ಪ್ರಾತಿನಿಧಿಕ ಚಿತ್ರ
Image Credit source: zeenews
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 05 ರವಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ : ಪೂರ್ವಾಷಾಢ, ಪುಷ್ಯ ಮಾಸ, ಶುಕ್ಲ ಪಕ್ಷ, ಗುರುವಾರ, ಚತುರ್ದಶೀ ತಿಥಿ, ಮೃಗಶಿರಾ ನಿತ್ಯನಕ್ಷತ್ರ, ಶುಕ್ಲ ಯೋಗ, ಗರಜ ಕರಣ, ಸೂರ್ಯೋದಯ: 07 ಗಂಟೆಗೆ, ಸೂರ್ಯಾಸ್ತ – 06 ಗಂಟೆ 15 ನಿಮಿಷಕ್ಕೆ. ಶುಭಾಶುಭಕಾಲ: ರಾಹು ಕಾಲ 2:02 ರಿಂದ 3:27, ಯಮಘಂಡ ಕಾಲ 07:00 ಯಿಂದ 08:25, ಗುಳಿಕ ಕಾಲ 09:49 ರಿಂದ 11:14ರ ವರೆಗೆ.
ತಾ. 04-01-2023 ರ ರಾವಿವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ಆಪ್ತಮಿತ್ರರು ನಿಮ್ಮ ಬಳಿ ಅನಿವಾರ್ಯದ ಕಾರಣದಿಂದ ಹಣವನ್ನು ಕೇಳಬಹುದು. ಪೂರ್ವಾಪರವನ್ನು ವಿಚಾರಿಸಿ ನೀಡಿ. ನೀವು ಹೋಗುವ ದಾರಿಯ ಬಗ್ಗೆ ಸ್ಪಷ್ಟತೆ ಇರಲಿ. ಏಕಾಂತವನ್ನು ಬಯಸುವಿರಾದರೂ ಇಂದು ಜನರೊಂದಿಗೆ ಒಡನಾಡುವುದು ಒಳ್ಳೆಯದು. ಆರೋಗ್ಯವು ಸ್ವಲ್ಪ ಹದವನ್ನು ತಪ್ಪಿದ್ದರೂ ಅದನ್ನು ಲೆಕ್ಕಿಸದೇ ಮುಂದುವರಿಯಿರಿ. ಇಲ್ಲವಾದರೆ ಅದೇ ನಿಮ್ಮ ದುರ್ಬಲವಾದ ಮನಸ್ಸನ್ನು ಆವರಿಸುವುದು.
- ವೃಷಭ: ಇಂದು ನಿಮಗೆ ನೀವು ಮಾಡುವ ಕೆಲಸದಲ್ಲಿ ಭಯವುಂಟಾಗಲಿದೆ. ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುನ್ನಡೆಯಿರಿ. ಇನ್ನೊಬ್ಬರ ಕುರಿತು ಅತಿಯಾದ ದಯೆಯು ನಿಮಗೆ ಬರಬಹುದು. ಇದೇ ನಿಮಗೆ ಮುಳುವಾಗುವುದು. ಹೊಸಬರ ಪರಿಚಯವಾಗಲಿದೆ. ಕಾರ್ಯದಲ್ಲಿ ನಿಮಗಿರುವ ತಾದಾತ್ಮ್ಯದಿಂದ ಪ್ರಶಂಸೆಗಳು ಸಿಗಬಹುದು. ಉದ್ಯಾನವನದಲ್ಲಿ ನೀವು ಇಂದು ಸಂಚಾರಮಾಡಿ, ಆಹ್ಲಾದವನ್ನು ಪಡೆಯಲಿದ್ದೀರಿ. ರಾತ್ರಿ ಬಿದ್ದ ಕನಸಿನಿಂದ ಭಯಗೊಳ್ಳುವ ಅವಶ್ಯಕತೆಯಿಲ್ಲ.
- ಮಿಥುನ: ಸಣ್ಣ ವಿಷಯಗಳನ್ನು ದೊಡ್ಡ ಮಾಡಿಕೊಳ್ಳಲು ಹೋಗಬೇಡಿ. ಗಾಯನ್ನು ತೆರಚಿ ಹುಣ್ಣು ಮಾಡಿಕೊಂಡಂತೆ. ಯಾರದರೂ ಏನಾದರು ನಿಮ್ಮ ಬಗ್ಗೆ ಹೇಳಿದರೆ ಕೋಪವು ಬರಬಹುದು. ಅದಕ್ಕೆ ಪ್ರತಿಕ್ರಿಯಿಸಿ ಮನಸ್ಸನ್ನು, ಸಂಬಂಧಗಳನ್ನು ಹಾಳುಮಾಡಿಕೊಳ್ಳವೇಡಿ. ಏನನ್ನಾದರೂ ಹೊಸತನವನ್ನು ಕಳಿಯಬೇಕು ಎನ್ನುವ ಆಸೆ ನಿಮ್ಮಲ್ಲಿ ಮೂಡಬಹುದು. ಸಂಬಂಧಗಳಿಂದ ಸಹಾಯವನ್ನು ಇಂದು ನಿರೀಕ್ಷಿಸಿದರೆ ತಪ್ಪಾಗದು. ಉದ್ಯೋಗಸ್ಥಳದಲ್ಲಿ ನಿಶ್ಷಿಂತೆಯಿಂದ ಇರಿ.
