ಪ್ರಾತಿನಿಧಿಕ ಚಿತ್ರ
Image Credit source: betterhalf.ai
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 16 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರಮಾಸ, ಶ್ರವಣ ಮಹಾನಕ್ಷತ್ರ, ಮಾಸ: ಪೌಷ, ಪಕ್ಷ: ಕೃಷ್ಣ, ಸೋಮವಾರ, ತಿಥಿ: ನವಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಧೃತಿ, ಕರಣ: ತೈತಿಲ, ರಾಹು ಕಾಲ ಸಂಜೆ 4 ಗಂಟೆ 57 ನಿಮಿಷದಿಂದ 6 ಗಂಟೆ 22 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 21 ನಿಮಿಷಕ್ಕೆ.
ತಾ. 16-01-2023 ರ ಸೋಮವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ಇಂದು ವೆಚ್ಚಗಳು ಕಡಿಮೆಯಾಗಲಿವೆ. ಕೆಲಸಗಳಿಗೆ ಸಂಬಂಧಿಸಿದಂತೆ ಮೆಚ್ಚುಗೆಗಳು ಬರಲಿವೆ. ಮನೆಯ ಸದಸ್ಯರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ. ನಿಮಗೆ ಕಾರ್ಯದಲ್ಲಿ ಉತ್ಸಾಹವೂ ಬರಲಿದೆ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಉತ್ತಮವಾದ ನಡತೆಯನ್ನು ರೂಪಿಸಿಕೊಳ್ಳಲು ಪ್ರಯತ್ನಪಡುತ್ತೀರಿ. ನಿಮ್ಮ ವಿರುದ್ಧ ಏನಾದರೂ ಮಾತುಗಳು ಕೇಳಿಬರಬಹುದು. ಸಮಯವನ್ನು ನೋಡಿ ಯೋಗ್ಯವಾದ ಉತ್ತರವನ್ನು ನೀಡಿ. ಅಪರಿಚಿತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ.
- ವೃಷಭ: ನಿಮ್ಮನ್ನು ಅವಲಂಬಿಸಿರುವವರಿಗೆ ನೀವಿಂದು ಶುಭವಾದ ಸುದ್ದಿಯನ್ನು ನೀಡುವಿರಿ. ಆಧ್ಯಾತ್ಮದಲ್ಲಿ ಮನಸ್ಸನ್ನು ಇಡುವುದು ಉಚಿತ ಎಂದು ನಿಮಗನ್ನಿಸಬಹುದು. ಇಂದು ನಿಮ್ಮ ಸಂಪತ್ತಿನ ಹರಿವು ಚೆನ್ನಾಗಿರಲಿದೆ. ಸಮಧಾನದಿಂದ ಕೆಲಸಗಳನ್ನು ನಿರ್ವಹಿಸುವ ಕಲೆಯನ್ನು ರೂಡಿಸಿಕೊಳ್ಳುವಿರಿ. ಇದೇ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ. ಇಂದು ನೀವು ಅನೇಕ ಚಿಂತೆಗಳಿಂದ ಹೊರಬರುತ್ತೀರಿ. ಇಂದು ಸಂಗಾತಿಯೊಂದಿಗೆ ಖುಷಿಯಿಂದ ಜೀವನವನ್ನು ನಡೆಸುವಿರಿ.
- ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಅಲಕ್ಷ್ಯವನ್ನು ಮಾಡದಿರುವುದು ಒಳ್ಳೆಯದು. ಉದ್ಯೋಗದ ಸ್ಥಳದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇರುತ್ತದೆ. ಹಣವನ್ನು ಸಾಲವಾಗಿ ನೀಡಬೇಡಿ. ಕುಟುಂಬ ಜೀವನದಲ್ಲಿ ಖಂಡಿತವಾಗಿಯೂ ಸಂತೋಷ ಇರುತ್ತದೆ. ನಿಮ್ಮ ಕಾರ್ಯಗಳಿಗೆ ಅನೇಕರ ಸಹಕಾರವು ಇರುತ್ತದೆ. ವಿರೋಧಿಗಳ ಬಲವು ಹೆಚ್ಚಾಗುವ ಲಕ್ಷಣವಿದೆ. ವಿದ್ಯಾರ್ಥಿಗಳು ವಿದ್ಯಾಧಿದೇವತೆಯಾದ ಸರ್ವಸ್ವತಿಯನ್ನು ಧ್ಯಾನಿಸಿ ಅಭ್ಯಾಸವನ್ನು ಆರಂಭಿಸಿ.
