Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 3ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 3ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ (Birth number) ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Daily Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 3ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1
ನಿಮಗೆ ಗೊತ್ತಿರುವುದೇನು, ಗೊತ್ತಿಲ್ಲದ್ದೇನು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ ಅಂತಾದಲ್ಲಿ ಆ ಬಗ್ಗೆ ಮಾತನಾಡಬೇಡಿ. ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದಲ್ಲಿ ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಿರಿ.
ಜನ್ಮಸಂಖ್ಯೆ 2
ಇದರಲ್ಲಿ ಮುಂದುವರಿಯಲಾ ಅಥವಾ ಬೇರೆ ಕ್ಷೇತ್ರವನ್ನು ಆರಿಸಿಕೊಳ್ಳಲಾ ಅಥವಾ ತಾತ್ಕಾಲಿಕವಾದ ಬಿಡುವು ತೆಗೆದುಕೊಳ್ಳಲಾ ಹೀಗೆ ಯೋಚನೆಗಳು ನಿಮ್ಮನ್ನು ಮುತ್ತಿಕೊಳ್ಳುತ್ತವೆ. ಕೊನೆಗೂ ಇದನ್ನು ಆಖೈರು ಎಂದು ನಿರ್ಧಾರ ಮಾಡಲಿಕ್ಕೆ ಆಗುವುದಿಲ್ಲ. ಆದ್ದರಿಂದ ದ್ವಂದ್ವದಲ್ಲಿ ಇರುವ ವಿಚಾರದ ಬಗ್ಗೆ ಈ ದಿನ ತೀರ್ಮಾನ ಮಾಡಬೇಡಿ.
ಜನ್ಮಸಂಖ್ಯೆ 3
ಈ ದಿನ ಬಹಳ ಉತ್ಸಾಹದಿಂದ ಇರುತ್ತೀರಿ. ಪುಷ್ಕಳವಾದ ಭೋಜನ, ಸ್ನೇಹಿತರೊಂದಿಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಕೆಲಸ ಬದಲಾವಣೆ ಮಾಡಬೇಕು ಎಂದಿರುವವರಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಹಳೇ ಸ್ನೇಹಿತರು, ಪರಿಚಿತರ ಸಹಾಯ ನಿಮಗೆ ದೊರೆಯಲಿದೆ.
ಜನ್ಮಸಂಖ್ಯೆ 4
ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು. ನೀವು ಅಂದುಕೊಂಡಂತೆ ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು ಇತ್ಯಾದಿ ಶುಭ ಫಲಗಳನ್ನು ಈ ದಿನ ಕಾಣಲಿದ್ದೀರಿ.
ಜನ್ಮಸಂಖ್ಯೆ 5
ಚಿನ್ನ- ಬೆಳ್ಳಿ ಸೇರಿದಂತೆ ನಿಮ್ಮ ಬೆಲೆ ಬಾಳುವ ವಸ್ತುಗಳು, ದಾಖಲೆ- ಕಾಗದ ಪತ್ರಗಳನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳಿ. ಅದೆಷ್ಟೇ ಬಿಡುವಿಲ್ಲದ ಕೆಲಸ ಅಂತಿದ್ದರೂ ಬೆಲೆಬಾಳುವ ವಸ್ತುಗಳನ್ನು ಇತರರನ್ನು ನಂಬಿ, ನೀಡಬೇಡಿ. ಪುಷ್ಕಳವಾದ ಊಟ- ತಿಂಡಿ ಮಾಡುವಂಥ, ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ ಆಗುವ ಯೋಗ ಇದೆ.
ಜನ್ಮಸಂಖ್ಯೆ 6
ತುಂಬ ಆರಾಮವಾಗಿ ದಿನ ಕಳೆಯುವುದಕ್ಕೆ ಬಯಸುತ್ತೀರಿ. ಬರೀ ಅಂದುಕೊಂಡರಷ್ಟೇ ಸಾಲದು, ಅದಕ್ಕೆ ತಕ್ಕ ತಯಾರಿಯೂ ಮುಖ್ಯ. ಆ ಕಡೆಗೂ ಗಮನ ನೀಡಿ. ಇನ್ನೊಬ್ಬರ ಸಹಾಯಕ್ಕಾಗಿ ಕಾಯಲಿಕ್ಕೆ ಹೋಗದಿರಿ. ದೀರ್ಘವಾದ ಪಯಣವೊಂದು ನಿಮ್ಮನ್ನು ಕಾಯುತ್ತಾ ಇದೆ. ಹೆಸರು, ಕೀರ್ತಿ, ಹಣ ಮಾಡುವುದಕ್ಕೆ ವೇದಿಕೆ ದೊರೆಯುವ ಸೂಚನೆ ಸಿಗಲಿದೆ.
ಜನ್ಮಸಂಖ್ಯೆ 7
ಹಳೇ ಪ್ರೇಮ ಪ್ರಕರಣಗಳಲ್ಲಿ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ ಭಾವನಾತ್ಮಕವಾಗಿ ಹಾಗೂ ನೈತಿಕವಾಗಿ ನೀವು ಗಟ್ಟಿಯಾಗಿ ನಿಲ್ಲುವುದು ಮುಖ್ಯವಾಗುತ್ತದೆ. ಖರ್ಚಿನ ವಿಚಾರದಲ್ಲಿ ಕೆಲವರಿಗೆ ಅಸಮಾಧಾನ ಆಗಲಿದೆ. ಕ್ರೀಡಾಪಟುಗಳಿಗೆ ಬಹಳ ಮುಖ್ಯವಾದ ದಿನ ಇದು.
ಜನ್ಮಸಂಖ್ಯೆ 8
ನಿಮ್ಮ ಸ್ವಂತ ಬಲದಿಂದ ಎಂಥ ಸವಾಲನ್ನೂ ಈ ದಿನ ದಾಟಲಿದ್ದೀರಿ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಬೆಳವಣಿಗೆ ಕಾಣಲಿದೆ. ದೇವತಾರಾಧನೆ, ತೀರ್ಥಕ್ಷೇತ್ರ ದರ್ಶನವನ್ನು ಮಾಡಲಿದ್ದೀರಿ. ಮನೆಯಲ್ಲಿ ಗ್ಯಾಸ್ ಸಿಲಿಂಡರ್, ಎಲೆಕ್ಟ್ರಿಕಲ್- ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಬೇಕು.
ಜನ್ಮಸಂಖ್ಯೆ 9
ಈ ದಿನ ಆಲಸ್ಯ ನಿಮ್ಮನ್ನು ಕಾಡಲಿದೆ. ಎಲ್ಲ ವಿಚಾರದಲ್ಲೂ ಒಂದು ಬಗೆಯ ನಿರಾಸಕ್ತಿ ಇರಲಿದೆ. ಇದು ಸಿಟ್ಟಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳಿ. ಸ್ವಂತ ವ್ಯವಹಾರ ಮಾಡುತ್ತಿರುವವರು ಏನಾದರೂ ಬ್ಯಾಂಕ್ ಕೆಲಸಗಳು ಅಥವಾ ವ್ಯವಹಾರಗಳು ಇದ್ದರೆ ಅನಿವಾರ್ಯ ಅಂತಿಲ್ಲದಿದ್ದರೆ ಮುಂದೂಡುವುದು ಉತ್ತಮ. ಕೃಷಿಕರಿಗೆ ಮಿಶ್ರವಾದ ದಿನ ಇದು.
ಲೇಖನ- ಎನ್.ಕೆ.ಸ್ವಾತಿ