ಸುಖ ಸಮೃದ್ಧ ವಿವಾಹ ಜೀವನ ಕಾಣಬೇಕಾ? ಹಾಗಾದ್ರೆ ಮದುವೆಗೆ ಮುಹೂರ್ತ ನಿಗದಿಪಡಿಸಲು ಈ ಐದು ಅಂಶ ಪಾಲಿಸಿ

TV9 Digital Desk

| Edited By: sandhya thejappa

Updated on: Sep 19, 2021 | 8:12 AM

ಕಂಕಣ ಭಾಗ್ಯಕ್ಕಾಗಿ ಮದುವೆಗೂ ಮುನ್ನ ಹುಡುಗ-ಹುಡುಗಿಯ ಜಾತಕ ಹೊಂದಾಣಿಕೆ ಶಾಸ್ತ್ರ ಮಾಡುವುದು ಉಂಟು. ಇದಾದ ಮೇಲೆ ಮದುವೆಗೆ ಮುಹೂರ್ತ ಫಿಕ್ಸ್​ ಮಾಡಲು ಸಹ ಜ್ಯೋತಿಷ್ಯದ ಆಧಾರದ ಮೇಲೆ ಸಮಯ ನೋಡುವುದು ಉಂಟು.

ಸುಖ ಸಮೃದ್ಧ ವಿವಾಹ ಜೀವನ ಕಾಣಬೇಕಾ? ಹಾಗಾದ್ರೆ ಮದುವೆಗೆ ಮುಹೂರ್ತ ನಿಗದಿಪಡಿಸಲು ಈ ಐದು ಅಂಶ ಪಾಲಿಸಿ
ಸುಖ ಸಮೃದ್ಧ ವಿವಾಹ ಜೀವನ ಕಾಣಬೇಕಾ? ಹಾಗಾದ್ರೆ ಮದುವೆಗೆ ಮುಹೂರ್ತ ನಿಗದಿಪಡಿಸಲು ಈ ಐದು ಅಂಶ ಪಾಲಿಸಿ

Follow us on

ವಿವಾಹ ಜೀವನವನ್ನು ಸುಖ ಸಮೃದ್ಧಗೊಳಿಸಬೇಕು ಎಂಬ ಪಾಲಿಸಿ ನಿಮ್ಮದಾಗಿದ್ದರೆ ಮದುವೆ ದಿನಾಂಕ ನಿಗದಿಪಡಿಸಲು ಈ ಐದು ಮಹತ್ವದ ಅಂಶಗಳನ್ನು ಪಾಲಿಸಿ. ಕಂಕಣ ಭಾಗ್ಯಕ್ಕಾಗಿ ಮದುವೆಗೂ ಮುನ್ನ ಹುಡುಗ-ಹುಡುಗಿಯ ಜಾತಕ ಹೊಂದಾಣಿಕೆ ಶಾಸ್ತ್ರ ಮಾಡುವುದು ಉಂಟು. ಇದಾದ ಮೇಲೆ ಮದುವೆಗೆ ಮುಹೂರ್ತ ಫಿಕ್ಸ್​ ಮಾಡಲು ಸಹ ಜ್ಯೋತಿಷ್ಯದ ಆಧಾರದ ಮೇಲೆ ಸಮಯ ನೋಡುವುದು ಉಂಟು. ಅದಕ್ಕೂ ಕೆಲವು ನಿಯಮಗಳಿವೆ. ಅವುಗಳನ್ನು ಪಾಲಿಸಿದರೆ ಮುಂದೆ ವಿವಾಹ ಜೀವನ ಸುಖ ಸಮೃದ್ಧಿಯಿಂದ ಕೂಡಿರುತ್ತದೆ.

