ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 09 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಪೂರ್ವಾಷಾಢ ಮಹಾನಕ್ಷತ್ರ, ಪೌಷ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಿತೀಯಾ ತಿಥಿ, ಆಶ್ಲೇಷಾ ನಿತ್ಯನಕ್ಷತ್ರ, ವಿಷ್ಕಂಭ ಯೋಗ, ಗರಜ ಕರಣ, ಸೂರ್ಯೋದಯ: 07 ಗಂಟೆ 1 ನಿಮಿಷಕ್ಕೆ, ಸೂರ್ಯಾಸ್ತ – 06 ಗಂಟೆ 18 ನಿಮಿಷಕ್ಕೆ. ಶುಭಾಶುಭಕಾಲ: ರಾಹು ಕಾಲ 08:26 ರಿಂದ 09:51, ಯಮಘಂಡ ಕಾಲ 11:15 ರಿಂದ 12:40, ಗುಳಿಕ ಕಾಲ 02:04 ರಿಂದ 03:29 ರ ವರೆಗೆ.
ಮೇಷ: ಇಂದು ಆಹಾರದ ತಯಾರಿಕೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬಹುದು. ಯಾವ ಭಾವನೆಗಳನ್ನು ವ್ಯಕ್ತಪಡಿಸಬಾರದು ಎಂದು ಎಂದಿದ್ದರೂ ಸನ್ನಿವೇಶಗಳು ನಿಮ್ಮನ್ನು ಪ್ರೇರಿಸುತ್ತವೆ. ಹಳೆಯ ಸಂಗಾತಿಯನ್ನು ಆಕಸ್ಮಿಕವಾಗಿ ಕಾಣುವಿರಿ. ಹೊಸ ದಿಕ್ಕಿನತ್ತ ನಿಮ್ಮ ಆಲೋಚನೆಗಳು ಇರಲಿವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಪ್ರಯತ್ನಗಳು ಇರಲಿ. ಅಪವಾದಗಳು ನಿಮ್ಮನ್ನು ಕಂಗೆಡೊಸಬಹುದು.
ವೃಷಭ: ವಾಹನದಲ್ಲಿ ಸಂಚಾರವನ್ನು ಮಾಡಿದ್ದ ನಿಮಗೆ ಆಯಾಸವಾಗಬಹುದು. ನಿಮ್ಮ ದೇಹಸೌಂದರ್ಯದ ಬಗ್ಗೆ ಗಮನಹರಿಸುವಿರಿ. ಅಮೂಲ್ಯವಾದ ಕೊಡುಗೆಗಳು ನಿಮಗೆ ನಿಮ್ಮವರಿಂದ ಸಿಗಲಿದೆ. ಉತ್ಕೃಷ್ಟವಾದ ಭೋಜನವು ನಿಮ್ಮ ಪಾಲಿಗಿದೆ. ಉದ್ಯಾನದಲ್ಲಿ ಸಂಗಾತಿಯೊಂದಿಗೆ ವಿಹರಿಸುವಿರಿ. ನಿಮ್ಮ ಸಹಾಯವನ್ನು ಬಯಸಬಹುದು. ಯಾರಾದರೂ ಅತಿಥಿ ಬರಬಹುದು. ಅತಿಥಿಗಳನ್ನು ಆದರದಿಂದ ಸತ್ಕರಿಸಿ.
ಮಿಥುನ: ಮನೆಯ ಖರ್ಚನ್ನು ನಿಭಾಯಿಸಲು ಹಣವನ್ನು ವ್ಯಯಿಸಬೇಕಾಗುವುದು. ಟಿ.ವಿ, ಪ್ರಿಝ್ ಗಳ ದುರಸ್ತಿಯಿಂದ ಧನವು ನಷ್ಟವಾಗಲಿದೆ. ನೀರಿನ ಬಳಕೆಯನ್ನು ಅತಿಯಾಗಿ ಮಾಡುವಿರಿ. ಮಾತಗಳನ್ನು ಆಡುವಾಗ ಎಚ್ಚರವಿರಲಿ. ನಿಮ್ಮ ಗುಟ್ಟು ಬಯಲಾಗುವ ಸಾಧ್ಯತೆ ಇದೆ. ಹೂಡಿಕೆಗಳಿಂದ ನಷ್ಟವನ್ನು ಅನುಭವಿಸಬೇಕಾಗಬಹುದು. ಹೆಚ್ಚು ಶ್ರಮಪಡಬೇಕಾಗಬಹುದು. ಸಣ್ಣ ಮಟ್ಟಿನ ಪ್ರಯಾಣವಿರಲಿದೆ. ಸಂಗಾತಿಯ ಸೌಂದರ್ಯದ ಕುರಿತು ವರ್ಣಿಸಲಿದ್ದೀರಿ.
