AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು

ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jan 13, 2026 | 8:34 PM

Share

ಯಶ್ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಲ್ಫ್​​ ಕ್ಲಬ್​ ರಸ್ತೆ ಬಳಿಯಿರುವ ನಿವಾಸದ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ದೂರು ನೀಡಲಾಗಿತ್ತು. ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿ ಕೇಸ್​ ಹಾಕಲಾಗಿದೆ. ಯಶ್​ ಹೆಸರು ಉಲ್ಲೇಖಿಸಿ ಜಿಎಸ್​ ಕ್ರಿಯೇಷನ್ಸ್​ ಮತ್ತು ವೇಣು ಗ್ರೂಪ್ಸ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅವರು ಜನವರಿ 8ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಲ್ಫ್​​ ಕ್ಲಬ್​ ರಸ್ತೆ ಬಳಿಯಿರುವ ​ಮನೆ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಜಿಬಿಎ ಸಹಾಯಕ ಇಂಜಿನಿಯರ್​ ಪೂಜಾರಪ್ಪ ಅವರು ದೂರು ನೀಡಿದ್ದರು. ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿ ಕೇಸ್​ ಹಾಕಲಾಗಿದೆ. ಅದರ ಅನ್ವಯ ಕಾಯ್ದೆ 1951 ಮತ್ತು 1981ರಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಯಶ್​ ಹೆಸರು ಉಲ್ಲೇಖಿಸಿ ಜಿಎಸ್​ ಕ್ರಿಯೇಷನ್ಸ್​ ಮತ್ತು ವೇಣು ಗ್ರೂಪ್ಸ್​ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯಶ್ ಅವರು ಈಗ ‘ಟಾಕ್ಸಿಕ್’ (Toxic) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮಾರ್ಚ್ 19ರಂದು ಆ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.