AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 12ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 12ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 12ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರImage Credit source: thesun.co.uk
TV9 Web
| Edited By: |

Updated on: Feb 12, 2023 | 5:03 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 12ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮಾತನಾಡುವಾಗ ಹೇಳಿದ್ದೇ ಹೇಳುತ್ತಿದ್ದೀರಾ ಎಂಬುದನ್ನು ಆಲೋಚಿಸಿ, ಮಾತನಾಡಿ. ತುಂಬ ಸಮಯದ ಒತ್ತಡದಲ್ಲಿ ಕೆಲಸ ಮಾಡುವವರಿಗೆ ನಿಮ್ಮೊಡನೆ ಮಾತು ಬೇಸರ ಆಗಿಬಿಟ್ಟರೆ ವ್ಯವಹಾರ, ಉದ್ಯೋಗ ಎಲ್ಲಕ್ಕೂ ಕಷ್ಟವಾದೀತು. ಇನ್ನು ಪಾರದರ್ಶಕವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ವೈದ್ಯರ ಬದಲಾವಣೆ ಮಾಡುವ ಮುನ್ನ ಸರಿಯಾಗಿ ಆಲೋಚಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಚತುರೋಪಾಯಗಳಾದ ಸಾಮ, ದಾನ, ಭೇದ, ದಂಡ ಹೀಗೆ ಯಾರಿಗೆ ಯಾವುದನ್ನು ಬಳಸಿ ಕೆಲಸ ಮಾಡಿಸಿಕೊಳ್ಳಬೇಕೋ ಅದನ್ನು ಬಳಸಿ, ಕೆಲಸ ಪೂರ್ಣಗೊಳಿಸುವ ಬಗ್ಗೆ ಆಲೋಚಿಸಿ. ವಿವಾಹಿತರಿಗೆ ಅದರ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಮೂಡುವ ಸಾಧ್ಯತೆ ಇದೆ. ಇದರಿಂದ ಉಪದ್ರವ, ಅವಮಾನ ಎರಡೂ ಅನುಭವಿಸಬೇಕಾದೀತು, ಎಚ್ಚರ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಕೈಕೆಳಗೆ ಕೆಲಸ ಮಾಡುವವರ ವಿಚಾರದಲ್ಲಿ ಒಂದಿಷ್ಟು ಉದಾರಿಗಳಾಗಿ ಆಲೋಚನೆ ಮಾಡಿ. ಅದರಲ್ಲೂ ಬಾಸ್ ಆಗಿರುವವರು, ಯಜಮಾನರಾಗಿರುವವರು ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು. ಈ ದಿನ ಸಮಯಾವಕಾಶ ಆದಲ್ಲಿ ವಿಷ್ಣುವಿನ ದೇವಾಲಯಕ್ಕೆ ಭೇಟಿ ನಿಡಿ, ದರ್ಶನ ಮಾಡಿಕೊಂಡು, ಹತ್ತು ನಿಮಿಷವಾದರೂ ಅಲ್ಲಿ ಕೂತಿದ್ದು ಬನ್ನಿ. ಚಿನ್ನಾಭರಣ- ವಸ್ತ್ರಗಳ ಖರೀದಿಗೆ ಹಣ ಖರ್ಚು ಮಾಡುವ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸಂಬಂಧಿಕರು ಈ ದಿನ ನಿಮ್ಮಿಂದ ನೆರವು ಬಯಸುವಂಥ ಸಾಧ್ಯತೆ ಇದೆ. ನಿಮ್ಮಿಂದ ಇದು ಮಾಡುವುದಕ್ಕೆ ಸಾಧ್ಯವಿದ್ದಲ್ಲಿ ಖಂಡಿತಾ ನೆರವಾಗಿ. ದೃಢವಾಗಿ ನಿಶ್ಚಯಿಸಿ, ನೀವು ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಮನೆಯಿಂದ ಹೊರಡುವಾಗ ಸುಬ್ರಹ್ಮಣ್ಯ ಸ್ವಾಮಿಯನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಹೊರಡಿ. ಮುಖಕ್ಕೆ ಸಂಬಂಧಿಸಿದ ಅಲರ್ಜಿಗಳು ಆಗಬಹುದು, ಜಾಗ್ರತೆ ಅಗತ್ಯ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಗಾಗಿ ಈ ದಿನ ಖರ್ಚು