ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು?
ಇಷ್ಟು ದಿನ ರೇಗಿಸುತ್ತಿದ್ದ ಗಿಲ್ಲಿ ನಟ ಅವರು ಈಗ ನೇರವಾಗಿ ಮದುವೆ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಕಾವ್ಯಾ ಪೋಷಕರು ಬಿಗ್ ಬಾಸ್ ಮನೆಗೆ ಬಂದಾಗ ಮದುವೆ ಬಗ್ಗೆ ಮಾತನಾಡಬೇಕು ಎಂದು ಗಿಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಡಿಸೆಂಬರ್ 25ರ ಸಂಚಿಕೆಯಲ್ಲಿ ಈ ಪ್ಲ್ಯಾನ್ ಆಗಿದೆ. ಆ ಮಾತು ಕೇಳಿಸಿಕೊಂಡು ಕಾವ್ಯಾ ಅವರು ಪ್ರತಿಕ್ರಿಯಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರ ಜೋಡಿ ತುಂಬಾ ಹೈಲೈಟ್ ಆಗಿದೆ. ಆರಂಭದಿಂದಲೂ ಅವರಿಬ್ಬರೂ ಕ್ಲೋಸ್ ಆಗಿದ್ದಾರೆ. ಕಾವ್ಯಾ (Kavya Shaiva) ಅವರನ್ನು ಪ್ರತಿ ಬಾರಿಯೂ ಗಿಲ್ಲಿ ನಟ ರೇಗಿಸುತ್ತಾರೆ. ಅವರಿಬ್ಬರಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇಲ್ಲಿಯವರೆಗೆ ಅನೇಕ ಬಾರಿ ಅವರಿಬ್ಬರು ಮುನಿಸು ತೋರಿಸಿದ್ದರೂ ಕೂಡ ಮಾತು ಬಿಟ್ಟಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಆ ಬಾಂಧವ್ಯದ ಪರಿಣಾಮವಾಗಿ ಗಿಲ್ಲಿ (Gilli Nata) ಮನಸ್ಸಿನಲ್ಲಿ ಮದುವೆ ಬಗ್ಗೆ ಆಸೆ ಚಿಗುರಿದಂತಿದೆ. ನೇರವಾಗಿ ಅವರು ಮದುವೆ ಬಗ್ಗೆ ಎಲ್ಲರ ಎದುರು ಮಾತನಾಡಿದ್ದಾರೆ.
ಬಿಗ್ ಬಾಸ್ ಶೋನಲ್ಲಿ ಈಗ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ದೊಡ್ಮನೆಗೆ ಬಂದು ಕಾಲ ಕಳೆಯುತ್ತಿದ್ದಾರೆ. ಕಾವ್ಯಾ ಶೈವ ಅವರ ಪೋಷಕರು ಬಂದಾಗ ಬೇರೆಯವರೆಲ್ಲ ಏನು ಮಾತನಾಡಬೇಕು ಎಂಬುದನ್ನು ಗಿಲ್ಲಿ ಮೊದಲೇ ಪ್ಲ್ಯಾನ್ ಮಾಡಿದ್ದಾರೆ. ಮದುವೆ ವಿಷಯವೇ ಪ್ರಸ್ತಾಪ ಆಗಬೇಕು ಎಂದು ಅವರು ಸೂಚನೆ ಕೊಟ್ಟಿದ್ದಾರೆ.
‘ಗಿಲ್ಲಿ ಯಾವ ಥರದ ಹುಡುಗ ಅಂತ ಕೇಳಿ. ಕಾವ್ಯಾಗೆ ಮದುವೆ ಮಾಡಬೇಕು ಅಂತ ಇದ್ದೀರಂತೆ ಹೌದಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕಾವ್ಯಾ ಅವರ ಪೋಷಕರಿಗೆ ಬೇರೆಯವರೆಲ್ಲ ಕೇಳಬೇಕು’ ಎಂದು ಗಿಲ್ಲಿ ಹೇಳಿದ್ದಾರೆ. ‘ನಾಳೆ ನಿಶ್ಚಿತಾರ್ಥಕ್ಕೆ ಯಾರು ಬರುತ್ತಾರೋ ಏನೋ.. ಮದುವೆ ಮಾತುಕಥೆಗೆ ಯಾರು ಬರುತ್ತಾರೋ’ ಎಂದು ಗಿಲ್ಲಿ ಕಾವ್ಯನ ರೇಗಿಸಿದರು. ‘ರಾಖಿ ತೆಗೆದುಕೊಂಡು ಬರಬಹುದು. ರಕ್ಷಾ ಬಂಧನ ಆಗಬಹುದು’ ಎಂದು ಕಾವ್ಯಾ ಅವರು ತಿರುಗೇಟು ನೀಡಿದರು. ಅವರಿಬ್ಬರ ನಡುವಿನ ಸಂಭಾಷಣೆ ಫನ್ನಿ ಆಗಿತ್ತು.
ಗಿಲ್ಲಿ ನಟ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಕಾವ್ಯಾ ತಾಯಿ ಕೂಡ ಗಿಲ್ಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಮಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ‘ಗಿಲ್ಲಿಯನ್ನು ಎಂದಿಗೂ ಬಿಟ್ಟುಕೊಡಬೇಡ, ಅವನು ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಅವನು ಹಣ್ಣು, ಮೊಟ್ಟೆ ಕೇಳಿದರೆ ಕೊಡು’ ಎಂದು ಕಾವ್ಯಾ ತಾಯಿ ಸಾವಿತ್ರಿ ಅವರು ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಮಾತು ಕೇಳಿ ಬಿದ್ದುಬಿದ್ದು ನಕ್ಕ ಅಶ್ವಿನಿ ಗೌಡ ತಾಯಿ
ಈ ವಾರ ಬಿಗ್ ಬಾಸ್ ಮನೆಗೆ ಬರುವ ಕುಟುಂಬದವರು ಮಾಡುವ ಆಯ್ಕೆಯ ಆಧಾರದ ಮೇಲೆ ಕ್ಯಾಪ್ಟನ್ ಯಾರು ಎಂಬುದು ನಿರ್ಧಾರ ಆಗುತ್ತದೆ. ಈಗಾಗಲೇ ಗಿಲ್ಲಿಗೆ ನಾಲ್ಕು ವೋಟ್ ಸಿಕ್ಕಿದೆ. ಅವರೇ ಕ್ಯಾಪ್ಟನ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕು. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್ ಮನೆಯವರಿಗೆ ಗಿಲ್ಲಿ ಆಟ ಬಹಳ ಇಷ್ಟ ಆಗಿದೆ. ಪ್ರೇಕ್ಷಕರಿಗೂ ಗಿಲ್ಲಿ ಕಂಡರೆ ಸಖತ್ ಇಷ್ಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




