AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಮೃತ್ಯು ಸಂಭವಿಸಿದಾಗ ಮನುಷ್ಯರಿಗೆ ಇಷ್ಟವಿದ್ದರೂ ಒಂದು ಮಾತನ್ನೂ ಹೇಳಲು ಆಗುವುದಿಲ್ಲ, ಯಾಕೆ?

ಮರಣಶಯ್ಯೆಯಲ್ಲಿರುವ ವ್ಯಕ್ತಿ ತನ್ನ ಕರ್ಮಾನುಸಾರ ಮುಂದಿನ ಪಯಣಕ್ಕೆ ಸಿದ್ಧನಾಗಿಬಿಡಬೇಕು. ಪ್ರಾಣದ ಮೇಲಿನ ಮೋಹದ ಪಾಶದಲ್ಲಿ ಸಿಲುಕಬಾರದು. ಆದರೆ ಜನ ಭೂಮಿಯ ಮೇಲಿನ ಮೋಹದ ಮಾಯಾಜಾದಲ್ಲಿ ಸಿಲುಕಿಬಿಡುತ್ತಾರೆ. ಅದು ಬಿಟ್ಟರೆ ಉಸಿರನ್ನು ಸಲೀಸಾಗಿ ಚೆಲ್ಲಬಹುದು.

Garuda Purana: ಮೃತ್ಯು ಸಂಭವಿಸಿದಾಗ ಮನುಷ್ಯರಿಗೆ ಇಷ್ಟವಿದ್ದರೂ ಒಂದು ಮಾತನ್ನೂ ಹೇಳಲು ಆಗುವುದಿಲ್ಲ, ಯಾಕೆ?
ಮೃತ್ಯು ಸಂಭವಿಸಿದಾಗ ಮನುಷ್ಯರಿಗೆ ಇಷ್ಟವಿದ್ದರೂ ಒಂದು ಮಾತನ್ನೂ ಹೇಳಲು ಆಗುವುದಿಲ್ಲ, ಯಾಕೆ?
TV9 Web
| Edited By: |

Updated on: Sep 19, 2021 | 8:45 AM

Share

ಮೃತ್ಯು ಸಂಭವಿಸಿದಾಗ ವ್ಯಕ್ತಿ ಇಷ್ಟವಿದ್ದರೂ ಒಂದು ಮಾತನ್ನೂ ಆಡುವುದಿಲ್ಲ, ಯಾಕೆ? ಎಂಬುದನ್ನು ಗರುಡ ಪುರಾಣದಲ್ಲಿ ತಿಳಿಯೋಣ ಬನ್ನಿ. ಗರುಡ ಪುರಾಣದಲ್ಲಿ ಮೃತ್ಯು ಸಂಭವಿಸಿದಾಗ ವ್ಯಕ್ತಿಯಲ್ಲಿನ ಪ್ರಾಣ ಹೇಗೆ ಹೋಗುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಯ ಹೇಳಲಾಗಿದೆ. ಅದರ ಜೊತೆಗೆ ಮೃತ್ಯು ಸಂಭವಿಸಿದ ನಂತರದ ಸ್ಥಿತಿಗಳ ಬಗ್ಗೆ ಕಾಲಘಟ್ಟಗಳು ಅನುಸಾರ ಮಾರ್ಮಿಕವಾಗಿ ತಿಳಿಸಲಾಗಿದೆ. ಅದರ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ.

ಜೀವಕ್ಕೆ ಯಾವುದೇ ಖಾತ್ರಿ ಇಲ್ಲ. ಅದು ನೀರಿನ ಗುಳ್ಳೆಯಂತೆ. ಯಾವ ಕ್ಷಣ ಬೇಕಾದರೂ ಒಡೆಯಬಹುದು. ಜೀವನದ ಬಲೂನು ಠುಸ್ಸ್ ಅನ್ನಬಹುದು. ಪ್ರಾಣವಾಯುಗೆ ಯಾವುದೇ ಖಾತ್ರಿಯಿಲ್ಲ. ಯಾರಿಗೇ ಆಗಲಿ ಒಂದಲ್ಲ, ಒಂದು ದಿನ ಇಹಲೋಕ ತ್ಯಜಿಸಲೇಬೇಕು. ಪರಲೋಕ ಪ್ರಯಾಣ ಶುರು ಮಾಡಲೇಬೇಕು.

