ದಿನಕ್ಕೆ ಕೇವಲ 20 ನಿಮಿಷ ಕಪಾಲಭಾತಿ ಮಾಡಿ ಆರೋಗ್ಯ ಕಾಪಾಡಿ: ಬಾಬಾ ರಾಮದೇವ್ ಸಲಹೆ
Baba Ramdev recommends Kapalabhati pranayama for healthier life: ಬಾಬಾ ರಾಮದೇವ್ ಪ್ರತಿ ಮನೆಗೂ ಯೋಗದ ಪರಿಚಯ ಮಾಡಿದ್ದಾರೆ. ಆರೋಗ್ಯಕರ ಜೀವನಕ್ಕೆ ಅವರು ಯಾವಾಗಲೂ ಯೋಗಾಭ್ಯಾಸವನ್ನು ಶಿಫಾರಸು ಮಾಡುತ್ತಾರೆ. ಯೋಗಾಭ್ಯಾಸ ಮಾಡುವುದರಿಂದ ಅನೇಕ ರೋಗಗಳಿಂದ ಪರಿಹಾರ ಸಿಗುತ್ತದೆ ಎಂಬುದು ಅವರ ಅನಿಸಿಕೆ. ಈ ಲೇಖನದಲ್ಲಿ, ಕಪಾಲಭಾತಿ ಪ್ರಾಣಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳೇನು ಎನ್ನುವ ವಿವರಣೆ ಇದೆ.

ಇಂದಿನ ವೇಗದ ಜೀವನದಲ್ಲಿ, ಕಳಪೆ ಆಹಾರ, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ, ಜನರು ಸಣ್ಣಪುಟ್ಟ ಕಾಯಿಲೆಗಳಿಂದ ಹಿಡಿದು ಗಂಭೀರ ಸಮಸ್ಯೆಗಳವರೆಗೆ ಬಳಲುತ್ತಿದ್ದಾರೆ. ಈ ಸ್ಥಿತಿಯಲ್ಲಿ, ಯೋಗ ಮತ್ತು ಪ್ರಾಣಾಯಾಮವನ್ನು ಆರೋಗ್ಯಕರ ಜೀವನ ನಡೆಸಲು ಸುಲಭ ಮತ್ತು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಪ್ರತಿದಿನ ತನ್ನ ದೇಹಕ್ಕೆ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ, ಔಷಧಿಗಳ ಅಗತ್ಯ ಕಡಿಮೆಯಾಗುತ್ತದೆ ಎಂದು ಯೋಗ ಗುರು ಬಾಬಾ ರಾಮದೇವ್ (Baba Ramdev) ಯಾವಾಗಲೂ ಒತ್ತಿ ಹೇಳುತ್ತಿರುತ್ತಾರೆ. ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಬಾಬಾ ರಾಮದೇವ್ ಕೆಲ ಆಸನಗಳನ್ನು ಶಿಫಾರಸು ಮಾಡುತ್ತಾರೆ. ಕಪಾಲಭಾತಿಯೂ ಕೂಡ ಅವರು ಶಿಫಾರಸು ಮಾಡುವ ಒಂದು ಪ್ರಾಣಾಯಾಮ ಕ್ರಮ.
ಕಪಾಲಭಾತಿ ಮಾಡುವ ಸರಿಯಾದ ವಿಧಾನವನ್ನು ಬಾಬಾ ತಿಳಿಸಿಕೊಟ್ಟಿದ್ದಾರೆ. ಪ್ರತಿದಿನ 20-30 ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡುವುದರಿಂದ ವಿವಿಧ ಕಾಯಿಲೆಗಳನ್ನು ಗುಣಪಡಿಸಬಹುದು. ಅದರ ವಿವರ ಇಲ್ಲಿದೆ.
