ರಾಶಿಗಳು
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 13 ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ಶುಕ್ರವಾರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶೋಭನ, ಕರಣ: ವಣಿಜ, ರಾಹು ಕಾಲ ಬೆಳಗ್ಗೆ 11 ಗಂಟೆ 17 ನಿಮಿಷದಿಂದ ಮಧ್ಯಾಹ್ನ 12 ಗಂಟೆ 41 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 20 ನಿಮಿಷಕ್ಕೆ.
ತಾ. 13-01-2023 ರ ಶುಕ್ರವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ಆಗಲೇ ಬೇಕಾಗಿರುವ ಸರ್ಕಾರಿ ಕೆಲಸಗಳು ವಿಳಂಬವಾಗಲಿದೆ. ಅಪರಿಚಿತ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬಂದಾರು. ನೀವು ನಂಬಿಕೆಯನ್ನು ಇಟ್ಟ ಜನರಿಂದ ವಂಚನೆಗೆ ಒಳಗಾಗಬಹುದು. ದಾಂಪತ್ಯದಲ್ಲಿ ಸಣ್ಣ ಜಗಳಗಳು ಇರಲಿವೆ. ಮನಸ್ಸಿನ ಹಾಗೂ ದೇಹದ ಆರೋಗ್ಯ ಕೆಡಬಹುದು. ಕೆಲಸದ ಸ್ಥಳವನ್ನು ಬದಲಾತಿಸುವ ಸನ್ನಿವೇಶಗಳು ಬರಲಿವೆ. ಕೃಷಿಕರು ಲಾಭದಾಯಕವಾದ ದಿನವಾಗಿದೆ. ಉತ್ತಮವಾದ ಆಹಾರವನ್ನು ಸೇವಿಸುವಿರಿ.
- ವೃಷಭ: ದೇವತಾರಾಧನೆಯಲ್ಲಿ ಇಂದು ನೀವು ತೊಡಗಿಕೊಳ್ಳುವಿರಿ. ನಿಮ್ಮ ಮನಸ್ಸು ಗಾಳಿಯಷ್ಟೇ ಚಂಚಲವಾಗಿರುತ್ತದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮನಸ್ಸಿಗೆ ಸಮಾಧಾನಕರ ವಿಷಯವು ನಡೆಯದೇ ಕಿರಿಕಿರಿಯಾಗಬಹುದು. ನಿಮ್ಮ ಸಂಪತ್ತು ಯಾರಾದರೂ ಕದ್ದು ಒಯ್ದಾರು ಎನ್ನುವ ಭಯವು ನಿಮ್ಮನ್ನು ಕಾಡುತ್ತಿರುತ್ತದೆ. ಸಂಗಾತಿಯ ಜೊತೆ ಸುಂದರವಾದ ಈ ದಿನವನ್ನು ಕಳೆಯಿರಿ. ಅತಿಯಾದ ಆಸೆಪಟ್ಟು ನಿಮ್ಮ ಅಮೂಲ್ಯವಾದ ಸಂಪತ್ತು ಹಾಗೂ ಸಮಯವನ್ನು ಹಾಳುಮಾಡಬೇಡಿ.
- ಮಿಥುನ: ನಿಮಗೆ ಒಂದಿಷ್ಟು ಧನದ ಲಾಭವಾದರೂ ಅದು ಕಾರಣಾಂತರಗಳಿಂದ ನಷ್ಟವಾಗಲಿದೆ. ವಾಹನದಲ್ಲಿ ಸಂಚರಿಸುವಾಗ ಜಾಗರೂಕರಾಗಿರಿ. ಅಪಘಾತಗಳು ಸಂಭವಿಸಿಯಾವು. ಸ್ತ್ರೀಯರು ನಿಮ್ಮ ಸಹನಾಗುಣವನ್ನು ಹೆಚ್ಚಿಸಿಕೊಳ್ಳಬೇಕು. ಉದ್ವೇಗದ ಅಥವಾ ದುಃಖದ ಸಂಗತಿಗಳು ನಿಮ್ಮ ಕಿವಿಗೆ ಬೀಳಬಹುದು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ವಿಧಾನವನ್ನು ಅನುಸರಿಸಿ. ಉತ್ಸವಗಳಿಗೆ ಭಾಗವಹಿಸುವಿರಿ.