- ಕರ್ಕ: ಉಚಿತವೆಲ್ಲವೂ ಯೋಗ್ಯವಲ್ಲ ಎಂಬ ಗಿಳಿಪಾಠ ನಿಮಗೆ ಗೊತ್ತಿದ್ದರೂ ಅತ್ತಕಡೆಗೇ ಗಮನವಿರಲಿದೆ. ನಿಮ್ಮ ಸಾಮರ್ಥ್ಯವನ್ನು ವ್ಯರ್ಥಮಾಡಿಕೊಳ್ಳಬೇಡಿ. ನಿಮ್ಮನ್ನು ಯಾರೂ ಗಮನಿಸರು ಎಂಬ ಭಾವನೆ ಬೇಡ. ಧಾರ್ಮಿಕ ಕಾರ್ಯಗಳು ನಿಮ್ಮ ಮನಸ್ಸಿನ ಸಂತೋಷಕ್ಕೆ ಕಾರಣವಾಗಬಹುದು. ಅಂದುಕೊಂಡಿದ್ದು ಆಗಿಲ್ಲ ಎಂಬ ಕೊರಗು ನಿಮ್ಮಲ್ಲಿ ಬೇಸರವನ್ನು ತರಿಸಬಹುದು. ನಿಮಗೆ ಬೇಕಾದುದನ್ನು ನೀಡಲು ದೈವಕ್ಕೆ ಸಮಯ ಕೊಡಿ. ತಾಳ್ಮೆಯನ್ನು ನೀವು ಬೆಳೆಸಿಕೊಳ್ಳಿ. ವಿವಾಹಕ್ಕೆ ಸಂಬಂಧಿಸಿದ ಮಾತು ಕೇಳಿಬರಬಹುದು.
- ಸಿಂಹ: ಸಂಗಾತಿಯ ಜೊತೆ ಸಲ್ಲಾಪ ಮಾಡಲು ಹೋಗಿ ಕೊನೆಗೆ ಕಲಹದಲ್ಲಿ ಮುಕ್ತಾಯವಾಗಬಹುದು. ಇದರಿಂದ ಉತ್ಸಾಹವನ್ನು ಕಳೆದುಕೊಳ್ಳಬೇಕಾಗಬಹುದು. ಆರ್ಥಿಕವಾದ ಹೊಸ ಸಮಸ್ಯೆಗಳು ಉದ್ಭವಿಸಬಹುದು. ಯಾರೋ ಮಾಡಿದ ತಪ್ಪಿಗೆ ನಿಮ್ಮನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಬಹುದು. ನಿಮ್ಮನ್ನು ಇಷ್ಟಪಡುವವರು ನಿಮ್ಮಿಂದ ಏನನ್ನಾದರೂ ಅಪೇಕ್ಷೆಪಡಬಹುದು. ಯಥಾಸಾಧ್ಯ ಅದನ್ನು ಮಾಡಿ. ರಾತ್ರಿ ಹೆಚ್ಚು ಹೊತ್ತು ಎಚ್ಚರಿರಬೇಡಿ.
- ಕನ್ಯಾ: ಅತಿಯಾದ ಸೂಕ್ಷ್ಮತೆಯನ್ನು ಇಟ್ಟುಕೊಳ್ಳಬೇಡಿ. ಎಲ್ಲ ಸಂದರ್ಭಗಳಿಗೂ ಇದು ಬರುವುದಿಲ್ಲ. ದೇಹ ಹಾಗು ಮನಸ್ಸನ್ನು ಎಲ್ಲದಕ್ಕೂ ಒಗ್ಗುವಂತೆ ಮಾಡಿಕೊಳ್ಳಿ. ನೀರಿನಿಂದ ಏನಾದರೂ ತೊಂದರೆಯಾಗಬಹುದು. ಅಪರೂಪದ ವೀಕ್ಷಣಾ ಸ್ಥಳಗಳಿಗೆ ಭೇಟಿ ಕೊಡಬಹುದು. ಉದ್ಯಮದಲ್ಲಿ ತೊಡಗಿಕೊಳ್ಳುವ ಆಲೋಚನೆಯನ್ನು ಮಾಡುವಿರಿ. ನಿಮಗೆ ಆಗದವರು ನಿಮ್ಮ ಭೇಟಿಗೆ ಬಂದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದವರ ಜೊತೆ ದಿನ ಕಳೆದು ಅವರ ಆಗುಹೋಗಗಳಿಗೆ ಮನವನ್ನು ನೀಡಿ.