ಅದು ನಿಶ್ಚಿತ, ಖಚಿತ. ಆದರೆ ಸಾವಿಗೆ ಯಾರೂ ತಯಾರಿ ಮಾಡಿಕೊಳ್ಳುವುದಿಲ್ಲ. ಅದು ಬಂದಾಗ ಆಯ್ಕೆಗೆ ಅವಕಾಶ ಇರುವುದೇ ಇಲ್ಲ, ಜಸ್ಟ್ ಅದನ್ನು​ ಫಾಲೋ ಮಾಡಬೇಕು ಅಷ್ಟೇ. ಜೀವನದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳು, ಸುಖ ಸಂತೋಷಗಳು ಇದ್ದರೂ ಅವುಗಳನ್ನು ಬಿಡಲು ಸುತರಾಂ ಮನಸ್ಸು ಇಲ್ಲದೇ ಇದ್ದರೂ… ಜಸ್ಟ್​ ಪರಲೋಕ ಯಾತ್ರೆ ಕೈಗೊಳ್ಳಲೇಬೇಕು. ವಾಸ್ತವವಾಗಿ ಮೃತ್ಯು ಹತ್ತಿರ ಬಂದಂತೆ ಜೀವನದ ಮೇಲಿನ ಮೋಹ ಜಾಸ್ತಿಯಾಗುತ್ತದೆ.

ವಾಸ್ತವ ಹೀಗಿರುವಾಗ ವ್ಯಕ್ತಿ ತನ್ನ ಪ್ರಾಣವನ್ನು ತ್ಯಾಗ ಮಾಡಲು ಇಚ್ಛಿಸುವುದಿಲ್ಲ. ಆದರೆ ಇನ್ನು ಜೀವಿಸಲು ಸಾಧ್ಯವಾಗದು, ಮರಣ ಎದುರಿಗೇ ಇದೆ ಎಂದಾಗ ಅಂತಹ ವ್ಯಕ್ತಿ ತನ್ನವರ ಜೊತೆ ಹೆಚ್ಚು ಮಾತನಾಡಲು ಬಯಸುತ್ತಾನೆ. ಆದರೆ ಇಚ್ಛೆಯಿದ್ದರೂ ಏನೂ ಹೇಳಲಾಗದು. ಆ ವ್ಯಕ್ತಿಯ ನಾಲಿಗೆ ನಿಷ್ಕ್ರಿಯವಾಗುತ್ತದೆ. ಮಾತು ಬಂದ್​ ಆಗುತ್ತದೆ. ಇದರ ಬಗ್ಗೆ ಗರುಡ ಪುರಾಣದಲ್ಲಿ ಚೆನ್ನಾಗಿ, ಸವಿವರವಾಗಿ ಹೇಳಲಾಗಿದೆ. ಬನ್ನೀ ಅದನ್ನೇ ತಿಳಿಯೋಣ.

ಬಾಯಿ ಯಾಕೆ ಬಂದ್​ ಆಗುತ್ತದೆ ಅಂದರೆ… ಗರುಡ ಪುರಾಣದ ಪ್ರಕಾರ ಮೃತ್ತು ಘಳಿಗೆ ಹತ್ತಿರ ಬಂದಾಗ ಯಮರಾಜನ ಇಬ್ಬರು ದೂತರು ಆ ವ್ಯಕ್ತಿಯ ಎಡ-ಬಲ ಬಂದು ನಿಲ್ಲುತ್ತಾರೆ. ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ಅವರ ಸ್ವರೂಪಗಳು ಪ್ರಕಟಗೊಳ್ಳುತ್ತವೆ. ಅದನ್ನು ಕಂಡು ಗಾಬರಿ ಬೀಳುತ್ತಾರೆ. ಇನ್ನು ತನಗೆ ಉಳಿಗಾಲ ಇಲ್ಲ ಎಂಬುದು ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ಅನ್ನಿಸಿಬಿಡುತ್ತದೆ. ಆಗಲೇ ಏನೇನೋ ಬಡಬಡಾಯಿಸಲು ಬಾಯಿ ತೆರೆಯುತ್ತಾನೆ. ಮನಸ್ಸೂ ತಹತಹಿಸುತ್ತದೆ. ಆದರೆ ಉಹು: ಏನನ್ನೂ ಹೇಳಲಾಗದು. ಯಮದೂತರು ಯಮಪಾಶ ಬೀಸಿ, ದೇಹದಿಂದ ಪ್ರಾಣವಾಯುವನ್ನು ಕಿತ್ತುಕೊಂಡು ಹೋಗಲು ಸಿದ್ಧವಾಗಿಯೇ ಬಂದಿರುತ್ತಾರೆ. ಎದುರಿಗೇ ಯಮದೂತರು ಬಂದು ನಿಂತಾಗ ಬಾಯಿಂದ ಸ್ವರ ಹೊರಬರುವುದಿಲ್ಲ.