- ಕರ್ಕ: ಸ್ವಂತ ಉದ್ಯೋಗವನ್ನು ಮಾಡುತ್ತಿರುವ ನಿಮಗೆ ಶುಭ ವಾರ್ತೆ ಸಿಗಲಿದೆ. ಇದರಿಂದ ನಿಮ್ಮ ಕಾರ್ಯದಲ್ಲಿ ಸಂತೃಪ್ತಿ ಹಾಗೂ ನೆಮ್ಮದಿ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿಷಯದ ಆಯ್ಕೆಗಳಲ್ಲಿ ಸ್ವಲ್ಪ ಗೊಂದಲಗಳು ಇರಬಹುದು. ಅನುಭವಿಗಳ ಜೊತೆ ಮಾತನಾಡಿ. ನಿಮ್ಮ ಮುಂದಿನ ಅಭ್ಯಾಸಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಿ. ನಿಮಗಾಗದವರು ನಿಮ್ಮ ಬಗ್ಗೆ ಹೊಂಚುಹಾಕುತ್ತ ಇರುತ್ತಾರೆ. ಲೆಕ್ಕಿಸದೇ ನಿಮ್ಮ ದಾರಿಯಲ್ಲಿ ನೀವು ಸಾಗುವುದು ಒಳ್ಳೆಯದು. ನಿಮ್ಮನ್ನು ಅಪಮಾನಿಸುವ ಮಾತುಗಳು, ಘಟನೆಗಳು ನಡೆಯಬಹುದು.
- ಸಿಂಹ: ಭವಿಷ್ಯದ ಕುರಿತು ನಿಮ್ಮಲ್ಲಿ ಅನೇಕ ಗೊಂದಲಗಳು ಇರಬಹುದು. ಅವುಗಳನ್ನು ಅತಿಯಾಗಿ ಆರೈಕೆ ಮಾಡಬೇಡಿ. ನಿಮ್ಮ ಕೈಯ್ಯಲ್ಲಿ ಯಾವುದೂ ಇರುವುದಿಲ್ಲ. ಸ್ಥೂಲವಾದ ಯೋಜನೆಗಳನ್ನು ಇಟ್ಟುಕೊಂಡು ಸಾಗಿ. ವ್ಯಾಪಾರಸ್ಥರು ಲಾಭವನ್ನು ಪಡೆಯಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣವು ಇರಲಿದೆ. ಅನಾರೋಗ್ಯವು ನಿಮ್ಮನ್ನು ವಿಶ್ರಾಂತಿಗೆ ತಳ್ಳಬಹುದು. ಎಚ್ಚರವನ್ನು ವಹಿಸಿ. ಒರಟುತನ ನಿಮ್ಮವರಿಗೆ ಹಿಂಸೆಯನ್ನು ತರಬಹುದು.
- ಕನ್ಯಾ: ಇಂದು ನಿಮಗೆ ಅನೇಕ ಲಾಭಗಳಾಗುವ ದಿನವಾಗಿದೆ. ಸ್ಬೇಹಿತರು ನಿಮ್ಮ ಕಾರ್ಯಕ್ಕೆ ಬೆಂಬಲವನ್ನು ನೀಡಲಿದ್ದಾರೆ. ನಿಮ್ಮವರೇ ನಿಮಗೆ ಶತ್ರುಗಳಾಗಲೂಬಹುದು, ಅಚ್ಚರಿಯನ್ನು ಅನುಭವಿಸಬೇಕಿಲ್ಲ. ಭೂಮಿಯ ಖರೀದಿಯ ಕುರಿತು ನೀವು ಆಲೋಚಿಸುವಿರಿ. ಸಮಾಜಕಲ್ಯಾಣದ ಕೆಲಸಗಳು ಇಂದು ನಿಮ್ಮಿಂದ ಆಗಲಿದೆ. ನಿಮ್ಮ ಪ್ರಾಮಾಣಿಕತೆಯೇ ನಿಮಗೆ ಯಶಸ್ಸನ್ನು ತರಲಿದೆ.
