ಗೇಟ್ ಬಳಿ ಕಾದು ಗುಂಡು ಹಾರಿಸಿ ಕೊಲೆ; ಪಾಟ್ನಾದಲ್ಲಿ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಸಿಸಿಟಿವಿ ವಿಡಿಯೋದಲ್ಲಿ ಸೆರೆ
ಗೇಟ್ ಬಳಿ ಕಾದು ಕುಳಿತಿದ್ದ ಬೈಕ್ ಸವಾರ ಗುಂಡು ಹಾರಿಸಿ ಪಾಟ್ನಾದಲ್ಲಿ ಗೋಪಾಲ್ ಖೇಮ್ಕಾ ಅವರನ್ನು ಕೊಲೆ ಮಾಡಿದ್ದಾರೆ. ಅವರ ಹತ್ಯೆಯಾದ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ಮಧ್ಯರಾತ್ರಿ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ಕ್ಷಣ ಶುಕ್ರವಾರ ರಾತ್ರಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾಟ್ನಾ, ಜುಲೈ 5: ಕಪ್ಪು ಹೆಲ್ಮೆಟ್ ಮತ್ತು ನೀಲಿ ಶರ್ಟ್ ಧರಿಸಿದ ಬೈಕ್ ಸವಾರನೊಬ್ಬ ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ್ ಖೇಮ್ಕಾ (Gopal Khemka) ಅವರ ನಿವಾಸದ ಮುಖ್ಯ ದ್ವಾರದಲ್ಲಿ ಕಾಯುತ್ತಿರುವುದನ್ನು ನೋಡಬಹುದು. ಗೇಟ್ ಮುಚ್ಚಿದ್ದರಿಂದ ಮತ್ತೊಂದು ಕಾರು ಉದ್ಯಮಿಯ ಕಾರು ಪಾರ್ಕಿಂಗ್ ಸ್ಥಳಕ್ಕೆ ಬಂದು ನಿಂತಾಗ, ಬೈಕ್ ಸವಾರ ಆ ಅವಕಾಶವನ್ನು ಪಡೆದುಕೊಂಡು ಮೊದಲ ಕಾರಿನಲ್ಲಿ ಚಾಲಕನ ಸೀಟಿನಲ್ಲಿ ಕುಳಿತಿದ್ದ ಗೋಪಾಲ್ ಖೇಮ್ಕಾ ಮೇಲೆ ಗುಂಡು ಹಾರಿಸಿದ. ದಾಳಿ ನಡೆಸಿದವನನ್ನು ಸೆರೆಹಿಡಿಯುವ ಮೊದಲೇ ಆತ ಆ ಸ್ಥಳದಿಂದ ಪರಾರಿಯಾಗಿದ್ದ.
ನಂತರ ಸೆಕ್ಯುರಿಟಿ ಮನೆಯ ಒಳಗಿನಿಂದ ಗೇಟ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಗೇಟ್ ತೆರೆಯುತ್ತಿದ್ದಂತೆ ಗೋಪಾಲ್ ಖೇಮ್ಕಾ ನಿರ್ಜೀವವಾಗಿ ಬಿದ್ದಿರುವುದು ಕಂಡುಬಂದಿದೆ. ಗೋಪಾಲ್ ಖೇಮ್ಕಾ ಅವರ ಕಾರಿನ ಹಿಂದೆ ಇದ್ದ ಎರಡನೇ ಕಾರಿನಲ್ಲಿದ್ದ ಪುರುಷ ಮತ್ತು ಮಹಿಳೆ ಭಯಭೀತರಾಗಿ ತಮ್ಮ ವಾಹನದಿಂದ ಹೊರಗೆ ಓಡುತ್ತಿರುವುದು ಕಂಡುಬಂದಿದೆ. ಬಿಜೆಪಿ ನಾಯಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
VIDEO | Patna, Bihar: Prominent businessman Gopal Khemka was shot dead near his residence in Patna by a bike-borne assailant late Friday. CCTV visuals of the incident.#PatnaNews #BiharNews
(Viewers discretion is advised)
(Source: Third Party) pic.twitter.com/4prOkBy3zH
— Press Trust of India (@PTI_News) July 5, 2025
ಇದನ್ನೂ ಓದಿ: ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು 11 ಲಕ್ಷ ರೂ. ಕಳ್ಳತನ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಬಳಿಯ ಪನಾಚೆ ಹೋಟೆ ಬಳಿಯ ಅವರ ನಿವಾಸದ ಹೊರಗೆ ಈ ಕೊಲೆ ನಡೆದಿದೆ. ಅವರು ಟ್ವಿನ್ ಟವರ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ಈ ಸ್ಥಳದಿಂದ ಗುಂಡು ಮತ್ತು ಶೆಲ್ ಪತ್ತೆಯಾಗಿದೆ. ಈ ಘಟನೆಯ ತನಿಖೆಗಾಗಿ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ ಮತ್ತು ಅಪರಾಧದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಇದೇ ರೀತಿ ಉದ್ಯಮಿಯ ಮಗ ಗುಂಜನ್ ಖೇಮ್ಕಾ ಅವರನ್ನು ಡಿಸೆಂಬರ್ 2018ರಲ್ಲಿ ಹಾಜಿಪುರದಲ್ಲಿ ಕೊಲ್ಲಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Sat, 5 July 25