- ತುಲಾ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ನಿಮಗೆ ಇಬ್ಬರ ಮನೆ, ಸಂಬಂಧ, ಆಭರಣ, ಹಣ, ಕಾರು ಇವುಗಳನ್ನು ಕಂಡು ನಿಮಗೂ ಎಂತ ಬದುಕು ಎಂದು ಅನ್ನಿಸಬಹುದು. ಆದರೆ ಅವರವರ ನೋವುಗಳು ನಿಮ್ಮ ಕಣ್ಣಿಗೆ ಬೀಳದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ಹೊಸ ಕಾರ್ಯಗಳ ಬಗ್ಗೆ ಆಸಕ್ತಿ ಇದ್ದು ತೊಡಗಿಕೊಳ್ಳುವಿರಿ. ನಿಮ್ಮ ಸ್ವಭಾವಗಳು ಪ್ರಶಂಸೆಗೆ ಪಾತ್ರವಾಗಬಹುದು. ಉತ್ತಮ ಭೋಜನದ ಲಭ್ಯವಾಗಲಿದೆ.
- ವೃಶ್ಚಿಕ: ಅಗ್ನಿಯಿಂದ ಸ್ವಲ್ಪ ದೂರವಿರಲು ಪ್ರಯತ್ನಿಸಿ. ಅವಘಟವೇನಾದರೂ ಸಂಭವಿಸೀತು. ಅತೃಪ್ತಿಯ ಮನಃಸ್ಥಿತಿಯನ್ನು ನೀವು ಅನುಭವಿಸಬಹುದು. ಹೊರಗಿನ ಆಹಾರವನ್ನು ಆಸ್ವಾದಿಸಲಿದ್ದೀರಿ. ಆರ್ಥಿಕವಾಗಿ ಲಾಭವು ಆಗಲಿದೆ. ಭೂಮಿಯ ಕ್ರಯವಿಕ್ರಯಗಳಲ್ಲಿ ತೊಡಗಬಹುದಾಗಿದೆ. ಸಹೋದರರ ಜೊತೆ ಮಾತನಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಸರ್ಕಾರಿ ಕೆಲಸದಲ್ಲಿ ಹಿನ್ನೆಡೆಯ ಸಾಧ್ಯತೆವಿದೆ. ಯಾವುದನ್ನೂ ಪೂರ್ವಾಗ್ರಹಪೀಡಿತರಾಗಿ ಆಲೋಚಿಸಲು ಹೋಗಬೇಡಿ.
- ಧನುಸ್ಸು: ಧರ್ಮಕ್ಕೆ ಸಂಬದ್ಧವಾದ ಕೆಲಸಗಳು ನಿಮ್ಮಂದ ಆಗಲಿವೆ. ಧಾರ್ಮಿಕ ಸ್ಥಳಗಳ ಭೇಟಿಯೂ ನಿಮ್ಮ ಪಾಲಿಗಿದೆ. ವಿದ್ಯಾರ್ಥಿಗಳಿಗೆ ಇದು ಅಷ್ಟಾಗಿ ಉತ್ತಮವಾದ ಕಾಲವಲ್ಲ. ಪ್ರಯತ್ನಪೂರ್ವಕವಾಗಿಯೇ ಓದು, ಅಭ್ಯಾಸಗಳನ್ನು ಮಾಡಬೇಕು. ಬರಹಗಾರರಿಗೆ, ಮನ್ನಣೆಯ ದಿನವಾಗಲಿದೆ. ನಿಮ್ಮ ಗ್ರಂಥವೊಂದು ಸಿದ್ಧಗೊಳ್ಳುವ ಸಾಧ್ಯತೆಯಿದೆ. ಪಿತ್ತಕ್ಕೆ ಸಂಬಂಧಿಸಿದ ಖಾಯಿಲೆಯು ನಿಮ್ಮನ್ನು ಬಾಧಿಸಬಹುದು. ನಿಮ್ಮ ಬುದ್ಧಿಯ ಪ್ರದರ್ಶನಕ್ಕೆ ಇಡಬೇಡಿ. ಭೂಮಿಯಿಂದ ನಷ್ಟವಾಗಬಹುದು.