ಕಣ್ಣು ಮುಂದೆಯೇ ಕರ್ಮ ಹಾದುಹೋಗುತ್ತದೆ… ಗರುಡ ಪುರಾಣದ ಅನುಸಾರ ಯಮದೂತರು ಬಂದು ವ್ಯಕ್ತಿಯಿಂದ ಪ್ರಾಣವನ್ನು ಕಸಿಯಲು ಸಿದ್ಧವಾಗುತ್ತಾರೋ ಆ ವ್ಯಕ್ತಿಯ ಕಣ್ಣೆದುರು ಜೀವನ ಘಟನಾವಳಿಗಳ ಮೆರವಣಿಗೆ ಒಂದೊಂದಾಗಿ ಸಾಗಿಬರುತ್ತದೆ. ಅದನ್ನೇ ಕರ್ಮ ಎಂದು ಹೇಳಲಾಗುತ್ತದೆ. ಅದರ ಅನುಸಾರ ಯಮರಾಜ ಆ ವ್ಯಕ್ತಿಗೆ ನ್ಯಾಯ ದೊರಕಿಸುತ್ತಾನೆ. ಅದಕ್ಕೆಂದೇ ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಒಳ್ಳೆಯದ್ದನ್ನು ಮಾಡಿರಬೇಕು ಅನ್ನುವುದು. ಆ ಸತ್ಕಾರ್ಯಗಳೇ ಮುಂದೆ ವ್ಯಕ್ತಿಯ ಇಹಲೋಕ ಪಯಣಕ್ಕೆ ಜೊತೆಯಾಗುವುದು. ಆ ವ್ಯಕ್ತಿ ಸಂಪಾದಿಸಿದ ಯಾವುದೇ ಧನ ದೌಲತ್ತು ಅಲ್ಲ.

ಮೋಹ ಬಿಟ್ಟ ವ್ಯಕ್ತಿಗೆ ಹೆಚ್ಚು ಬಾಧೆ, ಕಷ್ಟ ಆಗುವುದಿಲ್ಲ…

ಹೌದು ಯಮದೂತರು ಯಮ ಪಾಶ ಹಿಡಿದು ಎದುರಿಗೆ ಬಂತು ನಿಂತಾಗ ಮೋಹ ಬಿಟ್ಟ ವ್ಯಕ್ತಿಗೆ ಪ್ರಾಣ ಬಿಡುವಾಗ ಹೆಚ್ಚು ಬಾಧೆ, ಕಷ್ಟ ಆಗುವುದಿಲ್ಲ. ಮರಣಶಯ್ಯೆಯಲ್ಲಿರುವ ವ್ಯಕ್ತಿ ತನ್ನ ಕರ್ಮಾನುಸಾರ ಮುಂದಿನ ಪಯಣಕ್ಕೆ ಸಿದ್ಧನಾಗಿಬಿಡಬೇಕು. ಪ್ರಾಣದ ಮೇಲಿನ ಮೋಹದ ಪಾಶದಲ್ಲಿ ಸಿಲುಕಬಾರದು. ಆದರೆ ಜನ ಭೂಮಿಯ ಮೇಲಿನ ಮೋಹದ ಮಾಯಾಜಾದಲ್ಲಿ ಸಿಲುಕಿಬಿಡುತ್ತಾರೆ. ಅದು ಬಿಟ್ಟರೆ ಉಸಿರನ್ನು ಸಲೀಸಾಗಿ ಚೆಲ್ಲಬಹುದು.

(garuda purana know why person cannot speak at the time of death even if he wants to)

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