AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ ಬಸ್ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ, ನಾಲ್ವರು ಸಾವು

ಚಿತ್ರದುರ್ಗದ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ಕಂಟೇನರ್ ಡಿವೈಡರ್ ಹಾರಿ ಬಂದು ಖಾಸಗಿ ಸ್ಲೀಪರ್ ಕೋಚ್ ಬಸ್ಸಿಗೆ ಗುದ್ದಿದೆ. ಪರಿಣಾಮ ಬಸ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಬೆಂಕಿಯ ಜ್ವಾಲೆ ಇಡೀ ಬಸ್​​ಗೆ ವಾಪಿಸಿಕೊಂಡಿದೆ. ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ. ಸೂರ್ಯೋದಯವಾಗುವುದರೊಳಗೆ ದುರ್ಘಟನೆ ಸಂಭವಿಸಿದ್ದು, ಇನ್ನು ಸೂರ್ಯಾಸ್ತವಾಗುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಚಿತ್ರದುರ್ಗ ಬಸ್ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ, ನಾಲ್ವರು ಸಾವು
Ajjavara Accident
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Dec 26, 2025 | 3:41 PM

Share

ಚಿಕ್ಕಬಳ್ಳಾಪುರ, (ಡಿಸೆಂಬರ್ 25): ಚಿತ್ರದುರ್ಗದಲ್ಲಿ ನಡೆದ ಭೀಕರ ದುರಂತದ ಆಘಾತ ಮಾಸುವ ಮುನ್ನವೇ, ಚಿಕ್ಕಬಳ್ಳಾಪುರದಲ್ಲಿ (Chikkaballapur) ಹೃದಯವಿದ್ರಾವಕ ಅಪಘಾತ ಸಂಭವಿಸಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು.  ಮೃತರು ಅಜ್ಜವಾರ ಗ್ರಾಮದ ಯುವಕರಾಗಿದ್ದು, ಒಂದೇ ಬೈಕಿನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮನೋಜ್, ನರಸಿಂಹಮೂರ್ತಿ ನಂದೀಶ್ ಹಾಗೂ ಅರುಣ್ ಮೃತ ಯುವಕರು. ಇನ್ನು ಈ ಪೈಕಿ ನರಸಿಂಹಮೂರ್ತಿ ಹಾಗೂ ನಂದೀಶ್ ಅಣ್ಣತಮ್ಮಂದಿರು.  ಚಿಕ್ಕಬಳ್ಳಾಪುರದಿಂದ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರು, ಅಜ್ಜವಾರ ಕ್ರಾಸ್‌ನಲ್ಲಿ ತಿರುವು ಪಡೆಯಲು ಯತ್ನಿಸಿದ್ದಾರೆ. ಆದರೆ ವೇಗವಾಗಿ ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ಗುದ್ದಿದೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ

ಇನ್ನು ನರಸಿಂಹ ಕೇವಲ ಆರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:18 pm, Thu, 25 December 25

Follow Us
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