- ಮಕರ: ನಾಳೆಯ ಕುರಿತು ಆಲೋಚಿಸಿ ಸಂಭ್ರಮಪಡುವ ಅಗತ್ಯವಿಲ್ಲ. ಇಂದು ಆಗುವ ಸಂತಸ ಸಂಕಟಗಳಿಗೆ ಹೊಂದಿಕೊಳ್ಳುವುದು ಉತ್ತಮ. ಖರ್ಚನ್ನು ಕಡಿಮೆ ಮಾಡಿಲು ಪ್ರಯತ್ನಿಸಿ. ಮಿತವಾದ ಮಾತು, ಆಹಾರವು ಆರೋಗ್ಯವನ್ನು ಚೆನ್ನಾಗಿ ಇಡಲಿದೆ. ಆಲಸ್ಯದಿಂದ ಮೇಲೇರಬೇಕಾದ ಸನ್ನಿವೇಶ ಇಂದು ಬರಲಿದೆ. ನಿಮ್ಮದೇ ಮಕ್ಕಳು ನಿಮಗೆ ನೋವನ್ನು ತರುವ ಘಟನೆ ಅಥವಾ ಮಾತನ್ನು ಆಡಬಹುದು. ಅದಕ್ಕೆ ಪ್ರತಿಕ್ರಯಿಸಲು ಹೋಗದೇ ತಿಳಿಹೇಳಲು ಯೋಗ್ಯವಾದ ಕಾಲಕ್ಕೆ ಕಾಯಿರಿ.
- ಕುಂಭ: ಉದ್ವೇಗದಿಂದ ಕೂಡಿದ ತೀರ್ಮಾನಗಳನ್ನು ಮಾಡುವುದು ಬಿಟ್ಟು ಸ್ವಸ್ಥವಾದ ಚಿತ್ತದಿಂದ ಅಲೋಚಿಸಿ ತೀರ್ಮಾನ ಮಾಡಿ. ಅದು ನಿಮ್ಮ ಕೈ ಹಿಡಿದೀತು. ನಿಮ್ಮ ಶ್ರೇಯಸ್ಸಿಗೆ ಕಾರಣವೂ ಆದೀತು. ಇನ್ನೊಬ್ಬನ್ನು ನೋಡಿ ನಿಮ್ಮ ಆಲೋಚನೆ, ಜೀವನಕ್ರಮವನ್ನು ಬದಲಿಸಕೊಳ್ಳಬೇಡಿ. ನಿಮ್ಮಿಂದ ನಿಮ್ಮ ಕುಟುಂಬ ಸಂಕಟಪಡುವಂತೆ ಆದೀತು. ನೇರ ನುಡಿಗೆ ಸ್ವಲ್ಪ ಕಡಿವಾಣ ಹಾಕಿಕೊಳ್ಳಿ. ಸುತ್ತಾಟದ ಮನಸ್ಸು ನಿಮ್ಮದಾಗಿದ್ದು ಒಬ್ಬರೇ ಹೋಗಬೇಡಿ. ಯಾರನ್ನಾದರೂ ಜೊತೆ ಮಾಡಿಕೊಂಡು ಹೋಗಿ.
- ಮೀನ: ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು ಎನ್ನುವ ನಿಮ್ಮ ದೃಢನಿರ್ಧಾರವು ಉಚಿತವೇ. ಆದರೆ ಅಸಾಧ್ಯವಾದರೂ ಯಾರನ್ನೋ ಒಬ್ಬರನ್ನು ನಂಬಿಕ ಭವಿಷ್ಯದ ಆಲೋಚನೆಗಳನ್ನು ಇಟ್ಟುಕೊಳ್ಳಬೇಕಿಂದಲ್ಲ. ಸಹೋದರಿಯ ಜೊತೆ ಕಲಹವಾದೀತು. ವ್ಯವಹಾರದಲ್ಲಿ ಲಾಭವು ಆಗಲಿದೆ. ಹಣವು ನಿಮ್ಮ ಬಳಿ ಬರುವುದು ನಿಧಾನಗಲಿದೆ. ವಿದ್ಯುತ್ ಉಪಕರಣಗಳ ವ್ಯಾಪರದವರಿಗೆ ಶುಭವೂ ಲಾಭವೂ ಇರಲಿದೆ. ಹಿರಿಯಿಂದ ನಿಮ್ಮ ಗೌರವವೂ ಹೆಚ್ಚಾಗಬಹುದು.
ಲೋಹಿತಶರ್ಮಾ, ಇಡುವಾಣಿ