AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ; ಹಾಡು, ನೃತ್ಯದ ವಿಡಿಯೋ ಇಲ್ಲಿದೆ

ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ; ಹಾಡು, ನೃತ್ಯದ ವಿಡಿಯೋ ಇಲ್ಲಿದೆ

ಸುಷ್ಮಾ ಚಕ್ರೆ
|

Updated on: Jan 13, 2026 | 9:44 PM

Share

ಪೊಂಗಲ್ ಅಥವಾ ಸಂಕ್ರಾಂತಿ ಭಾರತದ ಅತ್ಯಂತ ವ್ಯಾಪಕವಾಗಿ ಗುರುತಿಸಲ್ಪಟ್ಟ ಹಿಂದೂ ಸುಗ್ಗಿಯ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಭಾರತ ಮತ್ತು ಪ್ರಪಂಚದಾದ್ಯಂತ ತಮಿಳರು ಮತ್ತು ಕನ್ನಡಿಗರು ಆಚರಿಸುತ್ತಾರೆ. ಸೂರ್ಯ ದೇವರಿಗೆ ಸಮರ್ಪಿತವಾದ ಈ 4 ದಿನಗಳ ಆಚರಣೆಯು ಉತ್ತರಾಯಣ, ಸೂರ್ಯನ ಉತ್ತರಾಭಿಮುಖ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮವನ್ನು ಪುದುಚೇರಿ ಸರ್ಕಾರಿ ಮದರ್ ತೆರೇಸಾ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ಆಯೋಜಿಸಿದ್ದರು.

ಪುದುಚೆರಿ, ಜನವರಿ 13: ಪುದುಚೇರಿಯ ವಿವಿಧ ಕಾಲೇಜುಗಳಲ್ಲಿ ಇಂದೇ ಪೊಂಗಲ್ (Pongal) ಹಬ್ಬವನ್ನು ಆಚರಿಸಲಾಯಿತು. ಮದರ್ ತೆರೇಸಾ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಿಂದೂ ಹಬ್ಬದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. ರಂಗೋಲಿ ಬಿಡಿಸಿ, ಡ್ಯಾನ್ಸ್ ಮಾಡಿ, ಕಬ್ಬು ತಿಂದು ಕುಣಿದು ಕುಪ್ಪಳಿಸಿದರು. ಸಚಿವ ಪಿ.ಆರ್.ಎನ್. ತಿರುಮುರುಗನ್ ಈ ಉತ್ಸವದಲ್ಲಿ ಭಾಗವಹಿಸಿದ್ದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