ಮಾಡಲಿದ್ದೀರಿ. ಬೇರೆಯವರ ಹಣಕಾಸಿನ ವಿಚಾರಕ್ಕೆ ನಿಮ್ಮ ಸಲಹೆ, ಸೂಚನೆಗಳನ್ನು ನೀಡಲು ಹೋಗದಿರಿ. ಒಂದೋ ಇದರಿಂದ ನಿಮ್ಮ ಮೇಲೆ ಅವರು ಆರ್ಥಿಕ ವಿಚಾರಕ್ಕೆ ಅವಲಂಬನೆ ಆಗುವಂತೆ ಸನ್ನಿವೇಶ ಸೃಷ್ಟಿ ಆಗುತ್ತದೆ ಅಥವಾ ನಿಮಗೆ ಯಾಕೆ ಬೇಕಿತ್ತು ಈ ಉಸಾಬರಿ ಎಂಬಂತೆ ಹೀಗಳಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ. ಈ ದಿನ ಸಾಧ್ಯವಾದಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸಣ್ಣ- ಪುಟ್ಟ ವಿಚಾರಗಳಿಗೂ ಸಿಟ್ಟು ಮಾಡಿಕೊಳ್ಳಲಿದ್ದೀರಿ. ಕಾಲಿನ ಪಾದದಲ್ಲಿ ಸಮಸ್ಯೆಗಳು ಕಾಣಿಸಬಹುದು. ನೀವು ಬಳಸುವ ಪಾದರಕ್ಷೆ ಬಗ್ಗೆ ಗಮನ ನೀಡಿ ಹಾಗೂ ಬರಿಗಾಲಲ್ಲಿ ನಡೆದಾಡುವ ಸನ್ನಿವೇಶಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳಿ. ನಿಶ್ಚಿತ ಆದಾಯವನ್ನು ತಂದುಕೊಳ್ಳುವ ಉದ್ದೇಶದಿಂದ ಪ್ರಯತ್ನಗಳನ್ನು ಮಾಡುತ್ತಿರುವವರಿಗೆ ಸರಿಯಾದ ದಾರಿ ಕಾಣಿಸಲಿದೆ. ಅಗತ್ಯ ಬಿದ್ದಲ್ಲಿ ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾರದೋ ತಪ್ಪಿಗೆ, ಆತುರದ ತೀರ್ಮಾನಕ್ಕೆ ನೀವು ತಲೆ ಕೊಡುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಮೊದಲಿಂದ ಎಲ್ಲವನ್ನೂ ಶುರು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ನಿಮ್ಮ ಏಕಾಗ್ರತೆ ಈ ದಿನ ಕಾಪಾಡಬೇಕಿದೆ. ಆದ್ದರಿಂದ ಎಲ್ಲಿ, ಏನು ಮಾತನಾಡಬೇಕು ಹಾಗೂ ಈ ಹಿಂದೆ ಏನೇನು ಮಾತನಾಡಿದ್ದೀರಿ ಎಲ್ಲವನ್ನೂ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ. ಪ್ರಯಾಣದಿಂದ ಲಾಭ ಆಗುವ ಅವಕಾಶಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಧಾನವೇ ಪ್ರಧಾನ ಹಾಗೂ ಆಲಸ್ಯಂ ಅಮೃತಂ ವಿಷಂ ಇವೆರಡಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಿ. ಯಾವ ಕೆಲಸಕ್ಕೆ ಆಲೋಚನೆ ಹಾಗೂ ಸಮಯಾವಕಾಶದ ಅಗತ್ಯ ಇದೆಯೋ ಅದರ ಕಡೆಗೆ ಲಕ್ಷ್ಯ ಕೊಡಿ. ಏನು ಯಾವುದಕ್ಕೆ ಆ ಕೂಡಲೇ ಸ್ಪಂದಿಸುವ ಹಾಗೂ ಪ್ರತಿಕ್ರಿಯಿಸುವ ಅಗತ್ಯ ಇದೆಯೋ ಅದಕ್ಕೆ ತಕ್ಕಂತೆ ವರ್ತಿಸಿ. ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿಮ್ಮ ಮರೆವಿನಿಂದ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮ ಮಾತಿನ ಪ್ರಭಾವ ಇತರರ ಮೇಲೆ ಆಗಿ, ಜನಪ್ರಿಯರಾಗಲಿದ್ದೀರಿ. ನೀರು ಸೇವನೆ ಮಾಡುವಾಗ, ಅಂದರೆ ಮನೆಯಲ್ಲಾಗಲೀ ಅಥವಾ ಹೊರಗಡೆಯೇ ಆಗಲೀ ಶುದ್ಧತೆ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಿ. ಸ್ಥಳ ಬದಲಾವಣೆ ಮಾಡಿದ್ದರಂತೂ ಈ ಬಗ್ಗೆ ಇನ್ನೂ ಹೆಚ್ಚು ಎಚ್ಚರಿಕೆ ತೆಗೆದುಕೊಳ್ಳಬೇಕು. ವ್ಯಕ್ತಿಯೊಬ್ಬರ ಪರಿಚಯ ಬಹಳ ದೀರ್ಘ ಕಾಲ ಅನುಕೂಲ ಮಾಡಿಕೊಡಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