AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ಈ ರಾಶಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುವರು

2023 ಫೆಬ್ರವರಿ 11 ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುವರು
ಪ್ರಾತಿನಿಧಿಕ ಚಿತ್ರImage Credit source: uidownload.com
TV9 Web
| Edited By: |

Updated on: Feb 11, 2023 | 6:03 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 11 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ :ಶನಿ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಶೂಲ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06:59 ಗಂಟೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ. ರಾಹು ಕಾಲ 09: 53 – 11:20, ಯಮಘಂಡ ಕಾಲ 02:02 ರಿಂದ 03 :41, ಗುಳಿಕ ಕಾಲ 06:59 ರಿಂದ 08:26.

ಮೇಷ: ಕುಟುಂಬಕ್ಕೆ ಸಂಬಂಧಪಟ್ಟಂತೆ ಜವಾಬ್ದಾರಿಗಳು ಅಧಿಕಗೊಳ್ಳಬಹುದು‌. ಕಾರ್ಯದ ಒತ್ತಡದಿಂದ ನಿಮ್ಮವರಿಗೆ ಸಮಯವನ್ನು ಕೊಡಲು ಕಷ್ಟವಾಗಬಹುದು. ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮ‌ಅನಿವಾರ್ಯತೆಯನ್ನು ಅರಿತು ನಿಮ್ಮವರು ನಿಮಗೆ ಧನಸಹಾಯವನ್ನು ಮಾಡಲಿದ್ದಾರೆ. ಪ್ರೇಮಿಯ ಜೊತೆ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಅತಿಯಾದ ಕುತೂಹಲಿಗಳಾದ ನೀವು ನಿರಂತರ ಅನ್ವೇಷಣೆಯಲ್ಲಿ ಹೊಸತನವನ್ನು ಹುಡುಕುವುದರಲ್ಲಿ ತೊಡಗುವಿರಿ.

ವೃಷಭ: ಮುಖಭಂಗದ ಸನ್ನಿವೇಶಗಳು ಎದುರಾಗಬಹುದು. ಅವಕಾಶಗಳನ್ನು ಸದಾ ಬಳಸಿಕೊಂಡು ನಿಮ್ಮ ಶ್ರೇಯಸ್ಸಿನ ಕಾರಣೀಕರ್ತರಾಗುವಿರಿ. ದೇಹಾಲಸ್ಯದಿಂದ ಹೊರಬಂದು ಸಾಧಿಸುವ ಛಲವಿರಬೇಕಾಗಿ ಬರಬಹುದು. ಸಮಯಕ್ಕೆ ಸರಿಯಾದ ಕೆಲಸಗಳನ್ನು ಮಾಡಿ ಮುಗಿಸಿ. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ಎಲ್ಲವನ್ನೂ ಪಡೆಯಲು ಪ್ರಯತ್ನಿಸಿ. ಧನಾತ್ಮಕವಾದ ಚಿಂತನೆಗಳು ನಿಮಗೆ ಉತ್ತಮವಾದ ಮಾರ್ಗವನ್ನು ತೋರಿಸುವುವು. ಕ್ಷಣವನ್ನೂ ಆನಂದಿಸಿ.

ಮಿಥುನ: ಇಂದು ನಿಮ್ಮ ಸಂಗಾತಿಯ ಮೇಲೆ ಹೆಚ್ಚು ಪ್ರೀತಿ ಉಂಟಾಗಬಹುದು. ಆರೋಗ್ಯವು ಸರಿಯಾಗುತ್ತಾ ಇರುತ್ತದೆ. ವಿದ್ಯಾರ್ಥಿಗಳು ಓದನ್ನು ಗಂಭೀರವಾಗಿ ತೆಗೆದುಕೊಳ್ಳುವರು. ಸಹೋದರರ ನಡುವೆ ಸಲುಗೆ ಅತಿಯಾಗುವುದು. ವಿದ್ಯುಪಕರಣದಿಂದ ಹಣ ನಷ್ಟವಾಗಬಹುದು. ಬಂಧುಗಳ ನಡೆವೆ ಕಲಹಾದಿಗಳು ಆಗಬಹುದು. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ಅಧಿಕಶ್ರಮವು ಇಂದು ವ್ಯರ್ಥವಾಗುವುದು. ಉತ್ತಮವಾದ ಯೋಚನೆಗಳನ್ನು ಬದಲಿಸಬೇಡಿ.

