Nitya Bhavishya: ಈ ರಾಶಿಯವರಿಗೆ ಇಂದು ವಿದೇಶಕ್ಕೆ ಹೋಗುವ ವಾರ್ತೆ ಕೇಳಿಬರಲಿದೆ
Horoscope Today: ಬುಧವಾರ , ಜನವರಿ 04, 2023. ರಾಹುಕಾಲ: ಇಂದು ಮಧ್ಯಾಹ್ನ 12 ಗಂ॥ 38 ನಿ।। ರಿಂದ ಇಂದು ಮಧ್ಯಾಹ್ನ 01 ಗಂ॥ 02 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 15 ನಿಮಿಷಕ್ಕೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 04 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪೂರ್ವಾಷಾಢ ಮಹಾನಕ್ಷತ್ರ , ರೋಹಿಣಿ ನಿತ್ಯನಕ್ಷತ್ರ , ಬುಧವಾರ , ಜನವರಿ 04, 2023. ರಾಹುಕಾಲ: ಇಂದು ಮಧ್ಯಾಹ್ನ 12 ಗಂ॥ 38 ನಿ।। ರಿಂದ ಇಂದು ಮಧ್ಯಾಹ್ನ 01 ಗಂ॥ 02 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 15 ನಿಮಿಷಕ್ಕೆ.
ತಾ. 04-01-2023 ರ ರಾವಿವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ ರಾಶಿ: ಇಂದು ಅನಿರೀಕ್ಷಿತ ಸುದ್ದಿಯು ನಿಮಗೆ ಗೊತ್ತಾಗಿ ಸಂತೋಷಪಡಲಿದ್ದೀರಿ. ಮನಸ್ಸು ಮತ್ತು ದೇಹಕ್ಕೂ ಶ್ರಮವಾಗಬಹುದು. ಯೋಗ ಹಾಗೂ ಧ್ಯಾನವನ್ನು ಮಾಡಿ. ಶ್ರಮಪರಿಹಾರವಾಗುವುದು. ವಿನಾಕಾರಣ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ಕೆಲಸಗಳನ್ನು ಮುಂದೂಡುವ ಮನಃಸ್ಥಿತಿಯನ್ನು ಹೊಂದಿದ್ದೀರಿ. ಮಾತುಗಳನ್ನು ಆಡುವಾಗ ಗಮನವಿರಲಿ. ನಿಮ್ಮ ಮಾತು ಇನ್ನೊಬ್ಬರಲ್ಲಿ ದ್ವೇಷವನ್ನು ಉಂಟುಮಾಡಬಹುದು.
- ವೃಷಭ ರಾಶಿ: ವಿದೇಶಕ್ಕೆ ಹೋಗುವ ವಾರ್ತೆಯು ಕೇಳಿಬರಲಿದೆ. ನಂಬಿಕೆಯನ್ನು ಇಟ್ಟು ಕೆಲಸವನ್ನು ಮಾಡಿ. ಹಣದ ತೊಂದರೆ ಎದ್ದು ಕಾಣಿಸುತ್ತದೆ. ಮನೆಯವರ ಸಹಾಯವು ಅನಿವಾರ್ಯವಾದರೆ ಸಿಗಲಿದೆ. ಉತ್ತಮವಾದ ಅಭ್ಯಾಸವನ್ನು ಆರಂಭಿಸಲು ಸಕಲ. ಉತ್ಸಾಹಕ್ಕೆ ಭಂಗವಾಗುವ ಯಾವ ವಿಚಾರಗಳೂ ಇಂದ ಆಗದು. ನಿಶ್ಚಿಂತೆಯಿಂದ ಇರಬಹುದು. ಗೆಳಯರ ಜೊತೆ ಕಳೆದ ದಿನಗಳನದನು ನೆನಪಿಸಿಕೊಂಡು ಖುಷಿಪಡುವಿರಿ.