- ತುಲಾ: ಭವಿಷ್ಯವನ್ನು ರೂಪಿಸಲು ಸಹಕಾರಿಯಾದ ಘಟನೆಗಳು ಇಂದು ನಡೆಯಲಿವೆ. ಲೇವಾದೇವಿಯ ವ್ಯವಹಾರವು ನಿಮಗೆ ಧನದ ಲಾಭವನ್ನು ತರಲಿದೆ. ವಾಹನವನ್ನು ಚಲಾಯಿಸುವಾಗ ಎಚ್ಚರವಿರಲಿ. ಯಾರ ಬಗ್ಗೆಯೂ ಪೂರ್ವಾಪರದ ಜ್ಞಾನವಿಲ್ಲದೇ ವ್ಯವಹರಿಸಿಬೇಡಿ. ವಿದ್ಯುತ್ ಉಪಕರಣಗಳ ಖರೀದಿಯಿಂದ ಧನವು ನಷ್ಟವಾಗಲಿದೆ. ದುಃಸ್ವಪ್ನಗಳಿಂದ ನೀವು ಚಿಂತೆಗೊಳ್ಳಬಹುದು. ಉತ್ತಮವಾದ ವಸ್ತುವನ್ನು ಪ್ರೀತಿಪಾತ್ರರಿಗೆ ನೀಡಲಿದ್ದೀರಿ.
- ವೃಶ್ಚಿಕ: ಅಪರಿಚಿತರು ನಿಮ್ಮನ್ನು ಭೇಟಿಯಾದಾರು. ಕೂಡಲೇ ಸ್ನೇಹಕ್ಕೆ ಸಿದ್ಧರಾಗಬೇಡಿ. ಪಿತ್ತಸಂಬಂಧವಾದ ತುರಿಕೆ, ಹುಣ್ಣುಗಳಿಂದ ಪೀಡಿತರಾಗಬಹುದು. ಮಕ್ಕಳು ನಿಮಗೆ ಸುವಾರ್ತೆಯನ್ನು ಕೇಳಿಸಬಹುದು. ಶತ್ರುಗಳ ಜೊತೆ ಕಲಹಕ್ಕೆ ಹೋಗಬೇಡಿ. ಇಂದಿನ ಪ್ರಯಾಣವು ಆಯಾಸದಾಯಕವಾಗಿದೆ. ಆಮಿಷಗಳಿಗೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಲಿದ್ದೀರಿ. ಇಂತಹ ಸಂದರ್ಭಗಳು ಬಂದಾಗ ಎಚ್ಚರಿರಿ. ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮ್ಮ ಮಾತಿಗೆ ಮೋಡಿಯಾಗುವರು.
- ಧನುಸ್ಸು: ಮಾನಸಿಕವಾಗಿ ನೀವು ಸದೃಢರಾಗಿದ್ದೀರಿ. ಆರೋಗ್ಯವೂ ನಿಮ್ಮನ್ನು ಬಾಧಿಸದು. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆಯ ಸಾಧ್ಯತೆ ಇದೆ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕಲಹಗಳು ಆಗಬಹುದು. ಅತಿಥಿಗಳ ಆಗಮನದಿಂದ ಸಂತೋಷವಾಗಲಿದೆ. ಕೆಲವು ಸಂದರ್ಭಗಳಲ್ಲಿ ನೀವು ನಡೆದುಕೊಳ್ಳುವ ರೀತಿಯು ಆದರ್ಶವಾಗಲಿದೆ. ಸಣ್ಣ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಲಿದೆ. ದೂರದ ಸಂಬಂಧಿಗಳು ಹತ್ತಿರವಾಗಲಿದ್ದಾರೆ. ದಾಯಾದಿಗಳ ನಿಧನವಾರ್ತೆ ಕೇಳಿ ಬರಲಿದೆ.