ಕರ್ಕ: ಅನುಚಿತವಾದ ನಿರ್ಧಾರಗಳನ್ನು ತೆಗದುಕೊಳ್ಳುವ ಸಾಹಸಕ್ಕೆ ಹೋಗಬೇಡಿ. ನೀವಿಂದು ವಿನಾಕಾರಣ ಸಿಟ್ಟಾಗುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೇ ಇರಬೇಕು ಎನ್ನುವ ಮಾನಸಿಕ ಸ್ಥಿತಿಯಿಂದ ಹೊರ ಬನ್ನಿ. ಇಂದು ಜಗತ್ತಿನ ವೈಶಾಲ್ಯ ಅರ್ಥವಾಗಬಹುದು. ಚಿಂತಿತ ಕಾರ್ಯವು ಸ್ಥಗಿತಗೊಳಿಸಬೇಕಾಗಬಹುದು. ಹಿರಿಯರ ನ ಅಲಕ್ಷ್ಯ ಮಾಡಬೇಡಿ. ಗುರಿಯ ಕಡೆಗೆ ನಿಮ್ಮ ಗಮನವು ಹೆಚ್ಚಿರಲಿ. ತಪ್ಪಿನ ಅರಿವಾಗಿ ನೀವಿಂದು ಪಶ್ಚಾತ್ತಾಪಪಡಬಹುದು.

ಸಿಂಹ: ನಿಮಗೆ ಇಂದು ಅಪವಾದಗಳು ಬರಬಹುದು. ಸತ್ಯಾಸತ್ಯತೆಯನ್ನು ನೀವೇ ಪರೀಕ್ಷಿಸಿಕೊಳ್ಳಿ. ಅಕಾರಣವಾಗಿ ಯಾರ ಮೇಲೂ ಸಂದೇಹಗಳು ಬೇಡ. ಕಛೇರಿಯಲ್ಲಿ ಕಾರ್ಯದ ಒತ್ತಡವಿರಲಿದೆ. ಕಳೆದುದುದರ ಬಗ್ಗೆ ನಿಮಗೆ ದುಃಖ ಬೇಡ. ಉದ್ಯೋಗದ ಸ್ಥಳದಿಂದ ನೀವು ಹೊರಗುಳಿಯುವ ಸಾಧ್ಯತೆ ಇದೆ. ಆರೋಗ್ಯದ ಚಿಂತೆಯೊಂದು ನಿಮ್ಮನ್ನು ಕಾಡಬಹುದು. ಅತಿಯಾದ ಉತ್ಸಾಹದಿಂದ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವಿರಿ. ಖರ್ಚನ್ನು ಕಡಿಮೆ ಮಾಡುವ ತಂತ್ರಗಳನ್ನು ಹೆಣೆಯುವಿರಿ.

ಕನ್ಯಾ: ಹತ್ತಾರು ಬಾರಿ ಸುತ್ತಾಟದ ಅನಂತರ ನಿಮ್ಮ ಕೆಲಸಗಳು ಆಗಲಿವೆ. ಅಮೂಲ್ಯವಾದ ಸಂಪತ್ತನ್ನು ಕಳೆದುಕೊಳ್ಳುವ ಭೀತಿ ಎದುರಾಗುವುದು. ಶಿಸ್ತು ನಿಮಗೆ ಅಭ್ಯಾಸವಾದ ಕಾರಣ ಅಶಿಸ್ತು ಕಂಡಲ್ಲಿ ಕೋಪಗೊಳ್ಳುವಿರಿ. ಅವಿದ್ಯಾವಂತರ ಸಹವಾಸದಿಂದ ನಿಮಗೆ ಮುಖಭಂಗವಾಗಲಿದೆ‌. ಅಪರಿಚಿತವಾದ ದೂರವಾಣಿ ಕರೆಯಿಂದ ಚಿಂತೆ ಆರಂಭವಾಗುವುದು. ಸ್ಪಷ್ಟವಾದ ಗುರಿಯ ಜೊತೆ ಹೆಜ್ಜೆ ಹಾಕಿ. ನಿಮ್ಮ ಪತ್ನಿಯಿಂದ ಬೇಕಾದ ಸಹಾಯಗಳು ದೊರೆಯಲಿದೆ.

