ನಾನು ಕಳಪೆ ಆಗಬೇಕು: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ವಿಚಿತ್ರ ಆಸೆ
ಬಿಗ್ ಬಾಸ್ ಫಿನಾಲೆ ವಾರದಲ್ಲಿ ಕಾವ್ಯಾ ಶೈವ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಲು ನಿರ್ಧರಿಸಿದ್ದಾರೆ. ಅವರು ಈ ರೀತಿ ನಿರ್ಧಾರ ಮಾಡಲು ಕಾರಣ ಕೂಡ ಇದೆ. ಅದನ್ನು ಕ್ಯಾಮರಾ ಎದುರು ಅವರು ಹೇಳಿಕೊಂಡಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಬೇರೆ ಬೇರೆ ಆಸೆಗಳನ್ನು ಬಿಗ್ ಬಾಸ್ ಮುಂದೆ ಇಟ್ಟಿದ್ದಾರೆ. ಶೀಘ್ರವೇ ಅವೆಲ್ಲ ಈಡೇರಲಿವೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (BBK 12 Finale) ಜನವರಿ 17 ಮತ್ತು 18ರಂದು ನಡೆಯಲಿದೆ. ಈ ಫಿನಾಲೆ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲ ಸ್ಪರ್ಧಿಗಳಿಗೆ ಕೆಲವು ವಿಶೇಷ ಸಲವತ್ತುಗಳನ್ನು ನೀಡಲಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ (Kavya Shaiva), ಧ್ರುವಂತ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್ ಮತ್ತು ಗಿಲ್ಲಿ ನಟ (Gilli Nata) ಅವರು ಇದ್ದಾರೆ. ಇವರೆಲ್ಲರ ಒಂದು ಆಸೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಹೇಳಿದ್ದಾರೆ. ಕಾವ್ಯಾ ಶೈವ ಅವರು ಒಂದು ವಿಚಿತ್ರ ಆಸೆಯನ್ನು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ನೀಡಿರುವ ಅವಕಾಶದ ಅನುಸಾರ ಸ್ಪರ್ಧಿಗಳು ತಲಾ 3 ಆಸೆಗಳನ್ನು ಹೇಳಬೇಕು. ಅದರಲ್ಲಿ ಸಾಧ್ಯವಾದ ಆಸೆಯನ್ನು ಬಿಗ್ ಬಾಸ್ ಈಡೇರಿಸುತ್ತಾರೆ. ಆಗ ಕಾವ್ಯಾ ಅವರು ತಮ್ಮ ಮೂರು ಆಸೆಗಳನ್ನು ಕ್ಯಾಮೆರಾ ಹೇಳಿಕೊಂಡರು. ‘ನನ್ನ ತಮ್ಮ ಮತ್ತೆ ಬಿಗ್ ಬಾಸ್ ಮನೆಗೆ ಬರಬೇಕು. ಬಿಗ್ ಬಾಸ್ ಮನೆಯಲ್ಲಿ ನಾನು ಒಂದು ಸಿನಿಮಾ ನೋಡಬೇಕು. ನಾನು ಕಳಪೆ ಆಗಿ ಜೈಲಿಗೆ ಹೋಗಬೇಕು’ ಎಂದು 3 ಆಸೆಗಳನ್ನು ಕಾವ್ಯಾ ತಿಳಿಸಿದರು.
ಮೊದಲ ಎರಡು ಆಸೆಗಳು ಚೆನ್ನಾಗಿಯೇ ಇವೆ. ಆದರೆ ಮೂರನೇ ಆಸೆ ಸ್ವಲ್ಪ ಸ್ವಲ್ಪ ವಿಚಿತ್ರವಾಗಿದೆ. ಯಾಕೆಂದರೆ, ಬಿಗ್ ಬಾಸ್ ಮನೆಯಲ್ಲಿ ಯಾರೂ ಕೂಡ ಕಳಪೆ ಪಡೆದು ಜೈಲಿಗೆ ಹೋಗಬೇಕು ಅಂತ ಬಯಸಲ್ಲ. ಕಳಪೆ ಪಟ್ಟದಿಂದ ತಪ್ಪಿಸಿಕೊಳ್ಳಬೇಕು ಎಂದೇ ಬಯಸುತ್ತಾರೆ. ಆದರೆ ಕಾವ್ಯಾ ಅವರು ತಾವು ಕೊನೇ ದಿನಗಳಲ್ಲಿ ಕಳಪೆ ಆಗಬೇಕು ಎಂದು ಆಸೆಪಟ್ಟಿದ್ದಾರೆ.
ಕಾವ್ಯಾ ಅವರ ಈ ಆಸೆಗೂ ಕಾರಣ ಇದೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲ ಅನುಭವವನ್ನೂ ಪಡೆದುಕೊಂಡಿದ್ದಾರೆ. ಉತ್ತಮ ಪಡೆದಿದ್ದಾರೆ, ಕ್ಯಾಪ್ಟನ್ ಆಗಿದ್ದಾರೆ. ಆದರೆ ಜೈಲಿನ ಅನುಭವ ಹೇಗೆ ಇರುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. ಅದರ ಅನುಭವವನ್ನೂ ಕೂಡ ಪಡೆಯಬೇಕು ಎಂಬುದು ಅವರ ಆಸೆ. ಹಾಗಾಗಿ ಅವರು ಬಿಗ್ ಬಾಸ್ ಎದುರು ಆಸೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ
ಮಗನ ಜೊತೆ ಸ್ವಿಮಿಂಗ್ ಪೂಲ್ನಲ್ಲಿ ಆಟ ಆಡಬೇಕು, ಬಿಗ್ ಬಾಸ್ ಟಿವಿಯಲ್ಲಿ ಸಿನಿಮಾ ನೋಡಬೇಕು, ಮನೆಯವರ ಜೊತೆ ಇಷ್ಟದ ಅಡುಗೆ ಮಾಡಿಕೊಂಡು ತಿನ್ನಬೇಕು ಎಂದು ಮ್ಯೂಟೆಂಟ್ ರಘು ಅವರು ಆಸೆ ಹೇಳಿಕೊಂಡಿದ್ದಾರೆ. ನಲ್ಲಿ ಮೂಳೆ ತಿಂದು ಮಲಗಬೇಕು, ಟಿವಿಯಲ್ಲಿ ಸಿನಿಮಾ ನೋಡಬೇಕು ಎಂದು ಗಿಲ್ಲಿ ನಟ ಅವರು ಆಸೆಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