- ಕಟಕ: ಆದಾಯವು ಚೆನ್ನಾಗಿರಲಿದೆ. ಇದು ನಿಮ್ಮನ್ನು ಬಹಳ ಖುಷಿಯಿಂದ ಇರಿಸಲಿದೆ. ನಿಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಕಾಲವನ್ನು ಕಳೆಯುತ್ತೀರಿ. ಉದ್ಯೋಗದಲ್ಲಿದ್ದರೆ ನಿಮಗೆ ಉತ್ತಮ ದಿನವಾಗಿರಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಿದ್ದೀರಿ. ವೃತ್ತಿನಿರತರಿಗೆ ನಿಶ್ಚಿತ ಖರ್ಚುಗಳ ಹೊರೆ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳಿಗೆ ಓದಿನ ಒತ್ತಡ ಹೆಚ್ಚಿರುತ್ತದೆ. ಯಾರೊಂದಿಗೂ ವಾದಕ್ಕೆ ನಿಲ್ಲಬೇಡಿ. ಸ್ವಂತ ವ್ಯವಹಾರವನ್ನು ಮಾಡುವವರು ಒತ್ತಡಗಳನ್ನು ಎದುರಿಸಬೇಕಾದೀತು. ಕೆಲಸಕ್ಕೆ ಸಂಬಂಧಿಸಿದ ಉತ್ತಮ ಫಲಿತಾಂಶಗಳು ಸಿಗಲಿವೆ. ಆರೋಗ್ಯವು ಚೆನ್ನಾಗಿರಲಿದೆ.
- ಸಿಂಹ: ಕಾರ್ಯದ ಸ್ಥಾನವು ಇಂದು ಬದಲಾಗಬಹುದು. ನಿಮ್ಮ ಬುದ್ಧಿಯನ್ನು ಬಳಸಿ ಮಾಡುವ ಕಾರ್ಯದಿಂದ ನಿಮಗೆ ಅನೇಕ ಮನ್ನಣೆಗಳು ಸಿಗಲಿವೆ. ಇಷ್ಟು ದಿನ ಕಷ್ಟಪಡುತ್ತಿದ್ದ ಕಾರ್ಯಗಳಿಗೆ ವೇಗ ಸಿಕ್ಕಿ ಪೂರ್ಣಗೊಳ್ಳಲಿವೆ. ತೈಲ ವ್ಯಾಪಾರಿಗಳು ಇಂದು ಅಧಿಕಲಾಭವನ್ನು ಪಡೆಯಲಿದ್ದಾರೆ. ಇಂದು ಮನೆಯಲ್ಲಿ ಜನರೆಲ್ಲ ಸೇರಲಿದ್ದಾರೆ. ಔತಣಕೂಟ ನಡೆಯಲಿದೆ. ಹಿರಿಯರಿಂದ, ಸ್ನೇಹಿತರಿಂದ ಹಿತವಚನಗಳು ನಿಮಗೆ ಸಿಗಲಿವೆ. ಯಾರನ್ನೋ ಮೆಚ್ಚಿಸುವ ಭರದಲ್ಲಿ ಏನನ್ನಾದರೂ ಹೇಳದಿರಿ. ನಿಮ್ಮ ಅಂತರಂಗದ ನಾಟಕಗಳು ತಿಳಿಯಬಹುದು. ನಿಮ್ಮ ಸುತ್ತಲಿರುವ ಜನರು ನಿಮ್ಮವರೇ ಎಂದು ಅಂದುಕೊಂಡು ಕೆಲಸ ಮಾಡಿ.
- ಕನ್ಯಾ: ಪೂರ್ವಸುಕೃತವು ನಿಮ್ಮನ್ನು ಕೈ ಬಿಡದು ಎಂದೇ ಹೇಳಬಹುದು. ಸ್ವಲ್ಪ ಅಂತರದಲ್ಲಿ ಅಪಾಯವನ್ನು ತಪ್ಪಿಸಿಕೊಳ್ಳಲಿದ್ದೀರಿ. ಆರೋಗ್ಯವು ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಕುಟುಂಬದಲ್ಲಿ ಆರೋಗ್ಯಕರವಾದ ವಾತಾವರಣವು ಇರಲಿದೆ. ಮಕ್ಕಳಿಂದ ಬೇಸರವಾಗುವ ಸನ್ನಿವೇಶಗಳು ಎದುರಾಗಬಹುದು. ಸಾಮಾಜಿಕ ಸೇವೆಯಲ್ಲಿ ನಿರತರಾದವರಿಗೆ ಅಪವಾದಗಳು ಬರಬಹುದು. ಉತ್ತಮ ಕೆಲಸಗಳೇ ಅದಕ್ಕೆ ಉತ್ತರವಾಗಬೇಕಷ್ಟೇ. ಗಣ್ಯರ ಭೇಟಿಯಾಗಲಿದೆ. ಕೃಷಿಯ ಕಾರ್ಯದಲ್ಲಿ ತೊಡಗಲು ನಿಮ್ಮ ಮನಸ್ಸು ನಿಮ್ಮನ್ನು ಪ್ರೇರಿಸುತ್ತದೆ. ಒಳ್ಳೆಯ ಮಾತುಗಳು ಸಂಬಂಧವನ್ನು ಗಟ್ಟಿಗೊಳಿಸಲಿದೆ.