ತುಲಾ: ಹೂಡಿಕೆಯನ್ನು ಮಾಡಲು ಇಚ್ಛಿಸಿದರೆ ಅಲ್ಪ ಹಣವನ್ನು ಮೊದಲು ಹಾಕಿದ ಫಲಿತಾಂಶದ ಆಧಾರದ ಮೇಲೆ ಮುಂದುವರಿಯಿರಿ. ನೂತನ ವಸ್ತ್ರಗಳನ್ನು ಧರಿಸಿ ಆನಂದಿಸುವಿರಿ‌‌. ಸಂಬಂಧಗಳ ನಡುವೆ ಇರುವ ವೈಮನಸ್ಯವು ದೂರವಾಗುವುದು. ನೆಮ್ಮದಿಯ ಉಸಿರನ್ನು ನೀವು ಬಿಡುವಿರಿ. ಅಜ್ಞಾತವಾದ ಸ್ಥಳದಲ್ಲಿ ವಾಸ, ಅಪರಿಚಿತ ಭೇಟಿಯು ನಿಮ್ಮಲ್ಲಿ ತಳಮಳವನ್ನು ಉಂಟುಮಾಡುವುದು. ಸಂಗಾತಿಯ ಒತ್ತಾಯಕ್ಕೆ ಮಣಿದು ನೀವಿಂದು ವಾಹನವನ್ನು ಖರೀದಿಸುವಿರಿ. ನೂತನವಾದ ಸಂಬಂಧಗಳು ಆಗಲಿವೆ.

ವೃಶ್ಚಿಕ: ಇಂದು ನೀವು ಇಚ್ಛಾಶಕ್ತಿಯ ಬಲದಿಂದ ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಸಮಾರಂಭದಲ್ಲಿ ಭಾಗವಹಿಸುವ ತೀರ್ಮಾನಕ್ಕೆ ಬರುವಿರಿ. ವಾಸಿಯಾಗಿದೆ ಎಂದುಕೊಂಡ ಖಾಯಿಲೆಯು ಇಂದು ಪುನಃ ಕಾಣಿಸಿಕೊಳ್ಳಲಿದೆ. ವೈದ್ಯರ ಭೇಟಿ ಮಾಡಿ ಬೇಕಾದ ಔಷಧೋಪಚಾರಗಳನ್ನು ಮಾಡುವುದು ಒಳ್ಳೆಯದು. ಆಲಸ್ಯವಿದ್ದರೆ ಸ್ವಲ್ಪ ವಿಶ್ರಾಂತಿಯನ್ನು ಪಡೆದು ಕಾರ್ಯವನ್ನು ಮಾಡಿ. ಆರ್ಥಿಕಸ್ಥಿತಿಯು ತಕ್ಕಮಟ್ಟಿಗೆ ಸುಧಾರಿಸಲಿದೆ. ಯುಕ್ತಿಯಿಂದ ಕೆಲಸಗಳನ್ನು ಮಾಡಿ.

ಧನುಸ್ಸು: ಮಕ್ಕಳ ವಿಚಾರದಲ್ಲಿ ನಿಮಗೆ ತೊಂದರೆಗಳು ಬರಬಹುದು. ಆ ಕುರಿತು ಮಕ್ಕಳ ಪರ ನೀವು ನಿಂತುಕೊಳ್ಳಬೇಕಾಗಬಹುದು. ವ್ಯವಹಾರದಲ್ಲಿ ಮೋಸ ಆಗುವ ಸಾಧ್ಯತೆ ಇದೆ. ಅನಾರೋಗ್ಯವನ್ನು ಅಲಕ್ಷಿಸಬೇಡಿ. ನಿಮ್ಮ ಹಾಸ್ಯಪ್ರವೃತ್ತಿಯಿಂದ ಕೆಲವರಿಗೆ ನೋವಾಗಬಹುದು. ಸತ್ಯವನ್ನು ತಿಳಿಸುವ ರೀತಿಯಲ್ಲಿ ತಿಳಿಸಿ. ಯಾರದೋ ಮಾತು ನಿಮಗೆ ಬೇಸರವನ್ನು ತರಿಸಬಹುದು. ಒಂದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಹೋಗಿ ಮನಸ್ಸನ್ನು ಗಾಯ ಮಾಡಿಕೊಳ್ಳಬೇಡಿ. ಸ್ವತಂತ್ರವಾದ ಆಲೋಚನೆಗಳು ನಿಮ್ಮ ಉದ್ಧಾರಕ್ಕೆ ಕಾರಣವಾಗುವುದು.