ಪ್ರತಿದಿನ ಕಪಾಲಭಾತಿ ಪ್ರಾಣಾಯಾಮ
ಬಾಬಾ ರಾಮದೇವ್ ತಮ್ಮ ವೀಡಿಯೊಗಳಲ್ಲಿ ಯೋಗಾಸನಗಳನ್ನು ಮಾಡುವ ವಿಧಾನ ಮತ್ತು ಅದರ ಪ್ರಯೋಜನಗಳನ್ನು ಆಗಾಗ್ಗೆ ವಿವರಿಸುತ್ತಾರೆ. ಪ್ರತಿದಿನ 20-30 ನಿಮಿಷಗಳ ಕಾಲ ಕಪಾಲಭಾತಿ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದು ಎಂದು ಒಂದು ವೀಡಿಯೊದಲ್ಲಿ ವಿವರಿಸುತ್ತಾರೆ. ಅವರ ಪ್ರಕಾರ, ಈ ಅಭ್ಯಾಸವು ದೇಹವನ್ನು ಆಂತರಿಕವಾಗಿ ಶುದ್ಧೀಕರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಪ್ರಾಣಾಯಾಮವು ಹೊಟ್ಟೆ, ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದೇಹದಲ್ಲಿ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪತಂಜಲಿ ದಿವ್ಯ ಯೌವನಾಮೃತ ವಟಿ ಔಷಧ ಯಾರಿಗೆ ಉಪಯುಕ್ತ? ಇದರ ಪ್ರಯೋಜನ, ಬಳಕೆ ಇತ್ಯಾದಿ ವಿವರ
ಕಪಾಲಭಾತಿಯಿಂದ ಪ್ರಯೋಜನಗಳು
ಬೊಜ್ಜು ನಿವಾರಣೆ: ಕಪಾಲಭಾತಿ ಪ್ರಾಣಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಈ ಪ್ರಾಣಾಯಾಮದಲ್ಲಿ ಉಸಿರು ವೇಗವಾಗಿ ಹೊರಹಾಕುವಾಗ ಹೊಟ್ಟೆಯನ್ನು ಒಳಗೆ ಎಳೆಯಲಾಗುತ್ತದೆ. ಇದರಿಂದ ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದನ್ನು ಅಭ್ಯಾಸ ಮಾಡುವಾಗ ಸಮತೋಲಿತ ಆಹಾರ ಸೇವನೆ ಸಹ ಮುಖ್ಯವಾಗಿದೆ.
ಮಧುಮೇಹವನ್ನು ನಿಯಂತ್ರಣ: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕಪಾಲಭಾತಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಕಪಾಲಭಾತಿ ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ಸಕ್ರಿಯಗೊಳಿಸುತ್ತದೆ, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
ಮಲಬದ್ಧತೆ ಮತ್ತು ಗ್ಯಾಸ್ಟ್ರೈಟಿಸ್: ಈ ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಕ್ರಿಯಗೊಳಿಸುವುದರಿಂದ ಮತ್ತು ಪಚನಾಗ್ನಿಯನ್ನು ಹೆಚ್ಚಿಸುವುದರಿಂದ ಮಲಬದ್ಧತೆ ಮತ್ತು ಆ್ಯಸಿಡಿಟಿ ನಿವಾರಣೆ ಆಗುತ್ತದೆ. ಇದು ಗ್ಯಾಸ್ ಮತ್ತು ಟಾಕ್ಸಿಕ್ ಅನ್ನು ನಿವಾರಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.
ಕೊಬ್ಬಿನ ಪಿತ್ತಜನಕಾಂಗ/ಯಕೃತ್ತಿನ ಸಮಸ್ಯೆ ನಿವಾರಣೆ: ಕಪಾಲಭಾತಿ ಅಭ್ಯಾಸವು ಕೊಬ್ಬಿನ ಪಿತ್ತಜನಕಾಂಗ ಮತ್ತು ಯಕೃತ್ತಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಪಾಲಭಾತಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪತಂಜಲಿ ದಿವ್ಯ ದಂತಮಂಜನ್ ಟೂತ್ ಪೇಸ್ಟ್; ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಉತ್ಪನ್ನ
ಕಪಾಲಭಾತಿ ಪ್ರಾಣಾಯಾಮ ಮಾಡುವ ಸರಿಯಾದ ಮಾರ್ಗ
ಕಪಾಲಭಾತಿ ಪ್ರಾಣಾಯಾಮ ಮಾಡಲು, ಮೊದಲು ನಿಮ್ಮ ಬೆನ್ನನ್ನು ನೇರವಾಗಿರುವಂತೆ ನೆಲದ ಮೇಲೆ ಕುಳಿತುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ನಂತರ ಉಸಿರನ್ನು ಬಲವಾಗಿ ವೇಗವಾಗಿ ಬಿಡುತ್ತಾ ನಿಮ್ಮ ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳಿ. ನಂತರ ಸಹಜವಾಗಿ ಉಸಿರು ಒಳಗೆಳೆದುಕೊಳ್ಳಿ. ಈ ಪ್ರಕ್ರಿಯೆಯನ್ನು 20-25 ಬಾರಿ ಪುನರಾವರ್ತಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