- ತುಲಾ: ಕಾರ್ಯದೊತ್ತಡ ನಿಮಗೆ ಕಿರಿಕಿರಿಯನ್ನು ತರಲಿದೆ. ಶೀತದಿಂದ ಬಳಲುತ್ತೀರಿ. ನ್ಯಾಯಾವಾದಿಗಳು ಇಂದು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಹಣವನ್ನು ಕೊಟ್ಟು ಕಳೆದುಕೊಳ್ಳಬೇಡಿ. ನಿಮಗೆ ಯಾರಿಂದಲಾದರೂ ಹಣದ ಅಥವಾ ಅಧಿಕಾರದ ಆಮಿಷಗಳು ಬರಬಹುದು. ವೈವಾಹಿಕ ಜೀವನವು ನಿಮಗೆ ಆನಂದವನ್ನು ನೀಡುತ್ತದೆ. ಯಾರನ್ನೋ ನಂಬಿ ಅವರ ಕೈಯಲ್ಲಿ ಹಣವನ್ನು ನೀಡಬೇಡಿ.
- ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ದಾಂಪತ್ಯಜೀವನವು ಅನ್ಯೋನ್ಯವಾದ ಸಹಕಾರದಿಂದ ನಡೆಯಲಿದೆ. ಮಕ್ಕಳಿಂದ ಸಂತೋಷವು ಸಿಗಲಿದೆ. ಕುಟುಂಬದಲ್ಲಿ ಸಂತೋಷವು ನೆಲೆಸಲಿದೆ. ದೂರಪ್ರಯಾಣ ಹೋಗುವ ಸ್ಥಿತಿ ಬಂದರೆ ಅದನ್ನು ಆಯ್ಕೆಮಾಡಿಕೋಳ್ಳಬೇಡಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಧನಾಗಮವಾಗಲಿದೆ. ಏಕಕಾಲಕ್ಕೆ ಸಿಗುವ ಎರಡು ಉದ್ಯೋಗದಿಂದ ನಿಮಗೆ ಗೊಂದಲವಾಗುವ ಸಾಧ್ಯತೆ ಇದೆ.
- ಧನು: ನೀವಿಂದು ದುರ್ಬಲವಾಗಿದ್ದೀರಿ. ಸಮಸ್ಯೆಗಳು ಬರುವಂತಹ ಕೆಲಸಗಳ ಕಡೆಗೆ ಜಾಗರೂಕರಾಗಿರಿ. ನಿಮ್ಮ ಸ್ವಭಾವಗಳು ನಿಮಗೆ ಅಲಂಕಾರವಾಗಬೇ ಹೊರತು ಅಹಂಕಾರವಲ್ಲ್. ಕುಟುಂಬದ ಜೀವನದಲ್ಲಿ ಒತ್ತಡವನ್ನು ಕಾಣಬೇಕಾಗಿಬರಬಹುದು. ಆಲಂಕಾರಿಕ ವಸ್ತುಗಳಿಂದ ಖರ್ಚುಗಳು ಹೆಚ್ಚಾಗಬಹುದು. ನೀವಂದುಕೊಂಡ ಕೆಲಸವನ್ನು ಸಾಧಿಸಲು ದೇವರ ಮೊರೆಯನ್ನೂ ಹೊಗಬೇಕಾದ ಸ್ಥಿತಿಯು ಇದೆ. ಶುಭವಾದ ಕಾರ್ಯಗಳಲ್ಲಿ ನೀವಿಂದು ತೊಂಡಗಿಕೊಳ್ಳುವಿರಿ. ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯನ್ನು ಮಾಡಲಿದ್ದಾರೆ. ಹಾರ್ಡ್ ವೇರ್ ಉದ್ಯೋಗಿಗಳಿಗೆ ಸಂತಸದ ವಾರ್ತೆ ಬರಲಿದೆ.
