ಇನ್ನೂ 30-40 ವರ್ಷ ಬದುಕುವ ಭರವಸೆಯಿದೆ; ಅನಾರೋಗ್ಯದ ವದಂತಿ ತಳ್ಳಿಹಾಕಿದ ದಲೈ ಲಾಮಾ
ದಲೈ ಲಾಮಾ ತಮ್ಮ ಆರೋಗ್ಯದ ಕುರಿತಾದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ನಾನು ಇನ್ನೂ 30-40 ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ 90ನೇ ಹುಟ್ಟುಹಬ್ಬದ ಮುನ್ನಾದಿನ ಮಾತನಾಡಿದ ದಲೈ ಲಾಮಾ ಅನಾರೋಗ್ಯ ಮತ್ತು ಉತ್ತರಾಧಿಕಾರದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ನಾನು ಚೆನ್ನಾಗಿದ್ದೇನೆ. ಇನ್ನೂ 30-40 ವರ್ಷಗಳ ಕಾಲ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಧರ್ಮಶಾಲಾ, ಜುಲೈ 5: ತಮ್ಮ 90ನೇ ಹುಟ್ಟುಹಬ್ಬದ ಮುನ್ನಾದಿನದಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ 14ನೇ ದಲೈ ಲಾಮಾ (Dalai Lama) ಧರ್ಮಶಾಲಾದ ಮೆಕ್ಲಿಯೋಡ್ಗಂಜ್‌ನಲ್ಲಿರುವ ತ್ಸುಗ್ಲಾಗ್‌ಖಾಂಗ್ ದೇವಾಲಯದಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಮಾರಂಭದಲ್ಲಿ ಭಾಗವಹಿಸಿದರು. 15,000ಕ್ಕೂ ಹೆಚ್ಚು ಅನುಯಾಯಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ದಲೈ ಲಾಮಾ, ತಮ್ಮ ಆರೋಗ್ಯ ಮತ್ತು ಉತ್ತರಾಧಿಕಾರದ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದರು. ನಾನು ಆರೋಗ್ಯವಾಗಿದ್ದೇನೆ. ಇನ್ನೂ 3-4 ದಶಕ ಬದುಕುವ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.
ದಲೈ ಲಾಮಾ ಅವರು ತಮ್ಮ ಭಾಷಣದಲ್ಲಿ, “ಅವಲೋಕಿತೇಶ್ವರನ ಆಶೀರ್ವಾದ ನನ್ನ ಮೇಲಿದೆ ಎಂಬುದಕ್ಕೆ ನನಗೆ ಹಲವು ಚಿಹ್ನೆಗಳು ಸಿಕ್ಕಿವೆ. ನಾನು ಇಲ್ಲಿಯವರೆಗೆ ನನ್ನ ಕೈಲಾದಷ್ಟು ಮಾಡಿದ್ದೇನೆ. ಇನ್ನೂ 30ರಿಂದ 40 ವರ್ಷಗಳ ಕಾಲ ಬದುಕಲು ಆಶಿಸುತ್ತೇನೆ. ಬೌದ್ಧಧರ್ಮ ಮತ್ತು ಟಿಬೆಟಿಯನ್ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ನಾನು 130 ವರ್ಷಗಳನ್ನು ಮೀರಿ ಬದುಕಲು ಬಯಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: ದಲೈ ಲಾಮಾ ಬಿಟ್ಟು ಬೇರಾರೂ ಉತ್ತರಾಧಿಕಾರಿಯನ್ನು ನಿರ್ಧರಿಸಲು ಸಾಧ್ಯವಿಲ್ಲ; ಚೀನಾಕ್ಕೆ ಭಾರತ ಸ್ಪಷ್ಟ ಸಂದೇಶ
#WATCH | Himachal Pradesh: Celebrations underway in Dharamshala, Kangra for the 90th Birthday of Tibetan spiritual leader, the 14th Dalai Lama.
The 90th birthday of the 14th Dalai Lama is officially marked on July 6 according to the Gregorian calendar. pic.twitter.com/Tw2muTPxW0
— ANI (@ANI) July 5, 2025
ಟಿಬೆಟಿಯನ್ನರು ತಮ್ಮ ತಾಯ್ನಾಡನ್ನು ಕಳೆದುಕೊಂಡು ಭಾರತದಲ್ಲಿ ಗಡಿಪಾರು ಮಾಡಲ್ಪಟ್ಟಿದ್ದರೂ ಇತರರಿಗೆ ಸೇವೆ ಸಲ್ಲಿಸುವ ನನ್ನ ಧ್ಯೇಯವು ಬದಲಾಗಿಲ್ಲ ಎಂದು ಅವರು ಒತ್ತಿ ಹೇಳಿದರು. “ಅದು ಧರ್ಮಶಾಲಾದಲ್ಲಿರುವ ಜನರಾಗಿರಲಿ ಅಥವಾ ಪ್ರಪಂಚದ ಬೇರೆಲ್ಲಿಯೇ ಆಗಿರಲಿ, ನಾನು ಅವರ ಕಲ್ಯಾಣ ಮತ್ತು ಸಂತೋಷಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ” ಎಂದು ಅವರು ಹೇಳಿದರು.
Attended the Long Life Offering Ceremony for His Holiness The 14th Dalai Lama at The Main Temple (Tsukglagkhang) at McLeod Ganj, Dharamshala in Himachal Pradesh. Humbled to receive his blessings during this sacred occasion. pic.twitter.com/ZnEV2Lo4Rk
— Kiren Rijiju (@KirenRijiju) July 5, 2025
ದಲೈ ಲಾಮಾ ಅವರ 90ನೇ ಹುಟ್ಟುಹಬ್ಬವನ್ನು ಗುರುತಿಸಲು ಧರ್ಮಶಾಲಾದಲ್ಲಿ 1 ವಾರದ ಆಚರಣೆಯನ್ನು ಆಯೋಜಿಸಲಾಗಿದೆ. ಜುಲೈ 6ರ ಭಾನುವಾರ ನಡೆಯಲಿರುವ ಮುಖ್ಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು, ಲೋಕ ಜನಶಕ್ತಿ ಪಕ್ಷದ ನಾಯಕ ರಾಜೀವ್ ರಂಜನ್ ಸಿಂಗ್, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಮತ್ತು ದಲೈ ಲಾಮಾ ಮತ್ತು ಟಿಬೆಟಿಯನ್ ವಾದದ ದೀರ್ಘಕಾಲದ ಬೆಂಬಲಿಗರಾದ ಹಾಲಿವುಡ್ ನಟ ರಿಚರ್ಡ ಸೇರಿದಂತೆ ಹಲವಾರು ಪ್ರಮುಖ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