Nitya Bhavishya: ಈ ರಾಶಿಯವರು ತಮ್ಮ ದುಶ್ಚಟಗಳಿಂದ ದೂರವಿರುವುದು ಲೇಸು: ಇಲ್ಲವೆಂದಾದಲ್ಲಿ ಅಪಾಯ ತಪ್ಪಿದಲ್ಲ
2023 ಜನವರಿ 12 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 12 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ಗುರುವಾರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸೌಭಾಗ್ಯ, ಕರಣ: ತೈತಿಲ, ರಾಹು ಕಾಲ ಮಧ್ಯಾಹ್ನ 2 ಗಂಟೆ 6 ನಿಮಿಷದಿಂದ ಮಧ್ಯಾಹ್ನ 3 ಗಂಟೆ 30 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 19 ನಿಮಿಷಕ್ಕೆ.
ತಾ. 12-01-2023 ರ ಗುರುವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ಅಕಾರಣವಾಗಿ ಚಿಂತೆಗಳನ್ನು ಮಾಡಬೇಡಿ. ಉದ್ವೇಗಕ್ಕೆ ಒಳಗಾಗಬಹುದು. ಎಲ್ಲವೂ ಖಾಲಿ ಖಾಲಿ ಅನ್ನಿಸಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೇಮಾಂಕುರವು ಆಗಬಹುದು. ಕಲಾವಿದರು ಪ್ರಶಂಸೆಗೆ ಪಾತ್ರರಾಗುವರು. ಹಿರಿಯ ಕಲಾವಿದರ ಭೇಟಿಯಾಗಬಹುದು. ನಿಮ್ಮೊಳಗೆ ಅಳಿಯದೇ ಉಳಿವ ಘಟನೆಯೊಂದು ನಡೆಯಲಿದೆ. ವೃತ್ತಿಯಲ್ಲಿ ಸಮಾಧಾನ ತರುವ ಸಂಗತಿಗಳು ಇರಲಿದೆ. ಸಂಗಾತಿಯೊಂದಿಗೆ ಹರಟಯಲ್ಲಿ ಕಾಲವನ್ನು ಕಳೆಯುವಿರಿ.
- ವೃಷಭ: ಹತ್ತಾರು ಆಸೆಗಳನ್ನು ಇಟ್ಟುಕೊಂಡವರು ನೀವಾಗಿದ್ದೀರಿ. ಭರವಸೆಯೇ ನಿಮಗೆ ಭವಿಷ್ಯದ ಬೆಳಕಾಗಲಿದೆ. ಉತ್ತಮರ ಸಹವಾಸ ನಿಮಗೆ ಹೊಸದಾದ ದಿಕ್ಕನ್ನು ತೋರಿಸಬಹುದು. ನಂಬಿಕೆಯನ್ನು ಇಡುವಾಗ ಮುನ್ನೆಚ್ಚರವಿರಲಿ. ಪ್ರಣಯಪ್ರಸಂಗದಲ್ಲಿ ಆಕಸ್ಮಿಕ ತಿರುವುಗಳು ಇರಬಹುದು. ದುಃಖವನ್ನು ಅನುಭವಿಸುವ ಸಂದರ್ಭ ಬರಬಹುದು. ಮನಸ್ಸು, ಬುದ್ಧಿಗಳನ್ನು ನಿಶ್ಚಲಗೊಳಿಸಿ. ಮನಸ್ಸನ್ನು ಅನ್ಯ ಕಾರ್ಯದಲ್ಲಿ ಯೋಜಿಸಿ. ಪರಿಶ್ರಮಕ್ಕೆ ಫಲವು ಸಿಗಲಿದೆ.
- ಮಿಥುನ: ಆರೋಗ್ಯವು ಸುಧಾರಿಸಲಿದೆ. ಅನೇಕ ದಿನಗಳಿಂದ ಇದ್ದ ಜಾಡ್ಯವು ದೂರವಾಗಲಿದೆ. ವ್ಯಾಪಾರದಲ್ಲಿ ಚೇತರಿಕೆ ಇರಬಹುದು. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿಸಿಕೊಳ್ಳಿ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ಹಿರಿಯರ ಸೇವೆಯನ್ನು ಕೆಲಸವೆಂದು ಮಾಡದೇ ಕರ್ತವ್ಯವೆಂದು ಮಾಡಿ. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿ. ಮಕ್ಕಳಿಂದ ಸಂತೋಷವು ಸಿಗಲಿದೆ. ಗುರುಗಳನ್ನು ಭೇಟಿಯಾಗಲಿದ್ದೀರಿ. ನಿಮ್ಮ ವಿರುದ್ಧ ಯಾವುದಾದರೂ ಆರೋಪಗಳು ಬರಬಹುದು.