ಕರ್ಕ: ಮನೋರಂಜನೆಗೆ ಇಂದು ಹೆಚ್ಚು ಸಮಯವನ್ನು ಕೊಡುವಿರಿ. ಕುಟುಂಬದ ಸಹಕಾರದಿಂದ ಇಂದಿನ ಕಾರ್ಯವು ಪೂರ್ಣವಾಗುವುದು. ನಿಮ್ಮ ಸ್ನೇಹಿತರ ಗೌಪ್ಯವನ್ನು ಹೊರಹಾಕುವಿರಿ. ನಿಮ್ಮ ನಡುವೆ ಕಲಹವು ಏರ್ಪಡುವುದು. ನಿಮ್ಮ ಪರಿಚಿತರಿಗೆ ಪ್ರಭಾವವು ತಿಳಿಯುವ ದಿನ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಿಟ್ಟಿನಲ್ಲಿ ಕತ್ತರಿಸಿದ ಮೂಗು ಶಾಂತವಾದಮೇಲೆ ಬಾರದು ಎನ್ನುವ ಮಾತನ್ನು ನೆನಪಿಡಿ. ನಿಮ್ಮ ಸಂತೋಷವನ್ನು ಕಂಡು ಹೊಟ್ಟೆಯುರಿದುಕೊಳ್ಳುವವರಿದ್ದಾರೆ.
ಸಿಂಹ: ನಿಮ್ಮ ಯೋಜನೆಗಳು ಭವಿಷ್ಯದ ಭಯದಿಂದಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆಪ್ತರ ಸಲಹೆಯನ್ನು ಪಡೆದು ಮುಂದುವರಿಯುವುದು ಉತ್ತಮ. ಇಂದು ಭೇಟಿಯಾಗುವ ಉದ್ಯಮಿಯಿಂದ ಪ್ರಭಾವಿತರಾಗಿ ನಿಮ್ಮ ಕನಸನನ್ನು ನನಸಾಗಿಸಲು ಯತ್ನಿಸುವಿರಿ. ಸಂಕಟವನ್ನು ನಿಮ್ಮವರ ಜೊತೆ ಹಂಚಿಕೊಳ್ಳಿ. ಮನಸ್ಸು ಹಗುರಾಗುವುದು. ಕಛೇರಿಯ ವ್ಯವಹಾರಗಳು ಸಲಲಿತವಾಗಿ ಮುಂದುವರಿಯುವುದು. ನಿಮ್ಮನ್ನು ಇಂದು ವಂಚಿಸಿ ಕೆಲಸವನ್ನು ಮಾಡಿಸಿಕೊಳ್ಳುವರು. ಚಿತ್ರಕಾರರಿಗೆ ಶುಭವಾರ್ತೆ ಇದೆ.
ಕನ್ಯಾ: ಅಸಾಧ್ಯವನ್ನು ಸಾಧಿಸುವ ನಿಮ್ಮ ಹಠವನ್ನು ಕಂಡು ನಿಮಗಾಗದವರೂ ಅಸೂಯೆಪಡಲಿದ್ದಾರೆ. ಕೃಷಿಯಲ್ಲಿ ಆಸಕ್ತಿಯಿದ್ದರೆ ಆ ಕುರಿತು ಆಲೋಚನೆ ಹಾಗು ಯೋಜನೆಯನ್ನು ಸಿದ್ಧಗೊಳಿಸುವುದು ಒಳ್ಳೆಯದು. ಶಿಕ್ಷಕರು ತಮ್ಮ ವೃತ್ತಿಯಿಂದ ಗೌರವವನ್ನು ಪಡೆದುಕೊಳ್ಳಬಹುದಾಗಿದೆ. ಧಾರ್ಮಿಕ ಕಾರ್ಯಗಳನ್ನು ಮಾಡಲು ಆಸಕ್ತಿಯು ಇರಲಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶತಪ್ರಯತ್ನವನ್ನು ಮಾಡುವಿರಿ. ಭವಿಷ್ಯದ ಕುರಿತು ಗಾಢವಾದ ಚಿಂತನಯಲ್ಲಿ ಮಗ್ನರಾಗಲಿದ್ದೀರಿ.