ಜ್ಯೋತಿಷ್ಯದ ಪ್ರಕಾರ ಜಾತಕ ಕೂಡಿಬರುವುದು ಅತ್ಯಂತ ಮಹತ್ವದ್ದಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಜಾತಕದಲ್ಲೇನಾದರೂ ವ್ಯತ್ಯಾಸ ಕಂಡುಬಂದರೆ ಅದರ ಬಗ್ಗೆ ಜಾಗ್ರತೆ ವಹಿಸುತ್ತಾರೆ. ಹೀಗೆಯೇ ಮದುವೆ ಮುಹೂರ್ತದ ಬಗ್ಗೆಯೂ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಹುಡುಗ-ಹುಡುಗಿಯ ಜಾತಕಗಳನ್ನು ಶಾಸ್ತ್ರಗಳಿಗೆ ತೋರಿಸಿದಾಗ ಅವರು ನಾಲ್ಕಾರು ಸಮಂಜಸ ದಿನಗಳನ್ನು ನಿಗದಿಪಡಿಸಿ ಹೇಳುತ್ತಾರೆ. ಆ ವೇಳೆ, ಮದುವೆ ಮುಹೂರ್ತ ನಿಗದಿಗಾಗಿ ಈ ಕೆಳಗಿನ ನಿಮಗಳನ್ನು ಪಾಲಿಸಿ, ಸೂಕ್ತ ಸಮಯ ನಿಗದಿಪಡಿಸಬೇಕು.

ಅಪ್ಪ-ಅಮ್ಮ ಮದುವೆ ಆದ ತಿಂಗಳಲ್ಲಿಯೇ ಮುಹೂರ್ತ ಇಡಬೇಡಿ:

ಅಪ್ಪ-ಅಮ್ಮ ಮದುವೆ ಆದ ಘಳಿಗೆ, ಅದೇ ತಿಂಗಳಲ್ಲಿಯೇ ತಮ್ಮ ಮದುವೆಯ ಮುಹೂರ್ತವನ್ನು ಇಟ್ಟು ತಾವೂ ಸುಖ ಸಂತೋಷದಿಂದ ಇರಲು ಮಕ್ಕಳು ಬಯಸುತ್ತಾರೆ. ಆದರೆ ಅವರಯ ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಅಪ್ಪ-ಅಮ್ಮ ಮದುವೆಯಾದ ತಿಂಗಳಲ್ಲಿಯೇ ತಾವೂ ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಅದು ಸಲ್ಲದು. ಹಾಗಾಗಿ ಅದೇ ತಿಂಗಳಲ್ಲಿ ನೀವೂ ಮದುವೆಯಾಗಲು ಯೋಚಿಸಿಬೇಡಿ.

ಜ್ಯೇಷ್ಠ ಪುತ್ರ-ಪುತ್ರಿಯ ವಿವಾಹವನ್ನು ಜ್ಯೇಷ್ಠ ಮಾಸದಲ್ಲಿ ನಿಗದಿಮಾಡಬೇಡಿ:

ಜ್ಯೇಷ್ಠ ಪುತ್ರ-ಪುತ್ರಿಯ ವಿವಾಹವನ್ನು ಜ್ಯೇಷ್ಠ ಮಾಸದಲ್ಲಿ ನಿಗದಿಮಾಡಬಾರು. ಕ್ಯಾಲೆಂಡರ್​ ಪ್ರಕಾರ ಜ್ಯೇಷ್ಠ ಮಾಸವು ಮೇ ಮತ್ತು ಜೂನ್​ ತಿಂಗಳ ಮಧ್ಯೆ ಬರುತ್ತದೆ. ಜ್ಯೇಷ್ಠ ಮಾಸದಲ್ಲಿ ಜ್ಯೇಷ್ಠ ಪುತ್ರ ಅಥವಾ ಪುತ್ರಿಯ ವಿವಾಹವನ್ನು ಮಾಡಬಾರದು. ಅದು ಶುಭ ಅಲ್ಲ ಎನ್ನುತ್ತದೆ ಜ್ಯೋತಿಷ್ಯ. ಹಾಗಾಗಿ ಮದುವೆಗೆ ಮುಹೂರ್ತ ನಿಗದಿಪಡಿಸಲು ಈ ಅಂಶ ಪಾಲಿಸುವುದು ಒಳಿತು.