- ಮಿಥುನ ರಾಶಿ: ಯಾವುದಾದರೂ ರೋಗವನ್ನು ಕಾಡುತ್ತಿದ್ದರೆ ವೈದ್ಯರ ಸಲಹೆ ಪಡೆದು ಔಷಧೋಪಚಾರಗಳನ್ನು ಮಾಡುವುದು ಉತ್ತಮ. ಹೂಡಿಕೆ ವಿಚಾರದಲ್ಲಿ ರಹಸ್ಯವಾಗಿದ್ದ ಸಂಗತಿಯು ಇಂದು ಬಹಿರಂಗವಾಗುವುದು. ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ ಅಸಮಾಧಾನ ಆಗುವ ಸಾಧ್ಯತೆ ಇದೆ. ಯಾವುದಾರೂ ಸ್ಪರ್ಧೆಯಲ್ಲಿ ಭಾಗವಹಿಸುವುದಿದ್ದರೆ ಇಂದು ಜಯ ನಿಮ್ಮದೇ. ಎಲ್ಲದಕ್ಕೂ ಹೊಂದಾಣಿಕೆ ಮಾಡಿಕೊಂಡು ಬೇಸರವಾಗಿದ್ದರೂ ಅದನ್ನು ಮಾಡಿಕೊಳ್ಳದೇ ವಿಧಿಯಿಲ್ಲ.
- ಕಟಕ ರಾಶಿ: ಭವಿಷ್ಯದ ಕುರಿತು ಅತ್ಯಂತ ಗಾಢವಾಗಿ ಆಲೋಚಿಸಲಿದ್ದೀರಿ. ಇತರರು ನಿಮ್ಮ ಬಗ್ಗೆ ಸಕಾರಾತ್ಮವಾಗಿ ಹೇಳಿದರೂ ನೀವು ನಂಬುವ ಮನಃಸ್ಥಿತಿ ನಿಮ್ಮಲ್ಲಿ ಇರುವುದಿಲ್ಲ. ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸ ಸಿಗಲಿದೆ. ಅದರಿಂದ ಸದುಪಯೋಗ ಪಡೆಯಿರಿ. ಶತ್ರುಗಳಂತೆ ಕಾಣುವವರು ಮಿತ್ರರೇ ಆಗಿರುವರು ಎಂದು ಅನ್ನಿಸುತ್ತದೆ. ಅನ್ಯಚಿಂತೆಯಿಂದ ಕೆಲಸಗಳು ಹಾಗೆಯೇ ಉಳಿದಿರಬಹುದು.
- ಸಿಂಹ ರಾಶಿ: ಹತ್ತಾರು ಕೆಲಸಗಳು ಒಟ್ಟಗೇ ಬಂದು ಗಲಿಬಿಲಿಯಾಗಬಹುದು. ಸಹನಯೇ ನಿಮ್ಮ ಮೂಲಾಧರವಾಗಿರಲಿ. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನವು ವ್ಯರ್ಥವೇ ಸರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ಮಾಡಿ. ಯಾರಿಗೂ ಭರವಸೆಯನ್ನು ನೀಡಲು ಹೋಗಬೇಡಿ. ಸಂಗತಿಯ ಜೊತೆ ಈ ದಿನವನ್ನು ಆನಂದದಿಂದ ಕಳೆಯಿರಿ.
- ಕನ್ಯಾ ರಾಶಿ: ಸುಗ್ರಾಸ ಭೋಜನಕೂಟ ನಿಮ್ಮ ಇಂದಿನ ದಿನವಿಶೇಷಗಳಲ್ಲಿ ಒಂದು. ಹಳೆಯ ಶತ್ರುವಿನ ಭೇಟಿಯಾಗಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮನಸ್ಸಿದ್ದರೂ ದೇಹವು ಅದಕ್ಕೆ ಸಹಕರಿಸದೇ ಇರಬಹುದು. ಭವಿಷ್ಯದ ಆರ್ಥಿಕತೆಯ ಚಿಂತನೆಯನ್ನು ನಡಸುವಿರಿ. ಆರೋಗ್ಯವು ಸ್ವಲ್ಪ ಹದಗೆಡಬಹುದು. ಮನೆಯಲ್ಲಿಯೇ ಬೇಕಾದ ಔಷಧೋಪಚಾರವನ್ನು ಮಾಡಿಕೊಂಡು ಸ್ವಸ್ಥರಾಗಿ. ಸಂಗಾತಿಯ ಜೊತೆ ಶೀತಲಸಮರವು ನಡೆಯಬಹುದು.