- ಮಕರ: ಬಹಳ ದಿನಗಳ ಅನಂತರ ವಿವಾಹಯೋಗದ ಸುದ್ದಿಯು ಮತ್ತೆ ಕೇಳಿಸಲಿದೆ. ನಿಮ್ಮ ಉದ್ಯೋಗಕ್ಕೆ ಮಿತ್ರರು ಬೆಂಬಲವನ್ನು ಕೊಡಲಿದ್ದಾರೆ. ವಿನಾ ಕಾರಣ ಯಾರ ಮೇಲೂ ಕೋಪವನ್ನು ಮಾಡಬೇಡಿ. ವೈರಿಗಳು ನಿಮ್ಮನ್ನು ಪರೀಕ್ಷಿಸಲೆಂದೇ ಬರುತ್ತಾರೆ ಎಂದು ಕೊಂಡು ಅವರನ್ನು ಯುಕ್ತಿಗಳಿಂದ ಎದುರಿಸಿ. ವಿದೇಶದ ವ್ಯವಹಾರವು ನಿಮಗೆ ಲಾಭದಾಯಕವಾದುದಾಗಿವೆ. ಶುದ್ಧವಾದ ಅಂತಃಕರಣದಿಂದ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿ.
- ಕುಂಭ: ಇಷ್ಟು ದಿನಗಳ ಕಾಲ ಅನುಭವಿಸಿದ ಕಷ್ಟಕ್ಕೆ ಇಂದು ನಿಮಗೆ ಫಲವು ಸಿಗಲಿದೆ. ಪೂಜ್ಯರಾದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಸಂಗಾತಿಗಳು ಸಮಾರಸ್ಯದ ಬದುಕನ್ನು ನಡೆಸಲಿರುವರು. ಆಹಾರದ ವ್ಯವಹಾರಗಳು ನಿಮಗೆ ಲಾಭವನ್ನು ತರಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲಿದ್ದಾರೆ. ಸಂಗೀತಾದಿ ಕಲೆಗಳ ಆಸ್ವಾದನೆಯಿಂದ ಆನಂದವನ್ನು ಪಡೆಯುವಿರಿ. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡುವಿರಿ.
- ಮೀನ: ನಿಮಗೆ ಅಪವಾದಗಳು ಬರಬಹುದು. ಪ್ರಯತ್ನಕ್ಕೆ ತಕ್ಕ ಫಲವು ಬರಲಿದೆ. ಆನಂದದಿಂದ ಕಳೆಯುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ಧಾರ್ಮಿಕಕಾರ್ಯಗಳಲ್ಲಿ ಭಾಗವಹಿಸುವಿರಿ. ಮನೆಯನ್ನು ಖರೀದಿಸುವ ಆಲೋಚನೆಗಳನ್ನು ಮಾಡುವಿರಿ. ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದೀರಿ. ವೈದ್ಯವೃತ್ತಿಯವರಿಗೆ ಶುಭ ಸುದ್ದಿಯು ಇರಲಿದೆ. ಪ್ರೇಮಾಂಕುರವಾಗುವ ಸಾಧ್ಯತೆ ಇದ್ದು, ಕಾರಣಾಂತರಗಳಿಂದ ತಪ್ಪಿಹೋಗುವುದು.
-ಲೋಹಿತಶರ್ಮಾ, ಇಡುವಾಣಿ