- ಕರ್ಕ: ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿಯನ್ನು ತಂದೆಂತೆ ಆದೀತು. ಈಗಲೇ ನಿಮ್ಮ ರೋಗಗಳನ್ನು ಸರಿಮಾಡಿಕೊಳ್ಳಿ. ಇಲ್ಲವಾದರೆ ಅದಕ್ಕೆ ಅಧಿಕವಾದ ಹಣವು ವ್ಯಯವಾದೀತು. ನಿಮಗಿರುವ ಕಾಳಜಿಗೆ ಪ್ರಶಂಸೆಗಳು ಬರಬಹುದು. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಶುಭವಾರ್ತೆಯು ಇರಲಿದೆ. ಅಪರಿಚಿತ ವ್ಯಕ್ತಿಯೊಡನೆ ಜಗಳಗಳು ಆಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡಿ.
- ಸಿಂಹ: ತಂದೆ ಹಾಗೂ ತಾಯಿಯರ ಜೊತೆ ಜಗಳಗಳು ಆಗಬಹದು. ಕಾರ್ಯದ ಒತ್ತಡ ನಿಮ್ಮನ್ನು ಒತ್ತಡಕ್ಕೆ, ಉದ್ವೇಗಕ್ಕೆ ತಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ಮಾಡುವ ಕೆಲಸಗಳತ್ತ ಗಮನಹರಿಸಿ. ನೀವು ಮಾಡಲಿರುವ ಕೆಲಸಗಳು ಪರ್ವತದಷ್ಟು ಇರಲಿದೆ. ನಿಮ್ಮ ಸಾಮರ್ಥ್ಯವು ಇತರರಿಗೆ ತಿಳಿಯಬಹುದು. ಅವಕಾಶಗಳನ್ನು ಬಿಟ್ಟುಕೊಡುವುದು ಔದಾರ್ಯವಲ್ಲ. ಆಲಸ್ಯವಾಗುತ್ತದೆ. ಹೊಸ ಸ್ನೇಹ ಕುದುರಬಹುದು.
- ಕನ್ಯಾ: ನೀವಂದುಕೊಂಡಷ್ಟು ಸಂತೋಷವು ನಿಮಗೆ ಲಭ್ಯವಾಗದು. ಅನಗತ್ಯ ತಿರುಗಾಟ, ಖರ್ಚುಗಳು ನಿಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬಹುದು. ಉತ್ಸಾಹವು ಕಡಿಮೆಯಾಗ ಸಂಗೀತವನ್ನು ಕೇಳಿ, ಅದನ್ನು ಹೆಚ್ಚುಗೊಳಿಸಿ. ಹರಟೆಯು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಟ್ಟೀತು. ಚಿತ್ರಗಾರರಿಗೆ ಇಂದು ಪ್ರಶಂಸೆಯನ್ನು ಹೊಂದಬಹುದು. ಯಾರೋ ಆಡಿದ ಮಾತಿನಿಂದ ನಿಮಗೆ ನೋವಾಗಬಹುದು. ಒಂಟಿತನವನ್ನು ಇಷ್ಟಪಡಬಹುದು.
- ತುಲಾ: ಮನೋರಂಜನೆಯ ಕಾರಣಕ್ಕೆ ಹಣವನ್ನು ಕಳೆಯುವಿರಿ. ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಲಿವೆ. ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸಬಹುದಾಗಿದೆ. ಸಂಗಾತಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಉತ್ತಮ. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿದೆ ಎಂದು ನಿಮಗಾಗದವರು ಗುಲ್ಲೆಬ್ಬಿಸಬಹುದು. ಉದ್ಯೋಗಿಗಳು ಪರಿಶ್ರಮದಿಂದ ಲಾಭವನ್ನು ಪಡೆಯಬಹುದಾಗಿದೆ.
- ವೃಶ್ಚಿಕ: ಯಾರನ್ನೋ ಮೆಚ್ಚಿಸಲು ನೀವು ನಿಮ್ಮ ಸಮಯವನ್ನು ವ್ಯಯಿಸುವಿರಿ. ಅದರಿಂದ ಯಾವ ಲಾಭವೂ ಆಗದು. ಭೂವ್ಯವಹಾರದಲ್ಲಿ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಹಳೆಯದರ ನೆನಪಿನ ಜೊತೆ ದಿನವನ್ನು ಕಳೆಯಬೇಡಿ. ನಿಮ್ಮ ಕಾರ್ಯಗಳನ್ನು ಸಹೋದ್ಯೋಗಿಗಳು ಮೆಚ್ಚಬಹುದು. ನಿಮ್ಮ ಮಾತು ಖುಷಿಯನ್ನು ನೀಡುತ್ತದೆ. ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ವಿರುದ್ಧ ಪಿತೂರಿಗಳು ನಡೆಯುತ್ತಿರಬಹುದು.