ಈ ನಕ್ಷತ್ರಗಳಲ್ಲಿ ಮದುವೆ ಆಗಬಾರದು:

ಜ್ಯೋತಿಷ್ಯದಲ್ಲಿ ಈ ನಕ್ಷತ್ರಗಳನ್ನು ಪರಿಗಣಿಸಿ, ಆ ನಕ್ಷತ್ರಗಳಲ್ಲಿ ಮದುವೆ ಆಗದಿರುವುದು ಒಳಿತು. ಅವು ಪೂರ್ವಾ ನಕ್ಷತ್ರ, ಫಾಲ್ಗುಣಿ ನಕ್ಷತ್ರ ಮತ್ತು ಪುಷ್ಯ ನಕ್ಷತ್ರದಲ್ಲಿ ವಿವಾಹ ನೆರವೇರುವುದು ಒಳ್ಳೆಯದಲ್ಲ. ಹಾಗಾಗಿ ನಿಮ್ಮ ಮದುವೆ ನಿಗದಿ ಪಡಿಸುವ ಸಂದರ್ಭದಲ್ಲಿ ಈ ಮೂರೂ ನಕ್ಷತ್ರಗಳಲ್ಲಿ ಕಂಕಣ ಕಾಲ ನಿಗದಿಯಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ನಕ್ಷತ್ರ ಅಸ್ತಮವಾಗುವ ವೇಳೆ ಮದುವೆ ಆಗುವುದು ಬೇಡ:

ನಕ್ಷತ್ರ ಮುಳುಗುವ ವೇಳೆ ಮದುವೆ ಆಗುವುದು ಬೇಡ ಅನ್ನುತ್ತದೆ ಜ್ಯೋತಿಷ್ಯ. ಗುರು ಮತ್ತು ಶುಕ್ರ ಗ್ರಹ ಕಾಣಿಸುವ ವೇಳೆ ಮತ್ತು ನಕ್ಷತ್ರಗಳು ಮುಳುಗುವ ವೇಳೆ ಮದುವೆ ಆಗುವುದು ಸರಿಯಲ್ಲ. ಜೊತೆಗೆ ಚಾತುರ್ಮಾಸದಲ್ಲಿಯೂ ಸಹ ಮದುವೆ ಆಗಬಾರದು. ಆಷಾಢದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕದ ಶುಕ್ಲ ಪಕ್ಷದ ದಶಮಿಯವರೆಗೆ, ನಾಲ್ಕು ತಿಂಗಳುಗಳ ಕಾಲ ಚಾತುರ್ಮಾಸ್ಯ ಬರುತ್ತದೆ.

ಗ್ರಹಣ ಮತ್ತು ವಿವಾಹ ಮುಹೂರ್ತ:

ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಇರುವ ಕಾಲ ಮದುವೆ ಮುಹೂರ್ತ ನಿಗದಿಪಡಿಸಬೇಡಿ. ಅಷ್ಟೇ ಅಲ್ಲ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಕಾಲಕ್ಕೆ ಮೂರು ದಿನ ಮೊದಲು ಮತ್ತು ಮೂರು ದಿನ ನಂತರದ ವರೆಗೂ ಮದುವೆ ಮುಹೂರ್ತ ಇಟ್ಟುಕೊಳ್ಳಬೇಡಿ. ಎಕೆಂದರೆ ಈ ಕಾಲದಲ್ಲಿ ಮದುವೆ ಕಾರ್ಯ ನಡೆಯುವುದು ಒಳ್ಳೆಯದಲ್ಲ.

(to keep marriage life happy and prosperous remember 5 rules to fix the date for wedding)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada