Nitya Bhavishya: ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೆಚ್ಚು ಲಾಭ ದೊರೆಯುತ್ತದೆ

2023 ಜನವರಿ 10 ಮಂಗಳವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೆಚ್ಚು ಲಾಭ ದೊರೆಯುತ್ತದೆ
ರಾಶಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 10, 2023 | 5:36 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 10 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಭವಿಷ್ಯ:

ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಪೂರ್ವಾಷಾಢ ಮಹಾನಕ್ಷತ್ರ, ಪೌಷ ಮಾಸ, ಕೃಷ್ಣ ಪಕ್ಷ, ಮಂಗಳವಾರ, ತೃತೀಯಾ ​ ತಿಥಿ, ಆಶ್ಲೇಷ ನಿತ್ಯನಕ್ಷತ್ರ, ಪ್ರೀತಿ ಯೋಗ, ಬವ ಕರಣ, ಸೂರ್ಯೋದಯ: 07 ಗಂಟೆ 1 ನಿಮಿಷಕ್ಕೆ, ಸೂರ್ಯಾಸ್ತ – 06 ಗಂಟೆ 18 ನಿಮಿಷಕ್ಕೆ. ಶುಭಾಶುಭಕಾಲ: ರಾಹು ಕಾಲ ಮಧ್ಯಾಹ್ನ 03:29 ರಿಂದ 04:54, ಯಮಘಂಡ ಕಾಲ ಬೆಳಿಗ್ಗೆ 09:51 ರಿಂದ 11:16, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:05 ರ ವರೆಗೆ.

ತಾ. 10-01-2023ರ ಮಂಗಳವಾರ ರಾಶಿ ಭವಿಷ್ಯ ಹೀಗಿದೆ:

ಮೇಷ: ಸಹನೆಯನ್ನು ಬಿಟ್ಟು ಮನಸ್ಸು ಚಂಚಲವಾಗದಿರಲಿ. ಜನರಿಂದ ಕೆಲಸದ ವಿಚಾರದಲ್ಲಿ ಮನ್ನಣೆ ದೊರೆಯಲಿದೆ. ಸಮಾಧನದಿಂದ ಬಂದುದನ್ನು ಎದುರಿಸಿ. ನಿಮ್ಮನ್ನು ಬಂದು ಸೇರಲಿರುವ ಸಂಪತ್ತನ್ನು ಉತ್ತಮಕಾರ್ಯಕ್ಕೆಂದು ವಿನಿಯೋಗಿಸಿ. ಸತ್ಫಲವನ್ನು ಪಡಯಬಹುದಾಗಿದೆ. ನಿಮ್ಮ ಒಡನಾಟ ದುಃಖದಲ್ಲಿರುವವರಿಗೆ ಸಂತೋಷವನ್ನು ನೀಡುತ್ತದೆ. ವ್ಯಕ್ತಿತ್ವದಿಂದ ಸಕ್ಕರೆ ಇರುವೆಗಳು ಬಂದು ಮುತ್ತುವಂತೆ ನಿಮ್ಮನ್ನು ಬಂದು ಸೇರುವರು. ಅಕಾಲದಲ್ಲಿ ಆಸ್ಥಾನದಲ್ಲಿ ಉಂಟಾದ ಪ್ರೀತಿಯು ಕಂಟಕವನ್ನು ತಂದೀತು.

ವೃಷಭ: ಸಾಲ ನೀಡುವಾಗ ಪೂರ್ವಾಪರ ಆಲೋಚನೆ ಇರಲಿ. ಸಾಲವು ಮರಳಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಷ್ಟಗಳು ಕಣ್ಮುಂದೆ ಕಂಡರೂ ಬೆಳಗಿನ ಸೂರ್ಯನಕಿರಣಕ್ಕೆ ಮಂಜು ಕರಗುವಂತೆ ಕರಗಿಹೋಗುತ್ತದೆ‌. ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸನ್ನು ಹಗುರಗೊಳಿಸುವಿರಿ. ಕಾರ್ಯದ ಒತ್ತಡದಿಂದ ಕಛೇರಿಯಲ್ಲಿ ಹೆಚ್ಚು ಕಾಲ ಕಳೆಯಬೇಕಾಗಿಬರಬಹುದು. ಇದೇ ಕಾರಣಕ್ಕೆ ಮನೆಯಲ್ಲಿ ಉದ್ವಿಗ್ನತೆಯುಂಟಾಗುವುದು. ಮೃಷ್ಟಾನ್ನ ಭೋಜನವನ್ನು ಇಂದು ಉಂಡು ಸುಖಿಸುವಿರಿ. ಒಬ್ಬರೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲು ಹೋಗಬೇಡಿ.

ಮಿಥುನ: ಕುಟುಂಬದವರೊಂದಿಗೆ ದಿನದ ಹೆಚ್ಚು ಕಾಲವನ್ನು ಕಳೆಯಲು ಪ್ರಯತ್ನಿಸಿ. ರೂಪ ಹಾಗೂ ವ್ಯಕ್ತಿತ್ವ ಸ್ನೇಹಿತರನ್ನು ಗಳಿಸಲು ಸಹಕಾರಿ. ಪರಿಸ್ಥಿತಿಗಳು ಹೇಗೂ ಬರಲಿ. ಮನಸ್ಸು ಮತ್ತು ಬುದ್ಧಿ ದೃಢವಾಗಿರಲಿ. ಸಂತೋಷದ ಬೆಲೆಯನ್ನು ಇಂದು ಅರಿತುಕೊಳ್ಳುವಿರಿ. ಕಾರ್ಯಸ್ಥಾನದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ಸಭೆ, ಸಮಾರಂಭಗಳಿಗೆ ಭೇಟಿ ನೀಡಿ, ಮನಸ್ಸನ್ನು ನೆಮ್ಮದಿಯ ದಡಕ್ಕೆ ಸೇರುವಿರಿ. ಹಿಂದೆ ಕೂಡಿಟ್ಟ ಹಣವು ಕೈ ಸೇರುವ ಸುದಿನ.

ಕರ್ಕ: ವಿನಾಕಾರಣ ಹಣದ ವ್ಯಯದ ಸಾಧ್ಯತೆ ಇದೆ. ಮುಂಜಾಗ್ರತೆಯನ್ನು ಇರಿಸಿಕೊಳ್ಳಿ. ದಂಪತಿಗಳ ನಡುವೆ ಕಲಹವೆದ್ದು ಕೊನೆಗೆ ಪೂರ್ವಕೃತ್ಯವನ್ನು ಸ್ಮರಿಸಕೊಂಡಲ್ಲಿ ವಿನೋದದಲ್ಲಿ ಮುಕ್ತಾಯಗೊಳ್ಳುವುದು. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಇಮ್ಮಡಿಸುವುದು. ಹೂಡಿಕೆಗಳನ್ನು ಮಾಡಿ, ಲಾಭವು ನಿಮ್ಮನ್ನು ಬಂದು ಸೇರುವುದು. ಸ್ನೇಹಿತನಿಗೆ ಧನಸಹಾಯ ಅಥವಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವಿರಿ. ಬೆಳಗಿನಿಂದ ಸಂಜೆಯ ತನಕ ಉಲ್ಲಾಸ, ಉತ್ಸಾಹ, ಲವಲವಿಕೆ ನಿಮ್ಮದೇ ಆಗಿರುತ್ತದೆ.

ಸಿಂಹ: ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ಸಿಂಹದಂತೆ ಹಿಂದೆ ಆಗಿಹೋದ ಮಹತ್ಕಾರ್ಯಗಳ ಅವಲೋಕನ ಮಾಡಿಕೊಳ್ಳಿ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಸಂಬಂಧಿಕರ ಹಾಗೂ ಸ್ನೇಹಿತರಿಂದ ಕೂಡಿಕೊಂಡು ಮನಬಿಚ್ಚಿ ಹರಟೆ ಹೊಡೆದು ಹೋಗುತ್ತೀರಿ. ಯಾರನ್ನಾದರೂ ಪ್ರೀತಿಸಿದ್ದರೆ ತನ್ನ ದೊಡ್ಡ ಹೆಜ್ಜೆಯನ್ನು ಇಟ್ಟು ತನ್ನ ಸರಿಯಾದ ರೂಪವನ್ನು ತೋರಿಸುವುದು. ವಿಶ್ವಾಸಃ ಫಲದಾಯಕಃ ಎನ್ನುವ ಮಾತನ್ನು ನಂಬಿ ನಡೆಯುವವರು.

ಕನ್ಯಾ: ದೇಹಾಯಾಸದ ಕರ್ಮಗಳನ್ನು ಕೈಗೆತ್ತಿಕೊಳ್ಳುವುದು ಉಚಿತವಲ್ಲ. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ಉಭಯಸಂಕಟದಲ್ಲಿ ನೋಯಬೇಕಾಗಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆನಿಸಬಹುದು. ಹಳೆಯ ಘಟನೆಯನ್ನು ನೆನೆದು ಕೊರಗಬೇಡಿ. ಹರುಷಕ್ಕೆ ಹತ್ತರು ದಾರಿಗಳಿವೆ. ಚೆನ್ನಾಗಿ ಮಾತನಾಡುವುದೊಂದೇ ನಿಮಗೀಗ ಬೇಕಾಗಿದ್ದು. ಹಣದ ವಿಚಾರದಲ್ಲಿ ಹಾಸಿಗೆಯಿದ್ದಷ್ಟೆ ಕಾಲುಚಾಚು.

ತುಲಾ: ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡಿಸುವಂತೆ ಪ್ರೇರಿಸಿತ್ತು. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾ ಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು. ಪ್ರವಾಹದ ವಿರುದ್ಧ ಈಜುವುದು ಸಾಧ್ಯವೆಂದು ಅಂದುಕೊಳ್ಳಬೇಡಿ.

ವೃಶ್ಚಿಕ: ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹುಂಬುತನ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ಪ್ರವಾಹದ ದಿಕ್ಕಿನಲ್ಲೇ ಹೋದರೆ ದಡಸೇರಲು ಏನಾದರೂ ಆಧಾರ ಸಿಕ್ಕೀತು. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ಅವರಾಡುವ ಮಾತುಗಳಿಂದ ಉದ್ವೇಗಕ್ಕೆ ಒಳಗಾಗಲು ಹೋಗಬೇಡಿ. ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿ ಹಾಗೂ ಕೆಲಸದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದರೆ ನೀವು ಯಾರೆಂದು ತಿಳಿಯುತ್ತದೆ. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ.

ಧನುಸ್ಸು: ಏನು ಮಾಡುತ್ತಿದ್ದೇನೆ ಎಂದು ಸರಿಯಾಗಿ ಗ್ರಹಿಸಿ ಮುನ್ನಡಯಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳು ಕೇಳಿಬರಬಹುದು. ಅಂತಹ ಮಾತುಗಳಿಗೆ ನಿರ್ಲಕ್ಷ್ಯವೇ ಉತ್ತರ. ಸಾರ್ವಜನಿಕವಾಗಿ ತೆಗೆದುಕೊಳ್ಳುವ ನಿಮ್ಮ ನಿರ್ಧಾರವು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಮನಸ್ಸು ಹಗುರಾದೀತು. ಆಹಾರವನ್ನು ಮನಸೋ ಇಚ್ಛೆ ಸೇವಿಸಿ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಉತ್ತಮ ಆಹಾರವು ನಿಮ್ಮ ಮನಸ್ಸನ್ನೂ ಸರಿಯಾಗಿರಿಸಬಲ್ಲದು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಸಮಯ ಸುಮ್ಮನೇ ವ್ಯರ್ಥವಾಗುತ್ತಿದೆ. ಎಲ್ಲಿ ವ್ಯರ್ಥವಾಗುತ್ತಿದೆ ಎನ್ನುವುದನ್ನು ಗಮನಿಸಿಕೊಳ್ಳಿ. ನಿಮ್ಮನ್ನು ಇಷ್ಟಪಡುವವರೊಂದಿಗೆ ಸ್ವಲ್ಪ ಕಾಲ ಕಳೆಯಿರಿ.

ಮಕರ: ಬಂಧುಗಳ ಬೆಂಬಲ ನಿಮ್ಮ ಕಷ್ಟದ ಭಾರವನ್ನು ಕಡಿಮೆ ಮಾಡುತ್ತದೆ. ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ‌. ಇದರೊಂದಿಗೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಬ್ಯಾಂಕ್ ಉದ್ಯೋಗಿಗಳಿಗೆ ಶುಭವಾರ್ತೆ ಸಿಗಲಿದೆ.

ಕುಂಭ: ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತ ಬಳಗೆ ಅದಕ್ಕೆ ಕುಮ್ಮಕ್ಕು ಕೊಡಬಹುದು. ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ನಿಮ್ಮ ನಂಬಿಕೆ ಇಂದು ಫಲವನ್ನು ಕೊಡುತ್ತದೆ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಅನಾರೋಗ್ಯವೆದುರಾದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯಿರಿ. ಅಸಡ್ಡೆ ಒಳ್ಳೆಯದಲ್ಲ.

ಮೀನ: ಹೊಂದಾಣಿಕೆಯಿಂದ‌ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಆರ್ಥಿಕಸ್ಥಿತಿ ಸುಧಾರಿಸಲಿದೆ. ಮಾತನಾಡುವಾಗ ಸಮಯ, ಸಂದರ್ಭ, ವ್ಯಕ್ತಿಗಳನ್ನು ಗಮನಿಸಿಕೊಳ್ಳಿ. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ಅಪರೂಪದ ಅತಿಥಿಗಳ ಆಗಮನ ನಿಮ್ಮ ಕಾರ್ಯಕ್ಕೆ ಅಡ್ಡಿಯುಂಟುಮಾಡಬಹುದು. ಬೇಸರಿಸದೇ ಕರ್ತವ್ಯವೆಂದು ಅವರೊಂದಿಗೆ ಮಾತನಾಡಿ. ಮಹತ್ತರವಾದ ಮಾರ್ಗವೂ ತೆರೆದುಕೊಳ್ಳಬಹುದು. ಎಂದೋ ಮಾಡಿದ ಉಪಕಾರ ಇಂದು ನಿಮಗೆ ಉಪಯೋಗಕ್ಕೆ ಬರಲಿದೆ.

ಲೋಹಿತಶರ್ಮಾ, ಇಡುವಾಣಿ 

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