ಮಕರ: ಒಂದು ಸಣ್ಣ ನಿರಾಸಕ್ತಿ ಇರುತ್ತದೆ. ನೀವು ಸ್ವಲ್ಪ ಖಿನ್ನತೆ ಮತ್ತು ನಿರಾಶೆ ಅನುಭವಿಸಬಹುದು. ಈ ಪ್ರಯೋಜನಕಾರಿ ಬದಲಾವಣೆಯು ಅಂತಿಮವಾಗಿ ನೀವು ಭಾಗವಹಿಸಲು ಮತ್ತು ಗುಂಪಿನ ವಿಷಯಗಳನ್ನು ಹೆಚ್ಚು ಮೌಲ್ಯೀಕರಿಸಲು ಅನುಮತಿಸುತ್ತದೆ. ನೀವು ಉತ್ತಮ ಸಮಯವನ್ನು ಹೊಂದುವ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಗೌರವಿಸುತ್ತೀರಿ ಮತ್ತು ಅವರ ಬಗ್ಗೆ ಚಿಂತಿಸುವುದನ್ನು ತೋರಿಸಲು ನಿಮಗೆ ಸಾಧ್ಯವಾಗುತ್ತದೆ ಏಕೆಂದರೆ ನಿಮ್ಮ ವಿರೋಧಿಗಳು ನಿಮ್ಮನ್ನು ಎದುರಿಸಲು ಸಿದ್ಧರಿರುವುದಿಲ್ಲ ಮತ್ತು ಯಾರೂ ನಿಮ್ಮನ್ನು ವಿರೋಧಿಸಲು ಬಯಸುವುದಿಲ್ಲ.

ಕುಂಭ: ಸಮಯದಲ್ಲಿ ನೀವು ಲವಲವಿಕೆ ಮತ್ತು ಆತ್ಮವಿಶ್ವಾಸವನ್ನು ಅನುಭವಿಸುವಿರಿ. ನಿಮ್ಮ ಪ್ರಭಾವ ಮತ್ತು ಶಕ್ತಿಯನ್ನು ಬಳಸಿಕೊಳ್ಳುವುದನ್ನು ನೀವು ಮುಂದುವರಿಸುತ್ತೀರಿ. ಅಲ್ಪಾವಧಿಯ ಪ್ರಯಾಣವನ್ನು ಮಾಡುವುದು ಪ್ರಯೋಜನಕಾರಿಯಾಗಿರುವುದರಿಂದ ಸಲಹೆ ನೀಡಲಾಗುತ್ತದೆ. ನೀವು ಇಚ್ಛೆಯಂತೆ ಹಣವನ್ನು ಖರ್ಚು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ ನಂತರ ನೀವು ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ, ನೀವು ಪ್ರಚಾರವನ್ನು ಪಡೆಯಬಹುದು.

ಮೀನ: ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಜಯಶಾಲಿಯಾಗಬಹುದು. ನಿಮ್ಮ ಹಿಂದಿನ ಸಮಸ್ಯೆಗಳನ್ನು ಪರಿಹರಿಸುವಾಗ ನೀವು ನಿಮ್ಮ ಜೀವನವನ್ನು ನಡೆಸಬಹುದು. ಅದ್ಭುತ ಸಮಯಗಳು ಸಮೀಪಿಸುತ್ತಿದ್ದಂತೆ ನಿಮ್ಮ ಕೆಲಸದ ಹೊರೆ ಏರಲು ಪ್ರಾರಂಭವಾಗುತ್ತದೆ, ಮೋಜಿನ ಚಟುವಟಿಕೆಗಳಿಗೆ ಗಣನೀಯವಾಗಿ ಕಡಿಮೆ ಉಚಿತ ಸಮಯವನ್ನು ನೀಡುತ್ತದೆ. ಅರ್ಜಿದಾರರು ಮುಂದಿನ ಸುತ್ತಿನ ಸಂದರ್ಶನಕ್ಕೂ ಹೋಗಬಹುದು. ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಆದರೆ ನೀವು ಸರಿಯಾಗಿ ಮಾಡುವಿರಿ.

ಲೋಹಿತಶರ್ಮಾ, ಇಡುವಾಣಿ

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