋಪದಿಂದ ಮುಕ್ತರಾಗುವಿರಿ. ಅನುಕೂಲಕರ ವಾತಾವರಣ ಇರುವದರಿಂದ ಇನ್ನೂ ಹೆಚ್ಚಿನ ವ್ಯವಹಾರಿಕ ಸುಧಾರಣೆ ಮಾಡಲು ಪ್ರಯತ್ನಿಸಿರಿ.ಆರೋಗ್ಯದ ಸೂಕ್ತ ಕಾಳಜಿ ವಹಿಸಿರಿ. ಶುಭ ಸಂಖ್ಯೆ:  1

ಮಿಥುನ: ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಅನವಶ್ಯಕ ಭಯ ಅಗತ್ಯವಿಲ್ಲ, ನಿಮ್ಮ ಸೇವೆ ಫಲ ನೀಡುವದು. ಸಂಕಷ್ಟದ ಮಧ್ಯೆಯೂ ಸಂತೋಷದ ದಿನಗಳಿವೆ. ಆಗಂತುಕರೊಂದಿಗೆ ಜಾಗೃತೆ ಅಗತ್ಯ. ಶುಭ ಸಂಖ್ಯೆ:  9

ಕರ್ಕ: ಕೃಷಿಮೂಲದ ಲಾಭ ದೊರೆಯುವದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ.ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ. ಶುಭ ಸಂಖ್ಯೆ:  2

ಸಿಂಹ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ:  8

ಕನ್ಯಾ: ಉದಾಸೀನತೆಯಿಂದ ಕಾರ್ಯಹಾನಿ ಸಂಭವ. ಅನುಮಾನಗಳು ಮೂಡಿ ಕೈಗೊಂಡ ಕಾರ್ಯಕ್ಕೆ ವಿಘ್ನ ಉಂಟಾಗುವ ಸಂಭವವಿದೆ. ಸಾಮಾಜಿಕ ಗೌರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಶುಭ ಸಂಖ್ಯೆ:  7

ತುಲಾ: ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವದು. ಶುಭ ಸಂಖ್ಯೆ:  6

ವೃಶ್ಚಿಕ: ಹಣಕಾಸಿನ ವ್ಯವಹಾರದಲ್ಲಿ ಧೈರ್ಯದಿಂದ ಕಾರ್ಯ ಸಾಧನೆ. ಅಪೇಕ್ಷಸದ ಲಾಭ ಸಂಭವ. ಗಡಿಬಿಡಿಯ ವಾತಾವತರಣ, ಬಿಡುವಿಲ್ಲದ ಕಾರ್ಯ, ಮಿತ್ರರೊಂದಿಗೆ ಜಟಾಪಟಿ ಸಂಭವ, ದೀಪದಾನ ಮಾಡಿರಿ. ಶುಭ ಸಂಖ್ಯೆ: 5

ಧನು: ದೂರ ಪ್ರಯಾಣದ ಅವಶ್ಯಕತೆ ಕಂಡುಬರುವದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು.ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ. ಶುಭ ಸಂಖ್ಯೆ: 9

ಮಕರ: ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ. ಶುಭ ಸಂಖ್ಯೆ:  1

ಕುಂಭ: ದಿಟ್ಟತನ, ಮನೋಸ್ಥೈರ್ಯ, ನೇರ,ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವದು. ಶುಭ ಸಂಖ್ಯೆ:  3

ಮೀನ: ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ.  ಮುಂದೆ ವಿರಸಕ್ಕೆ ದಾರಿಯಾದೀತು. ಶುಭ ಸಂಖ್ಯೆ: 2

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್