ತುಲಾ: ಇಂದು ನೀವು ಮಾಡಬೇಕಾದ ಅಥವಾ ಆಗಬೇಕಾದ ಕಾರ್ಯಗಳು ವಿಳಂಬವಾಗಲಿದೆ. ಕಾರ್ಯದಲ್ಲಿ ಸಂಕೀರ್ಣತೆಯು ಬಂದು ಗೊಂದಲವಾಗುವ ಸಾಧ್ಯತೆ ಇದೆ. ನಿಮ್ಮ ಸಲಹೆಗಳಿಗೆ ಅನಾದರವು ಉಂಟಾಗಲಿದೆ. ಉದ್ಯೋಗದಲ್ಲಿ ಆಲಸ್ಯದಿಂದ ಇರುವಿರಿ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ತರಲಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ. ವೈದ್ಯರಿಗೆ ಪ್ರಶಂಸೆಗಳು ಬರಲಿವೆ. ಯಾರದ್ದಾದರೂ ನೋವಿಗೆ ಸ್ಪಂದಿಸುವ ಗುಣವು ಇಂದು ಅನೇಕರಿಗೆ ತಿಳಿಯಲಿದೆ.
ವೃಶ್ಚಿಕ: ಕುಟುಂಬಕ್ಕೆ ಸಮಯವನ್ನು ಕೊಡಲಾಗದಷ್ಟು ಕಾರ್ಯಗಳು ನಿಮಗಿರಲಿವೆ. ವ್ಯಾಪಾರಸ್ಥರು ಮೋಸ ಹೋಗುವ ಸಾದ್ಯತೆ ಇದೆ. ಹೊಸ ಬಟ್ಟೆಗಳನ್ನು ಖರೀದಿಸುವಿರಿ. ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಮೂರನೆಯ ವ್ಯಕ್ತಿಯಿಂದ ಸಿಗುವ ಸಲಹೆಗಳು ನಿಮಗೆ ಅತ್ಯಪಯುಕ್ತವಾಗಿರುತ್ತವೆ. ದೇಹದ ಬಗ್ಗೆ ಹೆಚ್ಚು ಕಾಳಜಿಯನ್ನು ಇಟ್ಟುಕೊಳ್ಳುವಿರಿ. ಆಲಂಕಾರಿಕ ವಸ್ತುಗಳ ಬಳಕೆಯು ಅತಿಯಾಗಲಿದೆ. ನಿಮ್ಮ ಮಾತುಗಳಿಂದ ಬೇಸರವಾಗುವ ಸಾಧ್ಯತೆ ಇದೆ.
ಧನುಸ್ಸು: ಸಂಗಾತಿಯನ್ನು ಸಂತೋಷವಾಗಿರಿಸಲು ಹಲವಾರು ಪ್ರಯತ್ನಗಳನ್ನು ಮಾಡುವಿರಿ. ಸಮಾಜದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗಲಿದೆ. ಕಲಾವಿದರು ಗೌರವಗಳು ಬರಲಿವೆ. ಉತ್ತಮ ಆಹಾರವನ್ನು ಸೇವಿಸದರೂ ಅನಾರೋಗ್ಯ ನಿಮ್ಮನ್ನು ಬಿಡದೇ ಕಾಡುವುದು. ಮಕ್ಕಳ ಜೊತೆ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಅಪರೂಪದ ಬಂಧುಗಳು ನಿಮ್ಮನ್ನು ಭೇಟಿಯಾಗಿ ಹತ್ತಿರವಾಗಲಿದ್ದಾರೆ. ಅನಿರೀಕ್ಷಿತ ಅಶುಭವಾರ್ತೆಯಿಂದ ಮನಸ್ಸು ಉದ್ವಿಗ್ನಗೊಳ್ಳಬಹುದು.