- ತುಲಾ ರಾಶಿ:ನಿಮ್ಮನ್ನು ಯಾವುದಾದರೂ ಅಪರಿಚಿತ ಕಾರ್ಯಕ್ಕೆ, ಉದ್ಯಮಕ್ಕೆ ಹಣಹೂಡಿಕೆಗೆ ಹೇಳಬಹುದು. ಸರಿಯಾದ ಮಾಹಿತಿ ಪಡೆದು ಹೂಡಿಕೆ ಮಾಡಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ. ಕುಟುಂಬದವರ ಜೊತೆ ಸಂತೋಷದಿಂದ ದಿನವನ್ನು ಕಳೆಯುವಿರಿ. ನಿಮ್ಮ ಪ್ರಮಾಣಿಕತೆಯೇ ನಿಮಗೆ ಮುಳ್ಳಾಗಬಹುದು. ನಿಷ್ಠೆಯಿಂದ ಕೆಲಸವನ್ನು ಮಾಡುವ ನಿಮಗೆ ಕಛೇರಿಯಲ್ಲಿ ಶುಭಸುದ್ದಿ ಇರಲಿದೆ. ಸಂಗಾತಿಯ ಜೊತೆ ಸಣ್ಣ ಕಲಹಗಳು ಆಗಬಹುದು.
- ವೃಶ್ಚಿಕ ರಾಶಿ: ಮಾನ, ಸಮ್ಮಾಗಳು ನಿಮಗೆ ಸಿಗಲಿವೆ. ಆರೋಗ್ಯವು ಚೆನ್ನಾಗಿ ಇರಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಉತ್ತಮ. ಕೈಗೆಟಕುದ ಯಾವುದಕ್ಕೂ ನಿಮ್ಮ ಪ್ರಯತ್ನವನ್ನು ಮಾಡುವುದು ಬೇಡ. ವಿವಾಹ ನಡೆದು ಇಂದು ವಾರ್ಷಿಕೋತ್ಸವ ಮಾಡಿಕೊಳ್ಳುತ್ತ ಹಳೆಯದನ್ನು ನೆನೆಸಿಕೊಳ್ಳುವಿರಿ. ವಿಘ್ನಗಳನ್ನು ಲೀಲಾಜಾಲವಾಗಿ ದಾಟುವ ವಿದ್ಯೆಯು ನಿಮಗೆ ಕರಗತವಾಗಿದೆ. ಇಂದು ಮೋಸಮಾಡುವ ಮನಸ್ಸುಳ್ಳವರಾಗಿರುತ್ತೀರಿ. ಇಂದು ತಮಾಷೆಯಾಗಿ ಕಂಡರೂ ಮುಂದೆ ತಿರುಗುಬಾಣವಾಗಿ ಬರಲಿದೆ.
- ಧನು ರಾಶಿ: ಅನವಶ್ಯಕವಾಗಿ ಯಾರನ್ನೂ ಕರೆದು ಸಹಾಯವನ್ನು ಪಡೆಯಬೇಡಿ. ಅನಿವಾರ್ಯದ ಸಂದರ್ಭದಲ್ಲಿ ಅವರು ಬರಲಾರರು. ತೋಳ ಬಂತು ತೋಳ ಕಥೆಯಂತೆ ಆಗುತ್ತದೆ. ಯಾರ ಮಾತಿನ ಮೇಲೂ ಪೂರ್ವಾಗ್ರಹಸಿಂದ ಪೀಡಿತರಾದವರ ಮನಃಸ್ಥಿತಿಯನ್ನು ಇರಿಸಿಕೊಳ್ಳಬೇಡಿ. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ಅದನ್ನೇ ಗಟ್ಟಿಗೊಳಿಸಿಕೊಂಡು ಮುನ್ನಡೆಯಿರಿ. ಅನೇಕ ಉತ್ತಮಮಾರ್ಗಗಳು ತೆರೆದುಕೊಳ್ಳಬಹುದು. ರಾತ್ರಿ ವಿಳಂಬ ಮಾಡದೇ ಬೇಗ ಮಲಗಿ. ಉತ್ತಮನಿದ್ರೆ ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲಿದೆ.
