ದಲೈ ಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಥೀಮ್ ಹಾಡು ಸಿದ್ಧಪಡಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ವಿಐಪಿ ಮೋಷನ್ ಪಿಕ್ಚರ್ಸ್‌ಗೆ ಮತ್ತೊಂದು ಹೆಮ್ಮೆಯ ಮೈಲಿಗಲ್ಲು ಇದಾಗಿದ್ದು, 14ನೇ ದಲೈ ಲಾಮಾ ಅವರ 90ನೇ ಜನ್ಮದಿನದಂದು ಥೀಮ್ ಸಾಂಗ್ ಅನ್ನು ಸಿದ್ಧಪಡಿಸಿದೆ. ಈ ವಿಶೇಷ ಸೃಷ್ಟಿಗಾಗಿ ವಿಐಪಿ ಮೋಷನ್ ಪಿಕ್ಚರ್ಸ್ ಸಾಕಷ್ಟು ಕೆಲಸ ಮಾಡಿದೆ. ಈ ಯೋಜನೆಯು ನಮ್ಮ ಕಿರೀಟದ ಮತ್ತೊಂದು ಗರಿಯಲ್ಲ, ಆದರೆ ನಾವು ಶಾಶ್ವತವಾಗಿ ಪಾಲಿಸುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕ್ಷಣವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ನವದೆಹಲಿ, ಜುಲೈ 10: ಜುಲೈ 6ರಂದು ಆಧ್ಯಾತ್ಮಿಕ ನಾಯಕ, ಬೌದ್ಧ ಗುರು ದಲೈ ಲಾಮಾ (Dalai Lama) ಅವರ 90ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅವರ ಅನುಯಾಯಿಗಳು ಈ ಕಾರ್ಯಕ್ರಮವನ್ನು ಬಹಳ ಉತ್ಸಾಹದಿಂದ ಆಚರಿಸಿದರು. ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಭಾರತೀಯ ಪ್ರತಿನಿಧಿಗಳು ಸಹ ಭಾಗವಹಿಸಿದ್ದರು. ಈ ಸಮಾರಂಭವನ್ನು ಹೆಚ್ಚು ವಿಶೇಷವಾಗಿಸಲು ದಲೈ ಲಾಮಾ ಅವರ ಕುರಿತು ಒಂದು ಹಾಡನ್ನು ಸಹ ರಚಿಸಲಾಗಿದೆ. ದಲೈ ಲಾಮಾ ಗೌರವಾರ್ಥ ವಿಐಪಿ ಮೋಷನ್ ಪಿಕ್ಚರ್ಸ್ ನಿರ್ಮಿಸಿರುವ ಈ ವಿಡಿಯೋ-ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಗ್ಗೆ ವಿಐಪಿ ಮೋಷನ್ ಪಿಕ್ಚರ್ಸ್ ವಕ್ತಾರ ವಿಕಾಸ್ ಪರಾಶರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, “ವಿಐಪಿ ಮೋಷನ್ ಪಿಕ್ಚರ್ಸ್‌ಗೆ ಇದು ಹೆಮ್ಮೆಯ ಕ್ಷಣ. ದಲೈ ಲಾಮಾ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಥೀಮ್ ಸಾಂಗ್ ಅನ್ನು ಪ್ರಸ್ತುತಪಡಿಸಿದ್ದಕ್ಕೆ ನಮಗೆ ಹೆಮ್ಮೆಯಿದೆ. ಇದು ಶಾಂತಿ, ಕರುಣೆ ಮತ್ತು ಬುದ್ಧಿವಂತಿಕೆಯ ಸಂಕೇತವಾದ ದಲೈ ಲಾಮಾ ಅವರಿಗೆ ನಮ್ಮ ಆಧ್ಯಾತ್ಮಿಕ ಕೊಡುಗೆಯಾಗಿದೆ” ಎಂದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