- ಧನುಸ್ಸು: ನಿಮ್ಮವರೊಂದಿಗೆ ಇಂದು ಬಿಡುವಿಲ್ಲದಿದ್ದರೂ ಸಮಯವನ್ನು ಕೊಡಲು ಇಚ್ಛಿಸುವಿರಿ. ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನಾಳಿನ ಬಗ್ಗೆ ಚಿಂತೆ ನಿಮಗಿರಲಿದೆ. ಪಾಪಪ್ರಜ್ಞೆಯು ನಿಮ್ಮನ್ನು ಕಾಡಿ ಮನಸ್ಸು ದುರ್ಬಲವಾಗಬಹುದು. ಹೊಸ ಮನೆಯನ್ನು ಖರೀದಿಸುವ ಯೋಚನೆ ಮಾಡುವಿರಿ. ನಿಮಗೆ ವಿರುದ್ಧವಾದ ಅಭಿಪ್ರಾಯಗಳು ಬರಬಹುದು. ಉತ್ತಮವಾದ ಸಂಜೆಯನ್ನು ನೀವು ಕಳೆಯುವಿರಿ. ನೆಮ್ಮದಿಗೆ ಭಂಗವನ್ನು ತರುವ ಘಟನೆಗಳು ನಡೆಯಲಿವೆ.
- ಮಕರ: ನಿಮ್ಮ ಆಲೋಚನೆಗಳಿಂದ ನಿಮಗೆ ಉನ್ನತಸ್ಥಾನಗಳು ಲಭಿಸುವುವು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಹಣವನ್ನು ಹೂಡಿಕೆ ಮಾಡಲು ಮುಂದಾಲೋಚನೆಯನ್ನು ಇಟ್ಟುಕೊಂಡು ಮಾಡಿ. ಮಕ್ಕಳಿಂದ ಸಂತೋಷವನ್ನು ಪಡೆಯುವಿರಿ. ಶುಭ ಸುದ್ದಿಯು ನಿಮ್ಮ ಕೆಲಸಕ್ಕೆ ಉತ್ತೇಜನವನ್ನು ನೀಡುತ್ತದೆ. ನಿಮ್ಮ ಬಗ್ಗೆ ಇಲ್ಲ ಪ್ರಚಾರಗಳನ್ನು ಮಾಡಲು ನಿಮ್ಮನ್ನು ಕೆರಳಿಸುವ ಪ್ರಯತ್ನಗಳು ನಡೆಯಬಹುದು. ಕಲಾವಿದರ ಶ್ರಮಕ್ಕೆ ಒಳ್ಳೆಯ ಶುಭಫಲವು ಸಿಗಲಿದೆ.
- ಕುಂಭ: ಧಾರ್ಮಿಕವಾದ ಕೆಲಸಗಳು ನಿಮ್ಮಿಂದ ಆಗಲಿದೆ. ಒಂದಾದಮೇಲೊಂದರಂತೆ ಬರುವ ಕೆಲಸಗಳು ನಿಮಗೆ ಒತ್ತಡವೆನಿಸಬಹುದು. ಕ್ಷಣಕಾಲ ಏನನ್ನೂ ಯೋಚಿಸದೇ ಇರಿ. ಮನಸ್ಸು ಶಾಂತವಾದ ಬಳಿಕ ನಿಮ್ಮ ಕಾರ್ಯಗಳನ್ನು ಆರಂಭಿಸಿ. ವೇಗವಾಗಿ ಅದು ಮುಕ್ತಾಯಗೊಳ್ಳುವುದು. ಅಪಮಾನದ ಘಟನೆಗಳು ನಡೆಯಬಹುದು. ಅದಕ್ಕೆ ಉತ್ತರಿಸಲು ಹೋಗಿ ಇನ್ನೊಂದಿಷ್ಟು ಕೆಸರಿನ್ನು ಮೈಗೆ ಹಚ್ಚಿಕೊಳ್ಳುವ ಕೆಲಸವಾದೀತು. ಆರ್ಥಿಕ ಸಂಕಷ್ಟಕ್ಕೆ ನಿಮ್ಮ ಉಪಾಯಗಳನ್ನು ಆರಂಭಿಸುವಿರಿ.
- ಮೀನ: ಉತ್ತಮವಾದ ನಡವಳಿಕೆಯೇ ನಿಮ್ಮ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಸ್ನೇಹಿತರೊಂದಿಗೆ ಇದ್ದು ಅವರಿಗೆ ಮೃಷ್ಟಾನ್ನ ಭೋಜನವನ್ನು ಕೊಟ್ಟು ಆನಂದಿಸುವಿರಿ. ಇಚ್ಛೆಗೆ ಅನುಸಾರವಾಗಿ ಕುಟುಂಬದಲ್ಲಿ ನಡೆದುಕೊಳ್ಳುವರು. ನಿಮ್ಮ ಸಹಾಯವನ್ನು ಪಡೆದವರು ನಿಮ್ಮನ್ನು ಭೇಟಿಯಾಗಿ ಕೃತಜ್ಞತೆಯ ಭಾವವನ್ನು ಅರ್ಪಿಸುವರು. ಕಷ್ಟಕರವಾಗಿದ್ದರೂ ಪ್ರಯಾಣವನ್ನು ಮಾಡಲೇ ಬೇಕಾಗಿದೆ.
ಲೋಹಿತಶರ್ಮಾ, ಇಡುವಾಣಿ