- ಮಕರ ರಾಶಿ: ಇಂದು ನಿಮಗೆ ನೋವು ನಲಿವುಗಳ ಮಧ್ಯ ಆಯ್ಕೆ ಪ್ರಶ್ನೆ ಬರುವುದಿಲ್ಲ. ಎರಡೂ ಸಮವಾಗಿ ಇರುತ್ತವೆ. ಪಾರ್ಟಿಗೆಂದು ಕರೆಯುವ ಮಿತ್ರರಿಂದ ಸ್ವಲ್ಪ ದೂರವಿರಿ. ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ಬಯಸುತ್ತೀರಿ. ನಿಮ್ಮ ಸ್ವಂತ ವಾಹನದಲ್ಲಿ ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಹಿರಿಯರ, ತಜ್ಞರ ಮಾತುಗಳು ನಿಮಗೆ ನಿಮ್ಮ ಬಹುದಿನದಿಂದ ಬೆಳವಣಿಗೆ ಕಾಣದ ಯೋಜನೆಯೊಂದು ಆರಂಭವಾಗುತ್ತದೆ. ಮಕ್ಕಳೊಂದಿಗೆ ಖುಷಿಯಿಂದ ಕಳೆಯಿರಿ.
- ಕುಂಭ ರಾಶಿ: ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ದೇವಾಲಯಕ್ಕೋ ತೀರ್ಥಕ್ಷೇತ್ರಗಳಿಗೋ ಭೇಟಿಕೊಡುವಿರಿ. ಇತ್ತೀಚೆಗೆ ನಡೆದ ಘಟನೆಗಳು ನಿಮ್ಮನ್ನು ಕಾಡಲಿದೆ. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಿ. ಹಗುರಾದೀತು. ವ್ಯಾಪರದ ವಿಚಾರದಲ್ಲಿ ಸಹಭಾಗಿಯ ಜೊತೆ ಮಾತನಾಡಿ ಮುಂದಡಿಯಿಡಿ. ಸಂಗಾತಿಯಿಂದ ಬೈಗುಳಗಳೂ ಸಿಗಬಹುದು. ಸುಮ್ಮನೆ ಸ್ಚೀಕರಿಸಿ.
- ಮೀನ ರಾಶಿ: ಕಲೆಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡುವ ಮನಸ್ಸು ನಿಮ್ಮದಾಗಿದೆ. ಸ್ವಾರ್ಥಿಗಳ ಸಹವಾಸ ಬೇಡವೇ ಬೇಡ. ನಿಮ್ಮನ್ನು ಬಳಸಿಕೊಂಡು ಬಿಸಾಡುತ್ತಾರೆ. ಎಚ್ಚರವಿರಿ. ನಂಬಿಕೆಯನ್ನು ಪಡೆದ ಅನಂತರವೇ ಕಾರ್ಯದಲ್ಲಿ ಮುನ್ನಡೆಯಿರಿ. ಸಮಸ್ಯೆಗಳಿಗೆ ಸೊಪ್ಪು ಹಾಕಬೇಡಿ. ಅದು ಹೆಚ್ಚಾದೀತು. ಮಕ್ಕಳ ಕಡೆಗೆ ಗಮನವಿರಲಿ. ಒಳ್ಳೆಯ ವ್ಯಾಪಾರಕ್ಕೆ ಉತ್ತಮದಿನವು ಇದಾಗಿದೆ. ಆಹಾರವ್ಯತ್ಯಾಸದಿಂದ ಆರೋಗ್ಯ ಕೆಡಬಹುದು.ಲೋಹಿತಶರ್ಮಾ, ಇಡುವಾಣಿ