ಮಕರ: ಸ್ನೇಹಿತರ ನಿಮಿತ್ತ ಹಣ ಧನಸಹಾಯವನ್ನು ಮಾಡಲಿದ್ದೀರಿ. ಒಂಟಿತನ ನಿಮ್ಮನ್ನು ಬಹಳವಾಗಿ ಕಾಡಬಹುದು. ಅವಶ್ಯಕವಾದ ವಸ್ತುಗಳನ್ನು ಮಾತ್ರ ಖರೀದಿಸಿ. ಅಂದು ಕೊಂಡಂತೆ ನಡೆಯದು ಎಂಬ ಭಾವ ನಿಮ್ಮನ್ನು ಹತಾಶರನ್ನಾಗಿ ಮಾಡಬಹುದು. ಸಾಧಿಸುವ ಕಿಚ್ಚು ನಿಮ್ಮನ್ನು ಇನ್ನಷ್ಟು ಬಲಿಷ್ಠಗೊಳಿಸುವುದು. ವಿದ್ಯುತ್ ಉಪಕರಣಗಳಿಂದ ನಷ್ಟವಾಗುವ ಸಾಧ್ಯತೆಗಳಿವೆ. ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಬಿಡಬೇಕಾಗುತ್ತದೆ.
ಕುಂಭ: ಭವಿಷ್ಯದ ಚಿಂತೆ ಮಾಡಿದ ವರ್ತಮಾನದಲ್ಲಿ ಬದುಕುವುದು ಒಳ್ಳೆಯದು.ಇಲ್ಲವಾದರೆ ಯಾವದೂ ನಿಮಗೆ ಸಂತೋಷವನ್ನು ಕೊಡುವಂಥದ್ದಾಗಿರದು. ಸಂಗಾತಿಯ ಬಿರುಸು ನುಡಿಗಳು ನಿಮ್ಮ ಹತಾಶೆಗೆ ಮೂಲಕಾರಣವಾಗುವುದು. ಕೆಲವು ಗಂಟೆಗಳು ನಿಮ್ಮನ್ನು ಬಹಳವಾಗಿ ಪೀಡಿಸಲಿವೆ. ಧನವು ನಿಮ್ಮನ್ನು ಸೇರುವ ಆಸೆಯಿದ್ದರು ಕಾಲವೊಂದು ಎಲ್ಲದಕ್ಕೂ ಮುಖ್ಯವಾಗಿರುತ್ತದೆ. ತಾಳ್ಮೆಯಿಂದ ವ್ಯವಹರಿಸಿ. ಕಾಲನ ಏಟುಗಳಿಗೆ ಕಾರಣವಂತೂ ಇದ್ದೇ ಇರುತ್ತದೆ ಎನ್ನುವ ಸತ್ಯವನ್ನು ನಂಬಬೇಕಾಗುತ್ತದೆ.
ಮೀನ: ವಿದ್ಯಾರ್ಥಿಗಳಿಗೆ ಉತ್ತಮ ದಿನವಿಂದು. ಅಭ್ಯಾಸದ ವಿವಿಧ ಮಜಲುಗಳು ನಿಮಗೆ ತಿಳಿಯಲಿವೆ. ಯಾರು ಏನಂದುಕೊಂಡಾರು ಎನ್ನುವ ಚಿಂತೆ ಬೇಡ. ನಿಮ್ಮ ದಾರಿ ಸರಿಯೆಂದು ನಿಮಗನಿಸಿದರೆ ಅದರಲ್ಲಿಯೇ ಸಾಗಿರಿ. ಪೋಷಕರೂ ನಿಮ್ಮ ಬೆಂಬಲಕ್ಕೆ ನಿಲ್ಲುವರು. ಗೌರವಗಳು ನಿಮಗೆ ಸಿಗಲಿವೆ. ಸಂಗಾತಿಯೊಂದಿಗೆ ಸುಂದರವಾದ ದಿನವನ್ನು ಕಳೆಯುವಿರಿ. ಸಕಾರಾತ್ಮಕ ಚಿಂತನೆ ಹಾಗೂ ಕಾರ್ಯಗಳು ನಿಮಗೆ ಬಲವಾಗಿರಲಿವೆ.
ಲೋಹಿತಶರ್ಮಾ, ಇಡುವಾಣಿ