AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ನೆರಳಲ್ಲೇ ಕಾವ್ಯಾ ಇದ್ದಾರಾ? ಎಲಿಮಿನೇಟ್ ಆದ ರಾಶಿಕಾ ಶೆಟ್ಟಿ ಹೇಳಿದ್ದಿಷ್ಟು..

ನಟಿ ರಾಶಿಕಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಿಂದ ಔಟ್ ಆಗಿದ್ದಾರೆ. ಕಾವ್ಯಾ ಶೈವ ಅವರು ಕಳೆದ ವಾರ ಎಲಿಮಿನೇಟ್ ಆಗಬಹುದು ಎಂದು ಹಲವರು ಊಹಿಸಿದ್ದರು. ಗಿಲ್ಲಿ ನಟ ಮತ್ತು ಕಾವ್ಯಾ ಆಪ್ತವಾಗಿ ಇರುವುದೇ ಕಾವ್ಯಾಗೆ ಪ್ಲಸ್ ಆಗಿದೆಯೇ ಎಂಬ ಪ್ರಶ್ನೆ ಕೂಡ ಇದೆ.

ಗಿಲ್ಲಿ ನೆರಳಲ್ಲೇ ಕಾವ್ಯಾ ಇದ್ದಾರಾ? ಎಲಿಮಿನೇಟ್ ಆದ ರಾಶಿಕಾ ಶೆಟ್ಟಿ ಹೇಳಿದ್ದಿಷ್ಟು..
Gilli Nata, Rashika Shetty, Kavya Shaiva
Mangala RR
| Edited By: |

Updated on: Jan 13, 2026 | 5:33 PM

Share

‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಕೊನೇ ವಾರದ ತನಕ ಪೈಪೋಟಿ ನೀಡಿದರು. ಆದರೆ ಫಿನಾಲೆ ವಾರಕ್ಕೆ ಕಾಲಿಡಲು ಅವರಿಗೆ ಸಾಧ್ಯವಾಗಲೇ ಇಲ್ಲ. ಧನುಷ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ಕಾವ್ಯಾ ಶೈವ (Kavya Shaiva), ಧ್ರುವಂತ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಮೊದಲಿನಿಂದಲೂ ಜಂಟಿಯಾಗಿಯೇ ಇರುವ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರ ಆಟದ ಬಗ್ಗೆ ರಾಶಿಕಾ ಶೆಟ್ಟಿ (Rashika Shetty) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ನಾವು ಜಂಟಿಯಾಗಿ ಇದ್ದಾಗ ಯಾವಾಗಲೂ ಜೊತೆಯಲ್ಲೇ ಇರಬೇಕಾಗುತ್ತದೆ. ನಾನು ಮಂಜು ಅಕ್ಕನ ಜೊತೆ ಇದ್ದಾಗ ಹಾಗೆಯೇ ಆಯಿತು. ಮಂಜು ಅಕ್ಕನ ನೆರಳಲ್ಲಿ ರಾಶಿಕಾ ಇದ್ದಾಳೆ ಅಂತ ಎಲ್ಲರೂ ಹೇಳುತ್ತಿದ್ದರು. ಏನೂ ಮಾಡೋಕೆ ಆಗಲ್ಲ. ಎರಡು, ಮೂರು ವಾರ ನಾವು ಜೊತೆಯಲ್ಲೇ ಇರಬೇಕಾಗುತ್ತದೆ. ಅದಾದ ನಂತರ ನನಗೂ ಹಲವು ಬಾರಿ ಎನಿಸಿದೆ. ಧನುಷ್ ಕ್ಯಾಪ್ಟನ್ ಆದಾಗ ನಾನು ಹೇಳಿದ್ದೆ. ಗಿಲ್ಲಿಯ ನೆರಳಲ್ಲೇ ಕಾವ್ಯಾ ಇರೋದ ಅಂತ ಹೇಳುತ್ತಿದ್ದೆ’ ಎಂದಿದ್ದಾರೆ ರಾಶಿಕಾ ಶೆಟ್ಟಿ.

‘ಅದೇ ಮಾತನ್ನು ಸುದೀಪ್ ಸರ್ ಕೂಡ ಹೇಳುತ್ತಾರೆ. ಅವರು ಹೇಳಿದಾಗಲೇ ಕಾವ್ಯಾ ಮತ್ತು ಗಿಲ್ಲಿ ಸರಿಪಡಿಸಿಕೊಂಡಿದ್ದರೆ ಅದು ಇಲ್ಲಿಯ ತನಕ ಬರುತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಾವೇ ಒಂದು ಅಭಿಪ್ರಾಯ ಕೊಡುತ್ತಿರುತ್ತೇವೆ. ಅಭಿಪ್ರಾಯ ಕೊಡದೇ ಇದ್ದರೆ ಸರಿ ಇರುತ್ತದೆ ಎನಿಸುತ್ತದೆ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ.

ರಾಶಿಕಾ ಶೆಟ್ಟಿ ಅವರು ಫಿನಾಲೆ ತಲುಪುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರ ಬದಲು ಕಾವ್ಯಾ ಶೈವ ಎಲಿಮಿನೇಟ್ ಆಗಬಹುದು ಎಂದು ವೀಕ್ಷಕರು ಊಹಿಸಿದ್ದರು. ಆ ಬಗ್ಗೆ ಕೂಡ ರಾಶಿಕಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಯಾಕೆ ಹೊರಗೆ ಬಂದೆ ಎಂಬುದಕ್ಕೆ ನನ್ನ ಬಳಿ ಕೂಡ ಉತ್ತರ ಇಲ್ಲ. ನಾನು ಎಲಿಮಿನೇಟ್ ಆಗಿದ್ದೇನೆ. ಜನರು ವೋಟ್ ಬಹಳ ಮುಖ್ಯ ಆಗುತ್ತದೆ. ಎಲ್ಲೋ ಸೈಲೆಂಟ್ ಆಗಿದ್ದೆ ಎನಿಸುತ್ತದೆ’ ಎಂದಿದ್ದಾರೆ ರಾಶಿಕಾ.

ಇದನ್ನೂ ಓದಿ: ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ

‘ಈಗ ಟಾಪ್ 7 ಸ್ಪರ್ಧಿಗಳು ಎಲ್ಲರೂ ಸಮರ್ಥರು. ಫಿನಾಲೆಯಲ್ಲಿ ರಕ್ಷಿತಾ ಇರಬಾರದು. ಧನುಷ್ ಗೆಲ್ಲಬೇಕು. ಆದರೆ ಗಿಲ್ಲಿ ಗೆಲ್ಲುತ್ತಾನೆ. ಹೊರಗಡೆ ಬಂದು ನೋಡಿದಾಗ ಗಿಲ್ಲಿಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದಾಗ ಗೆಲ್ಲಿ ಗೆಲ್ಲುತ್ತಾನೆ ಎನಿಸಿತು’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ. ಜನವರಿ 17 ಮತ್ತು 18ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!