- ಮಕರ: ಸಂತೋಷವಾಗಿ ಈ ದಿನವನ್ನು ಕಳೆಯಲು ತೀರ್ಮಾನಿಸಿದ್ದೀರಿ. ಮೇಲಧಿಕಾರಿಗಳ ಜೊತೆಗೆ ಚರ್ಚೆಗಳನ್ನು ಮಾಡುವ ಅವಕಾಶ ಸಿಗಬಹುದು. ಸಂತರ ಭೇಟಿಯು ನಿಮ್ಮ ಶ್ರೇಯಸ್ಸಿಗೆ ಕಾರಣವಾಗಲಿದೆ. ಹೊಸ ಸ್ನೇಹಿತರನ್ನು ನೀವು ಗಳಿಸುವಿರಿ. ಮಕ್ಕಳಿಗೋಸ್ಕರ ಹಣವನ್ನು ಖರ್ಚುಮಾಡಲಿದ್ದೀರಿ. ನಿರಂತರ ಕೆಲಸಗಳು ನಿಮ್ಮನ್ನು ಒತ್ತಡದಿಂದ ಹೊರಬರುವಂತೆ ಮಾಡುತ್ತದೆ. ಭೂಮಿಯ ವ್ಯವಹಾರವು ಯಶಸ್ಸನ್ನು ತಂದುಕೊಡುವುದು. ಸಣ್ಣ ಖರ್ಚುಗಳೂ ನಿಮಗೆ ಭಾರವಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಿಂದ ನಿಮಗೆ ಸಂತೋಷವಿದೆ. ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಕಿರಿಕಿರಿಯುಂಟಾಗಲಿದೆ.
- ಕುಂಭ: ನಿಮ್ಮ ಬಲಿಷ್ಠವಾದ ಮನಃಸ್ಥಿತಿಗೆ ಯಾವ ತೊಂದರೆಗಳೂ ನಿಲ್ಲವು. ಎಂತಹ ಸಮಸ್ಯೆಗಖಳನ್ನೂ ಅನಾಯಾಸವಾಗಿ ಪರಿಹರಿಸಿಕೊಳ್ಳುವ ಚಾಣಾಕ್ಷತೆ ನಿಮ್ಮಲ್ಲಿ ಕರಗತವಾಗಿರುತ್ತದೆ. ನಿಮಗೆ ಬರಬೇಕಿದ್ದ ಹಣವು ಬಂದು ಆದಾಯ ಹೆಚ್ಚಾಗಲಿದೆ. ಧಾರ್ಮಿಕವಾದ ಕಾರ್ಯಗಳಲ್ಲಿ ತೊಡಗುವಿರಿ. ಆತ್ಮಬಲವು ಅತಿಯಾಗಿದ್ದು ಸೋಲನ್ನೂ ಸಪ್ಪೆಯಾಗಿ ಸ್ವೀಕರಿಸದ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ. ಮಹಿಳೆಯರಿಗೆ ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ. ಕೃಷಿಕರಿಗೆ ಭವಿಷ್ಯದ ಚಿಂತೆ ಬಹಳವಾಗಿ ಕಾಡಲಿದೆ. ಸರ್ಕಾರಿ ಕೆಲಸದಲ್ಲಿ ಭಾರೀ ನಿಧಾನ ಆಗಲಿದೆ.
- ಮೀನ: ದೂರದ ಪ್ರಯಾಣಗಳನ್ನು ಮಾಡಬೇಕಾಗಬಹುದು. ಸ್ನೇಹಿತರ ಜೊತೆ ದೂರದ ಊರಿಗೆ ಹೋಗಲಿದ್ದೀರಿ. ಆಯ ಮತ್ತು ವ್ಯಯಗಳು ಸಮಾನವಾಗಿರುತ್ತವೆ. ಸ್ನೇಹಿತರು ನಿಮ್ಮಿಂದ ದೂರಾಗಬಹುದು. ಭೂಮಿಗೆ ಸಂಬಂಧಿಸಿದಂತೆ ಕಲಹಗಳು ನಡೆಯಬಹುದು. ನಿಮ್ಮ ಪಾರದರ್ಶಕ ನಡವಳಿಕೆಗೆ ಮೆಚ್ಚುಗೆ ಸಿಗಲಿದೆ. ಆಹಾರದ ವ್ಯತ್ಯಾಸದಿಂದ ಅನಾರೋಗ್ಯವು ಕಾಡಬಹುದು. ಜವಾದ್ಬಾರಿಯುತ ಸ್ಥಾನ-ಮಾನಗಳು ಸಿಗಬಹುದು. ಪೂರ್ವಕರ್ಮವು ನಿಮ್ಮನ್ನು ಕೈಬಿಡದೇ ಮೇಲೆತ್ತಲಿದೆ. ನೀವು ಹಾಕಿಕೊಂಡ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆ ಇದೆ. ಬಂದಿದ್ದನ್ನು ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ.
ಲೇಖನ: ಲೋಹಿತ ಶರ್ಮಾ, ಇಡುವಾಣಿ